ದೇವನಹಳ್ಳಿ ರೈತರನ್ನು ವಂಚಿಸುವ, ಸೇಡು ತೀರಿಸಿಕೊಳ್ಳುವ ಕುತಂತ್ರಕ್ಕೆ ಸರ್ಕಾರ ಕೈಹಾಕಿದೆಯೇ?

Date:

ರೈತಾಪಿ ವಿಷಯಗಳಲ್ಲಿ ಕಾರ್ಪೊರೇಟ್ ಬಲಿಷ್ಠರಿಗೆ ಮಣಿಯದೇ ರೈತ ಪರ ನಿಲುವು ತೆಗೆದುಕೊಳ್ಳದ ಕಾಂಗ್ರೆಸ್ ಸರ್ಕಾರದ ಬಂಡವಾಳಶಾಹಿ, ಬ್ರಾಹ್ಮಣಶಾಹಿ, ಫ್ಯಾಶಿಸ್ಟ್ ನೀತಿಗಳ ವಿರುದ್ಧ ಬೃಹತ್ ಜನಾಂದೋಲನ ರೂಪಿಸದೆ ಬೇರೆ ಪರ್ಯಾಯವಿಲ್ಲ.

ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಮಣಿದು ಸಿದ್ದು ಸರ್ಕಾರ ಜೂನ್‌ನಲ್ಲಿ ಭೂಸ್ವಾಧೀನ ರದ್ದು ಘೋಷಣೆ ಮಾಡಿದ್ದರೂ ಈವರೆಗೆ denotification ಆದೇಶ ಹೊರಡಿಸಿಲ್ಲ. ಬದಲಿಗೆ ಹಿಂಬಾಗಿಲ ಮೂಲಕ ರೈತರನ್ನು ಪುಸಲಾಯಿಸಿ ವಶಪಡಿಸಿಕೊಳ್ಳುವ ಕುತಂತ್ರ ಮುಂದುವರೆಸಿತ್ತು.

ಆದರೆ ದೇವನಹಳ್ಳಿಯ ಜಾಗೃತ ರೈತರು ಹೋರಾಟವನ್ನು ಮುಂದುವರೆಸಿದ್ದರಿಂದ ನ. 26ರಂದು ಮುಖ್ಯಮಂತ್ರಿಗಳು ಡಿ. 4ರ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಇದರ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವುದಾಗಿ ಹೋರಾಟಗಾರರಿಗೆ ಭರವಸೆ ಇತ್ತಿದ್ದರು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೇವನಹಳ್ಳಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಒಂದು ಕರಡು ಪ್ರಸ್ತಾಪ ಹರಿದಾಡುತ್ತಿದೆ. ಇದು ಅಧಿಕೃತವೋ, ನಿಜವೋ ಗೊತ್ತಿಲ್ಲ.

ಆದರೆ ಅದರಲ್ಲಿ ಪ್ರಸ್ತಾಪವಾಗಿರುವ ಕ್ರಮಗಳು ಈ ಹಿಂದೆ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲರು ಹೋರಾಟವನ್ನು ಮುರಿಯಲು ಹೂಡಿದ ಕುತಂತ್ರಗಳಲ್ಲಿ ಪ್ರಯೋಗಿಸಿದ ಅಸ್ತ್ರಗಳನ್ನೇ ಹೋಲುತ್ತಿವೆ. ಈ ಕಾರಣಕ್ಕಾಗಿ ಮತ್ತು ಮಾತು ಕೊಟ್ಟು ಐದು ತಿಂಗಳಾದರೂ ಡಿ ನೋಟಿಫೈ ಮಾಡದೆ, ಸರ್ಕಾರವು ಭೂಸ್ವಾಧೀನ ಕ್ರಮಗಳನ್ನು ಕೈಗೊಂಡಿದ್ದರ ಅನುಭವದ ಹಿನ್ನೆಲೆಯಲ್ಲಿ ನೋಡಿದರೆ ಅದು ಸುಳ್ಳಾಗಿರಬಹುದೆಂದು ಖಚಿತವಾಗಿ ಹೇಳಲು ಹೋರಾಟಗಾರರಿಗೆ ವಿಶ್ವಾಸ ಮೂಡುತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದು ವೇಳೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕರಡು ಪ್ರಸ್ತಾಪ ಅಧಿಕೃತವೇ ಆಗಿದ್ದಲ್ಲಿ ಅದು ಬಿಜೆಪಿ ಕಾಲದ ಬಹಿರಂಗ ಕೃಷಿ ವಿರೋಧಿ ನೀತಿಗಳಷ್ಟೆ, ರೈತದ್ರೋಹಗಳಷ್ಟೆ ಅತ್ಯಂತ ನಯವಂಚಕ ನೀತಿಯಾಗುತ್ತದೆ.

ಇದನ್ನು ಓದಿದ್ದೀರಾ?: ಅಕ್ಕಿ ಬದಲಾಗಿ ‘ಇಂದಿರಾ ಕಿಟ್’ – ಪಡಿತರಿಗೆ ಪೌಷ್ಟಿಕ ಆಹಾರದ ವಿತರಣೆಗೆ ಸರ್ಕಾರ ಸಜ್ಜು

ಏಕೆಂದರೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಕರಡು:

  1. ದೇವನಹಳ್ಳಿಯ ಹೋರಾಟನಿರತ ರೈತರನ್ನು ಭೂಮಿ ಕೊಡಲೊಪ್ಪದ ರೈತರು ಮತ್ತು ಸ್ವಇಚ್ಛೆಯಿಂದ ಭೂಮಿ ಕೊಡಬೇಕೆಂದಿರುವ ರೈತರು ಎಂದು ಕುತಂತ್ರದಿಂದ ವಿಭಜಿಸುತ್ತದೆ.
  2. ಮತ್ತು ಸ್ವಇಚ್ಛೆಯಿಂದ ಭೂಮಿ ಕೊಡಬಯಸುವ ರೈತರು ಮೂರು ತಿಂಗಳೊಳಗೆ ಕೊಡಬೇಕೆಂದು ಸಮಯ ಮಿತಿಯನ್ನು ವಿಧಿಸುತ್ತದೆ.
  3. ಆನಂತರ ಇಡೀ 1778 ಎಕರೆ ಜಮೀನನ್ನು ಯಾವ ಕಾನೂನಿನಲ್ಲೂ ಇಲ್ಲದಿರುವ “ಶಾಶ್ವತ ಮತ್ತು ವಿಶೇಷ ಕೃಷಿ ವಲಯ”ವಾಗಿ ಘೋಷಿಸುವುದಾಗಿ ಎಚ್ಚರಿಸುತ್ತದೆ. ಅಂದರೆ ಶಾಶ್ವತ ಕೃಷಿ ವಲಯವಾಗಿ ಘೋಷಿಸಿದ ನಂತರ ಇನ್ನೆಂದೂ, ಕಷ್ಟ ಕಾಲದಲ್ಲೂ ತಮ್ಮ ಜಮೀನುಗಳನ್ನು ಮಾರಿಕೊಳ್ಳಲು ಸಾಧ್ಯವೇ ಇಲ್ಲವೆಂಬ ಆತಂಕವನ್ನು ಹುಟ್ಟಿಸುತ್ತದೆ.
  4. ಈ ಪ್ರಸ್ತಾಪ ನಿಜವೇ ಆಗಿದ್ದಲ್ಲಿ ಅದು ದೇವನಹಳ್ಳಿಯನ್ನು ರಣರಂಗ ಮಾಡುವ ಸರ್ಕಾರದ ವ್ಯವಸ್ಥಿತ ಚಿತಾವಣೆಯಾಗಿದೆ. ರೈತರಲ್ಲಿ ಒಳಜಗಳ ಹಚ್ಚಿ ಹೋರಾಟಗಾರರನ್ನು ಕ್ರಿಮಿನಲ್ ಮತ್ತು ಅಭಿವೃದ್ಧಿ ವಿರೋಧಿ ಎಂದು ಘೋಷಿಸಿ ಆ ಮೂಲಕ ಜಮೀನು ಕಬಳಿಸುವ ಹುನ್ನಾರ ಎದ್ದು ಕಾಣುತ್ತಿದೆ.
  5. ಹಾಗೆ ನೋಡಿದರೆ ಯಾವ ಕಾನೂನಿನಲ್ಲೂ ಇಲ್ಲದ “ವಿಶೇಷ ಮತ್ತು ಶಾಶ್ವತ ಕೃಷಿ ವಲಯ” ಎಂಬ ಪರಿಕಲ್ಪನೆ ಹುಟ್ಟಿಸಿದ್ದೇ ಎಂ.ಬಿ. ಪಾಟೀಲರ ದಲ್ಲಾಳಿಗಳು.
  6. ನಗರ ಮತ್ತು ಪಟ್ಟಣಾಭಿವೃದ್ಧಿ ಪ್ರಾಧಿಕಾರಗಳು ಕೆಲವು ಪ್ರದೇಶಗಳನ್ನು “ಹಸಿರು ವಲಯ” ಎಂದು ಘೋಷಿಸುತ್ತವೆ. ಮತ್ತು ಅದು ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಿಶೀಲನೆಗೆ ಒಳಪಡುತ್ತದೆ. ಅದೇ ರೀತಿ ದೇವನಹಳ್ಳಿ ಸೇರುವ ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ದೇವನಹಳ್ಳಿ ಪ್ರದೇಶವನ್ನು ಈಗಾಗಲೇ ಹಸಿರು ವಲಯವೆಂದು ಘೋಷಿಸಿದೆ.
  7. ನಗರ ಅಥವಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳಲ್ಲಿ ಹತ್ತು ವರ್ಷಗಳಿಗೊಮ್ಮೆ ಪರಿಶೀಲಿಸಲ್ಪಡುವ “ಹಸಿರು ವಲಯ” ಬಿಟ್ಟರೆ “ಶಾಶ್ವತ ಮತ್ತು ವಿಶೇಷ” ಕೃಷಿ ವಲಯ ಎಂಬುದಿಲ್ಲ.
  8. ಸಂಪೂರ್ಣ ರಫ್ತು ಕೃಷಿಗಾಗಿ SEZ ರೀತಿ Special Agricultural Zone ಗಳಿವೆ… ಅದೂ ಸರಿಯಲ್ಲ. ಆದರೆ ಅದು ಬೇರೆ ವಿಷಯ.
  9. ನಗರಾಭಿವೃದ್ಧಿ ಮತ್ತು ಕೈಗಾರಿಕಾಭಿವೃದ್ಧಿ ಯೋಜನೆಗಳ ಭಾಗವಾಗಿ ರೂಪಿಸಲ್ಪಡುವ ಯಾವ ಯೋಜನೆಗಳಲ್ಲೂ “ವಿಶೇಷ, ಶಾಶ್ವತ” ಕೃಷಿ ವಲಯ ಅಂತಿಲ್ಲ. ಅದರ ಉದ್ದೇಶವೇ ರೈತರ ನಡುವೆ ವಿಭೇದ, ಅನೈಕ್ಯಮತ್ಯಾ, ವೈಷಮ್ಯ ಹುಟ್ಟಿಸಿ ಹೋರಾಟವನ್ನು ಹತ್ತಿಕ್ಕುವುದು.
  10. ಮೂರು ತಿಂಗಳ ಗಡುವು ಕಾನೂನಿನ ಭಾಗವಾಗಲೂ ಯಾವುದೇ ಕಾನೂನು ತರ್ಕವಿಲ್ಲ.
  11. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಸ್ತಾಪ ನಿಜವೇ ಆಗಿದ್ದಲ್ಲಿ ದೇವನಹಳ್ಳಿ ರೈತ ಹೋರಾಟದ ಮೂಲ ತಾತ್ವಿಕ ಭೂಮಿಕೆಯಾಗಿರುವ “ನನ್ನ ಜಮೀನು, ನನ್ನ ನಿರ್ಧಾರ” ಎಂಬುದನ್ನು ಸರ್ಕಾರ ಸಂಪೂರ್ಣವಾಗಿ ನಿರಾಕರಿಸಿ ನಿಮ್ಮ ಭೂಮಿ, ನಮ್ಮ(ಸರ್ಕಾರ ಕಾರ್ಪೊರೇಟ್) ನಿರ್ಧಾರ ಎಂಬ ಕಾರ್ಪೊರೇಟ್ ಪರ, ರೈತ ವಿರೋಧಿ ನೀತಿಯನ್ನು ಮುಂದುವರೆಸಿದಂತಾಗುತ್ತದೆ.
  12. ಇದು ನಿಜವೇ ಆದಲ್ಲಿ, ಸರ್ಕಾರದ ಕ್ಯಾಬಿನೆಟ್ ನಿರ್ಧಾರವೇ ಆಗಿಬಿಟ್ಟಲ್ಲಿ, ಕಾಂಗ್ರೆಸ್ ಸರ್ಕಾರದ ಈ ಬಹಿರಂಗ ವಂಚನೆ ಮತ್ತು ದ್ರೋಹದ ವಿರುದ್ಧ ಬೃಹತ್ ಹೋರಾಟ ಕಟ್ಟಲೇಬೇಕಾಗುತ್ತದೆ.
prajavani 2025 06 26 7tpxmgyi file818er6mzetdyarba60i

ಒಳಮೀಸಲಾತಿ, ಅಲೆಮಾರಿ ಮೀಸಲಾತಿ, ಕಾಂತರಾಜ್ ವರದಿ ಇತ್ಯಾದಿ ಸಾಮಾಜಿಕ ನ್ಯಾಯದ ವಿಷಯಗಳಲ್ಲಿ ದಮನಿತರ ಪರವಾಗಿ ಖಚಿತ ನಿಲುವು ತೆಗೆದುಕೊಳ್ಳದ, ರೈತಾಪಿ ವಿಷಯಗಳಲ್ಲಿ ಕಾರ್ಪೊರೇಟ್ ಬಲಿಷ್ಠರಿಗೆ ಮಣಿಯದೇ ರೈತ ಪರ ನಿಲುವು ತೆಗೆದುಕೊಳ್ಳದ ಕಾಂಗ್ರೆಸ್ ಸರ್ಕಾರದ ಬಂಡವಾಳಶಾಹಿ, ಬ್ರಾಹ್ಮಣಶಾಹಿ, ಫ್ಯಾಶಿಸ್ಟ್ ನೀತಿಗಳ ವಿರುದ್ಧ ಬೃಹತ್ ಜನಾಂದೋಲನ ರೂಪಿಸದೆ ಬೇರೆ ಪರ್ಯಾಯವಿಲ್ಲವೆಂಬುದನ್ನು ಸಿದ್ದರಾಮಯ್ಯನವರ ಸರ್ಕಾರ ಪದೇ ಪದೇ ಸಾಬೀತು ಮಾಡುತ್ತಿದೆ. ಜನರು ಎಡವುವ ಕಡೆಯೇ ಮತ್ತೆ ಎಡವಬಾರದಷ್ಟೇ.

shivasundar
ಶಿವಸುಂದರ್
+ posts

ಚಿಂತಕ, ಬರಹಗಾರ. ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್‌ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಾಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ- ವಿಡಿಯೋ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಿವಸುಂದರ್
ಶಿವಸುಂದರ್
ಚಿಂತಕ, ಬರಹಗಾರ. ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್‌ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಾಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ- ವಿಡಿಯೋ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...