ಹಾಸನ | ಸರ್ಕಾರ ಕನಿಷ್ಠವೇತನ ಜಾರಿಗೊಳಿಸದಿದ್ದರೆ ಬೃಹತ್‌ ಹೋರಾಟ ನಡೆಸಲಾಗುವುದು: ಸಿಐಟಿಯು ಮೀನಾಕ್ಷಿ ಸುಂದರಂ ಎಚ್ಚರಿಕೆ

Date:

ರಾಜ್ಯದಲ್ಲಿ ದುಡಿಯುವಂತಹ ಜನರಿಗೆ ಕನಿಷ್ಠವೇತನಕ್ಕೆ ಕೇಳಿದರೆ ಈವರೆಗೆ ಸರ್ಕಾರ ಆದೇಶ ಹೊರಡಿಸಿಲ್ಲ. ಹಾಗಾಗಿ ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಕನಿಷ್ಠವೇತನ ಜಾರಿ ಮಾಡದೇ ಇದ್ದಲ್ಲಿ, ಜನವರಿ ತಿಂಗಳಲ್ಲಿ ಬೃಹತ್‌ ಹೋರಾಟವನ್ನು ನಡೆಸುವುದಾಗಿ ತೀರ್ಮಾನಿಸಿದ್ದೇವೆ. 2024ರ ಏಪ್ರಿಲ್‌ನಿಂದ ಜಾರಿಯಾಗುವಂತೆ ಬೃಹತ್‌ ಹೋರಾಟ ನಡೆಸುತ್ತೇವೆ ಎಂದು ಸಿಐಟಿಯು ನೂತನ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಎಚ್ಚರಿಕೆ ನೀಡಿದರು.

ಹಾಸನ ನಗರದಲ್ಲಿ ಮೂರು ದಿನಗಳ ಕಾಲ ನಡೆದ ಸಿಐಟಿಯು 16ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಹಾಸನದಲ್ಲಿ ಕಳೆದ ವರ್ಷ ಹೆಣ್ಣುಮಕ್ಕಳಿಗಾಗಿದ್ದ ಅನ್ಯಾಯವನ್ನು ಖಂಡಿಸಿ ಇದೇ ಜಾಗದಲ್ಲಿ ಬೃಹತ್‌ ಹೋರಾಟವನ್ನು ನಡೆಸಿದ್ದೆವು. ಆ ಪೆಂಡ್ರೈವ್‌ ಮಹಾತ್ಮನ ಕುರಿತು ಕೆಲವು ದಿನಗಳ ಹಿಂದೆ ಒಂದು ವರದಿ ಪ್ರಕಟವಾಯಿತು. ಏನೆಂದರೆ, ʼಒಂದು ವರ್ಷ ಜೈಲಿನಲ್ಲಿದ್ದರೆ ಅನ್‌ಸ್ಕಿಲ್ಡ್‌ ಲೇಬರ್‌ ಎಂದು ಪರಿಗಣಿಸಲಾಗುತ್ತದೆ. ಒಂದು ವರ್ಷದ ನಂತರ ಸ್ಕಿಲ್ಡ್‌ ಲೇಬರ್‌ ಅಂತ ಪರಿಗಣಿಸಿ ಅವರಿಗೆ ₹570 ವೇತನವನ್ನು ನೀಡಲಾಗುತ್ತದೆʼಎನ್ನಲಾಯಿತು. ಜೈಲಿನಲ್ಲಿದ್ದವರಿಗೆ ಒಂದು ವರ್ಷದ ಬಳಿಕ ಪ್ರಮೋಷನ್‌, ಸಂಬಳ ಹೆಚ್ಚಳ ಆಗುತ್ತೆ. ಆದರೆ ಹೊರಗಡೆ ಇದ್ದು, ಶಾಲಾ ಮಕ್ಕಳಿಗೆ ಬಿಸಿಯೂಟ ಮಾಡಿ ಬಡಿಸುವ ತಾಯಂದಿರಿಗೆ ತಿಂಗಳಿಗೆ ಕೇವಲ ₹3000 ಸಂಬಳ ನೀಡಲಾಗುತ್ತದೆ. ಜೈಲಿನಲ್ಲಿರುವವರಿಗೆ ಆರು ದಿನಗಳಲ್ಲಿ ಸಿಗುವ ಸಂಬಳ ಹೊರಗಿರುವವರಿಗೆ ತಿಂಗಳೆಲ್ಲ ದುಡಿದರೂ ಸಿಗುವುದಿಲ್ಲ. ಇದು ಯಾವ ಕ್ರಮ. ಹಾಗಾಗಿ ಕಾರ್ಮಿಕರಿಗೆ ಕನಿಷ್ಠವೇತನ ಜಾರಿ ಮಾಡಿ ಅಂತ ಕೇಳಬೇಕೋ ಬೇಡವೋ” ಎಂದು ಪ್ರಶ್ನಿಸಿದರು.

“ಏಪ್ರಿಲ್‌ 2025ರಲ್ಲಿ ರಾಜ್ಯ ಸರ್ಕಾರ ಕನಿಷ್ಠವೇತನವನ್ನು ಪ್ರಕಟ ಮಾಡಿದೆ. ಆದರೆ ಈವರೆಗೆ ಜಾರಿಗೆ ತರಲಿಲ್ಲ. ಇವತ್ತಿನ ಬೆಲೆ ಏರಿಕೆಯಲ್ಲಿ ಕನಿಷ್ಠ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಾರಾದರೂ ಕೆಲಸ ಮಾಡಿದರೆ ಅಕುಶಲ ಕಾರ್ಮಿಕರಾಗಿದ್ದರೆ ಅಂಥವರಿಗೆ ತಿಂಗಳಿಗೆ ₹33000 ಸಂಬಳ ನಿಗದಿಪಡಿಸಬೇಕು. ನಗರ ಪ್ರದೇಶಗಳಲ್ಲಾದರೆ ಇನ್ನೂ ಹೆಚ್ಚು ಮಾಡಬೇಕು. ಕೌಶಲ್ಯತೆ ಹೆಚ್ಚಾದರೆ ಇನ್ನೂ ಸಂಬಳ ಹೆಚ್ಚಾಗಬೇಕು” ಎಂದು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಸಿಐಟಿಯು ಮೆರವಣಿಗೆ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಎನ್‌ ಉಮೇಶ್‌ ಮಾತನಾಡಿ, “ಮುಂದಿನ ಮೂರು ವರ್ಷಗಳಲ್ಲಿ ಯಾವ ರೀತಿಯ ಹೋರಾಟ ಕಟ್ಟಬೇಕೆಂಬುದನ್ನು ಸಿಐಟಿಯು ತೀರ್ಮಾನ ಮಾಡಿದೆ. ಸ್ಕೀಂ ಕಾರ್ಮಿಕರ ಕಾಯಮಾತಿ ಹಾಗೂ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಸಿಐಟಿಯು ವತಿಯಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಕನಿಷ್ಠವೇತನಕ್ಕಾಗಿ ಕೇಳಿದರೆ ಪ್ರಧಾನಿ ಮೋದಿಗಳು ಶ್ರಮ ಏವ ಜಯತೆ ಎಂಬ ಘೋಷಣೆಯನ್ನು ಕೊಟ್ಟಿದ್ದಾರೆ. ಈ ಮೂಲಕ ಇಡೀ ಶ್ರಮಿಕರನ್ನು ದಫನ್‌ ಮಾಡುವ ಕೆಲಸ ಕೈಗೊಂಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಐಟಿಯು ಕೆ ಎನ್‌ ಉಮೇಶ್

1942ರಲ್ಲಿ ಬ್ರಿಟಿಷರ ಕಾಲದಲ್ಲಿಯೇ ಡಾ. ಬಿ ಆರ್‌ ಅಂಬೇಡ್ಕರ್‌ ಅವರು ಕಾರ್ಮಿಕ ಸಚಿವರಾಗಿದ್ದಾಗಲೇ ಕಾನೂನುಗಳನ್ನು ಜಾರಿಗೆ ತಂದಿದ್ದರು. ಮಾಲೀಕ ಪ್ರತಿನಿಧಿಗಳು, ಕಾರ್ಮಿಕ ಪ್ರತಿನಿಧಿಗಳು ಮತ್ತು ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನು ಒಟ್ಟಿಗೆ ಸೇರಿಸಿ ಭಾರತೀಯ ಕೂಕಾರ್ಮಿಕರ ಸಮ್ಮೇಳನವನ್ನು ನಡೆಸಲಾಗುತ್ತಿತ್ತು. ಇದರಲ್ಲಿ ಎಲ್ಲರ ಸಮ್ಮತಿಯ ಮೇರೆಗೆ ಕಾರ್ಮಿಕ ನೀತಿಗಳನ್ನು ಜಾರಿಗೊಳಿಸಲಾಗುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು ಹನ್ನೊಂದು ವರ್ಷಗಳಾದರೂ ಒಂದೇ ಒಂದು ಅಂತಹ ಕೂಲಿಕಾರ್ಮಿಕರ ಸಮ್ಮೇಳನಗಳನ್ನು ನಡೆಸಿಲ್ಲ, ಯಾರೊಟ್ಟಿಗೂ ಚರ್ಚೆ ಮಾಡಿಲ್ಲ. ಬದಲಿಗೆ 29 ಕಾರ್ಮಿಕ ಹಕ್ಕುಗಳನ್ನು ರದ್ದುಗೊಳಿಸಿ 2019ರಲ್ಲಿ 1 2020ರಲ್ಲಿ 3 ಕಾನೂನುಗಳು ಸೇರಿದಂತೆ 4 ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಲಾಗಿದೆ. ಈ ನೀತಿಗಳು ಬಂಡವಾಳಶಾಹಿಗಳ ಪರವಾಗಿದ್ದು, ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವಂಥವುಗಳಾಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಐಟಿಯು ಮೆರವಣಿಗೆ 1

“ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಕೂಡ ಕೇಂದ್ರ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಕಾರ್ಮಿಕರ ಶ್ರಮ ಸಂಹಿತೆಗಳನ್ನು ಜಾರಿಗೊಳಿಸದೆ ಶ್ರಮ ಏವ ಜಯತೆ ಎನ್ನುವ ಘೋಷಣೆ ಮೂಲಕ ಕಾರ್ಮಿಕರ ಹಕ್ಕುಗಳನ್ನು ದಫನ್‌ ಮಾಡಲಾಗುತ್ತಿದೆ” ಎಂದು‌ ರಾಷ್ಟ್ರೀಯ ಕಾರ್ಯದರ್ಶಿ ಕೆ ಎನ್‌ ಉಮೇಶ್ ಆರೋಪಿಸಿದರು.

ರಾಜ್ಯ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಮಾತನಾಡಿ, “ಈ ಹಿಂದೆ ಗ್ರಾಮ ಪಂಚಾಯಿತಿ ನೌಕರರನ್ನು ಊಳಿಗಮಾನ್ಯ ಪದ್ದತಿಯ ಅಡಿಯಲ್ಲಿ ನಿಸ್ಸಹಾಯಕರಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅದೇ ರೀತಿ ಬಿಸಿಯೂಟ ನೌಕರರು ಅಡುಗೆ ಮಾಡುವಾಗ ಸ್ಟೌವ್‌ ಬರ್ಸ್ಟ್‌ ಆಗಿ ಎಷ್ಟೋ ಮಂದಿ ಅಡುಗೆ ಮನೆಯಲ್ಲಿಯೇ ಸಾಯುತ್ತಿದ್ದರು, ಅಂಗನವಾಡಿ ನೌಕರರು 70 ರೂಪಾಯಿಯಿಂದ ದುಡಿಮೆನ್ನು ಪ್ರಾರಂಭ ಮಾಡಿದ್ದಾರೆ. ಇಡೀ ಪ್ರಪಂಚಕ್ಕೆ ಕಾಫಿಯನ್ನು ಸಪ್ಲೈ ಮಾಡುತ್ತಿದ್ದ ಪ್ಲಾಂಟೇಶನ್‌ ಕಾರ್ಮಿಕರು ಸೇರಿದಂತೆ ವಿವಿಧ ಭಾಗಗಳಲ್ಲಿ ದುಡಿಯುವ ಕಾರ್ಮಿಕರ ಕಷ್ಟಗಳನ್ನು ಅರಿತು, ಅವರಿಗೆ ಸಮಾನವಾದ ಜೀವನವನ್ನು ಕಲ್ಪಿಸಲು ರಾಜ್ಯದ ದೇಶದ ಅಭಿವೃದ್ಧಿಗೆ ಅವರಿಂದಲೂ ಕೊಡುಗೆ ಸಿಗುವಂತೆ, ಅವರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಳ ಮಾಡಿದ್ದು ಇದೇ ಕೆಂಬಾವುಟ, ಇದೇ ಸಿಐಟಿಯು” ಎಂದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ

“ಇದೇ ರೀತಿ ಸಿಐಟಿಯು ರಾಜ್ಯಗಳು ಸೇರಿದಂತೆ ಇಡೀ ದೇಶಾದ್ಯಂತ ಕಾರ್ಮಿಕರನ್ನು ಸಂಘಟಿಸಿ ಅವರ ಜೀತ ವಿಮುಕ್ತಿಗಾಗಿ ಕೆಲಸ ಮಾಡುತ್ತಿದೆ. ಆದರೆ ಹಿಂದೂ ಎಂದು ಹೇಳಿಕೊಂಡು ಹಿಂದುತ್ವವನ್ನೇ ಅಜೆಂಡಾವಾಗಿ ಮಾಡಿಕೊಂಡಿರುವ ಬಿಜೆಪಿಯ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕರನ್ನು ಮತ್ತೆ ಗುಲಾಮರನ್ನಾಗಿ ಮಾಡುತ್ತದೆ. ಈ ದೇಶದಲ್ಲಿ ಕಾರ್ಮಿಕರಿಗೆ ಅಸ್ತ್ರಗಳಾಗಿದ್ದಂತಹ ಕಾನೂನುಗಳನ್ನು ಬದಲಾವಣೆ ಮಾಡಿ, ಕಾರ್ಮಿಕ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ ಒಂದೆಡೆ ಕೆಲಸದ ವೇಳೆಯನ್ನು ಹೆಚ್ಚಿಸಿದರೆ, ಇನ್ನೊಂದೆಡೆ ಹೆಣ್ಣುಮಕ್ಕಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದ್ದಾರೆ” ಎಂದರು.

ಸಿಐಟಿಯು ಮೆರವಣಿಗೆ 1 1

“ದೇಶದಲ್ಲಿ 56 ಲಕ್ಷ ಜನ ಅಂಗನವಾಡಿ, ಬಿಸಿಯೂಟ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಖಾಯಂ ಮಾಡಿ, ಕನಿಷ್ಠ ವೇತನವನ್ನು ಜಾರಿ ಮಾಡಿ ಅಂತ ಬೇಡಿಕೆಗಳನ್ನು ಸಲ್ಲಿಸಿದರೂ ಕೂಡ ನಮ್ಮ ದೇಶದ ಪ್ರಧಾನಿ ಕ್ಯಾರೆ ಎಂದಿಲ್ಲ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಬಿಹಾರ ಚುನಾವಣೆ ಬೆನ್ನಲ್ಲೇ ಕೇರಳದಲ್ಲಿ ಸಿಪಿಎಂ-ಕಾಂಗ್ರೆಸ್ ನಡುವೆ ವಾಕ್ಸಮರ

“ನಮ್ಮ ಗ್ರಾಮ ಪಂಚಾಯಿತಿ ನೌಕರರನ್ನು ಒಳಗೊಂಡು ಸುಮಾರು ಶೆಡ್ಯೂಲ್ಡ್‌ ಎಂಪ್ಲಾಯ್‌ಮೆಂಟ್‌ನಲ್ಲಿ ಬರುವಂತಹವರಿಗೆ ಕನಿಷ್ಠ ವೇತನವನ್ನು ನಿಗದಿ ಮಾಡಬೇಕು, ಪೆನ್ಷನ್‌ ಕೊಡಬೇಕು, ಗ್ರಾಚ್ಯುಟಿ ಕೊಡಬೇಕು, ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಅವರನ್ನು ತರಬೇಕು” ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...