ಹಾಸನ ಮಣ್ಣಿನ ಹೆಣ್ಣು ಬೇರುಗಳು | ಮಹಿಳೆಯರ ಆಶಾಕಿರಣ ‘ಕೆಂಪು ಚೆಲುವಾಜಮ್ಮಣ್ಣಿ’ ಸಮಾಜ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಮೈಸೂರು ಮಹಾರಾಜರ ಪತ್ನಿ ಕೆಂಪು ಚೆಲುವಾಜಮ್ಮಣ್ಣಿ ಅವರ ಹೆಸರಿನಲ್ಲಿ ಹಾಸನದಲ್ಲಿ ‘ಕೆಂಪು ಚೆಲುವಾಜಮ್ಮಣ್ಣಿ ಮಹಿಳಾ ಸಮಾಜ’ವು 1939ರಲ್ಲಿ ಸ್ಥಾಪನೆಯಾಗಿದೆ. ಈ ಮಹಿಳಾ ಸಮಾಜವು ಸದ್ದು ಗದ್ದಲವಿಲ್ಲದೆ, ಯಾರ ಬಳಿಯೂ ಹಣಕ್ಕಾಗಿ ಕೈ ಚಾಚದೆ, ಸಾಲವನ್ನು ಮಾಡದೆ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಮಳಿಗೆಗಳಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ವ್ಯವಸ್ಥೆ ಮಾಡಿಕೊಂಡು ಅಪೂರ್ವ ಸಾಧನೆ ಮಾಡಿದೆ.

ಇದನ್ನು ಓದಿದ್ದೀರಾ?: ಹಗರೆಯ ಮೂವರು ಮೌಖಿಕ ಕಥೆಗಾರ್ತಿಯರು…

ಬ್ರಿಟಿಷರ ಆಡಳಿತವಿದ್ದ ಕಾಲಘಟ್ಟದಲ್ಲಿ ಹಾಸನ ನಗರದ ಸಂಪ್ರದಾಯಸ್ಥ ಕುಟುಂಬದ ಮಹಿಳೆಯೊಬ್ಬರು ತಮ್ಮ ಪತಿ ನಿಧನರಾದ ಸಂದರ್ಭದಲ್ಲಿ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಒಳಗಾಗುವ ಭೀತಿಯಿಂದ ರಾತ್ರೋರಾತ್ರಿ ಮನೆಯವರಿಗೂ ಗೊತ್ತಾಗದಂತೆ ಮೈಸೂರು ಸಂಸ್ಥಾನದ ಮಹಾರಾಜರ ಅರಮನೆಗೆ ತೆರಳಿದ್ದರಂತೆ. ಹಾಸನದಲ್ಲಿ ಸಂಕಷ್ಟಕ್ಕೆ ತುತ್ತಾದ ಮಹಿಳೆಯರಿಗೆ ರಕ್ಷಣೆ ಕೊಡುವ ಮತ್ತು ಅವರ ಬದುಕಿಗೆ ಮಾರ್ಗ ಕಂಡುಕೊಳ್ಳುವ ಸಲುವಾಗಿ ಹಾಸನದಲ್ಲಿ ಕೆಂಪು ಚೆಲುವಾಜಮ್ಮಣ್ಣಿ ಅವರ ಹೆಸರಿನಲ್ಲಿ ಮಹಿಳಾ ಸಮಾಜದ ಅವಶ್ಯಕತೆ ಇರುವುದನ್ನು ಅವರು ಸಂಸ್ಥಾನಕ್ಕೆ ಮನಗಾಣಿಸಿದರು. ತದನಂತರ ಅಸ್ತಿತ್ವ ಕಂಡುಕೊಂಡ ಈ ಮಹಿಳಾ ಸಮಾಜ ಇತಿಹಾಸ ಸೃಷ್ಟಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಆಡಳಿತದ ಅವಧಿಯಲ್ಲಿ ಸಂಬಂಧಿಸಿದ ಗೌರವಾನ್ವಿತ ಮಹಾರಾಜರ ನೇತೃತ್ವದ ಹಲವು ಸಭೆಗಳು ನಡೆದಿತ್ತು. ಅಂತಿಮವಾಗಿ 1936ರಲ್ಲಿ ಕೀರ್ತಿಶೇಷ ಶ್ರೀಮತಿ ಕೆಂಪು ಚೆಲುವಾಜಮ್ಮಣ್ಣಿ ಅವರಿಗೆ ಸೇರಿದ ಆಸ್ತಿ ಹಾಗೂ ಇನಾಮು ಜಮೀನಾದ ಅಂದಿನ ಹಾಸನ ನಗರಸಭೆಗೆ ಸೇರಿದ ನಿವೇಶನವನ್ನು ಅನುದಾನವಾಗಿ ಹತ್ತು ರೂಪಾಯಿಗಳ ಕಿಮ್ಮತ್ತು ನೀಡಿ ಈ ಕೆಂಪು ಚೆಲುವಾಜಮಣ್ಣಿ ಅವರ ಹೆಸರಿನಲ್ಲಿ ನಿರ್ಮಿಸಲ್ಪಡುವ ಸಮಾಜಕ್ಕೆ ನೀಡಿರುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ಅಂದಿನ ಮೈಸೂರು ಮಹಾಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಪತ್ನಿ ಲೇಡಿ ಮಿರ್ಜಾ ಎಂ. ಇಸ್ಮಾಯಿಲ್ ಅವರು ಸಮಾಜದ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಮಾಡಿದ್ದು, ಸ್ವತಃ ಅಂದಿನ ಮಹಾರಾಣಿಯವರು ಅಧ್ಯಕ್ಷತೆ ವಹಿಸಿದ್ದರು. ಸಂಬಂಧಿಸಿದ ಶಿಲಾನ್ಯಾಸ ಕಲ್ಲು ಇಂದಿಗೂ ಸಮಾಜದ ಕಟ್ಟಡದಲ್ಲಿ ಸಾಕ್ಷಿಯಾಗಿದೆ. ಕೆಂಪು ಚೆಲುವಾಜಮಣ್ಣಿ ಅವರ ಹೆಸರಿನ ಈ ಕಟ್ಟಡ ನಿರ್ಮಿಸಲು 1938ರಲ್ಲಿ ಕಾಮಗಾರಿ ಆರಂಭವಾಗಿ ಒಂದೇ ವರ್ಷದಲ್ಲಿ ಅದು ಪೂರ್ಣಗೊಂಡಿತು. ಸಮಾಜದ ಅಧ್ಯಕ್ಷರಾಗಿದ್ದ ಅಂದಿನ ಜಿಲ್ಲಾಧಿಕಾರಿಗಳಾದ ಟಿ.ರಾಮಯ್ಯ ಅವರ ಪತ್ನಿ ನಾಗಮ್ಮ ರಾಮಯ್ಯ ಅವರು 25, ಸೆಪ್ಟೆಂಬರ್ 1939ರಂದು ಕಟ್ಟಡವನ್ನು ಉದ್ಘಾಟಿಸಿದ್ದು, ಸಂಬಂಧಿಸಿದ ಫಲಕ ಇಂದಿಗೂ ಸಮಾಜದ ಕಟ್ಟಡದಲ್ಲಿದೆ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಹಾಸನ ನಗರದ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಸಿ.ಎಸ್.ಕೃಷ್ಣಪ್ಪನವರ ಮನವಿಯ ಮೇರೆಗೆ ಹಾಸನ ನಗರದ ಉತ್ತರ ಬಡಾವಣೆಯ ಬಳಕೆದಾರರ ಸಹಕಾರ ಸಂಘಕ್ಕೆ, ಪಡಿತರ ವಿತರಣಾ ಕೇಂದ್ರಕ್ಕೆ, ನಂತರದಲ್ಲಿ ದೂರದರ್ಶನ ಮರುಪ್ರಸಾರ ಕೇಂದ್ರಕ್ಕೆ- ಬಾಡಿಗೆಗೆ ಕಟ್ಟಡ ನೀಡಲಾಗಿತ್ತು. ಸ್ವಂತ ಕಟ್ಟಡವಿಲ್ಲದೆ ಮಹಿಳೆಯರಿಗೆ ಸಂಬಂಧಿಸಿದ ಚಟುವಟಿಕೆಗಳು ನಂತರದ ದಿನಗಳಲ್ಲಿ ಮಂದಗತಿಯಲ್ಲಿ ಸಾಗಿದವು. ಸಮಾಜದ ಅಂದಿನ ಅಧ್ಯಕ್ಷರಾಗಿದ್ದ ಹೆಚ್.ಆರ್.ಮಹಾಲಕ್ಷ್ಮಮ್ಮನವರು ವಯೋಸಹಜ ಕಾರಣಗಳಿಂದಾಗಿ ಸಂಘದ ಕೆಲಸ ನಿರ್ವಹಿಸಲು ಸಾಧ್ಯವಾಗದೇ, ಉಪಾಧ್ಯಕ್ಷರಾಗಿದ್ದ ಜಯಲಕ್ಷ್ಮಿ ಮುನಿವೆಂಕಟೇಗೌಡ ಅವರಿಗೆ 2005ರಲ್ಲಿ ಅಧಿಕಾರ ಹಸ್ತಾಂತರಿಸಿದರು.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಸಮಾಜದಲ್ಲಿ ಸಕ್ರಿಯರಾಗಿದ್ದ ಜಯಲಕ್ಷ್ಮಿ ಮುನಿವೆಂಕಟೇಗೌಡ, ರಾಧಾ ಕೃಷ್ಣಮೂರ್ತಿ, ವಿಜಯ ವೆಂಕಟೇಶಮೂರ್ತಿ, ಲೋಲಾಕ್ಷಿ ಮತ್ತು ಲೀಲಾವತಿ ಅವರು, ಕೆಲ ದಾಖಲಾತಿಯನ್ನು ಇಟ್ಟುಕೊಂಡೇ ಸಮಾಜಕ್ಕೆ ಭದ್ರ ಬುನಾದಿಯನ್ನು ಹಾಕಿದ್ದು ಹೆಮ್ಮೆಯ ವಿಷಯ. ಪ್ರಸ್ತುತ 150ಕ್ಕೂ ಅಧಿಕ ಸದಸ್ಯರನ್ನು ಸಂಘ ಹೊಂದಿದ್ದು, ಹಾಸನ ನಗರಸಭೆಯಿಂದ 42 ವರ್ಷದ ದಾಖಲೆ ಮತ್ತು ಇ-ಖಾತೆಯನ್ನು ಅಧ್ಯಕ್ಷರಾದ ಜಯಲಕ್ಷ್ಮಿ ಮುನಿವೆಂಕಟೇಗೌಡ ಹಾಗೂ ಕಾರ್ಯದರ್ಶಿ ಲೀಲಾವತಿ ಅವರು ಮಾಡಿಸಿದ್ದಾರೆ. ಅಠಾರ ಕಛೇರಿಯಿಂದ 1938ರಿಂದ 2023 ಅಂದರೆ 85 ವರ್ಷದ ಮಾಲೀಕತ್ವದ ದಾಖಲೆಯನ್ನು ಈಗಿನ ಹಾಲಿ ಅಧ್ಯಕ್ಷರ ಮಗ ವಾಸ್ತುಶಿಲ್ಪಿ ಶರತ್‌ಚಂದ್ರ ಹಾಗೂ ವಕೀಲೆ ಸುಮಾ ಅವರ ಶ್ರಮದಿಂದ ಸಂಗ್ರಹಿಸಲಾಗಿದೆ. ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸೇರಿ ಅಧಿಕೃತವಾಗಿ ಎಲ್ಲವನ್ನೂ ನೋಂದಣಿ ಮಾಡಿಸಿದ್ದಾರೆ.

ಇದನ್ನು ಓದಿದ್ದೀರಾ?: ಕಾಯಕ ಯೋಗಿನಿ ಕಾಂಚನಮಾಲಾ

ಹತ್ತಾರು ಅಡೆ-ತಡೆಗಳ ಮಧ್ಯೆಯೇ ನೂರಾರು ಹೆಣ್ಣುಮಕ್ಕಳಿಗೆ ಸಮಿತಿಯ ಮಿತಿಯಲ್ಲಿ ನೆರವು ಒದಗಿಸಲಾಗಿದೆ. ಇದರಲ್ಲಿ ಕ್ರೀಡಾ ಚಟುವಟಿಕೆ, ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಟೈಲರಿಂಗ್, ಕರಕುಶಲ ವಸ್ತುಗಳ ತರಬೇತಿ, ನಿಟ್ಟಿಂಗ್, ಹೆಣ್ಣು ಮಕ್ಕಳಿಗೆ ಕಂಡೇನ್ಸ್ ತರಬೇತಿ, ಯೋಗಾ ತರಬೇತಿ, ಸುಗಮ ಸಂಗೀತ ಮತ್ತು ಜನಪದ ಗೀತೆಗಳ ತರಬೇತಿ, ಕಮ್ಮಟ, ಲೈಂಗಿಕ ಅಲ್ಪಸಂಖ್ಯಾತರಿಗೆ ನೆರವು, ಪ್ರತಿಭಾ ಪುರಸ್ಕಾರ, ಮಂಗಳಮುಖಿಯರಿಗೆ ನೆರವು, ನಾಟಕೋತ್ಸವಕ್ಕೆ ನೆರವು, ರಾಷ್ಟ್ರೀಯ ಹಬ್ಬಗಳ ಆಚರಣೆ, ಅಶಕ್ತ ಮಕ್ಕಳಿಗೆ ನೆರವು, ಪ್ರಸೂತಿ ತಜ್ಞರ ಸಂಘದೊಂದಿಗೆ ಸಮಾಲೋಚನಾ ಕಾರ್ಯಕ್ರಮ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಮಾಜ ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಸಮಾಜವು ಸದ್ಯ ಸುಮಾರು 6 ಕೋಟಿಗೂ ಮಿಗಿಲಾಗಿ ಆಸ್ತಿ ಹೊಂದಿದೆ. ಸಮಾಜದ ಮುಂಭಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ಸಮಾಜಕ್ಕೆ ನಿರಂತರ ಆದಾಯ ಬರುವಂತೆ ದೂರಾಲೋಚನೆಯ ಕ್ರಮ ಕೈಗೊಳ್ಳಲಾಗಿದೆ. ಹಣಕಾಸು ವಹಿವಾಟು ಪ್ರತಿಯೊಂದು ಬ್ಯಾಂಕ್ ಮೂಲಕ ಮಾಡುವ ನಿಯಮ ರೂಢಿಸಿಕೊಳ್ಳಲಾಗಿದೆ. ನಗರಸಭೆಗೆ ಕಂದಾಯ ಕಟ್ಟಿ ಪ್ರಸ್ತುತ ಜಿಎಸ್‌ಟಿ ತೆರಿಗೆ ಬಾಕಿ ಇಲ್ಲದಂತೆ ಮಾಡಲಾಗಿದೆ. 2014 ಮಾರ್ಚ್ 2ರಂದು ಸಮಾಜದ ಅಮೃತ ಮಹೋತ್ಸವ ಆಚರಿಸಿದ್ದು, ಇದರ ಸವಿನೆನಪಿಗಾಗಿ ‘ಅಮೃತ ಸಿಂಚನ’ ಸ್ಮರಣ ಸಂಚಿಕೆಯನ್ನು ಸಹ ಹೊರತಂದಿದ್ದಾರೆ. ಯಾರಿಂದಲೂ ವಂತಿಗೆಯನ್ನು ಸ್ವೀಕರಿಸದೆ ಸಮಾಜವನ್ನು ಉನ್ನತಿಯ ಮಾರ್ಗದತ್ತ ಕೊಂಡೊಯ್ಯುತ್ತಿದ್ದು, ಆಡಳಿತ ಮಂಡಳಿಯ ನಿರ್ದೇಶಕರ, ಸಮಾಜದ ಸದಸ್ಯರ ಸಹಕಾರ ಅವಿಸ್ಮರಣೀಯ.

Chaluvajammanni mahila samaja Hassan

ಸ್ವಾತಂತ್ರ‍್ಯೋತ್ತರ ಭಾರತದ ಪ್ರಪ್ರಥಮ ರಾಜ್ಯ ಮಹಿಳಾ ಸಚಿವರಾಗಿದ್ದ ಯಶೋಧರಮ್ಮ ದಾಸಪ್ಪ ಅವರು ಈ ಮಹಿಳಾ ಸಮಾಜದಲ್ಲಿ ಸದಸ್ಯರಾಗಿದ್ದರು ಹಾಗೂ ವಿಧಾನಸಭಾ ಅಧ್ಯಕ್ಷರಾಗಿದ್ದ ಆರ್.ನಾಗರತ್ನಮ್ಮ ಕೂಡ ನಮ್ಮ ಹಾಸನ ಜಿಲ್ಲೆಯವರು ಎಂದು ಸಮಾಜದವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮಹಿಳೆಯರ ಶ್ರೇಯೋಭಿವೃದ್ಧಿಯ ಪರಿಕಲ್ಪನೆಯನ್ನು ಧ್ಯೇಯವಾಗಿಸಿಕೊಂಡು ಸಮಾಜವು ಇಂದಿಗೂ ಸಾಗುತ್ತಿದೆ. ಕೆಂಪು ಚೆಲುವಾಜಮ್ಮಣ್ಣಿ ಅವರ ಚಿಂತನೆ ಮತ್ತು ಮಾರ್ಗದರ್ಶನ ನಮಗೆ ದಾರಿದೀಪವಾಯಿತು ಎಂದು ಇಲ್ಲಿನ ಸದಸ್ಯರು ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ ಸಮಾಜದ ವತಿಯಿಂದ ಮಹಿಳೆಯರ ಶ್ರೇಯೋಭಿವೃದ್ಧಿ, ಮಾರ್ಗದರ್ಶನ, ಆರ್ಥಿಕ ಸಬಲತೆ ಹಾಗೂ ಆರೋಗ್ಯಪೂರ್ಣ ಸಮಾಜ, ಆರ್ಥಿಕ ಸ್ವಾವಲಂಬನೆಗಾಗಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ.

ಇದನ್ನು ಓದಿದ್ದೀರಾ?: ಅಮೆರಿಕಾದಲ್ಲಿ ಸಾಧನೆ ಮಾಡಿದ ಭೌತವಿಜ್ಞಾನಿ- ಡಾ.ರತ್ನಾನಾಯಕ್

ಸಂಪದ್ಭರಿತವಾಗಿರುವ ಕೆಂಪು ಚೆಲುವಾಜಮ್ಮಣ್ಣಿ ಸಮಾಜವು ಮುಂದಿನ ದಿನಗಳಲ್ಲಿಯೂ ಸಹ ನಿಸ್ವಾರ್ಥ ಸೇವೆ, ಇರುವ ಸಂಪನ್ಮೂಲದ ಸದ್ಭಳಕೆ ಮಾಡಿಕೊಂಡು ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಹೆಣ್ಣುಮಕ್ಕಳ ಉನ್ನತಿಗೆ, ಆರ್ಥಿಕ ಸ್ವಾವಲಂಬನೆಗೆ, ಅವರ ಮಕ್ಕಳ ಶೈಕ್ಷಣಿಕ ಬೆಂಬಲಕ್ಕೆ ಹಾಗೂ ಅವನತಿಯ ಹಾದಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಬಡ ಮಹಿಳೆ ಮತ್ತು ಮಕ್ಕಳೆಡೆಗೆ ವಿಸ್ತಾರವಾದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನಾಗರಿಕರ ನಿರೀಕ್ಷೆ. ತನ್ಮೂಲಕ ಮಹಿಳೆಯರ, ಮಕ್ಕಳ ಮಹೋನ್ನತಿಗೆ ಸಾಧ್ಯವಾಗುವ ಕೆಲಸಗಳತ್ತ ಕೆಂಪು ಚೆಲುವಾಜಮ್ಮಣ್ಣಿ ಮಹಿಳಾ ಸಮಾಜವು ಸಾಗಬೇಕಾಗಿದೆ.

-ಶೃತಿ ಕಾಮಸಮುದ್ರ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...