ಹಾಸನ ಮಣ್ಣಿನ ಹೆಣ್ಣು ಬೇರುಗಳು | ಅರಸೀಕೆರೆಯ ಕಸ್ತೂರ ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಗ್ರಾಮೀಣ ಭಾರತದ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲು ಮಹಾತ್ಮಾ ಗಾಂಧಿ ನೇತೃತ್ವದಲ್ಲಿ 1945ರಲ್ಲಿ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅನ್ನು ಅರಸೀಕೆರೆಯಲ್ಲಿ ಸ್ಥಾಪಿಸಲಾಯಿತು. ಕಸ್ತೂರ ಬಾ ಗಾಂಧಿಯವರ ನಿಧನದ ನಂತರ ಅವರ ಸ್ಮರಣೆಗಾಗಿ ಮತ್ತು ಗ್ರಾಮೀಣ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಕಸ್ತೂರ್ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸ್ಥಾಪಿಸಲಾಗಿದ್ದು ವಿಶೇಷ. ಈ ವಿಶಿಷ್ಟ ಇತಿಹಾಸವು ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸದ ಹಿನ್ನೆಲೆಯಲ್ಲಿ ಬೆಸೆದುಕೊಂಡಿದೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದ್ದ ಪ್ರಮುಖ ವ್ಯಕ್ತಿತ್ವಗಳು ಮತ್ತು ಅನಾಮಧೇಯ ಜನಸಾಮಾನ್ಯರು ತಮ್ಮ ಸಂಪನ್ಮೂಲಗಳನ್ನು ಸಜ್ಜುಗೊಳಿಸಿ ಈ ಟ್ರಸ್ಟ್ಅನ್ನು ಕಸ್ತೂರ ಬಾ ಗ್ರಾಮ್(ಇಂದೋರ್)ನಲ್ಲಿ ತನ್ನ ಪ್ರಧಾನ ಕಚೇರಿಯೊಂದಿಗೆ ದೇಶಾದ್ಯಂತ 22 ರಾಜ್ಯ ಶಾಖೆಗಳಲ್ಲಿ ಸ್ಥಾಪಿಸಿದರು. ಸ್ವಾತಂತ್ರ‍್ಯ ಚಳವಳಿಯ ಧೀಮಂತ ನಾಯಕಿ ಸರೋಜಿನಿ ನಾಯ್ಡು ಅವರು ಟ್ರಸ್ಟ್ ಸ್ಥಾಪನೆಗಾಗಿ ತಮ್ಮ ಸಮಯ ಮತ್ತು ಪೂರ್ಣ ಶಕ್ತಿಯನ್ನು ಮೀಸಲಿಟ್ಟರು. ಮಹಾತ್ಮಾ ಗಾಂಧಿ, ವಲ್ಲಭ ಭಾಯಿ ಪಟೇಲ್, ಥಕ್ಕರ್ ಬಾಪಾ, ದಾದಾ ಸಾಹೇಬ್ ಮಾವ್ಲಂಕರ್, ಪ್ರೇಮ್ ಲೀಲಾ ಥಕರಾಸಿ, ಲಕ್ಷ್ಮಿ ಎನ್.ಮೆನನ್, ಸುಶ್ರೀ ಮಣಿಬೆನ್ ಪಟೇಲ್ ಮತ್ತು ಡಾ.ಸುಶೀಲಾ ನಾಯರ್ ಈ ಟ್ರಸ್ಟ್‌ನ ಮೊದಲ ಅಧ್ಯಕ್ಷರಾಗಿದ್ದರು.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಹೊಸ ಶತಮಾನದ ಆರಂಭದಲ್ಲಿ, ಕಸ್ತೂರ ಬಾ ಟ್ರಸ್ಟ್‌ನ ಪಾತ್ರವು ಅದರ ಪ್ರಾರಂಭದಂತೆಯೇ ಪ್ರಬಲ ಮತ್ತು ಪ್ರಸ್ತುತವಾಗಿದೆ. ಗ್ರಾಮೀಣ ಭಾರತದ ಮಹಿಳೆಯರು ಮತ್ತು ಮಕ್ಕಳಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ, ಸಾಕ್ಷರತೆ, ವೃತ್ತಿಪರ ತರಬೇತಿ, ಬದುಕಿನ ಪರಿಹಾರೋಪಾಯ ಮತ್ತು ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿ 70 ವರ್ಷಗಳಿಗೂ ಹೆಚ್ಚು ಕಾಲ ರಚನಾತ್ಮಕ ಕೆಲಸ ಮಾಡುವ ಮೂಲಕ ಟ್ರಸ್ಟ್ ತನ್ನ ಆದರ್ಶಗಳಿಗೆ ಬದ್ಧವಾಗಿದೆ. ಮಹಾತ್ಮಾ ಗಾಂಧಿಯವರ ಸಾರ್ವತ್ರಿಕ ಮತ್ತು ಕಾಲಾತೀತ ದೃಷ್ಟಿಕೋನ- ಸರ್ವೋದಯವು ಕಸ್ತೂರ ಬಾ ಟ್ರಸ್ಟ್‌ನಲ್ಲಿ ತನ್ನ ಅತ್ಯುತ್ತಮ ಪ್ರಾಯೋಗಿಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಏಕೆಂದರೆ ಸರ್ವೋದಯವು ಎಲ್ಲಾ ರೀತಿಯ ಜೀವನಕ್ಕಾಗಿ ಪ್ರಕೃತಿ ಮತ್ತು ಪರಿಸರದೊಂದಿಗೆ ಸಾಮರಸ್ಯದಿಂದ ಚೈತನ್ಯವನ್ನು ಪುನರುಜ್ಜೀವನಗೊಳಿಸುತ್ತಿದೆ. ಸಾಮಾಜಿಕ ಸಕ್ರಮದ ಪುನರ್ ನಿರ್ಮಾಣವು ಸರ್ವೋದಯದ ಭಾಗವಾಗಿದೆ. ಮಹಿಳೆಯರು ಮತ್ತು ಮಕ್ಕಳು ನಮ್ಮ ಸಮಾಜದ ಬೆನ್ನೆಲುಬು. ಸರ್ವೋದಯದಲ್ಲಿ ಕಲ್ಪಿಸಲಾಗಿರುವ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಮಹಿಳೆಯರು ಮತ್ತು ಮಕ್ಕಳಲ್ಲಿ ರಚನಾತ್ಮಕ ಕೆಲಸವನ್ನು ಪ್ರೇರೇಪಿಸುವುದು, ಒಳಗೊಳ್ಳುವುದು ಪ್ರಾಥಮಿಕ ಮತ್ತು ಅತ್ಯಗತ್ಯ ಅವಶ್ಯಕತೆಯಾಗಿದೆ. ಈ ಗಾಂಧಿವಾದಿ ದೃಷ್ಟಿಕೋನವನ್ನು ಮುಂದುವರಿಸಲು, ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಜನರ ಸಂಪೂರ್ಣ ಬೆಂಬಲ ಮತ್ತು ಒಳಗೊಳ್ಳುವಿಕೆ ಅಗತ್ಯವಿದೆ.
ಅರಸೀಕೆರೆ ನಗರದಿಂದ ಮೈಸೂರಿಗೆ ತೆರಳುವ ರಸ್ತೆಯಲ್ಲಿ 3 ಕಿ.ಮೀ. ಸಾಗಿದರೆ ಹಾದಿಬದಿಯಲ್ಲೆ ಕಸ್ತೂರ ಬಾ ಗಾಂಧಿ ಸ್ಮಾರಕ ಟ್ರಸ್ಟ್ ಕಣ್ಣಿಗೆ ಕಾಣುತ್ತದೆ. 85 ಎಕರೆಯಷ್ಟು ದೊಡ್ಡ ಜಾಗದಲ್ಲಿ ಹರಡಿರುವ ಟ್ರಸ್ಟ್‌ನಲ್ಲಿ ಒಂದು ವಿಶಾಲವಾದ ತೊಟ್ಟಿ ಮನೆಯ ರೀತಿಯ ಕಟ್ಟಡವಿದೆ. ಈ ಸ್ಮಾರಕದ ಆವರಣದಲ್ಲಿ ಗಾಂಧೀಜಿ ಮತ್ತು ಕಸ್ತೂರ ಬಾ ಅವರ ಜೀವನ ಚರಿತ್ರೆಯನ್ನು ತಿಳಿಸುವ ದಂಡಿಯಾತ್ರೆಯ 8 ಶಿಲ್ಪಗಳ ಕಲಾಕೃತಿ, ಕಸ್ತೂರ ಬಾ ಅವರು ಚರಕದಿಂದ ನೂಲು ತೆಗೆಯುತ್ತಿರುವ 8 ಅಡಿ ಎತ್ತರದ ಪುತ್ಥಳಿ, ಕಸ್ತೂರ ಬಾ ಮತ್ತು ಗಾಂಧೀಜಿ 1915ರ ಸ್ವಾತಂತ್ರ‍್ಯ ಪೂರ್ವದಲ್ಲಿ ಭಾರತಕ್ಕೆ ಆಗಮಿಸಿದ್ದಾಗಿನ ಚಿತ್ರಗಳು, ಧ್ಯಾನಾಸಕ್ತ ಗಾಂಧಿ ಹೀಗೆ ಹಲವಾರು ಕಲಾಕೃತಿಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1000460597.jpg

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

1946ರಲ್ಲಿ ಕಸ್ತೂರ ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ಅನ್ನು ಗ್ರಾಮೀಣ ಪ್ರದೇಶಗಳ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಾಧಿಸಲು, ವೃದ್ಧಾಶ್ರಮ, ಶಾಲೆಗಳು, ಮಹಿಳೆಯರ ಸಬಲೀಕರಣದ ಉದ್ದೇಶಕ್ಕಾಗಿ ಸ್ಥಾಪಿಸಲಾಗಿತ್ತು. ಅಂದು ಎಚ್.ಸಿ.ದಾಸಪ್ಪ ಅವರು ಕೇಂದ್ರದ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಪತ್ನಿ ಯಶೋಧರ ದಾಸಪ್ಪ ಅವರು ಕೂಡ ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಗಾಂಧೀಜಿ ವಿಚಾರಗಳಿಂದ ಪ್ರಭಾವಿತರಾಗಿ ಅವರ ಅನುಯಾಯಿಯಾಗಿದ್ದ ಅವರು, ರಾಜ್ಯ ಸರಕಾರದಿಂದ 1947ರಲ್ಲಿ ಅರಸೀಕೆರೆಯ ಈ ಸ್ಥಳದಲ್ಲಿ ಸುಮಾರು 85 ಎಕರೆ ಜಾಗವನ್ನು ಟ್ರಸ್ಟ್‌ನ ಸ್ಥಾಪನೆಗಾಗಿ ಮಂಜೂರು ಮಾಡಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಈ ಕೇಂದ್ರ ಆರಂಭವಾಗಿದ್ದು ವಿಶೇಷ. 1948ರಲ್ಲಿ ಗಾಂಧೀಜಿ ಅವರು ಮರಣ ಹೊಂದಿದ ನಂತರ ಅವರ ಚಿತಾಭಸ್ಮವನ್ನು ದಿಲ್ಲಿಯಿಂದ ಇಲ್ಲಿಗೆ ತಂದು, ಒಂದು ಸಮಾಧಿಯನ್ನೂ ನಿರ್ಮಾಣ ಮಾಡಿದರು. ದೆಹಲಿಯ ರಾಜ್‌ಘಾಟ್, ಗುಜರಾತಿನ ಸಬರಮತಿ ಆಶ್ರಮ ಮುಂತಾದ ಹಲವು ಕಡೆಗಳಲ್ಲಿ ಇರುವಂತೆ ಗಾಂಧೀಜಿ ಚಿತಾಭಸ್ಮವನ್ನು ಅರಸೀಕೆರೆಯ ಕಸ್ತೂರಿ ಬಾ ಟ್ರಸ್ಟ್‌ನಲ್ಲಿ ಸಮಾಧಿ ಕಟ್ಟಿ ಚೆಂದಗೆ ನಿರ್ವಹಣೆ ಮಾಡಿ ಇಡುವ ಮೂಲಕ, ಇದು ಕರ್ನಾಟಕದ ರಾಜ್‌ಘಾಟ್ ಎಂಬಂತೆ ಜನಪ್ರಿಯಗೊಳ್ಳುತ್ತಿರುವುದು, ಅಪಾರ ಜನರು ಇದರ ವೀಕ್ಷಣೆಗೆ ಆಗಮಿಸುವುದು ಹೆಮ್ಮೆಯ ವಿಚಾರವಾಗಿದೆ.
ಇದು ಆರಂಭವಾದಾಗಿನಿಂದ ಇಲ್ಲಿ ಪ್ರಮುಖವಾದ ಹಲವಾರು ಮಹಿಳಾಪರ ಚಟುವಟಿಕೆಗಳು ಜರುಗಿವೆ, ಜರುಗುತ್ತಿವೆ. ಈ ಸಂಸ್ಥೆಯ ಪ್ರಾರಂಭದಿಂದ ಇಲ್ಲಿಯವರೆಗೆ ಅನೇಕ ಮಹಿಳೆಯರು ತಮ್ಮ ಜೀವನದ ಮತ್ತೊಂದು ಧನಾತ್ಮಕ ಮಗ್ಗುಲನ್ನು ಅರಸಿಕೊಂಡಿದ್ದಾರೆ. ಮೊದಲಿಗೆ ಇಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗಿತ್ತು. ಸುತ್ತಲಿನ ಹಳ್ಳಿಗಳಿಂದ ಅಷ್ಟೇ ಅಲ್ಲದೆ ಬೇರೆ ಬೇರೆ ಊರುಗಳಿಂದಲೂ ಹೆಣ್ಣುಮಕ್ಕಳು ಅಂಗನವಾಡಿಗೆ ಸೇರಿದ್ದರು. ಅವರಲ್ಲಿ ಹಲವು ಹೆಣ್ಣುಮಕ್ಕಳು ತಮ್ಮ ಬದುಕನ್ನು ನೇರ್ಪುಗೊಳಿಸಿಕೊಂಡಿದ್ದಾರೆ ಎಂದು ಇಲ್ಲಿನ ಪ್ರತಿನಿಧಿ ಹೇಳುತ್ತಾರೆ. ಅದಲ್ಲದೆ ಟೈಲರಿಂಗ್ ತರಬೇತಿ ಮೂಲಕ ಪ್ರಮಾಣಪತ್ರ ಪಡೆದುಕೊಂಡ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮದೆ ಶೈಲಿಯ ಡಿಸೈನರ್‌ಗಳಾಗಿದ್ದಾರೆ, ಸ್ವಂತ ಉದ್ಯೋಗ ಕೈಗೊಂಡಿದ್ದಾರೆ. ಆರ್ಥಿಕವಾಗಿ ಸಬಲರಾಗಿ, ತಮ್ಮ ಸುತ್ತಲಿನ ಮಹಿಳೆಯರಿಗೂ ಹೊಲಿಗೆ ಕಲಿಸುವ ಗುರುಗಳಾಗಿದ್ದಾರೆಂದು ಕೂಡ ಇಲ್ಲಿ ದಾಖಲೆಯಿದೆ. ಹಾಗೇ ಪ್ರಾರಂಭದಲ್ಲಿ ಇಲ್ಲಿ ದಾದಿಯರಿಗೆ ವೃತ್ತಿ ತರಬೇತಿಯನ್ನೂ ನೀಡಲಾಗುತ್ತಿತ್ತು.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಈಗ ಗ್ರಾಮೀಣ ಮತ್ತು ಬುಡಕಟ್ಟು ಹುಡುಗಿಯರಿಗೆ ಒಂದನೆಯ ತರಗತಿಯಿಂದ ಎರಡನೆಯ ಪಿಯುಸಿ ಹಂತದವರೆಗಿನ ಹೆಣ್ಣುಮಕ್ಕಳಿಗೆ ವಸತಿ ಸೌಲಭ್ಯವನ್ನು ಕಸ್ತೂರ ಬಾ ಆಶ್ರಮದಲ್ಲಿ ಕಲ್ಪಿಸಲಾಗಿದೆ. ಇಲ್ಲಿ ಬಾಲಕಿಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಊಟ, ವಸತಿ ಹಾಗೂ ದೈನಂದಿನ ಕಾಳಜಿಯುಕ್ತ ಆರೈಕೆ ಆ ಮಕ್ಕಳಿಗೆ ದಕ್ಕುತ್ತದೆ. ಪೋಷಕರನ್ನು ಕಳೆದುಕೊಂಡ ಮಕ್ಕಳು, ಏಕ ಪೋಷಕರನ್ನು ಹೊಂದಿದ ಮಕ್ಕಳು- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವ್ಯವಸ್ಥೆಯ ಮೂಲಕ ಇಲ್ಲಿಗೆ ಬಂದು ತಮ್ಮ ನೆಲೆಯನ್ನು ಕಂಡುಕೊಳ್ಳುತ್ತಾರೆ.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಕಸ್ತೂರ ಬಾ ಟ್ರಸ್ಟ್ ಗ್ರಾಮೀಣ ಜನತೆಗೆ ಸಹಾಯ ಮಾಡುವ ಮತ್ತು ಸೇವೆ ಸಲ್ಲಿಸುವ ಪ್ರಮುಖ ಚಟುವಟಿಕೆಯನ್ನು ಹೊಂದಿದೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರಗಳು, ಚಿಕಿತ್ಸಾ ಸೌಲಭ್ಯ, ಆರೋಗ್ಯದ ಪ್ರಾಮುಖ್ಯತೆ ಕುರಿತು ಉಪನ್ಯಾಸಗಳು, ಸಲಹಾ ಕಾರ್ಯಗಳು ಜರುಗುತ್ತವೆ. ಈ ಟ್ರಸ್ಟ್‌ನಲ್ಲಿ ಹಲವಾರು ಸಾಹಿತ್ಯಿಕ, ವಿಚಾರಪರ, ಪರಿಸರಪರ, ಯುವಜನ ಕೇಂದ್ರಿತ ಚಟುವಟಿಕೆಗಳು ಆಯೋಜನೆಗೊಂಡಿವೆ. ನಾಡಿನ ಸುಪ್ರಸಿದ್ಧ ವ್ಯಕ್ತಿಗಳು, ಲೇಖಕರು, ಪ್ರಮುಖ ಮಹನೀಯರು ಭೇಟಿ ಕೊಟ್ಟು ಇಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ಶಿಬಿರದ ಏಳ್ಗೆಗೆ ಕೊಡುಗೆ ಕೊಟ್ಟಿದ್ದಾರೆ.
ಗಾಂಧಿ ದರ್ಶನ ಪ್ರದರ್ಶನವು ಒಂದು ಜೀವಂತ ಮತ್ತು ಆತ್ಮಸಾಕ್ಷಿಯ ದಾಖಲೆಯಾಗಿದ್ದು, ಗೋಡೆಗಳ ಮೇಲೆ ಕೆತ್ತಲಾದ ಮೋಹನ- ಮಹಾತ್ಮನಾದ ನೈಜ ಕಥೆಯನ್ನು ಪ್ರಸ್ತುತಪಡಿಸುತ್ತದೆ. ಕಸ್ತೂರ ಬಾ ಟ್ರಸ್ಟ್‌ನಲ್ಲಿ ಇದಕ್ಕಾಗಿ ಒಂದು ಕೋಣೆಯನ್ನೇ ಮೀಸಲಿರಿಸಲಾಗಿದೆ.

1000460592.jpg

ಶಿಬಿರದ ಒಟ್ಟು ಆವರಣದಲ್ಲಿ ನೂರಾರು ತೆಂಗಿನ ಮರಗಳು, ಹಣ್ಣಿನ ಮರಗಳು, ವಾಣಿಜ್ಯ ಬೆಳೆಯ ಮರಗಳಿವೆ. ಇಲ್ಲಿನ ಗ್ರಂಥಾಲಯವು ಕೂಡ ಮಕ್ಕಳಿಗೆ ಅಧ್ಯಯನಕ್ಕಾಗಿ ಉತ್ತಮ ಪುಸ್ತಕಗಳನ್ನು ಒಳಗೊಂಡಿದೆ. ಇತ್ತೀಚೆಗೆ ಇಲ್ಲಿ ಒಂದು ಗೋಶಾಲೆ ಕೂಡ ಸ್ಥಾಪನೆಯಾಗಿದ್ದು ಹಲವು ಗೋವುಗಳನ್ನು ಅಲ್ಲಿ ಸಂರಕ್ಷಿಸಲಾಗುತ್ತಿದೆ. ಹಲವು ಕಾರ್ಮಿಕರಿಗೆ ಕೆಲಸವನ್ನೂ ಕೊಟ್ಟಿದೆ. ದಂಪತಿಗಳ ಸಮೇತವಾಗಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಿನ ಕಾರ್ಮಿಕರು ಮಹಿಳೆಯರೇ ಆಗಿದ್ದಾರೆ. ಅತ್ಯಂತ ಬೃಹತ್ ರಂಗಮಂದಿರವನ್ನೂ ಇಲ್ಲಿ ಸ್ಥಾಪಿಸಲಾಗಿದ್ದು ಉತ್ತಮ ನಾಟಕ, ಕಾರ್ಯಕ್ರಮ, ಶಿಬಿರ, ಚಟುವಟಿಕೆಗಳು ಇಲ್ಲಿ ನಡೆಯುತ್ತಾ ಬಂದಿವೆ. ಕಸ್ತೂರ ಬಾ ಟ್ರಸ್ಟ್ ದುರ್ಬಲರ ಪರವಿದೆ ಎಂಬ ಆಲೋಚನೆಯೆ ಒಂದು ಧೈರ್ಯದ ಸಾಧನವಾಗಿದೆ. ಒಂದು ಮಹತ್ವದ ತಾಯಿ ಕರುಳಿನ ಸಂಸ್ಥೆಯಾಗಿ ಈ ಕಸ್ತೂರ್ ಬಾ ಗಾಂಧಿ ಟ್ರಸ್ಟ್ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ಅರಸೀಕೆರೆಯ- ತನ್ಮೂಲಕ ಹಾಸನ ಜಿಲ್ಲೆಯ ಒಂದು ಹೆಮ್ಮೆಯ ತಾಣವಾಗಿ ಈ ಆಶ್ರಮ ಮಾರ್ಪಟ್ಟಿದೆ.

-ಮಮತ ಅರಸೀಕೆರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...