20 ಜನವರಿ 2026ರಂದು ಶಿವಮೊಗ್ಗದಲ್ಲಿ ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ನಾನು ಸತ್ತ ಮೇಲೆ ಕವನ ಸಂಗ್ರಹದ ಕವಿತೆಗಳ ಓದು ಮತ್ತು ಪರಿಚಯದ ಕಾರ್ಯಕ್ರಮ ನಡೆಯಲಿದೆ.
ದರದು ಅಸಲು ಎಂಬ ಈ ಕಾವ್ಯದ ಅರಿಕೆಯ ಕಾರ್ಯಕ್ರಮವನ್ನು ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಮತ್ತು ಪ್ರಜ್ಞಾ ಬುಕ್ ಗ್ಯಾಲರಿ, ಶಿವಮೊಗ್ಗ, ಇವರು ಏರ್ಪಡಿಸಿದ್ದು ಸಭೆ ಪ್ರಜ್ಞಾ ಬುಕ್ ಗ್ಯಾಲರಿ, ಸರಕಾರಿ ನೌಕರರ ಭವನ, ನೆಲಮಾಳಿಗೆ, ಹಳೇ ಆರ್.ಟಿ.ಒ. ರಸ್ತೆ, ಬಸವನಗುಡಿ, ಶಿವಮೊಗ್ಗ, ಇಲ್ಲಿಇಂದಿನ ಸಂಜೆ 5.30ಕ್ಕೆ ನಡೆಯಲಿದೆ.
ರಘುನಂದನ ಅವರೇ ತಮ್ಮ ಕವಿತೆಗಳನ್ನು ಅರಿಕೆ ಮಾಡುತ್ತಾರೆ. ಜೊತೆಗೆ, ಬೇಂದ್ರೆಯವರ ಕಾವ್ಯವನ್ನು ಕುರಿತ ಜಿಜ್ಞಾಸೆಯಿಂದ ತೊಡಗಿ ವಿಶಾಲವಾದ ಕಾವ್ಯಮೀಮಾಂಸೆ ಮತ್ತು ಲೋಕಮೀಮಾಂಸೆಯ ತೊಡಗುವ ತಮ್ಮ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಪುಸ್ತಕದ ಪರಿಚಯವನ್ನು ಕೂಡ ಮಾಡಿಕೊಡುತ್ತಾರೆ.
ನಾನು ಸತ್ತ ಮೇಲೆ ಕವನಸಂಕಲನದಲ್ಲಿ ರಘುನಂದನ ಅವರ ಸ್ವರಚಿತ ಕವಿತೆಗಳಲ್ಲದೆ, ಅವರು ಕನ್ನಡಿಸಿರುವ ಬೇರೆ ಭಾಷೆಗಳ ಕೆಲವು ಕವಿತೆಗಳಿವೆ ಹಾಗೂ ಅವರು ನಾಟಕಗಳಿಗಾಗಿ ಬರೆದ ಹಾಡುಗಳು ಹಾಗೂ ಪದ್ಯ ಭಾಗಗಳು ಇವೆ. ರಘುನಂದನ ಅವರು ತಮ್ಮ ಕವಿತೆಗಳ ಅರಿಕೆಯನ್ನು ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಧಾರವಾಡ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಮಾಡಿದ್ದು, ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಅವರ ಕಾವ್ಯಸಂಚಾರದ ಏಳನೆಯ ಕಾರ್ಯಕ್ರಮವಾಗಿದೆ.
ರಘುನಂದನ ಅವರ ಸಂಕೀರ್ಣ, ಸ್ನಿಗ್ಧವಾದ ಕವಿತೆ ಹಾಗೂ ಕಾವ್ಯಮೀಮಾಂಸೆಯು ಈಗಾಗಲೇ ಕಾವ್ಯ ಮತ್ತಿತರ ಸಾಹಿತ್ಯದ ಓದುಗರಲ್ಲಿ ಗಹನವಾದ ಚರ್ಚೆಗೆ ಒಳಗಾಗಿವೆ. ಅವರ ಕೆಲವು ಕವಿತೆಗಳು ಈದಿನ ತಾಣದಲ್ಲಿ ಪ್ರಕಟವಾಗಿವೆ. ಅವರ ಎರಡೂ ಪುಸ್ತಕಗಳ ಅರಿಕೆಯು ಈದಿನ ಹಾಗೂ ಅವಧಿ ಜಾಲತಾಣಗಳಲ್ಲಿ ಪ್ರಕಟವಾಗಿವೆ.
ಅವುಗಳ ಕೊಂಡಿ ಇಲ್ಲಿದೆ: https://eedina.com/opinion/theatre-personality-raghunandana-new-two-books-release-1004/2024-05-09/ಮತ್ತು https://tinyurl.com/mua295mp ಮತ್ತು https://tinyurl.com/49pws5f8





