ಡ್ರಗ್ಸ್‌ ಮಾರಾಟದ ವೇಳೆ ಪೊಲೀಸರ ದಾಳಿ; ‘ಕಬಾಲಿ’ ಚಿತ್ರದ ನಿರ್ಮಾಪಕನ ಬಂಧನ

Date:

ಮಾದಕ ವಸ್ತು ಮಾರಾಟ ಆರೋಪದ ಮೇಲೆ ತೆಲುಗು ನಿರ್ಮಾಪಕ ಕೃಷ್ಣ ಪ್ರಸಾದ್‌ ಚೌಧರಿ ಎಂಬಾತನನ್ನು ಸೈಬರಾಬಾದ್‌ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 78 ಲಕ್ಷ ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ.

ನೈಜೀರಿಯಾ ಮೂಲದ ಗೇಬ್ರಿಯಲ್ ಎಂತಾನಿಂದ ಕೃಷ್ಣ ಪ್ರಸಾದ್‌ ಚೌಧರಿ ಗೋವಾದಲ್ಲಿ ಡ್ರಗ್ಸ್ ಖರೀದಿಸುತ್ತಿದ್ದ. ಬಳಿಕ ಹೈದರಾಬಾದ್‌ನಲ್ಲಿ ಟಾಲಿವುಡ್‌ನ ಕೆಲ ಸೆಲೆಬ್ರಿಟಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೊಲೀಸರು, ಆತನನ್ನು ಹಿಂಬಾಲಿಸಿ, ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ. ಈ ವೇಳೆ  ನಿರ್ಮಾಪಕನಿಂದ 82.75 ಗ್ರಾಂ ಕೊಕೇನ್, ಒಂದು ಕಾರು, 2.05 ಲಕ್ಷ ನಗದು, 4 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಗೇಬ್ರಿಯಲ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾದ ತೆಲುಗು ಅವತರಣಿಕೆಗೆ ಬಂಡವಾಳ ಹೂಡಿದ್ದ ಕೆಪಿ ಚೌಧರಿ, ಹಲವು ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ವಿತರಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸರ್ದಾರ್ ಗಬ್ಬರ್ ಸಿಂಗ್, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಮುಂತಾದ ಚಿತ್ರಗಳಿಗೂ ಚೌಧರಿ ವಿತರಕರಕನಾಗಿದ್ದ.

KP Chowdary1
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧುರಂಧರ್ 2 ನೋಡಿ, ಹಣ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ; ನಟಿ ರಮ್ಯಾ ಖಡಕ್ ಹೇಳಿಕೆ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ...

ಕಲ್ಯಾಣ ಕರ್ನಾಟಕ | 3 ವರ್ಷ, 5,100 ಪ್ರಕರಣ; ಮಹಿಳೆಯರ ನಾಪತ್ತೆ ಹಿಂದೆ ಕಳ್ಳಸಾಗಣೆಯ ಕರಿನೆರಳು?!

ನಾಪತ್ತೆಯಾದ ಪ್ರತಿ ಜೀವವೂ ಮರಳಿ ತನ್ನ ಮನೆ ಸೇರುವಂತಾಗಲು ಮತ್ತು ಮುಂದಿನ...

‘ಬೋಳು ತಲೆಯೇ ನನ್ನ ಬಲ, ಎಷ್ಟೇ ಹಣ ಕೊಟ್ಟರೂ ಕೂದಲು ನಾಟಿ ಬೇಡ’: ನಟ ಅನುಪಮ್ ಖೇರ್

'ನಾನು ಪ್ರತಿಯೊಂದು ಕೂದಲು ನಾಟಿ ಮಾಡುವ ಕಂಪನಿ ಮತ್ತು ವೈದ್ಯರ ಪಾಲಿನ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...