ನುಡಿ ನಮನ | ಕಮಲಾ ಹಂಪನಾ ನಿಧನ; ಅಮ್ಮ ಎರಡನೆಯ ಬಾರಿ ಇಲ್ಲವಾದರು…

Date:

ಅಮ್ಮ ಎರಡನೆಯ ಬಾರಿ ಇಲ್ಲವಾದರು..
ಎರಡನೆಯ ಬಾರಿ ನಿಧನರಾಗುವುದು ಎಂದರೆ..?

ಹೌದು ನನ್ನ ಅಮ್ಮ ಇಲ್ಲವಾಗಿ ಮೂರು ವರ್ಷಗಳಾಗಿತ್ತು. ಅದೊಂದು ದೊಡ್ಡ ಆಘಾತ. ಒಂದು ತುಂಬು ಬದುಕು ಬದುಕಿ 87 ನೆಯ ವಯಸ್ಸಿನಲ್ಲಿ ಅವರು ಇಲ್ಲವಾದರು. ವಯೋಸಹಜವಾಗಿ. ಆದರೆ ಅವರು ಇಲ್ಲದ ನಿರ್ವಾತವನ್ನು ಮೂರು ದೀರ್ಘ ವರ್ಷದಲ್ಲಿ ಕಳೆದುಕೊಂಡು ಇನ್ನಷ್ಟೇ ಉಸಿರಾಡುತ್ತಿದ್ದೆ. ಆಗಲೇ ನನ್ನ ಇನ್ನೊಬ್ಬ ಅಮ್ಮ ಇಲ್ಲವಾದರು. ತಮ್ಮ 89 ನೆಯ ವಯಸ್ಸಿನಲ್ಲಿ.

ಕಮಲಾ ಹಂಪನಾ ನನಗೆ ಇನ್ನೊಬ್ಬ ಅಮ್ಮನೇ. ಅವರ ಮನೆಯಲ್ಲಿ ಸಲೀಸಾಗಿ ಎಲ್ಲೆಂದರಲ್ಲಿ ನುಗ್ಗಬಲ್ಲ, ಅವರ ಮಕ್ಕಳನ್ನು ಗೋಳು ಹುಯ್ದುಕೊಳ್ಳಬಲ್ಲ, ಜಡೆ ಎಳೆದು ನೋಯಿಸಬಲ್ಲ ಸ್ವಾತಂತ್ರ್ಯ ನನಗೆ ಇತ್ತು. ಅಷ್ಟೇ ಅಲ್ಲ ಅವರು ತುಂಬು ಪ್ರೀತಿಯಿಂದ ಬಡಿಸುತ್ತಿದ್ದ ಊಟ, ಜೊತೆಗೆ ಕೊಟ್ಟು ಕಳಿಸುತ್ತಿದ್ದ ತಿಂಡಿ, ಅಕ್ಕರೆಯ ಮಾತು.. ಎಲ್ಲವೂ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಂಪನಾ, ಕಲ್ಲೆ ಶಿವೋತ್ತಮ ರಾವ್ ಹಾಗೂ ನಮ್ಮ ಮನೆ ಒಂದಿಷ್ಟು ಆಚೀಚೆ ಇತ್ತು. ಆ ಕಾರಣಕ್ಕಾಗಿಯೇ ಮೂವರ ಮನೆಯ ಮಕ್ಕಳು ಒಟ್ಟಿಗೇ ಬೆಳೆದವು. ಮೂವರ ಮನೆಯ ಮಕ್ಕಳಿಗೆ ಇದು ನನ್ನ ಮನೆ, ನಿಮ್ಮ ಮನೆ ಎನ್ನುವ ಗೋಡೆಗಳಿರಲಿಲ್ಲ. ಕಮಲಾ ಹಂಪನಾ ಎಂದರೆ ಅಷ್ಟು ಎತ್ತರದ ವ್ಯಕ್ತಿತ್ವ ಎನ್ನುವುದು ನನಗೆ ಗೊತ್ತಾದದ್ದೇ ನಾನು ಕಾಲೇಜು ಮೆಟ್ಟಿಲು ಏರಿದ ನಂತರ. ಅವರು ನಾಡೋಜದ ಮಹಾನ್ ಗೌರವವನ್ನು ಪಡೆದಾಗ, ಮೂಡಬಿದರೆಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ, ಅವರಿಗೆ ಕರ್ನಾಟಕ ಸರಕಾರ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಕೊಟ್ಟಾಗ, ಚಾವುಂಡರಾಯ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಕೊಟ್ಟಾಗ.. ನಮಗೆ ಅವರು ಕೇವಲ ಅಮ್ಮನಾಗಿ ಮಾತ್ರ ಕಂಡಿದ್ದರು.

ಅವರ ಸಾಧನೆಗಿಂತ ನನಗೆ ಅವರು ನಾವು ಚಿಕ್ಕಂದಿನಲ್ಲಿ ಕಂಡಿದ್ದ, ಅವರ ಪ್ರೀತಿಯನ್ನು ಉಂಡಿದ್ದ ಅಮ್ಮ ಮಾತ್ರವಾಗಿಯೇ ಕೊನೆಯವರೆಗೂ ಮನದಲ್ಲಿ ಉಳಿದರು.

೧ 3

ನನ್ನ ನೆಚ್ಚಿನ ಲೇಖಕಿ ಸುನಂದಾ ಬೆಳಗಾಂವಕರ ಅವರು ತಮ್ಮ ‘ಕಜ್ಜಾಯ’ ಸಂಕಲನದ ಪ್ರಬಂಧವೊಂದರಲ್ಲಿ ಹೇಳುತ್ತಾರೆ- ‘ಅಮ್ಮ ಬಡಿಸುವ ರುಚಿಯಲ್ಲಿ ಅಮ್ಮ ಅನ್ನುವುದೇ ರುಚಿ’ ಅಂತ. ಕಮಲಾ ಹಂಪನಾ ಅವರ ಮಟ್ಟಿಗಂತೂ ಇದು ಅಳಿಸಲಾಗದ ಸತ್ಯ. ಅವರು ಉಣಬಡಿಸಿದ ಸಾಹಿತ್ಯ, ತಟ್ಟೆಗೆ ಬಡಿಸಿದ ಊಟ, ಆಡಿದ ಮಾತು ಎಲ್ಲದರಲ್ಲಿಯೂ ಆ ಅಮ್ಮನ ಪ್ರೀತಿ ಒಂದು ಕೈ ಹೆಚ್ಚೇ ಇತ್ತು.

ಮೂಡಬಿದರೆಯ ಸಮ್ಮೇಳನಕ್ಕೆ ಅವರ ಹೆಸರು ಘೋಷಿಸಿದ ಮಾರನೆಯ ದಿನವೇ ನಾನು ನನ್ನ ಚಾನಲ್ ನ ತಂಡದೊಂದಿಗೆ ಅವರನ್ನು ಸಂದರ್ಶಿಸಲು ಅವರ ಮನೆಯಲ್ಲಿದ್ದೆ. ಅವರು ಉಟ್ಟುಕೊಂಡು ಬಂದ ಸೀರೆ ನೋಡಿ ಇದು ನನ್ನ ಟಿ ವಿಗೆ ಸೆಟ್ ಆಗೋದೇ ಇಲ್ಲ ಎಂದವನೇ ಅವರ ಸೀರೆಯ ಕಪಾಟಿಗೆ ಕೈ ಹಾಕಿದ್ದೆ. ಅವರ ಅಷ್ಟೂ ಸಂಗ್ರಹವನ್ನು ತೆರೆದು ಕೊನೆಗೆ ನಾನು ಒಂದಷ್ಟು ಆಯ್ಕೆ ಮಾಡಿಕೊಂಡೆ. ಆ ಸ್ವಾತಂತ್ರ್ಯವಿತ್ತು ನನಗೆ. ಸೀರೆಯಂಗಡಿಯಂತೆ ಅಲ್ಲಿನ ಚಿತ್ರ ಕಾಣುತ್ತಿತ್ತು. ಕೊನೆಗೆ ಅವರೇ ನಗು ನಗುತ್ತಾ ಆಯ್ತಪ್ಪ, ಇಷ್ಟೆಲ್ಲಾ ಸೀರೆ ನಾನು ಜೋಡಿಸಬೇಕಲ್ಲ. ಅದಕ್ಕೆ ಮುಂಚೆ ನಾನು ಸಮ್ಮೇಳನದ ಅಷ್ಟೂ ದಿನ ಯಾವ ಸೀರೆಗಳನ್ನು ಉಡಬಹುದು ಎಂದು ನೀನೆ ಆಯ್ಕೆ ಮಾಡಿ ಕೊಟ್ಟು ಬಿಡು ಎಂದರು.

‘ಗಡ್ಡ ಎಳೆದವನಿಗೆ ಮಿಠಾಯಿ’ ಎನ್ನುವುದು ಹಂಪನಾ ಕುಟುಂಬದಲ್ಲಿ ಇರುವ ಅಘೋಷಿತ ನಿಯಮ. ಅವರಿಗೆ ಕೀಟಲೆ ಮಾಡಿದರೂ ಕಾಟ ಕೊಟ್ಟರೂ, ಸಿಟ್ಟು ಬರುವಂತೆ ಮಾಡಿದರೂ ಕೊನೆಗೆ ನಮಗೆಲ್ಲಾ ಸಿಗುತ್ತಿದ್ದದ್ದು ಅವರ ಪ್ರೀತಿ ಎನ್ನುವ ಮಿಠಾಯಿಯೇ.

ಮೊನ್ನೆ ಮೊನ್ನೆ ಎನ್ನುವಂತೆ ‘ಬಹುರೂಪಿ’ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಅಬ್ಬೂರು ಪ್ರಕಾಶ್ ಹಾಗೂ ರೇಖಾ ಹೆಗಡೆ ಬಾಳೇಸರ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದರು. ಎಚ್ ಎನ್ ಆ ಆರತಿ ಆ ಕಾರ್ಯಕ್ರಮದ ಅಧ್ಯಕ್ಷೆ. ನನಗೋ ಸೋಜಿಗ. ಆರತಿ ಎಷ್ಟು ನೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೋ, ಎಷ್ಟು ಕಡೆ ಅಧ್ಯಕ್ಷ ಸ್ಥಾನ ವಹಿಸಿದ್ದಾಳೋ ಆದರೆ ಈ ವಯಸ್ಸಿನಲ್ಲೂ ಅವರಿಗೆ ಮಗಳ ಭಾಷಣ ಕೇಳಲು ಎದ್ದು ಬರುವ ಹುಕಿ ಇತ್ತಲ್ಲ ಅದು ವಿಸ್ಮಯ. ಮೊದಲ ಬಾರಿಗೆ ವೇದಿಕೆಯೇರಿ ಭಾಷಣ ಮಾಡುವ ಹುಡುಗಿಯನ್ನು ಅಪ್ಪ ಅಮ್ಮ ಸಂಭ್ರಮಿಸುತ್ತಾರಲ್ಲ ಹಾಗೆ ಅವರು ಆ ಬಾರಿಯೂ ಅದೇ ಸಂಭ್ರಮ ಅನುಭವಿಸುತ್ತಿದ್ದರು.

ಆ ದಿನ ಹಂಪನಾ ಬಣ್ಣ ಬಣ್ಣದ ಷರ್ಟ್ ಹಾಕಿದ್ದರು. ಒಳ್ಳೆ ಎಳೆ ಹುಡುಗನಂತೆ. ನಾನು ‘ಬಾಲಿಯಿಂದ ಬಂದಿರುವ ಈ ಬಾಲಕ ಯಾರು?’ ಎಂದು ಚುಡಾಯಿಸಿದೆ. ಹಿಂದೆ ಕಮಲಾ ಹಂಪನಾ ಇದ್ದದ್ದು ನೋಡಿರಲಿಲ್ಲ. ಅಲ್ಲಿಂದಲೇ ಅವರು ಕೂಗಿ ಹೇಳಿದರು. ‘ಜೊತೆಯಲ್ಲೇ ಇದ್ದಾಳೆ ಈ ಬಾಲೆ’ ಅಂತ.

೨ 2

ಹಂಪನಾ ಕುಟುಂಬದಲ್ಲಿ ಕಮಲಾ ಹಂಪನಾ ಅವರೇ ಖಡಕ್. ನಿರ್ಧಾರ ತೆಗೆದುಕೊಳ್ಳುವುದರಲ್ಲಿ, ತಮ್ಮ ನಿರ್ಧಾರವನ್ನು ಖಚಿತವಾಗಿ ಹೇಳುವುದರಲ್ಲಿ ಹೀಗೆ..

ಬಹುಶಃ ಅವರ ಬರಹಗಳಲ್ಲೂ, ಭಾಷಣಗಳಲ್ಲೂ ಅವರ ಈ ಖಡಕ್ ನಿಲುವು ಎದ್ದು ಕಾಣುತ್ತಿತ್ತು. ನನಗಂತೂ ಅವರು ಪ್ರತೀ ಸಾಮಾಜಿಕ ಸಂದಿಗ್ಧದ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿದ್ದ ಈ ಖಡಕ್ ನಿಲುವು ಇಷ್ಟವಾಗುತ್ತಿತ್ತು. ಇವರು ಹಾಗೆ ನಿರ್ಧಾರ ತೆಗೆದುಕೊಳ್ಳುವಾಗಲೂ ತಮಗೆ ಏನನ್ನಿಸುತ್ತದೋ ಆ ಬಗ್ಗೆ ಮುಲಾಜಿಲ್ಲದೆ ನಿಲುವು ತೆಗೆದು ಕೊಳ್ಳುತ್ತಿದ್ದರು. ಅವರಿವರನ್ನು ಓಲೈಸುವ, ಗಾಳಿ ಬಂದಾಗ ತೂರಿಕೊಳ್ಳುವ ಮಾತಿಲ್ಲ.

ನನಗೆ ಇನ್ನೂ ನೆನಪಿದೆ. ‘ಕರ್ನಾಟಕ ಲೇಖಕಿಯರ ಸಂಘ’ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಇವರು ಸೌಂದರ್ಯ ಸ್ಪರ್ಧೆಯ ಪರವಾಗಿ ನಿಲುವು ತೆಗೆದುಕೊಂಡು ಮಾತನಾಡಿದ್ದರು. ಇದು ಸಭೆ ಅಲ್ಲೋಲ ಕಲ್ಲೋಲವಾಗಲು ಕಾರಣವಾಗಿತ್ತು. ಇಡೀ ರಾಜ್ಯ ಅಮಿತಾಬ್ ಬಚ್ಚನ್ ಬೆಂಗಳೂರಿಗೆ ಎಳೆದುಕೊಂಡು ಬಂದಿದ್ದ ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸುತ್ತಿದ್ದಾಗ, ಲೇಖಕಿಯರ ಸಂಘ ಸಮ್ಮೇಳನದಲ್ಲಿ ಇದನ್ನು ಖಂಡಿಸಿ ನಿರ್ಣಯ ತೆಗೆದುಕೊಳ್ಳಲು ಮುಂದಾಗಿದ್ದಾಗ ಕಮಲಾ ಹಂಪನಾ ತಮ್ಮದೇ ರೀತಿಯಲ್ಲಿ ನಿಲುವು ತೆಗೆದುಕೊಂಡಿದ್ದರು.

೩ 1

ಕಮಲಾ ಹಂಪನಾ ಅವರು ವಿಸ್ತಾರ ಓದು ಅಧ್ಯಯನ ಹೊಂದಿದ್ದವರು. ಜೊತೆಗೆ ದೈನಂದಿನ ಆಗುಹೋಗುಗಳ ಬಗ್ಗೆ ಸದಾ ಅಪ್ಡೇಟ್ ಆಗುತ್ತಿದ್ದರು. ಹಾಗಾಗಿ ಅವರು ತಮ್ಮ ಎನ್ನುವ ನಿಲುವನ್ನು ಹೊಂದಲು ಹಿಂಜರಿಯುತ್ತಲೇ ಇರಲಿಲ್ಲ.

ಹಂಪನಾ ಅವರ ಲವಲವಿಕೆ, ಅವರ ಸಾಧನೆಯ ಹಿಂದೆ ಕಮಲಾ ಹಂಪನಾ ಅವರ ಪ್ರಬುದ್ಧ ಮನಸ್ಸು ಆಸರೆಯಾಗಿ ನಿಂತಿದೆ. ಹಂಪನಾ ಅವರು ಸಮಾರಂಭದ ವೇದಿಕೆಯಲ್ಲಿ ಕಮಲಾ ಅವರನ್ನು ಚುಡಾಯಿಸುವುದು, ಕಮಲಾ ಅವರು ಗಂಭೀರವಾಗೇ ಅದನ್ನು ಎಂಜಾಯ್ ಮಾಡುತ್ತಿದ್ದ ರೀತಿ ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ.

ಬರೆಯಲು ನನ್ನ ಕಣಜದಲ್ಲಿ ಸಾಕಷ್ಟು ನೆನಪುಗಳಿವೆ. ಆದರೆ ಈಗ ತಾನೇ ಅವರನ್ನು ಬೀಳ್ಕೊಟ್ಟು ಬಂದ ನನಗೆ ಮನಸ್ಸು ಭಾರವಾಗಿದೆ. ಕಮಲಾ ಹಂಪನಾ ಅವರನ್ನು ಕಳಿಸಿಕೊಡುವ ಕೊನೆಯ ನಿಮಿಷ ಹಂಪನಾ ಅವರು ಅವರನ್ನು ಅಪ್ಪಿದ ರೀತಿ, ಕೊಟ್ಟ ಕೊನೆಯ ಮುತ್ತು ನನ್ನ ಬರಹಕ್ಕೆ ಪದಗಳು ಎಟುಕದಂತೆ ಮಾಡಿವೆ.

‘ಬಹುರೂಪಿ‘ಯ ಕಾರ್ಯಕ್ರಮದಲ್ಲಿ ಆರತಿ ಮಾತನಾಡಿದ್ದು ನೆನಪಿಗೆ ಬರುತ್ತಿದೆ. ‘ಹಂಪನಾ ದಂಪತಿ ಇರಲು ನನಗೇಕೆ ಕಂಪನ?’ ಕಮಲಾ ಹಂಪನಾ ಇನ್ನಿಲ್ಲ. ನಮ್ಮ ಅರ್ಧ ವಿಶ್ವಾಸ ಉಡುಗುವಂತಾಗಿದೆ. ಒಳಗೆ ಕಂಪನವೂ ಇದೆ.

G N Mohan
ಜಿ ಎನ್‌ ಮೋಹನ್‌
+ posts

ಹಿರಿಯ ಪತ್ರಕರ್ತ, ಪ್ರಕಾಶಕ

ಪೋಸ್ಟ್ ಹಂಚಿಕೊಳ್ಳಿ:

ಜಿ ಎನ್‌ ಮೋಹನ್‌
ಜಿ ಎನ್‌ ಮೋಹನ್‌
ಹಿರಿಯ ಪತ್ರಕರ್ತ, ಪ್ರಕಾಶಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಮಣ್ಣಿನ ಹೆಣ್ಣು ದನಿಗಳು | ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ. 

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಅಸ್ಸಾಂ ಅಖಾಡ: ಬಿಜೆಪಿ ಮಿತ್ರಪಕ್ಷ ಎಜಿಪಿಯಿಂದ ಶೇ. 50 ಮುಸ್ಲಿಂ ಅಭ್ಯರ್ಥಿಗಳು; ಏನಿದು ‘ಕಮಲ’ದ ಹೊಸ ರಣತಂತ್ರ?

ತಾನು ತನ್ನ ಸೈದ್ಧಾಂತಿಕ ನಿಲುವಿನಂತೆ ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಿದರೂ, ಅಧಿಕಾರ ಹಿಡಿಯುವ...

ಬಿಜೆಪಿ ಅಸ್ತ್ರಕ್ಕೆ ಟಿಎಂಸಿ ಪ್ರತ್ಯಸ್ತ್ರ; ಸುವೇಂದು ಎದುರು ಸ್ಪರ್ಧಿಸಿರುವ ‘ಪಬಿತ್ರ ಕರ್’ ಯಾರು ಗೊತ್ತೆ?

2021ರ ಆ ನಿರ್ಣಾಯಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವಲ್ಲಿ ಸುವೇಂದು...

ಅಸ್ಸಾಂ ಚುನಾವಣೆ: ಬಿಜೆಪಿಯ ಹತಾಶ ‘ಆಪರೇಷನ್’ ತಂತ್ರ, ಪುಟಿದೇಳಲು ಕಾಂಗ್ರೆಸ್‌ಗೆ ಸುವರ್ಣಾವಕಾಶ

ಬಿಜೆಪಿಯ ಎಲ್ಲಾ ರಾಜಕೀಯ ಮೇಲಾಟಗಳನ್ನು ಅಸ್ಸಾಂನ ಮತದಾರರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ....