ಮುಳಬಾಗಿಲಿನಿಂದ ಕೋಲಾರದ ಸ್ಟ್ರಾಂಗ್ ರೂಮ್‌ಗೆ ಇವಿಎಂ ಮೆಷಿನ್‌ಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಬ್ಲಾಸ್ಟ್ ಆದ ಘಟನೆ ಕೋಲಾರದ ವಡಗೂರ್ ಗೇಟ್ ಬಳಿ ನಡೆದಿದೆ.
ಮೊದಲ ಹಂತದ ಮತದಾನ ಮುಗಿದ ಬಳಿಕ, ಇವಿಎಂ ಮೆಷಿನ್‌ಗಳನ್ನು ಮುಳಬಾಗಿಲಿನಿಂದ ಕೋಲಾರದ ಸ್ಟ್ರಾಂಗ್ ರೂಮ್‌ಗಳಿಗೆ ರವಾನೆ ಮಾಡಲಾಗುತ್ತಿತ್ತು. ಈ ವೇಳೆ, ಕೋಲಾರದ ವಡಗೂರ್ ಗೇಟ್ ಬಳಿ ಕ್ಯಾಂಟರ್ ವಾಹನದ ಟೈರ್ ಬ್ಲಾಸ್ಟ್ ಆಗಿದೆ.
ಸುಮಾರು 1 ಗಂಟೆಗಳ ಕಾಲ ವಾಹನ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಕ್ಯಾಂಟರ್ ಸೀಲ್ ಮಾಡಿರುವುದರಿಂದ ವಾಹನ ರಿಪೇರಿಯಾದ ನಂತರ ಸ್ಟ್ರಾಂಗ್ ರೂಂಗೆ ಇವಿಎಂ ಮೆಷಿನ್‌ಗಳನ್ನು ರವಾನೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅರೆಬೆಂದ ಊಟ ಸೇವಿಸಿ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ
ವಾಹನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ತಹಶಿಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಕೋಲಾರದಲ್ಲಿ ಕಾಂಗ್ರೆಸ್‌ನಿಂದ ಕೆ.ವಿ ಗೌತಮ್ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್‌ಬಾಬು ಅಖಾಡದಲ್ಲಿದ್ದಾರೆ. ಕೋಲಾರದಲ್ಲಿ 78.07% ರಷ್ಟು ಮತದಾನ ನಡೆದಿದೆ.




