ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆ, ಚುನಾವಣಾ ಆಯೋಗ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಕೆಲಸಗಳಿಗೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಬಳಕೆ ಮಾಡಿಕೊಂಡಿದೆ. ಅಲ್ಲದೇ, ರಾಜಕೀಯ ಪಕ್ಷಗಳಿಂದ ಖಾಸಗಿ ಬಸ್‌ಗಳ ಬೇಡಿಕೆ ಹೆಚ್ಚಳವಾಗಿದೆ. ಹಾಗಾಗಿ, ನಾಳೆ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಜತೆಗೆ ಶಾಲೆಗಳಿಗೆ ರಜೆ ಇರುವ ಕಾರಣ ಬಹುತೇಕ ಖಾಸಗಿ ಶಾಲಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೇ, ಖಾಸಗಿ ಬಸ್‌ಗಳ ದರ ದುಪ್ಪಟ್ಟಾಗಿದ್ದು, ಜನರು ಮತದಾನ ಮಾಡಲು ತಮ್ಮ ಊರಿಗೆ ತೆರಳುವುದಕ್ಕೆ ಬಸ್ ಇಲ್ಲದಂತಾಗಿದೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಏಪ್ರಿಲ್ 26 ರಂದು ನಮ್ಮ ಮೆಟ್ರೋ ಸೇವೆ ವಿಸ್ತರಣೆ
ಇನ್ನು ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ 2,100 ಬಸ್‌ಗಳನ್ನು ಚುನಾವಣಾ ಆಯೋಗ ಬಳಕೆ ಮಾಡಿಕೊಂಡಿದೆ. ಇನ್ನು 1,700 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳನ್ನು ಬಳಸಿಕೊಂಡಿದೆ.
ಸರ್ಕಾರಿ ಬಸ್ಗಳಿಗೆ ಕಿ.ಮೀ.ಗೆ ₹57 ದರ ನಿಗದಿ ಮಾಡಲಾಗಿದ್ದು, ದಿನದ ಬಾಡಿಗೆ ₹11,500 ಇರಲಿದೆ. ಹೀಗಾಗಿ, ಎರಡು ದಿನ ಸರ್ಕಾರಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.




