ನುಡಿಜಾತ್ರೆಯ ಮರೆತು ಸಿ.ಟಿ.ರವಿ ರಕ್ಷಣೆಗೆ ಧಾವಿಸಿದ ಮಾಧ್ಯಮಗಳು; ಜನಾಕ್ರೋಶ

Date:

ಮೂರು ದಿನ ನಡೆಯುವ ಅಕ್ಷರ ಜಾತ್ರೆಗಿಂತ ಬಿಜೆಪಿಯ ಯೋಜಿತ ಪ್ರಚಾರದ ಸುತ್ತ ಸುದ್ದಿಗಳು ಗಿರಕಿ ಹೊಡೆಯುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ

ಸಕ್ಕರೆಯ ನಾಡು ಮಂಡ್ಯದಲ್ಲಿ ಅಕ್ಷರ ಜಾತ್ರೆ ರಂಗೇರಿದ್ದರೆ, ಇತ್ತ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ಬಿಜೆಪಿಯ ಎಂಎಲ್‌ಸಿ ಸಿ.ಟಿ.ರವಿ ಜಪದಲ್ಲಿ ಕಳೆದುಹೋಗಿವೆ. ಕ್ಷಣಕ್ಷಣಕ್ಕೂ ಸಿ.ಟಿ.ರವಿಯ ಕುರಿತು ಸಿಗುತ್ತಿರುವಷ್ಟು ಅಪ್‌ಡೇಟ್, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರದಲ್ಲಿ ತೆರೆಮರೆಗೆ ಸರಿದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ದೊಡ್ಡ ದೊಡ್ಡ ಮಾಧ್ಯಮಗಳ ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಆಗಿರುವ ಸುದ್ದಿ ತುಣುಕುಗಳನ್ನು ನೋಡಿದರೆ ಜನ ಸಾಕು ಸುಸ್ತಾಗುವಷ್ಟು ಸಿ.ಟಿ. ರವಿ ಜಪ ನಡೆದಿದೆ. ‘ಸಿ.ಟಿ. ರವಿಯನ್ನು ಅಲೆದಾಡಿಸಿದ ಪೊಲೀಸರು, ಕಣ್ಣೀರು ಹಾಕಿದ ಸಿ.ಟಿ. ರವಿ, ಹೆಬ್ಬಾಳ್ಕರ್ ಸುದ್ದಿಗೋಷ್ಠಿ, ಬಿಜೆಪಿ ನಾಯಕನ ಪ್ರತಿಕ್ರಿಯೆ, ಚಿಕ್ಕಮಗಳೂರಲ್ಲಿ ಬಿಜೆಪಿ ಪ್ರತಿಭಟನೆ’ ಇತ್ಯಾದಿ ಸುದ್ದಿಗಳೇ ರಾರಾಜಿಸಿವೆ. ಕೆಲವು ಮಾಧ್ಯಮಗಳು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಕ್ಷರ ಜಾತ್ರೆಯ ಒಂದು ಲೈವ್ ಲಿಂಕ್ ಹಾಕಿ ಸುಮ್ಮನಾಗಿವೆ. ಮೂರು ದಿನ ನಡೆಯುವ ಅಕ್ಷರ ಜಾತ್ರೆಗಿಂತ ಬಿಜೆಪಿಯ ಯೋಜಿತ ಪ್ರಚಾರದ ಸುತ್ತ ಸುದ್ದಿಗಳು ಗಿರಕಿ ಹೊಡೆಯುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬಾರಿಯ ಸಾಹಿತ್ಯ ಸಮ್ಮೇಳನ ಮಾಂಸಾಹಾರ ಮತ್ತು ಸಸ್ಯಾಹಾರ ವಿಚಾರವಾಗಿ ಮಹತ್ವ ಪಡೆದುಕೊಂಡಿತ್ತು. ಬಹುಜನರ ಆಹಾರ ಸಂಸ್ಕೃತಿಯ ಬಗ್ಗೆ ಬಿತ್ತಿರುವ ಕೀಳರಿಮೆಯನ್ನು ಹೋಗಲಾಡಿಸಲು ‘ಮಾಂಸಾಹಾರವನ್ನು ಸಮ್ಮೇಳನದಲ್ಲಿ ಏರ್ಪಡಿಸಬೇಕು’ ಎಂಬ ಆಗ್ರಹವನ್ನು ಮಂಡ್ಯದ ಜನರು ಮಾಡಿದ್ದರು. ಈ ಎಲ್ಲ ವಿಚಾರಗಳ ಕಾರಣಕ್ಕೆ ಸಮ್ಮೇಳನ ಎಲ್ಲರ ದೃಷ್ಟಿ ನೆಟ್ಟಿತ್ತು. ಇದೇ ವೇಳೆಯಲ್ಲಿ ಸಿ.ಟಿ.ರವಿಯವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲವಾಗಿ ನಿಂದಿಸಿದ್ದಾರೆಂಬುದು ಸುದ್ದಿಯಾಗಿ, ಅವರ ಬಂಧನವೂ ಆಗಿದೆ. ಆದರೆ ಇದೇ ಹೊತ್ತಿನಲ್ಲಿ ಕನ್ನಡ ನಾಡು, ನುಡಿಯ ಚಿಂತನ- ಮಂಥನ ನಡೆಯುವ ಸಾಹಿತ್ಯ ಸಮ್ಮೇಳನದ ಲೈವ್ ಅಪ್‌ಡೇಟ್‌ಗಳನ್ನು ನೀಡುವಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಸಂಪೂರ್ಣವಾಗಿ ಕಡೆಗಣಿಸಿವೆ.

ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಚಿತ್ರ ಸಾಹಿತಿ ಕವಿರಾಜ್, “ವರ್ಷಕ್ಕೊಮ್ಮೆ ನಡೆಯುವ ಕನ್ನಡದ ನುಡಿ ಜಾತ್ರೆ, ಇಡೀ ನಾಡೇ ಸಂಭ್ರಮಿಸುವ  ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಆಗುತ್ತಿದೆ. ಸದ್ಯಕ್ಕಂತೂ ಚಂದನ ಹೊರತುಪಡಿಸಿ ಯಾವ ಕನ್ನಡ ಚಾನೆಲ್ ಅಲ್ಲೂ ಅದರ ನೇರ ಪ್ರಸಾರ ಇಲ್ಲ. ನಿನ್ನೆ ನಡೆದ ಪ್ರಕರಣದಲ್ಲಿ ಸಿ.ಟಿ.  ರವಿ ಅವರಿಗೆ ಬೇಲ್ ಆಗುತ್ತೋ ಇಲ್ವೋ ಅನ್ನೋ ಭಯಂಕರ ನೇರಪ್ರಸಾರ ನಿನ್ನೆಯಿಂದ ನಡೀತಿದೆ” ಎಂದು ಬೇಸರ ಹೊರಹಾಕಿದ್ದಾರೆ.

ಈ ಕುರಿತು ‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಮಂಡ್ಯದ ಹೋರಾಟಗಾರ ಕೃಷ್ಣೇಗೌಡ ಅವರು, “ಮಾಧ್ಯಮ ಉದ್ಯಮವಾದಾಗ ಕನ್ನಡ ಸಾಹಿತ್ಯ ಅಸ್ಮಿತೆಯನ್ನು ಮರೆತು ಸಿ.ಟಿ. ರವಿ ಹಿಂದೆ ಮಾಧ್ಯಮಗಳು ಬೀಳುವುದು ಸಹಜ ಪ್ರಕ್ರಿಯೆ. ಆದರೆ ರವಿ ಒಬ್ಬ ಕ್ರಿಮಿನಲ್ ಎಲಿಮೆಂಟ್. ಮನಷ್ಯರಾದವರು ಬಳಸಬಾರದ ಪದವನ್ನು, ಒಬ್ಬ ಜನಪ್ರತಿನಿಧಿಯಾಗಿ ಸದನದ ಒಳಗೆ ಬಳಸಿದ್ದಾನೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅತ್ಯಂತ ತುಚ್ಛವಾಗಿ ನಿಂದಿಸಿದಾತನ ಹಿಂದೆ ಬಿದ್ದಿರುವ ಮಾಧ್ಯಮಗಳಿಗೂ, ಸಿ.ಟಿ.ರವಿ ವ್ಯಕ್ತಿತ್ವಕ್ಕೂ ಯಾವುದೇ ವ್ಯತ್ಯಾಸವಿಲ್ಲ” ಎಂದು ಅಭಿಪ್ರಾಯಪಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...