ಕ್ಯಾನ್ಸರ್ ಔಷಧಿಯನ್ನು ವಿತರಿಸುವಲ್ಲಿ ವೈದ್ಯಕೀಯ ಸರಬರಾಜು ಸಂಸ್ಥೆ ವಿಫಲ : ₹2 ಲಕ್ಷ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶ

Date:

ಎರಡು ಪ್ರಮುಖ ಕ್ಯಾನ್ಸರ್ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸದ ವೈದ್ಯಕೀಯ ಸರಬರಾಜು ಸಂಸ್ಥೆಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ರೋಗಿಗೆ ₹2 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಆದೇಶಿಸಿದೆ.

ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಎಂ.ಸಿ.ರಮೇಶ್ ಎಂಬವವರು ನೀಡಿದ ದೂರು ಅರ್ಜಿಯನ್ನು ಗ್ರಾಹಕ ನ್ಯಾಯಾಲಯ ವಿಚಾರಣೆ ನಡೆಸಿದೆ. “ಮಹಾರಾಷ್ಟ್ರದ ಪುಣೆ-ನಾಸಿಕ್ ಹೆದ್ದಾರಿಯಲ್ಲಿರುವ ಲೈಫ್ ಕೇರ್ ಮೆಡಿಕಲ್ಸ್, ಬ್ರೆಂಟುಕ್ಸಿಮಾಬ್ ಎಂಬ ಔಷಧಿಯ 50 ಮಿ.ಗ್ರಾಂನ ಎರಡು ಬಾಟಲಿಗಳನ್ನು ರೋಗಿಗೆ ಪೈರೈಕೆ ಮಾಡುವಲ್ಲಿ ವಿಫಲವಾಗಿದೆ ಮತ್ತು ನಿರ್ಲಕ್ಷ್ಯ ತೋರಿದೆ” ಎಂದು ರಮೇಶ್ ಆರೋಪಿಸಿದ್ದರು.

ವೈದ್ಯಕೀಯ ಸಂಸ್ಥೆಯೂ ಪ್ರತಿ ಔಷಧಿ ಬಾಟಲಿಗೆ ₹70,186 ಎಂದು ನಿಗದಿ ಮಾಡಿದೆ. ಎರಡು ಬಾಟಲಿಗೆ ಒಟ್ಟು ₹1,40,372 ಆಗಿದೆ. ಆಗಸ್ಟ್‌ 23ರಂದು ರಮೇಶ್ ಅವರು ಮುಂಗಡವಾಗಿ ₹70,372 ಹಣವನ್ನು ಪಾವತಿ ಮಾಡಿದ್ದರು. ಇನ್ನುಳಿದ ಹಣವನ್ನು ಔಷಧಿ ಡೆಲಿವರಿ ಆದ ನಂತರ ಪಾವತಿ ಮಾಡುವುದಾಗಿ ಒಪ್ಪಿಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅವರು ತಾವು ಕೆಲಸ ಮಾಡುತ್ತಿರುವ ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHEL) ಔಷಧದ ವೆಚ್ಚವನ್ನು ಸಂಪೂರ್ಣವಾಗಿ ಮರುಪಾವತಿಸುತ್ತದೆ ಎಂಬ ಭರವಸೆಯ ಮೇಲೆ ಔಷಧವನ್ನು ಆರ್ಡರ್ ಮಾಡಿದ್ದರು. ಅಲ್ಲದೆ, ರಮೇಶ್ ಅವರು ಮುಂದಿನ ದಿನಗಳಲ್ಲಿ ಬಾಕಿ ಮೊತ್ತ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟ್ಯಾನರಿ ರಸ್ತೆಯಲ್ಲಿ ಹೊಸ ಕೆಳಸೇತುವೆ ನಿರ್ಮಾಣ: ಟ್ರಾಫಿಕ್ ಸಮಸ್ಯೆಗೆ ಕಡಿವಾಣ

ಆದರೂ, ಕಂಪನಿಯು ಭರವಸೆಯಂತೆ ಔಷಧವನ್ನು ನೀಡಲು ವಿಫಲವಾಗಿದೆ. ಪರಿಣಾಮವಾಗಿ, ಸೆಪ್ಟೆಂಬರ್ 2023ರಲ್ಲಿ ರಮೇಶ್ ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಆದರೆ, ಸಂಸ್ಥೆಯು ನೋಟಿಸ್‌ಗೂ ಪ್ರತಿಕ್ರಿಯಿಸಿಲ್ಲ ಎಂದು ಆರೋಪಿಸಲಾಗಿದೆ.

ಹೀಗಾಗಿ, ಸಂಸ್ಥೆಯ ವಿರುದ್ಧ ರಮೇಶ್ ಅವರು 2023ರ ನವೆಂಬರ್ 16ರಂದು 3ನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದ ಸಾಕ್ಷ್ಯವನ್ನು ಕೂಡ ಸಂಸ್ಥೆ ಪ್ರಶ್ನೆ ಮಾಡಲಿಲ್ಲ. ಬಳಿಕ, ಸಂಸ್ಥೆಯ ಕ್ರಮಗಳು ಅನ್ಯಾಯದ ವ್ಯಾಪಾರದ ಅಭ್ಯಾಸ ಮತ್ತು ಸೇವೆಯ ಕೊರತೆ ಎಂದು ನ್ಯಾಯಾಲಯ ನಿರ್ಧರಿಸಿದ್ದು, ಸಂಸ್ಥೆಗೆ ದಂಡ ವಿಧಿಸಿದೆ.

ದೂರುದಾರರು ಮಾಡಿದ ಎಲ್ಲ ಪಾವತಿಗಳ ಒಟ್ಟು ಮೊತ್ತ ₹1,77,267 ಗಳನ್ನು ಪ್ರತಿ ವರ್ಷಕ್ಕೆ 9% ಬಡ್ಡಿಯೊಂದಿಗೆ ಮರುಪಾವತಿಸಲು ಸಂಸ್ಥೆಗೆ ಆದೇಶಿಸಿದೆ.

ಅಲ್ಲದೆ, ಔಷಧಿಯ ಪರಿಹಾರದ ಜೊತೆಗೆ, ದೂರುದಾರರಿಗೆ ಮಾನಸಿಕ ತೊಂದರೆಗಾಗಿ ₹20,000 ಮತ್ತು ವ್ಯಾಜ್ಯ ವೆಚ್ಚಕ್ಕಾಗಿ ₹10,000 ನೀಡುವಂತೆ ನ್ಯಾಯಾಲಯವು ಸಂಸ್ಥೆಗೆ ಆದೇಶಿಸಿದೆ. ಈ ಆದೇಶವನ್ನು ಅನುಸರಿಸಲು ವಿಫಲವಾದರೆ, ದಂಡದ ಒಟ್ಟು ಮೊತ್ತ ₹30,000ಅನ್ನು ಸಂಫೂರ್ಣವಾಗಿ ಪಾವತಿಸುವವರೆಗೆ, ಆ ಹಣಕ್ಕೂ ವಾರ್ಷಿಕ 9% ಬಡ್ಡಿಯನ್ನೂ ಪಾವತಿ ಮಾಡಬೇಕು ಎಂದು ಸೂಚಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...