ತೆಲುಗು ನಟ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಬೃಹತ್ ತಾರಾಗಣವೇ ಇದೆ. ಈ ಚಿತ್ರದ ಚಿತ್ರಕಥೆ, ನಿರ್ಮಾಣ ಸೇರಿದಂತೆ ಹಲವು ಕಾರಣಗಳಿಗೆ ಗಮನ ಸೆಳೆದಿದೆ.
‘ಕಲ್ಕಿ 2898 ಎಡಿ’ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಭಾರೀ ಬಜೆಟ್ ಸಿನಿಮಾ ಆಗಿದೆ. ಬಿಡುಗಡೆಗೆ ಮುನ್ನವೇ ಸಿನಿಮಾದ ಕೆಲವು ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ವಿಶೇಷವೆಂದರೆ ‘ಕಲ್ಕಿ’ ಸಿನಿಮಾ ಒಟ್ಟೊಟ್ಟಿಗೆ ಮೂರು ಒಟಿಟಿಗಳಿಗೆ ಮಾರಾಟವಾಗಿದೆ. ಅಲ್ಲದೇ, ‘ಕಲ್ಕಿ 2898 ಎಡಿ’ ಸಿನಿಮಾದ ಡಿಜಿಟಲ್ ಹಕ್ಕು ಸುಮಾರು 100 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ.
ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ರೆಬೆಲ್ ಸ್ಟಾರ್ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದೇ ಜೂನ್ 27ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಬಿಗ್ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸಿದ್ದು, ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.
ಈ ಹಿಂದೆ ‘ಆರ್ಆರ್ಆರ್’ ಸಿನಿಮಾ ನೆಟ್ಫ್ಲಿಕ್ಸ್ ಅದರ ನಂತರ ಜೀ 5ಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಈಗ ‘ಕಲ್ಕಿ 2898 ಎಡಿ’ ಸಿನಿಮಾ ಒಟ್ಟಿಗೆ ಮೂರು ಒಟಿಟಿಗೆ ಮಾರಾಟವಾಗಿ ದಾಖಲೆ ಬರೆದಿದೆ.
ಈ ಸುದ್ದಿ ಓದಿದ್ದೀರಾ? ರೇವ್ ಪಾರ್ಟಿ | ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ತೆಲುಗು ನಟಿ ಹೇಮಾ
‘ಕಲ್ಕಿ 2898 ಎಡಿ’ ಸಿನಿಮಾ ನೆಟ್ಫ್ಲಿಕ್ಸ್, ಜೀ 5 ಹಾಗೂ ಅಮೆಜಾನ್ ಪ್ರೈಂ ಮೂರು ಪ್ರಮುಖ ಒಟಿಟಿಗಳಿಗೆ ಡಿಜಿಟಲ್ ಹಕ್ಕು ಮಾರಾಟ ಮಾಡಿದೆ. ನೆಟ್ಫ್ಲಿಕ್ಸ್ನಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಕೆಲವು ವಿದೇಶಿ ಭಾಷೆಗಳಲ್ಲಿ ‘ಕಲ್ಕಿ’ ಸಿನಿಮಾ ಪ್ರದರ್ಶನವಾಗಲಿದೆ.
ಅಮೆಜಾನ್ ಹಾಗೂ ಜೀ 5ನಲ್ಲಿ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಕಲ್ಕಿ’ ಸಿನಿಮಾ ಸ್ಟ್ರೀಂ ಆಗಲಿದೆ. ನೆಟ್ಫ್ಲಿಕ್ಸ್, ಅಮೆಜಾನ್ ಮೂಲಕ ಅಂತಾರಾಷ್ಟ್ರೀಯ ವೀಕ್ಷಕರನ್ನು ಹಾಗೂ ಜೀ5 ಮೂಲಕ ಭಾರತದ ವೀಕ್ಷಕರನ್ನು ಪರಿಣಾಮಕಾರಿಯಾಗಿ ತಲುಪುವ ಯೋಜನೆ ಚಿತ್ರತಂಡದ್ದಾಗಿದೆ.




