ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದಿಂದ ರಾಜಭವನ ಚಲೋ

Date:

ರಾಜ್ಯಸರ್ಕಾರವನ್ನು ಅತಂತ್ರಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರವನ್ನು ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದವರು ಮಂಗಳವಾರ ಫ್ರೀಡಂಪಾರ್ಕಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ರಾಜಭವನ ಚಲೋ ನಡೆಸಿದರು. ʼಜೆಡಿಎಸ್‌- ಬಿಜೆಪಿ ಹಠಾವೊ, ರಾಜ್ಯ ಬಚಾವೊʼ ಘೋಷಣೆ ಕೂಗಿದರು.

ನ್ಯಾಯವಾದಿ, ಸಾಮಾಜಿಕ ಚಿಂತಕ ಪ್ರೊ ರವಿವರ್ಮ ಕುಮಾರ್‌ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯಪಾಲರು ಮೊದಲನೆಯದಾಗಿ ಪ್ರಿವೆನ್ಶನ್‌ ಆಫ್‌ ಕರೆಪ್ಶನ್‌ ಆಕ್ಟ್‌ 17 ಎ ಸೆಕ್ಷನ್‌ ಅಡಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದೇನೆ ಎಂದಿದ್ದಾರೆ. ಆದರೆ, 17ಎ ಅನುಮತಿಗೆ ಸಂಬಂಧಿಸಿ ಪರಿಚ್ಛೇದವಲ್ಲ. ಭಾರತೀಯ ನ್ಯಾಯ ಸಂಹಿತೆ 218ನೇ ಪರಿಚ್ಛೇದದಲ್ಲಿ ಸ್ಯಾಂಕ್ಷನ್‌ ಯಾರಿಗೆ, ಯಾವಾಗ ಕೊಡಬಹುದು ಎಂದು ಒಬ್ಬ ಸಾಮಾನ್ಯ ಲಾ ವಿದ್ಯಾರ್ಥಿಯನ್ನು ಕೇಳಿದ್ರೆ ಹೇಳುತ್ತಿದ್ದ. ಎರಡನೆಯದಾಗಿ ಕಾನೂನು ಅರ್ಥ ಮಾಡಿಕೊಳ್ಳದೇ, ಓದದೇ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಏನು ತಪ್ಪು ಮಾಡಿದ್ದಾರೆ ಎಂದು ಒಂದೇ ಒಂದು ಪದದ ವಿವರಣೆ ಕೂಡಾ ಇಲ್ಲ. ಒಬ್ಬ ಘನತೆವೆತ್ತ ರಾಜ್ಯಪಾಲರು ಹೀಗೆ ಮಾಡಿದ್ದು ಖಂಡನೀಯ ಎಂದು ಹೇಳಿದರು.

ಕಾಂಗ್ರೆಸ್‌ನ ಯುವ ನಾಯಕಿ ನಜ್ಮಾ ಚಿಕ್ಕನೇರಳೆ ಮಾತನಾಡಿ, “ಕುಮಾರಸ್ವಾಮಿ ಅವರೇ ನೀವು ಒಂದು ತುಂಡು ಭೂಮಿ ಬಗ್ಗೆ ಇಂದು ಪ್ರಶ್ನೆ ಮಾತನಾಡುತ್ತಿದ್ದೀರಿ ಅಲ್ವಾ, ನೀವು ಯಾವ ಯಾವ ಎಂಎಲ್‌ಸಿ ಹೆಸರಿನಲ್ಲಿ ಯಾವ ಯಾವ ಎಸ್ಟೇಟಿನಲ್ಲಿ ಎಷ್ಟೆಷ್ಟು ಬಚ್ಚಿಟ್ಟಿದ್ದೀರಿ ಚೆಕ್‌ ಮಾಡಿಕೊಳ್ಳಿ. ವಿಜಯೇಂದ್ರ ಅವರೇ ನೀವು ಯಾರ್ಯಾರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದೀರಿ ಚೆಕ್‌ ಮಾಡಿಕೊಳ್ಳಿ” ಎಂದರು.

“ಸಿದ್ದರಾಮಯ್ಯ ಅವರು ಬಸವಣ್ಣನ ತತ್ವ, ಈ ನಾಡಿನ ತತ್ವಗಳನ್ನು ಅನುಸರಿಸಿ ಎಲ್ಲ ಸಮುದಾಯಗಳಿಗೆ ಸಮಾನ ಸ್ಥಾನಮಾನ ಕೊಡುತ್ತಿದ್ದಾರೆ ಅದಕ್ಕೆ ನಿಮಗೆ ಹೊಟ್ಟೆ ಉರಿ. ಮೇಲ್ವರ್ಗದಲ್ಲಿರುವವರಿಗೂ 10% ಮೀಸಲಾತಿ ಕೊಟ್ಟವರು, ಅದಾನಿ -ಅಂಬಾನಿಯವರಿಗೆ ದುಡ್ಡು ಕೊಡುವವರು ನಿಮಗೆ ಇಷ್ಟ ಆಗುತ್ತಿದ್ದಾರೆ” ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶೋಷಿತ ಸಮುದಾಯದ ಒಕ್ಕೂಟದ ರಾಜ್ಯ ಸಂಚಾಲಕ ಕೆ ಎಂ ರಾಮಚಂದ್ರ , ಅಹಿಂದ ಒಕ್ಕೂಟದ ಮುಖಂಡರಾದ ಮಾವಳ್ಳಿ ಶಂಕರ್‌, ಅನಂತ ನಾಯ್ಕ್‌, ವೆಂಕಟರಾಮಯ್ಯ ಸೇರಿದಂತೆ ಹಲವು ಮುಖಂಡರು ರಾಜಭವನ ಚಲೋ ಮುಂದಾಳತ್ವ ವಹಿಸಿದ್ದರು. ಸಾವಿರಾರು ಮಂದಿ ಒಕ್ಕೂಟದ ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣ ಕರ್ನಾಟಕ | 3 ವರ್ಷ, 5,100 ಪ್ರಕರಣ; ಮಹಿಳೆಯರ ನಾಪತ್ತೆ ಹಿಂದೆ ಕಳ್ಳಸಾಗಣೆಯ ಕರಿನೆರಳು?!

ನಾಪತ್ತೆಯಾದ ಪ್ರತಿ ಜೀವವೂ ಮರಳಿ ತನ್ನ ಮನೆ ಸೇರುವಂತಾಗಲು ಮತ್ತು ಮುಂದಿನ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ರಸರೆಕ್ಷನ್: ಇಂದ್ರಿಯಗಳ ಮೂಲಕ ಒಂದು ಶತಮಾನದ ಸಿನೆಮಾ ಪಯಣ ಬಿಡಿಸಿಡುವ ಚಿತ್ರ

'ರಸರೆಕ್ಷನ್' ಸಿನಿಮಾ ಅಂತಿಮವಾಗಿ ಹೇಳುವುದೇನೆಂದರೆ ಬದುಕು ಎಷ್ಟೇ ದೀರ್ಘವಾಗಿದ್ದರೂ, ಕನಸುಗಳಿಲ್ಲದಿದ್ದರೆ ಅದು...

ನ್ಯಾಯಾಲಯದ ಆಜ್ಞೆಗೆ ಕಿಮ್ಮತ್ತಿಲ್ಲ; ಮಾಹಿತಿ ನೀಡಲು ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ಹಿಂದೇಟು

ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಜ್ಞೆಗಳನ್ನು...