ರಜನೀಕಾಂತ್ @ 75: ಸರಳ, ಸಾಮಾನ್ಯ, ಸಹಜಾಭಿನಯದ ಸಾಮ್ರಾಟ

Date:

ಬೆಂಗಳೂರಿನ ಬಡ ಕುಟುಂಬದಿಂದ ಬಂದು ಭಾರತದ ಅತಿ ದೊಡ್ಡ ಸೂಪರ್‌ಸ್ಟಾರ್ ಆಗಿರುವುದು; ಯಾವುದೆ ಲಾಬಿ ಇಲ್ಲದೆ ಕೇವಲ ಪ್ರತಿಭೆಯಿಂದಲೇ ಉತ್ತುಂಗಕ್ಕೇರಿರುವುದು; 75ರ ಹರೆಯದಲ್ಲಿಯೂ ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವುದು- ರಜನೀಕಾಂತ್ ಕೇವಲ ಒಬ್ಬ ನಟನಲ್ಲ, ಒಂದು ಸಾಂಸ್ಕೃತಿಕ ವಿದ್ಯಮಾನ. 

ಡಿಸೆಂಬರ್ 12- ಸಾಮಾನ್ಯ ದಿನ. ಆದರೆ ತಮಿಳು ಚಿತ್ರರಂಗಕ್ಕೆ ಅಪರೂಪದ ದಿನ. ಸೂಪರ್‌ಸ್ಟಾರ್ ಆದ ರಜನೀಕಾಂತ್ ಹುಟ್ಟಿದ ದಿನ. ಅದರಲ್ಲೂ ಈ ವರ್ಷದ ಡಿಸೆಂಬರ್ 12, ಇನ್ನೂ ವಿಶೇಷವಾಗಿದೆ. ಯಾಕೆಂದರೆ, ಇದು ರಜನೀಕಾಂತ್ ಅವರ 75ನೇ ಹುಟ್ಟಿದ ದಿನ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ಅವರ 50ನೇ ಚಿತ್ರವರ್ಷವೂ ಆಗಿದೆ. ನಟನಾಗಿ ಶಿವಾಜಿರಾವ್ ಗಾಯಕ್ವಾಡ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಅವರು, 1975ರಲ್ಲಿ ನಿರ್ದೇಶಕ ಕೆ. ಬಾಲಚಂದರ್ ಅವರ ‘ಅಪೂರ್ವ ರಾಗಂಗಳ್’ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟರು. ಉಳಿದದ್ದನ್ನು ಇತಿಹಾಸವೇ ಬರೆದುಕೊಂಡಿತು.

ಬೆಂಗಳೂರಿನ ಹನುಮಂತನಗರದ ಬಡ ಮರಾಠಿ ಕುಟುಂಬದ ಕುಡಿ, ಇಂದು ಜಾಗತಿಕ ಚಲನಚಿತ್ರ ವಿದ್ಯಮಾನವಾಗಿ ಮಾರ್ಪಟ್ಟ ಬಗೆಯನ್ನು ಬಣ್ಣಿಸಲು ಪದಗಳೇ ಸಾಲದು. 1950ರಲ್ಲಿ ಜನಿಸಿದ ರಜನೀಕಾಂತ್, ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ರಾಮಾಂಜನೇಯ ಗುಡ್ಡದ ಬದಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವಾಗಲೇ, ನಾಟಕಗಳಲ್ಲಿ ಅಭಿನಯಿಸಿದರು. ಆ ನಟನಾಸಕ್ತಿಯೇ ಅಸಾಧಾರಣ ಸಾಧನೆಗಳಿಗೆ ಬುನಾದಿಯಾಯಿತು. ಚಿತ್ರಲೋಕಕ್ಕೆ ಕಾಲಿಡುವ ಮುನ್ನ ಅವರು ಬಿಟಿಎಸ್ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ಆ ಕೆಲಸದಲ್ಲಿ ಇತರರಿಗಿಂತ ಭಿನ್ನವಾಗಿ, ಚುರುಕು ಮಾತು ಮತ್ತು ವಿಚಿತ್ರ ಮ್ಯಾನರಿಸಂಗಳಿಂದ ಜನಾಕರ್ಷಣೆ ಗಳಿಸಿದ್ದರು. ಗೆಳೆಯರ ಒತ್ತಾಯಕ್ಕೆ ಮಣಿದು ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರಿದರು. ಅಲ್ಲಿ ತಮ್ಮ ಕಲೆಗೆ ಸಾಣೆ ಹಿಡಿದುಕೊಂಡರು. ನಿರ್ದೇಶಕ ಕೆ. ಬಾಲಚಂದರ್ ಕಣ್ಣಿಗೆ ಬಿದ್ದರು. ಅವರು ರಜನಿ ಪ್ರತಿಭೆ ಗುರುತಿಸಿ, ತಮಿಳು ಭಾಷೆ ಕಲಿಯಲು ಪ್ರೇರೇಪಿಸಿದರು. ‘ರಜನೀಕಾಂತ್’ ಎಂದು ನಾಮಕರಣ ಮಾಡಿ, ಬೆಳ್ಳಿತೆರೆಗೆ ಪರಿಚಯಿಸಿದರು.

ಇದನ್ನು ಓದಿದ್ದೀರಾ?: ‘ದಿ ಡೆವಿಲ್’ ರೇಟಿಂಗ್ ಮತ್ತು ರಿವ್ಯೂ ಬಂದ್: ಕೋರ್ಟ್ ಆದೇಶವಿದೆ ಎಂದ ದಿನಕರ್‌ ತೂಗುದೀಪ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಜನೀಕಾಂತ್ ಅವರು ಆರಂಭಿಕ ಚಿತ್ರಗಳಲ್ಲಿ ಖಳನಟನ– ಪ್ರತಿನಾಯಕನ- ನೆಗೆಟಿವ್ ಪಾತ್ರಗಳಲ್ಲಿ ನಟಿಸಿದರು. ತಮಿಳುನಾಡಿನ ಜನಕ್ಕೆ ಅವರ ಮೈಬಣ್ಣ ಇವ ನಮ್ಮವ ಎನಿಸಿತು. ನಟನೆ ಒಪ್ಪಿಗೆಯಾಯಿತು. ಅದರಲ್ಲೂ ಅವರ ವಿಶಿಷ್ಟ ಆಂಗಿಕಾಭಿನಯ ಅಭಿಮಾನಿಗಳನ್ನು ಆಕರ್ಷಿಸಿತು. ಹೊಸ ಸಿನೆಮಾಯುಗವನ್ನೇ ಸೃಷ್ಟಿಸಿತು. 1980 ಮತ್ತು 1990ರ ದಶಕಗಳಲ್ಲಿ ಬಂದ ಬಿಲ್ಲಾ, ಬಾಷಾ, ಮುತ್ತು ಮುಂತಾದ ಚಿತ್ರಗಳು ಗಳಿಕೆಯಲ್ಲಿ ದಾಖಲೆ ನಿರ್ಮಿಸಿದವು. ಜನಮಾನಸದಲ್ಲಿ ಚಿರಸ್ಥಾಯಿಯನ್ನಾಗಿಸಿದವು. ಅಷ್ಟೇ ಅಲ್ಲ, ಬಹುಭಾಷಾ ನಟನನ್ನಾಗಿ ಮಾಡಿದವು. ಜಾತಿ, ವರ್ಗ, ದೇಶ, ಭಾಷೆಯ ಗಡಿಯನ್ನು ದಾಟಿದವು. ಅವರ ‘ಮುತ್ತು’ ಚಿತ್ರ ಜಪಾನ್ ಜನರ ಮೆಚ್ಚುಗೆ ಗಳಿಸಿತು. ಜಾಗತಿಕ ಮನ್ನಣೆಗೆ ಪಾತ್ರವಾಯಿತು.

ರಜನೀಕಾಂತ್

ಇಂದು ರಜನೀಕಾಂತ್ ಅವರ ಜನ್ಮದಿನ. ಚಿತ್ರರಂಗಕ್ಕೆ ಅಡಿಯಿಟ್ಟ 50 ವರ್ಷಗಳ ಸಂಭ್ರಮದ ದಿನ. ಇಂದಿನ ಈ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು, ಅವರೇ ಕತೆ ಬರೆದು ನಿರ್ಮಿಸಿದ 1999ರ ಸೂಪರ್‌ಹಿಟ್ ಚಿತ್ರ ‘ಪಡಯಪ್ಪ’ವನ್ನು ಇಂದು ಥಿಯೇಟರ್‌ಗಳಲ್ಲಿ ಮರು ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳ ಸಂಭ್ರಮ ಮೇರೆ ಮೀರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಜನೀಕಾಂತ್, ‘ಈ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಯಾರಿಗೂ ಮಾರಿಲ್ಲ. ಅಭಿಮಾನಿಗಳು ಇದನ್ನು ಮತ್ತೊಮ್ಮೆ ಬಿಗ್ ಸ್ಕ್ರೀನ್‌ನಲ್ಲಿ ನೋಡಬೇಕೆಂದು ಬಯಸಿದ್ದೆ. ನನ್ನ ಸಿನಿಮಾ ಜೀವನದ 50ನೇ ವರ್ಷದಲ್ಲಿ ಅಭಿಮಾನಿಗಳಿಗಾಗಿ ಇದೊಂದು ಸ್ಪೆಷಲ್ ಕೊಂಡಾಟ್ಟಂ(ಆಚರಣೆ) ಆಗಬೇಕೆಂದು ಇಚ್ಛಿಸಿದ್ದೆ’ ಎಂದಿರುವುದು ಅಭಿಮಾನಿಗಳನ್ನು ಅಟ್ಟಕ್ಕೆ ಕೂರಿಸಿದೆ.

1995ರಲ್ಲಿ ಬಿಡುಗಡೆಯಾದ ‘ಬಾಷಾ’ ಚಿತ್ರ ಕೂಡ ರಜನೀಕಾಂತ್ ವೃತ್ತಿಜೀವನದಲ್ಲಿ ಮೈಲಿಗಲ್ಲು ನಿರ್ಮಿಸಿದ ಚಿತ್ರ. ಸುರೇಶ್ ಕೃಷ್ಣ ನಿರ್ದೇಶನದ ಈ ಚಿತ್ರವು ಥಿಯೇಟರ್‌ಗಳಲ್ಲಿ ಸತತ 15 ತಿಂಗಳು ಓಡಿ, ತಮಿಳು ಸಿನಿಮಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಐಕಾನಿಕ್ ಚಿತ್ರಗಳಲ್ಲಿ ಒಂದಾಯಿತು. ಮಾಸ್ ಸಿನಿಮಾ ಎಂದರೇನು ಎಂಬುದನ್ನು ಈ ಚಿತ್ರ ಮರು ವ್ಯಾಖ್ಯಾನಿಸಿತು. ನಾಯಕನ ಗೆಟಪ್ ಮತ್ತು ತೆರೆಮೇಲೆ ಕಾಣಿಸಿಕೊಂಡ ಬಗೆ ಭಿನ್ನವಾಗಿತ್ತು, ಹೊಸ ಮಾನದಂಡ ಸೃಷ್ಟಿಸಿತು. ಪಂಚ್ ಡೈಲಾಗ್‌ಗಳು, ವೇಗೋಷ್ಕರ್ಷದ ನಟನೆ ಮತ್ತು ಅದಕ್ಕೆ ತಕ್ಕಂತಹ ಕಥಾ ರಚನೆ– ಎಲ್ಲವೂ ಅನೇಕ ಚಿತ್ರಗಳ ಮೇಲೆ ಪ್ರಭಾವ ಬೀರಿತು. ತಮಿಳು ಮುಖ್ಯವಾಹಿನಿಯ ಸಿನಿಮಾಗಳ ಹೊಸ ಯುಗ ಆರಂಭವಾಯಿತು. ‘ಬಾಷಾ’ ಚಿತ್ರ ಕೂಡ ಬಾಷಾಗೆ 30, ನಟನಾ ಬದುಕಿಗೆ 50, ಜನ್ಮದಿನಕ್ಕೆ 75 ವರ್ಷಕ್ಕೆ ಕಾರಣವಾಯಿತು.

ರಜನೀಕಾಂತ್ ತಮಿಳುನಾಡಿನಲ್ಲಷ್ಟೇ ಅಲ್ಲದೆ, ತಮಿಳು ಭಾಷೆಯ ಚಿತ್ರಗಳಿಗಷ್ಟೇ ಸೀಮಿತವಾಗದೆ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳ ಚಿತ್ರಗಳೂ ಸೇರಿ 170ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಂದ್ರಮುಖಿ, ಶಿವಾಜಿ, ಎಂದಿರನ್, 2.0, ಜೈಲರ್, ಕೂಲಿ ಚಿತ್ರಗಳು ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿವೆ. ಮಾಸ್ ಮತ್ತು ಕ್ಲಾಸ್ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡಿವೆ. 500 ಕೋಟಿ ದಾಟಿದ ಹಲವು ಚಿತ್ರಗಳನ್ನು ಹೊಂದಿರುವ ಏಕೈಕ ಭಾರತೀಯ ನಟ ಎಂಬ ಹೆಗ್ಗುರುತು ಇಂದಿಗೂ ಅವರ ಖಾತೆಯಲ್ಲಿಯೇ ಇದೆ.

ರಜನೀಕಾಂತ್, ದಶಕಗಳೇ ಕಳೆದರೂ, ಯುವಕರಿಂದ ಹಿರಿಯರವರೆಗೆ ಎಲ್ಲರನ್ನೂ ಎಲ್ಲ ಕಾಲಕ್ಕೂ ಆಕರ್ಷಿಸುತ್ತಲೇ ಸಾಗಿದ್ದಾರೆ. ಅದಕ್ಕೆ ಕಾರಣ ಅವರ ಅಪ್ರತಿಮ ಸ್ಟೈಲ್ ಮತ್ತು ಸ್ವ್ಯಾಗ್. ಸಿಗರೇಟ್ ಸೇದುವುದರಿಂದ ಹಿಡಿದು ಸನ್‌ಗ್ಲಾಸ್ ತಿರುಗಿಸುವವರೆಗೆ ಇಡೀ ಜಗತ್ತೇ ಕಾಪಿ ಮಾಡುವಂತಹ ಐಕಾನಿಕ್ ಮ್ಯಾನರಿಸಂಗಳು. ಇನ್ನು ಡೈಲಾಗ್ ಡೆಲಿವರಿಯಂತೂ ‘ಎನ್ ವಝಿ… ತನಿ ವಝಿ’, ‘ನಾನ್ ಏ ಒರು ತಡವ ಸೊನ್ನ ನೂರು ತಡವ ಸೊನ್ನ ಮಾದಿರಿ’ -ಇಂತಹ ಸಾಲುಗಳನ್ನು ಅವರು ಹೇಳುವ ರೀತಿ, ಅದಕ್ಕೆ ಅವರದೇ ಆದಂತಹ ಆಂಗಿಕಾಭಿನಯ- ಅಷ್ಟು ಸುಲಭವಾಗಿ ಪ್ರೇಕ್ಷಕರ ನೆನಪಿನಿಂದ ಅಳಿಸಲಾಗುವುದಿಲ್ಲ. ಕುಡಿತ-ಸಿಗರೇಟ್ ಬಿಡಿಸುವಂತೆ ಜನರಿಗೆ ಸಲಹೆ ನೀಡುವುದು; ದಾನ-ಧರ್ಮದಲ್ಲಿ ಕೈ ಮುಂದು ಮಾಡುವುದು; ಎಂದೂ ಪ್ರಚಾರಕ್ಕೆ ಹಾತೊರೆಯದಿರುವುದು- ಇದು ಕೂಡ ರಜನಿಯ ವಿಶೇಷವೇ.

ಇದನ್ನು ಓದಿದ್ದೀರಾ?: ಎಂ ಎಸ್ ಉಮೇಶ್- ಹತ್ತು ಕಟ್ಟುವ ಜೊತೆಗೆ ಮುತ್ತು ಕಟ್ಟಿದ ಕಲಾವಿದ

ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಭಾರೀ ಬೇಡಿಕೆಯ ಸ್ಟಾರ್ ನಟನೇ ಆದರೂ, ಅವರ ವಿನಯ ಅವರನ್ನು ಎವರೆಸ್ಟ್ ಎತ್ತರಕ್ಕೆ ನಿಲ್ಲಿಸಿದೆ. ಅವರ ಸರಳ ಬದುಕು, ಸಹಜ ನಡವಳಿಕೆ, ಹಿರಿಯರನ್ನು ಗೌರವಿಸುವ ರೀತಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುವ ಬಗೆ- ಎಲ್ಲರಿಗೂ ಇಷ್ಟವಾಗಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಕಂಡು ಕಾಣದ ವಿಶಿಷ್ಟ ಗುಣವಾಗಿದೆ. ಇದರ ಜೊತೆಗೆ ಅವರು ಪಾಲಿಸಿಕೊಂಡು ಬಂದಿರುವ ಆಧ್ಯಾತ್ಮಿಕ ಚಿಂತನೆ ಹಾಗೂ ರಾಜಕಾರಣದತ್ತ ಒಲವು ತೋರದಿರುವುದು ಕೂಡ, ಅವರನ್ನು ಭಿನ್ನ ಬಗೆಯಲ್ಲಿ ನೋಡುವಂತೆ, ಮೆಚ್ಚುವಂತೆ ಮಾಡಿದೆ. ಹಾಗಾಗಿಯೇ ತಲೆಮಾರು, ವರ್ಗ, ಭಾಷೆ, ದೇಶ ಮೀರಿ ಅವರನ್ನು ಇಷ್ಟಪಡುವ ಜನರಿದ್ದಾರೆ. ಅದಕ್ಕೆ ಅವರ ‘ಎನ್ನೈ ವಾಳವೈಕ್ಕುಂ ದೇವಂಗಳು'(ನನ್ನನ್ನು ಬದುಕಿಸಿರುವ ದೇವರುಗಳು) ಎಂದು ಕರೆಯುವ ರೀತಿಗೆ ಅಭಿಮಾನಿಗಳು ಕರಗಿಹೋಗಿದ್ದಾರೆ.

ರಜನೀಕಾಂತ್@75

50 ವರ್ಷಗಳ ಸತತ ಸೂಪರ್‌ಸ್ಟಾರ್‌ಡಂ- ಯಾವ ಭಾರತೀಯ ನಟನಿಗೂ ಇಲ್ಲದಷ್ಟು ದೀರ್ಘಕಾಲ ಉನ್ನತ ಸ್ಥಾನದಲ್ಲಿಯೇ ಉಳಿದಿದ್ದಾರೆ. 70ರ ಹರೆಯದಲ್ಲಿಯೂ ಜೈಲರ್, ಕೂಲಿ ಎಂಬಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಯಾವುದೆ ಲಾಬಿ ಇಲ್ಲದೆ ಕೇವಲ ಪ್ರತಿಭೆಯಿಂದಲೇ ಉತ್ತುಂಗಕ್ಕೇರಿದ್ದಾರೆ. ಬೆಂಗಳೂರಿನ ಬಡ ಕುಟುಂಬದಿಂದ ಬಂದು ಭಾರತದ ಅತಿ ದೊಡ್ಡ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಜನೀಕಾಂತ್ ಕೇವಲ ಒಬ್ಬ ನಟರಲ್ಲ– ಅವರು ಒಂದು ಸಾಂಸ್ಕೃತಿಕ ವಿದ್ಯಮಾನ. ಅವರ ಬಗ್ಗೆ ಹೇಳಬಹುದಾದ ವ್ಯಾಖ್ಯಾನವೆಂದರೆ: ಒನ್ ಅಂಡ್ ಓನ್ಲಿ ರಜನೀಕಾಂತ್… ಆ ರೀತಿ ಮತ್ತೊಬ್ಬರಿಲ್ಲ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...