ಶಿಕ್ಷಕರ ದಿನಾಚರಣೆ | ವಿದ್ಯಾರ್ಥಿಗಳ ಕಣ್ಣಲ್ಲಿ ಶಿಕ್ಷಕರು

Date:

ಶಿಕ್ಷಕರ ದಿನ- ಶಿಕ್ಷಕರನ್ನು ಗೌರವಿಸುವ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ದಿನ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಮೂವರು ವಿದ್ಯಾರ್ಥಿನಿಯರು ಕಂಡ ಮೂರು ಭಿನ್ನ ಚಿತ್ರಣಗಳು ಇಲ್ಲಿವೆ... 

ಬದುಕಿನ ಪಾಠ ಮಾಡಿದ ಬೋರಯ್ಯ ಸರ್

ಶಿಕ್ಷಕರು ಜೀವನದ ದೀಪಸ್ತಂಭವಿದ್ದಂತೆ. ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತವಾಗದೆ ಜೀವನಕ್ಕೆ ಮಾರ್ಗದರ್ಶನವನ್ನು ಸಹ ನೀಡುತ್ತಾರೆ. ಶಿಕ್ಷಕರು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ಹಂಚಿ ಪ್ರೇರಣೆ ನೀಡುತ್ತಾರೆ. ನಾನು ಅನೇಕ ಶಿಕ್ಷಕರನ್ನು ನೋಡಿದ್ದೇನೆ. ಅದರಲ್ಲಿ ನನಗೆ ಅಚ್ಚುಮೆಚ್ಚಿನ ಶಿಕ್ಷಕರೆಂದರೆ ಅವರು ಬೋರಯ್ಯ ಸರ್.

ತಂದೆ ಮತ್ತು ತಾಯಿಯಂತೆ ಶಿಕ್ಷಕರು ಸಹ ಮುಖ್ಯ. ನನ್ನ ಮೆಚ್ಚಿನ ಶಿಕ್ಷಕರಾದ ಬೋರಯ್ಯ ಸರ್, ಪ್ರಥಮ ಪಿಯುಸಿಯನ್ನು ಓದುವಾಗ ಲೆಕ್ಕಶಾಸ್ತ್ರವನ್ನು ಬೋಧನೆ ಮಾಡುತ್ತಿದ್ದರು. ಅವರನ್ನು ನೋಡಿ, ಒಂದು ರೀತಿಯಲ್ಲಿ ಅವರಂತೆಯೇ ಬೆಳೆಯಬೇಕು ಎಂದು ಎನಿಸುತ್ತಿತ್ತು. ಏಕೆಂದರೆ ಅವರಲ್ಲಿ ಇದ್ದ ಸಮಯಪಾಲನೆ. ಅವರು ಸಮಯಕ್ಕೆ ತುಂಬಾ ಮಹತ್ವ ಕೊಡುತ್ತಿದ್ದರು. ನಾವು ತರಗತಿಗೆ ಹೋಗಲು ಐದು ನಿಮಿಷ ತಡವಾದರೂ ನಮ್ಮನ್ನು ಒಳಗೆ ಸೇರಿಸುತ್ತಿರಲಿಲ್ಲ. ಅವರು ನಮಗೆ ಪಾಠ ಮಾಡುವಾಗ ಹೇಳುತ್ತಿದ್ದ ಉದಾಹರಣೆಗಳು ಇನ್ನೂ ಕಣ್ಣಿಗೆ ಕಟ್ಟುವಂತೆ ಇದೆ. ಅವರು ಹೇಳಿದ ಸಾಲುಗಳು ಇನ್ನೂ ನೆನಪಿನಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅವರು ಪಾಠ ಮಾಡಲು ತರಗತಿಗೆ ಬಂದರೆ ತರಗತಿ ಪೂರ್ಣ ನಿಶಬ್ದ. ಒಬ್ಬರು ಕೂಡ ಮಾತನಾಡುತ್ತಿರಲಿಲ್ಲ. ಅವರು ನಮಗೆ ಮೊದಲ ಬಾರಿ ತರಗತಿಯನ್ನು ತೆಗೆದುಕೊಂಡಾಗ ಅವರು ಹೇಳಿದ ಒಂದು ಲೆಕ್ಕಶಾಸ್ತ್ರದ ವಿಷಯದ ಪದ ಬುಕ್ ಕೀಪಿಂಗ್. ಅವರು ಇದರ ಅರ್ಥವನ್ನು ಹೇಳಿದರು. ಅದು ಏನೆಂದರೆ ರೆಕಾರ್ಡಿಂಗ್ ಟು ಡೇ ಬಿಸಿನೆಸ್ ಟ್ರಾನ್ಸಾಕ್ಷನ್ ಇನ್ ದಿ ಮೋಸ್ಟ್ ಸಿಸ್ಟಮ್ಯಾಟಿಕ್ ಮ್ಯಾನರ್ ಇನ್ ಎಪ್ರೋಪ್ರಿಯೇಟ್ ಎಕೌಂಟ್ ಬುಕ್. ಈ ಸಾಲುಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿದ್ದೀರಾ?: ನುಡಿಯಂಗಳ | ಅತ್ಯಂತ ವೈಜ್ಞಾನಿಕವಾದ ಕನ್ನಡ ಬರಹ ವ್ಯವಸ್ಥೆ

ಅವರು ತರಗತಿಗೆ ಬಂದರೆ ಕೇವಲ ಪರೀಕ್ಷೆಗೆ ಸೀಮಿತವಾಗಿ ಪಾಠ ಮಾಡುತ್ತಿರಲಿಲ್ಲ, ಜೀವನಕ್ಕೂ ಮುಂದೆ ಬರುವ ರೀತಿಯಲ್ಲಿ ಪಾಠ ಮಾಡುತ್ತಿದ್ದರು. ಮತ್ತು ಅವರು ತರಗತಿಗೆ ಬರುವಾಗ ಪಠ್ಯಪುಸ್ತಕವನ್ನು ತರುತ್ತಿರಲಿಲ್ಲ, ಅವರು ದೊಡ್ಡ ದೊಡ್ಡ ಲೆಕ್ಕವನ್ನು ಬಾಯಲ್ಲಿ ಹಾಗೆ ಹೇಳುತ್ತಿದ್ದರು. ಕೇವಲ ಅಂಕಗಳಿಗೆ ಬರುವ ಹಾಗೆ ಲೆಕ್ಕ ಮಾಡಿಸುತ್ತಿರಲಿಲ್ಲ, ನಾವು ಕಲಿಯಬೇಕೆಂದು ಒಂದು ಪುಟದಷ್ಟು ದೊಡ್ಡ ಲೆಕ್ಕವನ್ನು ಕೊಟ್ಟು ಉತ್ತರಿಸಬೇಕಿತ್ತು. ಅವರು ಬೋರ್ಡ್ ಮೇಲೆ ಲೆಕ್ಕ ಮಾಡಿದರು ಸಹ ನಾವು ಅವರ ಲೆಕ್ಕ ನೋಡದೆ ಮಾಡಿ ನಂತರ ಉತ್ತರವನ್ನು ನೋಡಬೇಕಿತ್ತು. ಅವರು ಅರ್ಥ ಮಾಡಿಸಿ ಬೋರ್ಡ್‌ನ ಮೇಲಿನ ಲೆಕ್ಕವನ್ನು ಅಳಿಸುತ್ತಿದ್ದರು. ಮತ್ತು ನಾವು ಲೆಕ್ಕ ಮಾಡುವಾಗ ಅವರು ಮತ್ತೆ ಮಾಡುವರು ನಾವು ಒಂದು ಬಾರಿ ಅಲ್ಲ 10 ಬಾರಿ ಕೇಳಿದರೂ ಸಹ ಅದೇ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ನಾವು ಲೆಕ್ಕಗಳನ್ನು ಮಾಡಿ ಮಾಡಿ ರೂಢಿಯಾಗಿದ್ದರಿಂದ ಪರೀಕ್ಷೆಯಲ್ಲಿ ತುಂಬಾ ಸುಲಭವಾಗಿ ಲೆಕ್ಕ ಮಾಡುತ್ತಿದ್ದೆವು. ಅವರನ್ನು ಕಂಡರೆ ತುಂಬಾನೇ ಗೌರವ. ಅವರ ಪಾಠವನ್ನು ಒಂದು ವೇಳೆ ನಾನು ನಿರ್ಲಕ್ಷ್ಯ ಮಾಡಿದ್ದರೆ, ಇಷ್ಟರಮಟ್ಟಿಗೆ ಲೆಕ್ಕಶಾಸ್ತ್ರ ವಿಷಯ ಬರುತ್ತಿರಲಿಲ್ಲ. ಅವರನ್ನು ನೆನೆಯದೇ ಇರುವ ದಿನವೇ ಇಲ್ಲ. ಅವರ ಮಾರ್ಗದರ್ಶನದಲ್ಲಿ ಅನೇಕರು ಅತ್ಯುತ್ತಮ ಸಾಧನೆ ಮಾಡಿದರು, ಮಾಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವುದಕ್ಕೆ ಶಿಲ್ಪಿಗಳಾಗಿರುತ್ತಾರೆ. ಇವರು ಮಾರ್ಗದರ್ಶಕರಾಗಿ ನಮಗೆ ಪ್ರೇರಣೆಯನ್ನು ನೀಡುತ್ತಾರೆ. ನಂತರ ಅವರು ಆದರ್ಶ ವ್ಯಕ್ತಿಯಾಗುತ್ತಾರೆ.

-ಸ್ಪೂರ್ತಿ ಬಿ.ಆರ್.
ತೃತೀಯ ಬಿ.ಕಾಂ, ‘ಬಿ’ ವಿಭಾಗ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ

*

ನನ್ನ ನೆಚ್ಚಿನ ಶ್ರೀಕಾಂತ್ ಮೇಷ್ಟ್ರು

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಬಂಧವು ಅದ್ಭುತವಾದದ್ದು ಅಥವಾ ಶ್ರೇಷ್ಠವಾದದ್ದು. ಯಾವುದೇ ಮಗುವು ಹುಟ್ಟಿನಿಂದಲೇ ಎಲ್ಲವನ್ನು ಕಲಿಯುವುದಿಲ್ಲ. ಮನೆಯೇ ಮೊದಲ ಪಾಠಶಾಲೆ. ಮಗುವಿನ ತಾಯಿಯೇ ಮೊದಲ ಗುರುವಾಗಿರುತ್ತಾಳೆ. ನಂತರ ಆ ಮಗುವನ್ನು ಶಾಲೆಗೆ ಕಳುಹಿಸುತ್ತಾರೆ, ಶಿಕ್ಷಕರು ಆ ಮಗುವಿಗೆ ಪ್ರೀತಿಯಿಂದ ಓದುವುದು ಬರೆಯುವುದನ್ನು ಅಭ್ಯಾಸ ಮಾಡಿಸುತ್ತಾರೆ.

‘ಮುಂದೆ ಗುರಿ ಇರಬೇಕು ಹಿಂದೆ ಗುರುವಿರಬೇಕು’ ಈ ಗಾದೆ ವ್ಯಕ್ತಪಡಿಸುವುದೇನೆಂದರೆ ನಾವು ಏನಾದರೂ ಸಾಧನೆ ಮಾಡಬೇಕಾದರೆ ನಮ್ಮ ಹಿಂದೆ ಗುರುಗಳ ಶ್ರಮವಿದ್ದರೆ ಮಾತ್ರ ಸಾಧ್ಯವೆಂದು ಹೇಳಬಹುದು. ಗುರುವಿಗೆ ಎಷ್ಟು ಶ್ರದ್ದೆ ಭಕ್ತಿ ಇರುತ್ತದೆಯೋ ಅಷ್ಟು ಎತ್ತರ ಸ್ಥಾನಕ್ಕೆ ತಲುಪುತ್ತೇವೆ. ಗುರು ಪುಸ್ತಕದಲ್ಲಿ ಇರುವುದನ್ನ ಬಿಟ್ಟು ಜೀವನದಲ್ಲಿ ಉತ್ತಮ ವ್ಯಕ್ತಿ ಆಗಿರುವುದನ್ನು ಸಹ ಹೇಳಿಕೊಡುತ್ತಾರೆ. ನಾವು ಜೀವನದಲ್ಲಿ ಒಂದು ಉತ್ತಮ ಸ್ಥಾನದಲ್ಲಿ ಇದ್ದೇವೆ ಎಂದರೆ ಅದು ಗುರುವಿನ ಸಹಾಯದಿಂದಲೇ.

ನನ್ನ ಜೀವನದಲ್ಲಿ ಕೂಡ ನನ್ನ ನೆಚ್ಚಿನ ಶಿಕ್ಷಕಿ ಒಬ್ಬರು ಇದ್ದಾರೆ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನನಗೆ ಗುರುವಿನ ಬೆಲೆ ತಿಳಿದಿರಲಿಲ್ಲ. ಅವರ ಮುಂದೆ ಒಳ್ಳೆಯವರಾಗಿ ನಟಿಸಿ ಅವರ ಹಿಂದೆ ಅವರಿಗೆ ಬೈಯುತ್ತಿದ್ದೆ. ಯಾಕೆಂದರೆ ನಾನು ಪ್ರಾಥಮಿಕ ಶಾಲೆಯಲ್ಲಿ ಇರುವಾಗ ಶಿಕ್ಷಕರು, ಬೈದು ಹೇಳುತ್ತಿದ್ದರು. ಇವರಿಗೆ ನಮ್ಮನ್ನು ಕಂಡರೆ ಇಷ್ಟ ಇಲ್ಲ ಎಂದು ತಿಳಿದುಕೊಂಡಿದ್ದೆ. ನಂತರ ಹೈಸ್ಕೂಲ್‌ಗೆ ಬಂದಾಗ ಕೂಡ ಇದೇ ರೀತಿ ನಮಗೆ ಇಷ್ಟ ಬಂದ ಹಾಗೆ ಇರುತ್ತಿದ್ದೆವು. ನಮಗೆ ಬೈದು ಬುದ್ಧಿ ಹೇಳಿದವರನ್ನೆಲ್ಲ, ನಮ್ಮನ್ನು ಕಂಡರೆ ಇವರಿಗೆ ಇಷ್ಟ ಇಲ್ಲ ಎಂದು ಭಾವಿಸುತಿದ್ದೆ. ಶಿಕ್ಷಕರಿಗೂ ಕೂಡ ನಮ್ಮ ನೆಚ್ಚಿನ ವಿದ್ಯಾರ್ಥಿ ಮುಂದೆ ಉತ್ತಮ ಪ್ರಜೆಯಾಗಿ ದೇಶಕ್ಕೆ ಕೀರ್ತಿ ತರಬೇಕೆಂಬ ಆಸೆ. ಆ ಆಸೆಯನ್ನು ಎಲ್ಲಾ ವಿದ್ಯಾರ್ಥಿಗಳು ಈಡೇರಿಸಲು ಸಾಧ್ಯವೇ ಇಲ್ಲ.

ನಾನು ಪಿಯುಸಿ ಓದುವಾಗ ನಮ್ಮ ಶಿಕ್ಷಕರಾದ ಶ್ರೀಕಾಂತ್ ಎಂಬುವರು ಎಲ್ಲರಿಗೂ ಪ್ರೇರಣೆ ನೀಡುತ್ತಿದ್ದರು. ಆಗ ತಿಳಿಯಿತು ನಾವು ಬಾವಿಯಲ್ಲಿದ್ದ ಕಪ್ಪೆಗಳು. ಈಗ ನದಿಗೆ ಇಳಿದಿದ್ದೀರಿ, ಮುಂದೆ ಸಮುದ್ರ ಇದೆ ಎಂದು ಅವರು ಹೇಳುತ್ತಿದ್ದ ಒಂದೊಂದು ಮಾತು ಕೂಡ ಜೀವನದಲ್ಲಿ ಮುಖ್ಯವಾದದ್ದು. ಅವರು ತರಗತಿಗಳನ್ನು ತೆಗೆದುಕೊಳ್ಳುವುದು ಮಾತ್ರವಲ್ಲ ಜೀವನಕ್ಕೆ ಉಪಯೋಗ ಆಗುವುದರ ಬಗ್ಗೆಯೂ ಹೇಳುತ್ತಿದ್ದರು. ಶಿಕ್ಷಕರು ಏನೇ ಹೇಳಿದರು ನಿರ್ಲಕ್ಷ ಮಾಡದೆ ಅವರು ಹೇಳುವ ಮಾತನ್ನು ಕೇಳಿದರೆ ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿಗಳಾಗುತ್ತೇವೆ. ನಾವು ಉತ್ತಮ ಸ್ಥಾನಕ್ಕೆ ಹೋದ ನಂತರ ಅವರನ್ನು ಮರೆಯಬಾರದು. ಅವರನ್ನು ಹೋಗಿ ಮಾತನಾಡಿಸಿ ಬರಬೇಕು ಎಂದುಕೊಂಡಿರುವೆ..

-ಅನನ್ಯ ಎನ್.
ಪ್ರಥಮ ಬಿ.ಬಿ.ಎ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ

ಸ್ಫೂರ್ತಿ ಅನನ್ಯ ಮೇಘನಾ 1
ಸ್ಫೂರ್ತಿ, ಅನನ್ಯ, ಮೇಘನಾ

‘ಅಮ್ಮ’ ಎಂಬ ನನ್ನ ಮೆಚ್ಚಿನ ಶಿಕ್ಷಕಿ

ಗುರುಗಳು ಎಂದರೆ ಕೇವಲ ಪುಸ್ತಕಗಳಲ್ಲಿರುವ ಪಾಠಗಳನ್ನು ಹೇಳಿಕೊಡುವವರು ಮಾತ್ರ ಅಲ್ಲ. ಗುರುಗಳು ಎಂದರೆ ಎಲ್ಲಾ ರೀತಿಯ ಕಲಿಕೆಗಳನ್ನು ಚಟುವಟಿಕೆಯನ್ನು ಜೀವನದ ಪಾಠವನ್ನು ಹೇಳಿಕೊಡುವವರಾಗಿರುತ್ತಾರೆ. ಕಲಿಕೆಯನ್ನು ಅಥವಾ ಶಿಕ್ಷಣವನ್ನು ನಾವು ಗುರುಗಳಿಂದ ಮಾತ್ರ ಕಲಿಯುವುದಲ್ಲ. ನಮ್ಮ ತಪ್ಪು ಸರಿಗಳನ್ನು ತಿದ್ದುವ ನಮ್ಮ ಅಕ್ಕ ಅಣ್ಣಂದಿರು ನಮ್ಮ ಸ್ನೇಹಿತರು ನಮ್ಮ ತಂದೆ ತಾಯಿಯಿಂದ ಕಲಿಯುವ ಶಿಕ್ಷಣವೂ ಇರುತ್ತದೆ. ನಾವು ಮಾಡುವ ತಪ್ಪನ್ನು ಗುರುತಿಸಿ ಸರಿ ಮಾಡುವವರು, ನಮಗೆ ಒಳ್ಳೆಯ ಬುದ್ಧಿ-ಮಾರ್ಗದರ್ಶನ ನೀಡುವವರು ಹಾಗೂ ನಮಗೆ ಒಳ್ಳೆಯದಾಗಲಿ ಎಂದು ಬಯಸುವವರು- ಎಲ್ಲರೂ ಕೂಡ ನಮ್ಮ ಗುರುಗಳು ಅಥವಾ ಶಿಕ್ಷಕರು ಎಂದರೆ ತಪ್ಪಾಗಲಾರದು. ಈ ದೃಷ್ಟಿಯಲ್ಲಿ ನೋಡುವುದಾದರೆ ನನ್ನ ನೆಚ್ಚಿನ ಶಿಕ್ಷಕಿ ನನ್ನ ತಾಯಿ.

ತಾಯಿ ತನ್ನ ಮಗುವಿಗೆ ಈ ಜಗತ್ತಿನಲ್ಲಿ ಉಸಿರಾಡುವ ಮುನ್ನವೇ, ಅಂದರೆ ಆಕೆಯ ಗರ್ಭದಲ್ಲಿ ಇರುವಾಗಲೇ, ತನ್ನ ಶಿಕ್ಷಣವನ್ನು ಪ್ರಾರಂಭಿಸುತ್ತಾಳೆ. ತನ್ನ ಮಗುವಿಗೆ ಒಳ್ಳೆಯ ಪುರಾಣ ಕಥೆಗಳು ಶ್ಲೋಕಗಳನ್ನು ಓದಿ ಉತ್ತಮ ಮನುಷ್ಯನಾಗಲಿ ಎಂದು ಬಯಸುವವಳು ತಾಯಿ ಎಂದರೆ ತಪ್ಪಾಗುವುದಿಲ್ಲ. ಮುಗಿಯದ ಜ್ಞಾನ ಸಾಗರದಂತೆ ತಾಯಿಯ ಹೃದಯ. ನನ್ನ ತಾಯಿಯು ನನಗೆ ಮೊದಲು ಅ ಆ ಎಂಬ ಅಕ್ಷರಗಳನ್ನು ಹೇಳಿಕೊಡುವುದರಿಂದ ಪ್ರಾರಂಭಿಸಿದಳು. ತಾಯಿಯೇ ಮೊದಲ ಗುರು ಎಂಬ ಗಾದೆಯಂತೆ ತಾಯಿಯು ಪುಸ್ತಕದಲ್ಲಿರುವ ಕಲಿಕೆಯನ್ನು ಮಾತ್ರವಲ್ಲದೆ, ಬದುಕಿನ ಶಿಕ್ಷಣವನ್ನು ಹೇಳಿಕೊಡುತ್ತಾಳೆ. ನನಗೆ ಸಂಸ್ಕೃತಿ ನಡೆ, ನುಡಿ, ಆಚಾರ ವಿಚಾರಗಳನ್ನು ಹೇಳಿಕೊಡುತ್ತಾಳೆ. ಒಬ್ಬ ಒಳ್ಳೆ ವ್ಯಕ್ತಿಯ ನಡತೆಗೆ ಕಾರಣ ಯಾವಾಗಲೂ ತಮ್ಮ ತಾಯಂದಿರು ನೀಡುವ ಶಿಕ್ಷಣ. ನನ್ನ ತಾಯಿ ನನಗೆ ಸತ್ಯವೇ ಶಾಶ್ವತ ಎಂದು ತಿಳಿಸಿದ್ದಾರೆ. ನಾವು ಸತ್ಯದ ದಾರಿಯಲ್ಲಿ ನಡೆದರೆ ಸದಾ ನಮಗೆ ಜಯ ಸಿಗುತ್ತದೆ ಎಂದು ಶಿಕ್ಷಣ ನೀಡಿದ್ದಾರೆ. ನನ್ನ ತಾಯಿಯು ನನಗೆ ಪ್ರಾಮಾಣಿಕತೆಯ ಬಗ್ಗೆ ತಿಳಿಸಿದ್ದಾರೆ. ನಾವು ನಮ್ಮ ಬದುಕಿನಲ್ಲಿ ಎಂತಹ ಸಂದರ್ಭ ಬಂದರೂ ಪ್ರಾಮಾಣಿಕವಾಗಿರಬೇಕು ಅದು ನಮ್ಮನ್ನು ಉಳಿಸುತ್ತದೆ ಎಂದು ಹೇಳಿದ್ದಾರೆ. ಹಾಗೆ ನನ್ನ ತಾಯಿಯಿಂದ ನಾನು ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಂತೆ ಕಷ್ಟಪಟ್ಟು ದುಡಿಯಬೇಕು, ಆವಾಗಲೇ ನಮಗೆ ಬೇಕಾದದ್ದನ್ನು ನಾವು ಪಡೆಯಬಹುದು ಎಂದು ತಿಳಿಸಿದ್ದಾರೆ.

ದುಡಿಯುವವರನ್ನು ಯಾವತ್ತು ಕೀಳಾಗಿ ನೋಡಬಾರದು, ಬಡವರನ್ನು ಹೀಯಾಳಿಸಬಾರದು ಎಂದು ಅಮ್ಮ ತಿಳಿಸಿದ್ದಾರೆ. ಹಾಗೆಯೇ ನಮ್ಮ ಬದುಕಿನ ಹಾದಿಯಲ್ಲಿ ಕರುಣೆಯ ಅಂಶವು ಇರಬೇಕು. ನಾವು ಬೇರೆ ಬೇರೆಯವರಿಗೆ ಸಹಾಯ ಮಾಡಿದರೆ ನಮ್ಮ ಕಷ್ಟದ ಸಮಯದಲ್ಲಿ ಯಾವುದೋ ರೂಪದಲ್ಲಿ ನಾವು ಮಾಡಿದ ಒಳ್ಳೆಯ ಕೆಲಸವು ನಮ್ಮನ್ನು ಕಾಯುತ್ತದೆ ಎಂದಿದ್ದಾರೆ. ಹಾಗೆಯೇ ನಮ್ಮ ಗುರು ಹಿರಿಯರನ್ನು ಹೇಗೆ ಪ್ರೀತಿಸಬೇಕು ಗೌರವಿಸಬೇಕು ನಮ್ಮ ನಡೆ ನುಡಿಗಳು ಹೇಗಿರಬೇಕೆಂದು ಚಿಕ್ಕವಳಿದ್ದಾಗಿನಿಂದಲೂ ತಿಳಿಸಿ ಒಳ್ಳೆಯ ಶಿಕ್ಷಣವನ್ನು ನನಗೆ ನೀಡಿದ್ದಾರೆ. ಶಾಲೆಯಲ್ಲಿರುವ ಗುರುಗಳು ಅಥವಾ ಶಿಕ್ಷಕರು ಪಾಠವನ್ನು ಹೇಳಿಕೊಡುತ್ತಾರೆ ಹಾಗೆ ಬದುಕು ಹೇಗೆ ಇರುತ್ತದೆ ಎಂದು ಕೂಡ ನಮಗೆ ತಿಳಿಸಿದ್ದಾರೆ. ಆದರೆ ನನ್ನ ತಾಯಿ ಆ ಬದುಕನ್ನು ಹೇಗೆ ನಡೆಸಬೇಕು ಎಂದು ನನ್ನ ಬೆನ್ನ ಹಿಂದೆ ನಿಂತು ಪ್ರತಿ ಹೆಜ್ಜೆಯಲ್ಲೂ ತಪ್ಪುಗಳನ್ನು ತಿದ್ದುತ್ತಾ ಒಳ್ಳೆಯ ಬದುಕನ್ನ ರೂಪಿಸಿಕೊಡುತ್ತಿದ್ದಾಳೆ.

ನನ್ನ ತಾಯಿ ನನಗೆ ಕೇವಲ ತಾಯಿ ಮಾತ್ರವಲ್ಲ. ಆಕೆ ನನಗೆ ಒಳ್ಳೆಯ ಸ್ನೇಹಿತೆ ಕೂಡ ಹೌದು. ನನಗೆ ಯಾವುದೇ ತೊಂದರೆಯಾಗಲಿ ನನ್ನ ಸ್ನೇಹಿತೆಯಂತೆ ಜೊತೆಗಿದ್ದು ನಾನು ಓದಿನಲ್ಲಾಗಲಿ ಬೇರೆ ಚಟುವಟಿಕೆಗಳಲ್ಲಿಯಾಗಲಿ, ಅಥವಾ ಯಾವುದೇ ಕೆಲಸಗಳಲ್ಲಿ ಏನಾದರೂ ಸೋತರೆ ನನಗೆ ಕುಗ್ಗಲು ಬಿಡದೆ ಸೋಲೆ ಗೆಲುವಿನ ಮೆಟ್ಟಿಲು ಎಂಬ ಗಾದೆಯಂತೆ ಸದಾ ನನ್ನನ್ನ ಪ್ರೇರೇಪಿಸುತ್ತಾಳೆ. ಈ ಸಮಾಜದಲ್ಲಿ ನಾನು ಧೈರ್ಯದಿಂದ ನಡೆಯಲು ಯಾವುದೇ ಕೆಲಸದಲ್ಲಿ ಮುನ್ನುಗಲು ನನ್ನೊಳಗಿನ ಭಯವನ್ನ ಮಲಗಿಸಿ ಧೈರ್ಯ ಸ್ವಾಭಿಮಾನ ಶಕ್ತಿಯನ್ನು ನೀಡಿದ್ದಾಳೆ ನನ್ನ ತಾಯಿ.

ಇದನ್ನು ಓದಿದ್ದೀರಾ?: ಗಿಡ ನೆಡುವುದರಿಂದಲೂ ಹವಾಮಾನ ವೈಪರೀತ್ಯ ಉಂಟಾಗುತ್ತದೆ, ನಂಬುತ್ತೀರಾ?

ಗುರುವಿನ ಜ್ಞಾನವನ್ನು ಪಡೆಯದವನನ್ನು ಅಜ್ಞಾನಿ ಎನ್ನುತ್ತಾರೆ. ಅದೇ ರೀತಿ ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಗೆ ನಮ್ಮ ದಾರಿಗೆ ಸದಾ ದೀಪದ ಬೆಳಕಿನ ಜ್ಞಾನವನ್ನು ಹಚ್ಚುವವಳು ತಾಯಿ. ಆದ್ದರಿಂದ ನಾನು ಒಳ್ಳೆಯ ಬದುಕನ್ನು ರೂಪಿಸಿಕೊಳ್ಳುತ್ತೇನೆ ಎಂಬ ಧೈರ್ಯ ನನ್ನಲ್ಲಿದೆ. ತಾಯಿಯು ಮಗುವಿಗೆ ಅದರಲ್ಲೂ ಒಂದು ಹೆಣ್ಣು ಮಗುವಿಗೆ ನೀಡುವ ಬದುಕಿನ ಶಿಕ್ಷಣ ಅಪಾರವಾದದ್ದು. ತನ್ನ ಮಗಳು ಹುಟ್ಟಿದಾಗಿನಿಂದ ಇನ್ನೊಂದು ಮನೆಗೆ ಹೋಗುವಳು ಎಂಬ ಭಯದಿಂದ ಆತಂಕದಿಂದ ಅವಳು ಇನ್ನಷ್ಟು ಬದುಕಿನ ಪಾಠವನ್ನು ಹೇಳುತ್ತಾಳೆ. ಆಕೆಯ ಮಗಳು ಎಲ್ಲಿದ್ದರೂ ಸರಿಯೇ ಜಯಗೊಳಿಸಬೇಕೆಂದು ಆಕೆಯ ಕಾಳಜಿ. ಎಲ್ಲಾ ಹೆಣ್ಣು ಮಕ್ಕಳು ಮದುವೆಯಾದ ನಂತರ ಒಳ್ಳೆಯ ಬದುಕನ್ನು ನಡೆಸುತ್ತಿದ್ದಾಳೆ ಎಂದರೆ ಖಂಡಿತ ಅದು ಆಕೆಯ ತಾಯಿಯ ಶಿಕ್ಷಣವಾಗಿರುತ್ತದೆ. ಈಗಿನ ಈ ಸಮಾಜದಲ್ಲಿ ಒಬ್ಬ ಹೆಣ್ಣುಮಗಳು ಬಾಳುವುದು ಅಷ್ಟೊಂದು ಸುಲಭವೇನಲ್ಲ. ಸಮಾಜದಲ್ಲಿ ಎದುರಾಗುವ ಎಲ್ಲಾ ಕಠಿಣ ವಿಷಯಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಧೈರ್ಯವನ್ನು ನನ್ನಲ್ಲಿ ನನ್ನ ತಾಯಿ ತುಂಬಿದ್ದಾಳೆ. ಕೇವಲ ಪುಸ್ತಕದಲ್ಲಿನ ಶಿಕ್ಷಣವನ್ನ ಓದಿದರೆ ಸಾಲದು ಬದುಕಿನ ಶಿಕ್ಷಣವನ್ನು ನಾವು ಕಲಿಯಬೇಕು. ಪುಸ್ತಕದ ಪಾಠಗಳನ್ನು ಶಿಕ್ಷಕರು ನಮಗೆ ಬೋಧಿಸಿದರೆ ಜೀವನದ ಪ್ರತಿಯೊಂದು ಭಾಗವನ್ನು ಹೇಗೆ ಎದುರಿಸಬೇಕು ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಅದಕ್ಕೆ ಬೇಕಾದ ಪ್ರತಿಯೊಂದು ಅಂಶಗಳನ್ನು ನಮ್ಮಲ್ಲಿ ತುಂಬಿ ಬೆಳೆಸಿ ನಾವು ಹುಟ್ಟಿದಾಗಿನಿಂದ ಅವಳು ಸಾಯುವ ತನಕ ಪ್ರತಿದಿನ ನಮಗೆ ನಮ್ಮ ಬದುಕಿನ ಶಿಕ್ಷಣವನ್ನು ನೀಡುವವಳು ತಾಯಿ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆಯಂತೆ ನನ್ನ ಬದುಕಿನ ಶಿಕ್ಷಣವನ್ನ ಹೇಳಿಕೊಡುತ್ತಿರುವ ನನ್ನ ತಾಯಿಯೇ ನನಗೆ ಸದಾ ನನ್ನ ನೆಚ್ಚಿನ ಶಿಕ್ಷಕಿ ಎಂದು ಹೇಳಲು ಹೆಮ್ಮೆ ಆಗುತ್ತದೆ. ಮಾತೃವಿನ ಮಾತುಗಳನ್ನು ಆಲಿಸುವವನು ಮಹಾನ್ ವ್ಯಕ್ತಿ ಆಗುತ್ತಾನೆ ಎಂಬುದರಲ್ಲಿ ಅನುಮಾನವಿಲ್ಲ.

-ಮೇಘನಾ
ತೃತೀಯ ಬಿ.ಕಾಂ, ‘ಎ’ ವಿಭಾಗ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...