ಕೇಂದ್ರ ಸರ್ಕಾರ ಕಾಂಗ್ರೆಸ್‌ನ ಅತ್ತೆ ಮನೆ ಅಲ್ಲ: ಮಾಜಿ ಸಚಿವ ಆರ್ ಅಶೋಕ್ ಕಿಡಿ

Date:

  • ಅಕ್ಕಿ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ
  • ಸುರ್ಜೇವಾಲಗೆ ತಿರುಗೇಟು ನೀಡಿದ ಮಾಜಿ ಸಚಿವ ಅಶೋಕ್

ರಾಜ್ಯಕ್ಕೆ ಉಚಿತ ಅಕ್ಕಿ ಸರಬರಾಜು ಮಾಡಲು ಒಪ್ಪದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿ ಮಾಜಿ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎನ್ನುವುದು ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಕಾರ್ಯಾಂಗ. ಇವರು ಹೇಳಿದಂತೆ ಕೇಳಲು ಅದೇನು ಕಾಂಗ್ರೆಸ್‌ನ ಅತ್ತೆ ಮನೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೇಂದ್ರದ ವಿರುದ್ಧ ಐದು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಕ್ಕಿ ಕೊಡದ ಕ್ರಮವನ್ನು ಖಂಡಿಸಿ ಮೋಸ ಎಂದಿದ್ದಾರೆ. ಸುರ್ಜೇವಾಲ ಅವರೇ, ನಿಮ್ಮ ಸರ್ಕಾರ ಅಕ್ಕಿಯೋಜನೆ ಜಾರಿ ಮಾಡುವಾಗ ದಾಸ್ತಾನು ಸಂಗ್ರಹಗಳ ಬಗ್ಗೆ ಮಾಹಿತಿ ಪಡೆದುಕೊಳ್ಳದೆಯೇ ಯೋಜನೆ ರೂಪಿಸಿ, ಈಗ ಕೇಂದ್ರ ಸರ್ಕಾರ ದೂರುವುದು ಎಷ್ಟು ಸರಿ ಎಂದು ಅಶೋಕ್ ಪ್ರಶ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುರ್ಜೇವಾಲ ತಮ್ಮನ್ನು ತಾವು ರಾಜ್ಯ ಸರ್ಕಾರದ ಸಚಿವರೆಂದುಕೊಂಡಿದ್ದಾರೆ. ಇಲ್ಲಿನ ಮಂತ್ರಿಗಳಿಗಿಂತ ಜಾಸ್ತಿ ಹಾರಾಡುತ್ತಿದ್ದಾರೆ. ಪ್ರಣಾಳಿಕೆ ರೂಪಿಸುವಾಗ ಕೇಂದ್ರದ ಯೋಜನೆ ಬಗ್ಗೆ ತಿಳಿದುಕೊಂಡು, ಲೆಕ್ಕಾಚಾರ ಮಾಡಿಕೊಂಡು ಪಕ್ಷದವರಿಗೆ ಸೂಚನೆ ನೀಡುವ ಬದಲು, ಈಗ ಕೂಗಾಡಿಬಿಟ್ಟರೆ ಎಲ್ಲವೂ ಆಗತ್ತಾ? ನಿಮಗೆ ಆಗ ಪ್ರಜ್ಞೆ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ನಿಮ್ಮಗಳ ಪ್ರಕಾರ ನೀವು ಹೇಳಿದ್ದಕ್ಕೆಲ್ಲ ಕೇಂದ್ರ ಒಪ್ಪಿಕೊಂಡು ಓಕೆ ಅನ್ನಬೇಕಾ? ನಾಳೆ ನೀವು ರಾಜ್ಯ ಮಾರುತ್ತೇವೆ ಎಂದಾಗ ಅದಕ್ಕೂ ಒಪ್ಪಿಗೆ ಕೊಡಬೇಕು ಅನ್ನೋದು ನಿಮ್ಮ ಆಶಯವೇ ಎಂದು ಸುರ್ಜೇವಾಲರಿಗೆ ಕುಟುಕಿದರು.

ನಾವು ಎಂದಿಗೂ ಅಕ್ಕಿ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ನಮ್ಮ ಕೇಂದ್ರ ಸರ್ಕಾರ ಐದು ಕೆ ಜಿ ಉಚಿತ ಅಕ್ಕಿ ನೀಡುತ್ತಿದೆ. ಅದಕ್ಕೆ ಕಾಂಗ್ರೆಸ್‌ನವರು ತಮ್ಮ ಸೀಲು ಹಾಕಿಕೊಂಡರು. ಇವರದ್ದೊಂದು ಥರ ಊರ ಜನ ಹೇಳುವಂತೆ ನನ್ನ ತಟ್ಟೇದೂ ನನ್ನದೇ, ನಿನ್ನ ತಟ್ಟೇದೂ ನನ್ನದೇ ಎಂದು ಹೇಳಿಕೊಳ್ಳುವಂತೆ ಆಗಿದೆ. ಸಿಎಂ, ಡಿಸಿಎಂ ಸೇರಿಕೊಂಡು ಗ್ಯಾರಂಟಿ ಕಾರ್ಡ್ ಕೊಡುವಾಗ ಮುಂದಿನ ಸಮಸ್ಯೆ, ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡುವ ಕನಿಷ್ಠ ಜ್ಞಾನ ಇರಲಿಲ್ಲವೇ ಎಂದು ಅಶೋಕ್ ಕೇಳಿದರು.ಆರ್_ ಅಶೋಕ್

ಈ ಸುದ್ದಿ ಓದಿದ್ದೀರಾ?:ಕರ್ನಾಟಕದ ನೆಮ್ಮದಿಯ ನಾಳೆಗಳಿಗಾಗಿ ಬೇಕಿವೆ ಗ್ಯಾರಂಟಿಗಳು

ಕಾಂಗ್ರೆಸ್ ಬಂದಿರೋದು ಅಧಿಕಾರಕ್ಕೆ. ಅವರಿಗೆ ಅದಷ್ಟೇ ಮುಖ್ಯ. ಇವರಿಗೆ ಜನಾಡಳಿತ ಬೇಡ. ಇವರ ಆಡಳಿತ ನೋಡಿದರೆ ವರ್ಷದೊಳಗೆ ರಾಜ್ಯ ದಿವಾಳಿಯಾಗಬಹುದು ಎಂದ ಅಶೋಕ್, ಪಕ್ಷದ ಎಟಿಎಂ ತುಂಬುವುದಷ್ಟೇ ಇವರ ಕಾಳಜಿ ಎಂದ ಅಶೋಕ್, ಉಚಿತ ಅಂತ ಕೊಡೋದು ಅದರ ಡಬಲ್ ವಸೂಲಿ ಮಾಡಿಕೊಳ್ಳೋದು ಇವರ ಅಜೆಂಡಾ ಎಂದು ಕಾಂಗ್ರೆಸ್ ಕುಟುಕಿದರು.

120 ವರ್ಷದ ಜವಾಬ್ಧಾರಿ ಪಕ್ಷ ಯೋಜನೆ ತರುವಾಗ ಅದರ ಬಗ್ಗೆ ಯೋಚನೆ ಮಾಡಿ ಕೆಲಸ ಮಾಡಬೇಕು. ಯೋಜನೆ ರೂಪಿಸಬೇಕು. ಓಟಿಗಾಗಿ ಘೋಷಣೆ ಮಾಡಿ ಈಗ ಜನರಿಗೆ ಮೋಸ ಮಾಡುವುದೇ ಕಾಂಗ್ರೆಸ್. ನೀವು ಕೊಡುವದಕ್ಕೆ ನಾವು ಬೇಡ ಎನ್ನುವುದಿಲ್ಲ. ಆದರೆ ಲೆಕ್ಕಾಚಾರ ಇಲ್ಲದೆ ಮಾಡುವುದು ಸರಿ ಇಲ್ಲ. ಮೊದಲು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಆ ನಂತರ ಕೇಂದ್ರ ಸರ್ಕಾರವನ್ನು ದೂರಲಿ ಎಂದು ಅಶೋಕ್ ಹೇಳಿದರು.

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ಮೋಸದ ಭರವಸೆಗಳ ವಿರುದ್ದವೂ ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಜೂನ್ 19ರಂದು ಹೋರಾಟದ ಅಂತಿಮ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...