ಅತ್ಯಂತ ಸರಳ ಗಾಂಧಿವಾದಿ ಸಂಶೋಧಕ ಎಂ.ಎಂ. ಕಲಬುರಗಿ ಹತ್ಯೆಗೆ ಹತ್ತು ವರ್ಷಗಳು…

Date:

ಕಲಬುರಗಿಯವರು ಯಾರಿಗೂ ಹೆದರಿದ್ದವರಲ್ಲ. ಗುಲಗುಂಜಿಯಷ್ಟಾದರೂ ತನ್ನದಲ್ಲದ್ದನ್ನು ಮುಟ್ಟಿ ಕಿತ್ತುಕೊಂಡಿರಲಿಲ್ಲ. ಬದುಕಿದ್ದಾಗಲೂ ಕಿಡಿಗೇಡಿಗಳ ಕೆಡುನುಡಿ; ಸತ್ತಾಗಲೂ ಅವರದು ಅದೇ ಸುಡುನುಡಿ… ಈ ಹತ್ತು ವರ್ಷಗಳಲ್ಲಿ ಯಾವುದೂ ಬದಲಾಗಿಲ್ಲ...

…ಕುಲಪತಿ ಅವಧಿ ಮುಗಿದಿತ್ತು. ಅವರ ಬಗ್ಗೆ ಎಲ್ಲರಿಗೂ ಭಯವಿತ್ತು. ಆ ಭಯ ಕಳ್ಳತನದ ಭಯವಾಗಿತ್ತು. ಹಾಗಾಗಿ ಸದ್ಯ ಆ ಮುದುಕ ಹೋದ ಎಂದು ಕ್ಯಾಂಟೀನಿನ ಬಳಿ ಬೂಸಾ ವಿದ್ವಾಂಸರು ನಿರಾಳತೆಯ ಪ್ರದರ್ಶಿಸಿದ್ದರು. ನನಗೆ ಸಂಕಟವಾಯಿತು.

‘ಅಲ್ಲಯ್ಯಾ… ಯೋಗ್ಯತೆ ಇಲ್ಲದವರು… ಕಾಗುಣಿತ ಬರದವರು… ವಿವೇಕವೇ ಇಲ್ಲದವರೆಲ್ಲ, ಸಂಸ್ಕೃತಿ ಚಿಂತಕರು, ಸಂಶೋಧಕರು ಎಂದು ಮೀಸೆ ತಿರುಗುವ ಮಂದಿ ಮುಂದೆ ನೀನು ಎಲ್ಲ ಗೊತ್ತಿದ್ದರೂ ಏನೂ ಬೇಡ ಎಂದು ಕಾಲದ ಯಾವುದೋ ಹೊಡೆತಕ್ಕೆ ಜಾರಿ ತೂರಿ ಹೋಗುತ್ತಿದ್ದೀಯಲ್ಲಯ್ಯಾ… ಇದು ನ್ಯಾಯವೇ… ಅಂಬೇಡ್ಕರ್ ಅವರಿಂದ ನೀನು ಏನನ್ನೂ ಕಲಿಯಲಿಲ್ಲವೇ… ನೀನು ಬರೆಯಬೇಕಾದ್ದ ನೀನೇ ಬರೆಯಬೇಕು… ಅದನ್ನು ಬೇರೆಯವರು ಬರೆಯಲಾಗದು… ಬರೆಯಲೂ ಬಾರದು… ಛೇ…’ ಎಂದು ಉಳಿದಿದ್ದ ಮಾತುಗಳ ಆಡದೆ ನುಂಗಿಕೊಂಡಿದ್ದರು. ಅವತ್ತು ಅವರ ಮಾತು ನಾಟಿರಲಿಲ್ಲ.

ಕಲಬುರಗಿ ಅವರು ಯಾವ ಬೀಳ್ಕೊಡುಗೆಯನ್ನು ಬಯಸಿರಲಿಲ್ಲ. ಅತ್ಯಂತ ಸರಳ ಗಾಂಧಿವಾದಿ ಸಂಶೋಧಕ. ಯಾರಿಗೂ ಹೆದರಿದ್ದವರಲ್ಲ. ಗುಲಗುಂಜಿಯಷ್ಟಾದರೂ ತನ್ನದಲ್ಲದ್ದನ್ನು ಮುಟ್ಟಿ ಕಿತ್ತುಕೊಂಡಿರಲಿಲ್ಲ. ಕ್ಯಾಂಪಸ್ಸಿನಿಂದ ಧಾರವಾಡಕ್ಕೆ ಅವರೇ ಒಂದು ಸರ್ಕಾರಿ ಬಸ್ಸು ಹಾಕಿಸಿದ್ದರು. ಬಾಂಧವ್ಯದ ಸೇತುವೆಯಂತೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಕನ್ನಡ ನಾಡಿಗೆ ಗೌರವ ತಂದ ಬಾನು ಮುಷ್ತಾಕ್‌ಗೆ ಅಗೌರವ ಸರಿಯಲ್ಲ

ಆ ಬಸ್ಸಿಗಾಗಿ ಕಾಯುತ್ತ ರಸ್ತೆ ಬದಿಯ ಒಂದು ಮರದ ಕೆಳಗೆ ರಣಬಿಸಿಲಲ್ಲಿ ತಮ್ಮ ಮಡದಿ ಅವರನ್ನೂ ಕಟ್ಟಿಕೊಂಡು ನಿಂತಿದ್ದರು, ಧಾರವಾಡದ ಸ್ವಂತ ಮನೆಗೆ ತೆರಳಲು. ಕಾರಲ್ಲಿ ಹೋಗಬಹುದಿತ್ತು. ಬೇಡ ಎಂದಿದ್ದರು. ತಡೆಯಲಾಗಲಿಲ್ಲ. ಹತ್ತಿರ ಹೋಗಿ ಕೈ ಮುಗಿದೆ. ‘ಏನಪ್ಪಾ: ಈಗ ಬಂದೀ ಪಯಣ ಮಾಡೋವಾಗ…’ ಎನ್ನುತ್ತಿದ್ದಂತೆಯೇ ಆ ಬಸ್ಸು ಬಂದೇ ಬಿಟ್ಟಿತು. ತಾವೇ ಪುಟ್ಟ ಟ್ರಂಕನ್ನು ಬಸ್ಸಲ್ಲಿ ಇಟ್ಟುಕೊಂಡು ತಮ್ಮ ಹೆಂಡತಿಯ ಬಸ್ಸೇರಿಸಿ ‘ಬರ್ತೀನಪ್ಪಾ’ ಎಂದು ಕೈ ಬೀಸಿದರು.

ಕಣ್ಣು ಒದ್ದೆಯಾದವು. ಕೃತಜ್ಞಹೀನ ಜನರ ನಡೆತೆಗೆ ತಲೆ ತಗ್ಗಿಸಿದೆ. ಈ ಲೋಕವೇ ಹೀಗೆ… ಬದುಕಿದ್ದಾಗ ಬೈಯ್ಯೋದು; ಸತ್ತಾಗ ಹೊಗಳೋದು… ಅಂತಹ ಎಷ್ಟೊಂದು ಜನರ ಕಂಡಿರುವೆ… ನಾನು ಸತ್ತಾಗ… ನನ್ನದೇ ಬೇರೆ! ಬದುಕಿದ್ದಾಗಲೂ ಕಿಡಿಗೇಡಿಗಳ ಕೆಡುನುಡಿ; ಸತ್ತಾಗಲೂ ಅವರದು ಅದೇ ಸುಡುನುಡಿ… ಅದಕ್ಕೂ ಪಡೆದು ಬಂದಿರಬೇಕು ಬಿಡು ಎಂದು ಕೂತೇ ಇದ್ದೆ. ಅವರದೇ ಮಾತು ವಿಚಾರ ವ್ಯಕ್ತಿತ್ವ ಕಾಡುತಿದ್ದವು.

-ಮೊಗಳ್ಳಿ ಗಣೇಶ್
(‘ನಾನೆಂಬುದು ಕಿಂಚಿತ್ತು’ ಆತ್ಮಕಥನದಿಂದ ಆಯ್ದ ಭಾಗ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...