ಹಾಸನ ಮಣ್ಣಿನ ಹೆಣ್ಣು ಬೇರುಗಳು | ಮೈಸೂರು ಸಾಂಪ್ರದಾಯಿಕ ಕಲೆಗೆ ಮೆರುಗು ತಂದ- ಪ್ರಭಾ ಮಲ್ಲೇಶ್

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...

ಕರ್ನಾಟಕದ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ದೊಡ್ಡ ಹೆಸರು ಮಾಡಿದವರು ಶ್ರೀಮತಿ ಪ್ರಭಾ ಮಲ್ಲೇಶ್. ಇವರು ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ಮಿಕ ಸಂಬಂಧಿತ ಪ್ರಕರಣಗಳನ್ನು ನಡೆಸುವ ಪ್ರಸಿದ್ಧ ವಕೀಲರಾದ ಸಕಲೇಶಪುರ ತಾಲೂಕು ಅತ್ತಿಹಳ್ಳಿಯ ಎ.ಎಂ.ಮಲ್ಲೇಶ್ ಅವರ ಪತ್ನಿ. ಚಿಕ್ಕಮಗಳೂರು ಜಿಲ್ಲೆಯ ದುರ್ಗದ ಹಳ್ಳಿ ಎಂಬ ಮಲೆನಾಡಿನ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದರೂ ಮದುವೆಯಾಗಿ ಬೆಂಗಳೂರು ಸೇರಿದ ನಂತರ ಪ್ರಭಾ ಅವರು ಕಲೆಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡರು. ಅಂದಿಗೆ ಬೆಂಗಳೂರಿನಲ್ಲಿ ಮಲೆನಾಡು ಭಾಗದವರ ಮನೆಗಳು ಇದ್ದಿದ್ದೇ ಬೆರಳೆಣಿಕೆಯಷ್ಟು. ಹೀಗಾಗಿ ಅವರ ಮನೆಯಲ್ಲಿ ಸದಾ ನೆಂಟರಿಷ್ಟರು, ಶಿಕ್ಷಣ ಪಡೆಯಲು ಊರಿಂದ ಬಂದು ನೆಲಸಿದ ಅಣ್ಣ ತಮ್ಮಂದಿರ ಮಕ್ಕಳು ಹಾಗೂ ತನ್ನ ಮಕ್ಕಳು ಇದ್ದೇ ಇರುತ್ತಿದ್ದರು. ಹೀಗೆ ಸಂಸಾರ ತಾಪತ್ರಯದಲ್ಲೇ ಅವರ ಕಲೆಯ ಆಸಕ್ತಿ ಹಾಗೆಯೇ ಉಳಿದಿತ್ತು. ನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಗುರು ವೈ.ಸುಬ್ರಮಣ್ಯನ್ ರಾಜು ಅವರ ಸಂಪರ್ಕ ಸಿಕ್ಕು, ಅವರ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ತರಬೇತಿ ಪಡೆದರು. ನಂತರ ಹಿಂತಿರುಗಿ ನೋಡಲೇ ಇಲ್ಲ! ಸಾಮಾನ್ಯ ಗೃಹಿಣಿಯೋರ್ವರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆಯುವಷ್ಟು ಬೆಳೆದರೆಂದರೆ ಅದೊಂದು ಅಚ್ಚರಿ. ಪ್ರಭಾ ಅವರ ಶ್ರಮ ಮತ್ತು ಶ್ರದ್ಧೆಯನ್ನು ಮೆಚ್ಚಲೇಬೇಕು.

ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಇದೇನಿದು? ಎಂದು ಹಲವರಿಗೆ ಆಶ್ಚರ್ಯವಾಗಬಹುದು. ಚರಿತ್ರೆ, ಪೌರಾಣಿಕ ಕತೆಯಾಧಾರಿತ ಚಿತ್ರ ರಚಿಸಿಕೊಂಡು, ತೆಳುವಾದ ಚಿನ್ನದ ಎಲೆಯನ್ನು ಅಂಟಿಸುವ ಈ ವಿಶೇಷ ಕಲೆಗೆ ಅಂದಿನ ಮೈಸೂರು ಅರಸರ ಪ್ರೋತ್ಸಾಹವೇ ಕಾರಣವಾಗಿತ್ತು. ನೋಡುವುದಕ್ಕೆ ಸುಲಭವೆನಿಸಿದರೂ, ರಚನೆಗೆ ತುಂಬಾ ಶ್ರದ್ಧೆ ಮತ್ತು ಶ್ರಮ ಬೇಕು.   ಮೊದಲಿಗೆ ಹಾರ್ಡ್ ಡ್ರಾಯಿಂಗ್ ಬೋರ್ಡ್ ಮೇಲೆ ಡ್ರಾಯಿಂಗ್ ಪೇಪರ್ ಇಟ್ಟು ಬೇಕಾದ ಚಿತ್ರವನ್ನು ರಚಿಸಿಕೊಳ್ಳಬೇಕು. ನಂತರ ಲೆಡ್ ಪೌಡರ್ ಉಪಯೋಗಿಸಿ ತಯಾರಿಸಿದ ಜೆಸ್ಸೋಗ್ಯಾಂಬೋಸ್ ಮತ್ತು ಅರೇಬಿಕ್ ಗಮ್ ಉಪಯೋಗಿಸಿ ಸೂಕ್ಷ್ಮ ಬ್ರಷ್‌ನಿಂದ ಕೃತಿಯ ಆಯ್ದ ಭಾಗಗಳ ಮೇಲೆ ಬಣ್ಣ ಹಚ್ಚಿಕೊಳ್ಳಬೇಕು. ನಂತರ ಚಿತ್ರದ ಮುಖ್ಯ ಭಾಗಗಳ ಎಂಬೋಸ್ ಮಾಡಿಕೊಂಡು, 22 ಕ್ಯಾರೆಟ್‌ನ ಚಿನ್ನದ ತೆಳು ಹಾಳೆಯನ್ನು ಆಕಾರಕ್ಕೆ ತಕ್ಕಂತೆ ಕತ್ತರಿಸಿಕೊಂಡು ಅಂಟಿಸುತ್ತಾ ಬರಬೇಕು. ಚಿತ್ರದ ಬೇರೆ ಭಾಗಗಳಲ್ಲಿ ವಾಟರ್ ಕಲರ್ ಬಳಸಿ ಸಿದ್ಧಪಡಿಸಿಕೊಳ್ಳಬೇಕು.

ಈ ಲೇಖನ ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚರಿತ್ರೆಯ, ಪೌರಾಣಿಕ ಕತೆಗಳ ಅಗಾಧ ಜ್ಞಾನವೂ ಇದಕ್ಕೆ ಇರಬೇಕು. ಈ ಕಥೆಗಳ ಪಾತ್ರದ ಪ್ರತಿಯೊಂದು ರೂಪದ ಭಾವ, ಭಂಗಿ, ನೃತ್ಯದ ಶೈಲಿ, ಹೆಜ್ಜೆ, ಆಭರಣಗಳ, ಸಲಕರಣೆಗಳ, ವೇಷಭೂಷಣಗಳಿಗೆ ಲೋಪಬಾರದಂತೆ ಚಿತ್ರಿಸುವುದೂ ಬಹಳ ಅಗತ್ಯ. ಪ್ರತಿಯೊಂದೂ ಸೂಕ್ಷ್ಮ ಕುಸುರಿ ಕೆಲಸವಾಗಿರುವುದರಿಂದ ಸಹನೆ, ಶ್ರದ್ಧೆಯಿಂದ ಮಾಡಬೇಕು. ಇದರಲ್ಲಿ 22 ಕ್ಯಾರೆಟ್ಟಿನ ಚಿನ್ನದ ತೆಳು ಹಾಳೆಯನ್ನು ಉಪಯೋಗಿಸುವುದರಿಂದ, ಚಿನ್ನದ ಬೆಲೆಯೂ ದುಬಾರಿಯಾಗಿ, ಈ ಕಲೆ ಈಗ ನಶಿಸುವ ಆತಂಕದಲ್ಲಿದೆ.

”ನಮ್ಮ ತಾತನವರು ಆ ದಿನಗಳಲ್ಲಿ ಕಲಾವಿದರನ್ನು ನಮ್ಮ ಮನೆಗಳಿಗೆ ಕರೆಯಿಸುತ್ತಿದ್ದರು. ಇದರಿಂದಾಗಿ ನಮಗೆ ಕಲೆಯ ಕುರಿತು ಪ್ರೇರಣೆ ಸಿಕ್ಕಿ ಈ ಪಾರಂಪರಿಕ ಕಲೆಯನ್ನು ಕಲಿಯಲು ಸಾಧ್ಯವಾಯಿತು. ಈ ಕಲೆ ಮುಂದಿನ ಪೀಳಿಗೆಯವರಿಗೂ ದಾಟಿಸುವ ಕೆಲಸ ಆಗಬೇಕು ಎನ್ನುತ್ತಾರೆ” ಪ್ರಭಾ ಮಲ್ಲೇಶ್.

ಇತ್ತೀಚೆಗಷ್ಟೇ ಪ್ರದರ್ಶಿತಗೊಂಡ ‘ಶುಕಭಾಷಿಣಿ’, ‘ಶುಕ ಶೃಂಗಾರ’ ಎಂಬ ಅವರ ಕಲಾಪ್ರದರ್ಶನವು, ಹೊಸ ಹೊಸ ದೃಶ್ಯಗಳನ್ನು ಈ ಶೈಲಿಗೆ ಅಳವಡಿಸಿಕೊಳ್ಳುವ ಮೂಲಕ ಪರಂಪರೆಗೆ ಹೊಸ ಆಯಾಮವನ್ನು ನೀಡುವಂತಾಗಿದೆ. ರಾಮಾಯಣ, ವಿಶ್ವರೂಪ ದರ್ಶನ, ಶ್ರೀಕೃಷ್ಣ ಬಾಲ ಲೀಲೆ, ಶ್ರೀರಾಮ ಪಟ್ಟಾಭಿಷೇಕ ಸೇರಿದಂತೆ ಇನ್ನು ಕೆಲವು ಕಲಾಕೃತಿಗಳಲ್ಲಿನ ಪ್ರಭಾ ಅವರ ನಿರ್ವಹಣೆ ಅತಿ ಸುಂದರವೆಂದು ಕಲಾವಿಮರ್ಶಕರು ಮೆಚ್ಚುಗೆ ಸೂಚಿಸುತ್ತಾರೆ. ಪ್ರಭಾ ಮಲ್ಲೇಶ್ ಅವರ ಕಲಾಪ್ರತಿಭೆ ಮತ್ತು ಚಿತ್ರ ಪ್ರದರ್ಶನಗಳು ಜನ ಮೆಚ್ಚುಗೆಗೆ ಪಾತ್ರವಾಗಿವೆ. 83 ವರ್ಷದ ಈ ಇಳಿವಯಸ್ಸಿನಲ್ಲಿಯೂ, ತಮ್ಮ ವಯೋಸಹಜ ಸಮಸ್ಯೆಗಳ ನಡುವೆಯೂ ಅವರು ಕಲಾಕೃತಿಗಳ ರಚನೆಯಲ್ಲಿ ತೊಡಗಿರುತ್ತಾರೆ ಎನ್ನುವುದಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿದೆ.

prabha1
ಶುಕಭಾಷಿಣಿ ಕಲೆ ಮತ್ತು ಪ್ರಭಾ ಮಲ್ಲೇಶ್

ಪ್ರಭಾ ಅವರು ಸ್ವತಹ ಕಲೆಯ ಪರಿಣಿತಿ ಪಡೆದದ್ದಲ್ಲದೆ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಈ ಕಷ್ಟದ ಮೈಸೂರು ಸಾಂಪ್ರದಾಯಿಕ ಕಲೆಯನ್ನು ಕಲಿಸಿದ್ದಾರೆ. 1988ರಲ್ಲಿ ಕಲಿಯಲು ಪ್ರಾರಂಭಿಸಿ 1992ರಲ್ಲಿಯೇ ತಮ್ಮ ‘ಶ್ರೀರಾಮ ಪಟ್ಟಾಭಿಷೇಕ’ ಕಲಾಕೃತಿಗೆ ರಾಜ್ಯ ಪ್ರಶಸ್ತಿ ಗಳಿಸಿಕೊಂಡರು. ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರೇ ಪ್ರದಾನ ಮಾಡಿದ್ದರು. 1995ರ ಹೊತ್ತಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಸ್ವಂತ ಚಿತ್ರಗಳ ಪ್ರದರ್ಶನ ಮಾಡಿ ಹಣ ಸಂಪಾದನೆ ಮಾಡುವಷ್ಟರ ಮಟ್ಟಿಗೆ ತಮ್ಮ ಕಲಾ ಕೌಶಲ್ಯವನ್ನು ಬೆಳೆಸಿಕೊಂಡರು. ನಿರಂತರ ಕಲಾಭ್ಯಾಸದಿಂದಾಗಿ 1999ರಲ್ಲಿ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿದರು! ಇಲ್ಲಿಯವರೆಗೆ ಸುಮಾರು 400ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದಾರೆ. ಇವರ ಸಾಧನೆಯ ವಿವರವನ್ನು ನೋಡಿದರೆ ಇವರ ಚಿತ್ರ ಕಲೆಯ ಹಿರಿಮೆಯನ್ನು ತಿಳಿಯಬಹುದು.

ಇದನ್ನು ಓದಿದ್ದೀರಾ?: ಶಿಕ್ಷಣ, ಶಿಸ್ತು, ಸಮಯ ಪ್ರಜ್ಞೆಯ ಹನುಮಮ್ಮ

ಪ್ರಭಾ ಅವರು ದೇಶ ವಿದೇಶಗಳಲ್ಲಿ ತಮ್ಮ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ- ಭಾರತೀಯ ವಿದ್ಯಾಭವನ, ಲಂಡನ್‌ನ ಎ.ಆರ್.ಗ್ಯಾಲರಿ, ಶಿಕಾಗೋ ಇಲಿನಾಯ್ಸ್ ಅಮೆರಿಕಾ, ಚೆನ್ನೈ, ಕೊಲ್ಕತ್ತಾ, ದೆಹಲಿ, ಹೈದರಾಬಾದ್, ಬೆಂಗಳೂರಿನ ಚಿತ್ರಕಲಾ ಪರಿಷತ್, ಮೈಸೂರು ದಸರಾ ವಸ್ತುಪ್ರದರ್ಶನ, ಲಲಿತ ಕಲಾ ಅಕಾಡೆಮಿ, ನ್ಯಾಷನಲ್ ಅವಾರ್ಡ್ಸ್ ಪ್ರದರ್ಶನ, ಐವತ್ತನೆಯ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ… ಹೀಗೆ ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನೂ ನಡೆಸಿದ್ದಾರೆ.

ಪ್ರಭಾ ಅವರಿಗೆ ಸಂದ ಪ್ರಶಸ್ತಿಗಳು ಹಲವಾರು. ಅದರಲ್ಲಿ ಮುಖ್ಯವಾದುವು: 1992ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, 1993ರಲ್ಲಿ ಚಿತ್ರಕಲಾ ಪರಿಷತ್ತಿನ ರಾಷ್ಟ್ರೀಯ ಪ್ರದರ್ಶಕರ ಪ್ರಶಸ್ತಿ, 1995, 1997 ಹೀಗೆ ಎರಡು ಬಾರಿ ರಾಷ್ಟ್ರೀಯ ಮೆರಿಟ್ ಸರ್ಟಿಫಿಕೇಟ್, 1999ರಲ್ಲಿ ರಾಷ್ಟ್ರಪ್ರಶಸ್ತಿ, 2003ರಲ್ಲಿ ಕರ್ನಾಟಕ ಕಲಾಮೇಳ ಪ್ರಶಸ್ತಿ, 2013ರ ಕರಕುಶಲ ಕಲೆಗಾಗಿ ಅತ್ಯುನ್ನತ ‘ಶಿಲ್ಪಗುರು ರಾಷ್ಟ್ರ ಪ್ರಶಸ್ತಿ’. ಇದಲ್ಲದೇ ಇವರ ಸುಖ ಶೃಂಗಾರ ಮತ್ತು ಯಶೋಧಾ ಕೃಷ್ಣ ಚಿತ್ರಕಲೆಯನ್ನು ಕರ್ನಾಟಕ ಸರಕಾರ ಪೋಸ್ಟ್ ಕಾರ್ಡ್‌ಗೆ ಕೂಡ ಬಳಸಿರುವುದು ಹೆಗ್ಗಳಿಕೆಯಾಗಿದೆ. ಇದೇ 2026ರ ಜನವರಿ ಎರಡನೆಯ ವಾರದಲ್ಲಿ ಪ್ರಭಾ ಮಲ್ಲೇಶ್ ಅವರ ಕಲಾ ಜೀವನದ ಕುರಿತ ‘Rooted in Gold’ ಪುಸ್ತಕ ಬಿಡುಗಡೆ ಸಹ ಆಯಿತು. ಅವರಿಂದ ಕಲಾ ಕ್ಷೇತ್ರಕ್ಕೆ ಇನ್ನೂ ಉನ್ನತ ಕೊಡುಗೆ ದಕ್ಕಲಿ ಎಂದು ಹಾರೈಸೋಣ.

-ಅತ್ತಿಹಳ್ಳಿ ದೇವರಾಜ್

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...