ಭಾರತೀಯ ಮಹಿಳಾ ಕ್ರಿಕೆಟ್‌ನ ಮಿಂಚು: ಹರ್ಮನ್​ಪ್ರೀತ್ ಕೌರ್

Date:

'ಯಾವತ್ತೂ ಕನಸು ಕಾಣುವುದನ್ನು ನಿಲ್ಲಿಸಬೇಡಿ. ನಿಮ್ಮ ಅದೃಷ್ಟ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಿಮಗೆ ಗೊತ್ತಿರುವುದಿಲ್ಲ' ಎಂದ ಹರ್ಮನ್​ಪ್ರೀತ್ ಕೌರ್, ದೇಶದ ಹೆಣ್ಣುಮಕ್ಕಳ ಸ್ಫೂರ್ತಿಯ ಸೆಲೆಯಾಗಿದ್ದಾರೆ...

ಭಾರತ ಮಹಿಳಾ ಕ್ರಿಕೆಟ್ ತಂಡ 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು. ಆಗ ಅವರ ಕೈಯಲ್ಲಿ ಯಾವ ಟ್ರೋಫಿಯೂ ಇರಲಿಲ್ಲ. ಆದರೆ, ನವೆಂಬರ್ 5, 2025ರಂದು ಪ್ರಧಾನಿಯನ್ನು ಭೇಟಿ ಮಾಡಿದ ಮಹಿಳಾ ಕ್ರಿಕೆಟ್ ತಂಡ, ‘ಟ್ರೋಫಿಯೊಂದಿಗೆ ಬಂದಿದ್ದೇವೆ, ಇನ್ನುಮುಂದೆ ಪ್ರಧಾನಿಯನ್ನು ಮತ್ತೆ ಮತ್ತೆ ಭೇಟಿಯಾಗುತ್ತೇವೆ’ ಎಂಬ ಆತ್ಮವಿಶ್ವಾಸದಿಂದ ಬೀಗಿತ್ತು.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಈ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದ್ದು ನಾಯಕಿ ಹರ್ಮನ್​ಪ್ರೀತ್ ಕೌರ್. ಇಡೀ ತಂಡ ಪ್ರಧಾನಿಗಳ ಮುಂದೆ ಹೆಮ್ಮೆಯಿಂದ ನಿಂತಿತ್ತು. ಅದಕ್ಕೆ ಕಾರಣ 2017ರ ಸೋಲು. ಆ ಸೋಲು, ಪಾಠ ಕಲಿಸಿತ್ತು, ಪುಟಿದೇಳುವಂತೆ ಮಾಡಿತ್ತು, ಇಂದಿನ ಗೆಲುವಿಗೆ ಕಾರಣವಾಗಿ ಪುಳಕಗೊಳಿಸಿತ್ತು. 2017ರಲ್ಲಿ ವುಮನ್ಸ್ ಕ್ರಿಕೆಟ್ ವರ್ಲ್ಡ್ ಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಕೇವಲ 8 ರನ್‌ಗಳಿಂದ ಸೋಲನನುಭವಿಸಿದಾಗ ನಾಯಕಿ ಮಿಥಾಲಿ ರಾಜ್, ನಿರಾಸೆಗೊಳಗಾಗಿ ನಾಯಕತ್ವದಿಂದ ಕೆಳಗಿಳಿದಿದ್ದರು. ಆಕೆಯ ನಂತರ, 2018ರಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಕೌರ್, ಅಂದು ಕೈತಪ್ಪಿದ ಟ್ರೋಫಿಯನ್ನು ಇಂದು ಎತ್ತಿ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸಿದರು.

PTI11 03 2025 000066B 1

ನವೆಂಬರ್ 2, 2025ರಂದು ನಡೆದ ವುಮನ್ಸ್ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಕೌರ್ ಬಳಗ ಸೋಲಿಸಿತ್ತು. ಭಾರತಕ್ಕೆ ಮೊದಲ ICC ವುಮನ್ಸ್ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದುಕೊಟ್ಟಿತ್ತು. ಅಂದಿನ ಆ ಫೈನಲ್ ಪಂದ್ಯ ನಾಯಕಿ ಕೌರ್ ಮೇಲೆ ವಿಪರೀತ ಒತ್ತಡ ಹಾಕಿತ್ತು. ಆದರೂ ಕೌರ್ ಮೈದಾನದಲ್ಲಿ ಶಾಂತಚಿತ್ತರಾಗಿದ್ದರು, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಕೌರ್ ನಾಯಕತ್ವ ಮತ್ತು ತಂಡದ ಆಟಗಾರರನ್ನು ಬಳಸಿಕೊಂಡ ವಿಧಾನ ವಿಶ್ಲೇಷಕರ ಪ್ರಶಂಸೆಗೆ ಪಾತ್ರವಾಗಿತ್ತು. ಅದರಲ್ಲೂ ದೀಪ್ತಿ ಶರ್ಮಾರ ಬೌಲಿಂಗ್‌ನಲ್ಲಿ ಡೆನಿನ್ ಡಿ ಕ್ಲರ್ಕ್ ಎತ್ತಿದ ಕ್ಯಾಚನ್ನು ಕೈಬೆರಳುಗಳಲ್ಲಿ ಬಂಧಿಸಿದ ರೀತಿ ಅದ್ಭುತವಾಗಿತ್ತು. ಕೌರ್ ಕೈಯಲ್ಲಿ ಬಾಲಲ್ಲ, ಅದು ಟ್ರೋಫಿಯನ್ನೇ ಎತ್ತಿ ಹಿಡಿದಂತೆ ಭಾಸವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ‘ಪುರುಷರ ತಂಡ ಎಂದಿಗೂ ಹೀಗೆ ಮಾಡಿಲ್ಲ’ ಎಂದಿದ್ದೇಕೆ ಆರ್ ಅಶ್ವಿನ್?

ಪಂಜಾಬಿನ ಮೋಗಾದಲ್ಲಿ ಮಾರ್ಚ್ 8, 1989ರಂದು ಜನಿಸಿದ ಹರ್ಮನ್​ಪ್ರೀತ್ ಕೌರ್, ಬಾಲ್ಯದಲ್ಲಿಯೇ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಕನಸು ಕಂಡಿದ್ದರು. ಅದಕ್ಕೆ ಪೂರಕವಾಗಿ ತಂದೆ ಹರ್ಮಂದರ್ ಸಿಂಗ್ ಭುಲ್ಲರ್- ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಟಗಾರ- ಮುರಿದ ಕ್ರಿಕೆಟ್ ಬ್ಯಾಟ್ ಕೊಟ್ಟು ‘ಕ್ರಿಕೆಟ್ ಆಡಿ ಭಾರತ ಗೆಲ್ಲಿಸು’ ಎಂದು ಪ್ರೋತ್ಸಾಹಿಸಿದರು. ಕನಸು ಕಾಣುವ, ನನಸು ಮಾಡಿಕೊಳ್ಳುವ ಹಾದಿ ಉದ್ದಕ್ಕೂ ಬೆಂಬಲವಾಗಿ ನಿಂತಿದ್ದರು.

ಆಡುತ್ತಾಡುತ್ತ ಕ್ರಿಕೆಟ್‌ನಲ್ಲಿ ಕರಗಿಹೋದ ಕೌರ್, ಮೊದಲಿಗೆ ಹುಡುಗರೊಂದಿಗೆ ಹುಡುಗನಾಗಿ ಆಡುತ್ತಿದ್ದರು. ಆನಂತರ ಗ್ಯಾನಜ್ಯೋತಿ ಸ್ಕೂಲ್ ಅಕಾಡೆಮಿಯ ಪುರುಷರ ತಂಡದಲ್ಲಿ ಒಬ್ಬರಾದರು. ಹುಡುಗರೊಂದಿಗಿನ ಆಟ ಮತ್ತು ಅನುಭವ, ಧೈರ್ಯಕ್ಕೆ ದಾರಿಯಾಯಿತು. ದಾಳಿ ಶೈಲಿ ರೂಢಿಸಿಕೊಳ್ಳಲು ರಹದಾರಿ ತೋರಿತು. ಸಿಕ್ಸ್ ಎತ್ತುವ ಕಲೆ ಕರಗತವಾಯಿತು. ಸಿಕ್ಸ್ ಎಂದಾಕ್ಷಣ ಕೌರ್ ತಲೆಯಲ್ಲಿ ತೇಲುತ್ತಿದ್ದುದು- ವಿರೇಂದ್ರ ಸೆಹ್ವಾಗ್ ಶೈಲಿ. ಆತನ ಆಟವನ್ನು ಧ್ಯಾನಿಸಿದ ಕೌರ್, ಆತನ ದಾಳಿ ಶೈಲಿಯನ್ನು ಅಳವಡಿಸಿಕೊಂಡರು, ಮಾದರಿಯನ್ನಾಗಿ ಮಾಡಿಕೊಂಡರು. ಸಶಕ್ತ ಆಟಗಾರ್ತಿಯಾಗಿ ಹೊರಹೊಮ್ಮಿದರು.

2009ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಕೌರ್, ನಿಧಾನವಾಗಿ ನೆಲೆಯೂರಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚತೊಡಗಿದರು. 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಂಚುರಿ ಬಾರಿಸಿ, ಬೆರಗು ಮೂಡಿಸಿದರು. ಅದು T20 ಪಂದ್ಯದಲ್ಲಿ ಮೊದಲ ಭಾರತೀಯ ಮಹಿಳಾ ಸೆಂಚುರಿ ಎಂದು ದಾಖಲೆ ಬರೆಯಿತು. ಆ ನಂತರ 2017ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ವರ್ಲ್ಡ್ ಕಪ್ ಸೆಮಿಫೈನಲ್‌ನಲ್ಲಿ 171 ರನ್ ಪೇರಿಸುವ ಮೂಲಕ ಏಕದಿನ ಪಂದ್ಯದಲ್ಲಿ 2ನೇ ದೊಡ್ಡ ಮೊತ್ತ ಕಲೆಹಾಕಿದ ಕೀರ್ತಿಗೆ ಭಾಜನರಾದರು. ಆ ಸಾಧನೆ ಅವರನ್ನು 2018ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ನೇಮಕಗೊಳ್ಳಲು ನೆರವಾಯಿತು.  

ಅಲ್ಲಿಂದ ಇಲ್ಲಿಯವರೆಗೆ ಏರುಗತಿಯಲ್ಲಿ ಸಾಗಿದ ಕೌರ್, ಮಧ್ಯ ಕ್ರಮಾಂಕದಲ್ಲಿ ಆಡುವ ಆಟಗಾರ್ತಿಯಾಗಿ, ತಂಡದ ಬೆನ್ನೆಲುಬಾಗಿ ನಿಂತರು. ದಾಳಿ ಮತ್ತು ಆಕರ್ಷಕ ಹೊಡೆತಗಳಿಗೆ ಹೆಸರಾದರು. ಬರೀ ಬ್ಯಾಟಿಂಗಷ್ಟೇ ಅಲ್ಲ, ಆಫ್ ಸ್ಪಿನ್ ಮತ್ತು ಮೀಡಿಯಂ ಪೇಸ್ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾದರು. ಒತ್ತಡದಲ್ಲಿ ಆಡುವ, ಎದುರಾಳಿ ತಂಡದ ತಂತ್ರಗಳನ್ನು ಅರಿತು ಸಡ್ಡು ಹೊಡೆಯುವ, ಯುವ ಆಟಗಾರ್ತಿಯರನ್ನು ಹುರಿದುಂಬಿಸುವ, ಬೆಂಬಲಿಸುವ ನೆಚ್ಚಿನ ನಾಯಕಿ ಎನಿಸಿಕೊಂಡರು.

ಈಗ, ಭಾರತ ತಂಡದ ಕನಸಾಗಿಯೇ ಉಳಿದಿದ್ದ ವುಮನ್ಸ್ ವರ್ಲ್ಡ್ ಕಪ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಚಾಂಪಿಯನ್ಸ್ ಪಟ್ಟಕ್ಕೇರಿಸಿದರು. ಈ ಸ್ಮರಣೀಯ ಗೆಲುವನ್ನು ಶಾಶ್ವತವಾಗಿಸಲು ಕೌರ್, ತಮ್ಮ ತೋಳಿನ ಮೇಲೆ ವಿಶ್ವಕಪ್ ಟ್ರೋಫಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೌರ್, ‘ಇದು ನನ್ನ ಚರ್ಮ ಮತ್ತು ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಹರ್ಮನ್​ಪ್ರೀತ್ ಕೌರ್ ಹಂಚಿಕೊಂಡಿರುವ ಫೋಟೋದಲ್ಲಿ ವಿಶ್ವಕಪ್ ಟ್ರೋಫಿಯ ಟ್ಯಾಟೂ ಜೊತೆಗೆ ವಿಶ್ವಕಪ್ ಗೆದ್ದ ವರ್ಷ ಹಾಗೂ 52 ಎಂಬ ಸಂಖ್ಯೆಯನ್ನು ಬರೆಸಿದ್ದಾರೆ. 52 ಎಂಬ ಸಂಖ್ಯೆಯೂ ಎರಡು ವಿಶೇಷತೆಗಳನ್ನು ಹೊಂದಿದೆ. ಮೊದಲನೆಯದ್ದು, 52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು; ಎರಡನೇಯದು, ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸಿ ಟ್ರೋಫಿ ಎತ್ತಿಹಿಡಿದಿರುವುದು.

harmanpreeth

ಇದನ್ನು ಓದಿದ್ದೀರಾ?: ಸಮಾನತೆ ಹೆಸರಿನಲ್ಲಿ ಮಹಿಳಾ ಕ್ರಿಕೆಟಿಗರಿಗೆ ತಾರತಮ್ಯ ಮಾಡಿದ ಬಿಸಿಸಿಐ 

ಹಾಗೆ ನೋಡಿದರೆ, ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯವೇ ನಿಜವಾದ ಫೈನಲ್ ಪಂದ್ಯದಂತಿತ್ತು. ಕ್ಷಣಕ್ಷಣಕ್ಕೂ ರೋಚಕ ತಿರುವುಗಳನ್ನು ಹೊಂದಿದ್ದು, ಭಾರತ ಮಹಿಳೆಯರಿಗೆ ಸವಾಲಿನ ಪಂದ್ಯವಾಗಿತ್ತು. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ದಾಖಲೆಯ ಗೆಲುವಿನಲ್ಲಿ ಭಾರತದ ನಾಯಕಿ ಕೌರ್ ಪ್ರಮುಖ ಪಾತ್ರ ವಹಿಸಿದ್ದರು. ಜೆಮಿಮಾ ರೋಡ್ರಿಗಸ್ ಅವರೊಂದಿಗೆ 167 ರನ್‌ಗಳ ಜೊತೆಯಾಟದಲ್ಲಿ, ‍ಕೌರ್ 88 ಎಸೆತಗಳಲ್ಲಿ 89 ರನ್‌ಗಳನ್ನು ಕಲೆಹಾಕಿ 339 ರನ್‌ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಲು ‍ನೆರವಾದರು. ಅದು ವಿಶ್ವಕಪ್‌ನ ನಾಕೌಟ್ ಪಂದ್ಯಗಳ ಪೈಕಿ ಬಹಳ ದೊಡ್ಡ ಚೇಸ್ ಎಂದು ದಾಖಲಾಗಿದೆ. ಆ ಪಂದ್ಯ ಗೆದ್ದ ಹುಮ್ಮಸ್ಸು ಮತ್ತು ವಿಶ್ವಾಸ, ಸೌತ್ ಆಫ್ರಿಕಾ ಎದುರಿನ ಫೈನಲ್ ಪಂದ್ಯವನ್ನು ಎದುರಿಸಲು, ಗೆಲುವನ್ನಾಗಿ ಪರಿವರ್ತಿಸಿಕೊಳ್ಳಲು ದಾರಿ ಮಾಡಿಕೊಟ್ಟಿತ್ತು.

ಸೌತ್ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯ ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೌರ್, ತಮ್ಮ ತಂದೆ ತುಂಡರಿಸಿ ಕೊಟ್ಟಿದ್ದ ಕ್ರಿಕೆಟ್ ಬ್ಯಾಟ್ ಹೇಗೆ ತನ್ನ ಬದುಕನ್ನು ಬದಲಿಸಿತು, ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿಯನ್ನಾಗಿ ರೂಪಿಸಿತು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದರು. ಹಾಗೆಯೇ 2017ರ ಸೆಮಿಫೈನಲ್‌ನಲ್ಲಿ 171 ರನ್ ಹೊಡೆದದ್ದನ್ನು ಹಾಗೂ ಪೈನಲ್‌ನಲ್ಲಿ ಕೇವಲ 8 ರನ್‌ಗಳಿಂದ ಸೋತದ್ದನ್ನು ನೆನಪು ಮಾಡಿಕೊಂಡರು. ಕೊನೆಗೆ ತಂದೆಯ ಮಾತಿಗೆ ಮರಳಿ, ‘ಯಾವತ್ತೂ ಕನಸು ಕಾಣುವುದನ್ನು ನಿಲ್ಲಿಸಬೇಡಿ. ನಿಮ್ಮ ಅದೃಷ್ಟ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಿಮಗೆ ಗೊತ್ತಿರುವುದಿಲ್ಲ’ ಎಂದು ದೇಶದ ಹೆಣ್ಣುಮಕ್ಕಳ ಕಣ್ಣಲ್ಲಿ ಕನಸು ಬಿತ್ತಿದರು. ಸ್ಫೂರ್ತಿಯ ಸೆಲೆಯಾದರು.

ಹೆಣ್ಣುಮಕ್ಕಳು ಎಂದಾಕ್ಷಣ, ಅದು ಬೇಡ, ಇದು ಬೇಡ ಎಂದು ಕಟ್ಟಿಹಾಕುವ; ಸಂಗೀತ-ನೃತ್ಯವೇ ಸಾಕು ಎನ್ನುವ; ಮದುವೆ-ಮನೆ-ಮಕ್ಕಳಿಗೆ ಸೀಮಿತವಾಗುವುದೇ ಸಾರ್ಥಕ ಬದುಕೆನ್ನುವ; ಎಷ್ಟೇ ಸಾಧನೆ ಮಾಡಿದರೂ ಸರಿಸಮಾನವಾಗಿ ಕಾಣದ, ಗೌರವಿಸದ, ಪುರಸ್ಕರಿಸದ ಕಾಲದಲ್ಲಿ- ಹರ್ಮನ್ ಪ್ರೀತ್ ಕೌರ್ ಅವರ ಪೋಷಕರು, ಆಕೆಯ ಇಷ್ಟದಂತೆ ಆಡಲು ಬಿಟ್ಟು ನೋಡುತ್ತಾ ಕೂತಿದ್ದಾರಲ್ಲ- ಅದೇ ಒಂದು ಚಂದದ ಕತೆ.   

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...