ಅಲ್ಲಿ ಸಂಭ್ರಮವೇ ಮೇಳೈಸಿತ್ತು. ಜಾತಿ-ಧರ್ಮ- ಪಂಥ -ವರ್ಗ- ವರ್ಣ ಭೇದವಿಲ್ಲದೆ ಅಲ್ಲಿ ಪುರುಷರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮಸೀದಿಯ ಒಳಗೊಂದು ಸುತ್ತು ಹಾಕಿದರು. ಮಸೀದಿಯ ಆವರಣದಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡಿ ಕಣ್ತುಂಬಿದರು....
ದಾವಣಗೆರೆ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮಸ್ಜಿದ್ ಎ ಮಹಮ್ಮದೀಯ ಮಸೀದಿಯಲ್ಲಿ "ನಮ್ಮೂರ ಮಸೀದಿ ನೋಡ ಬನ್ನಿ" ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾನವತೆ, ಭ್ರಾತೃತ್ವ ಮತ್ತು ಸೌಹಾರ್ದ ಸಂದೇಶ ಸಾರುವ ನಿಟ್ಟಿನಲ್ಲಿ...