ಹಲೋ ಯುಪಿಐ | ಧ್ವನಿ ಮೂಲಕ ಹಣ ಪಾವತಿಸುವ ಫೀಚರ್ ಶೀಘ್ರ ಪ್ರಾರಂಭ

Date:

ಪಠ್ಯದ ಬದಲು ಧ್ವನಿ ಆಧಾರಿತ ಮೂಲಕ ಯುಪಿಐಯಲ್ಲಿ ಪಾವತಿ ಸೇವೆಗಳನ್ನು ಶೀಘ್ರದಲ್ಲಿಯೇ ಪಡೆಯಬಹುದಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023ರ ಕಾರ್ಯಕ್ರಮದಲ್ಲಿ ಯುಪಿಐನಲ್ಲಿ ಧ್ವನಿ ಆಧಾರಿತ ಪಾವತಿ ಸೇವೆಯ ಹೊಸ ಫೀಚರ್‌ಗಳನ್ನು ಪ್ರಾರಂಭಿಸಿದ್ದಾರೆ.

‘ಹಲೋ ಯುಪಿಐ’ ಎಂದು ಹೇಳುವ ಮೂಲಕ ಬಳಕೆದಾರರು ಯುಪಿಐ ಆ್ಯಪ್‌ಗಳು, ದೂರವಾಣಿ ಕರೆಗಳು ಹಾಗೂ ಐಒಟಿ ಸಾಧನಗಳ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ತಿಳಿಸಿದೆ.

ಯುಪಿಐ ಮೂಲಕ ವಹಿವಾಟು ನಡೆಸಲು ಬಳಕೆದಾರರು ಇನ್ನು ಮುಂದೆ ಹಸ್ತಚಾಲಿತವಾಗಿ ಸಂದೇಶ ಕಳುಹಿಸುವ ಅಗತ್ಯವಿಲ್ಲ. ಪಾವತಿಗಳನ್ನು ಪೂರ್ಣಗೊಳಿಸಲು ಅವರು ಎಐ-ಚಾಲಿತ ಪರಿಹಾರದೊಂದಿಗೆ ಸರಳವಾಗಿ ಮಾತನಾಡಬಹುದು. ಇದು ನೇರ ಧ್ವನಿ ಕರೆ(ಆನ್‌ ಕಾಲ್‌) ಹಾಗೂ ಯುಪಿಐ ಆ್ಯಪ್‌ ಮೂಲಕ ಧ್ವನಿ ಸಂದೇಶದ ಮೂಲಕವೂ ಲಭ್ಯವಿರುತ್ತದೆ. ಆನ್‌ ಕಾಲ್‌ ಸೌಲಭ್ಯವು ಬಳಕೆದಾರರನ್ನು ನೇರವಾಗಿ ಕರೆ ಮಾಡಲು ಅನುಮತಿಸುತ್ತದೆ. ಆ್ಯಪ್‌ ಸೌಲಭ್ಯದ ವಿಧಾನವು ಧ್ವನಿ ಇನ್‌ಪುಟ್‌ಗಳ ಮೂಲಕ ಪಾವತಿ ಸೇವೆಗಳನ್ನು ಪಡೆಯಬಹುದು. ಇದಲ್ಲದೆ, ಸಾಧನವು ಮೌಖಿಕ ವಿನಂತಿಯನ್ನು ಗುರುತಿಸುತ್ತದೆ ಮತ್ತು ವಿನಂತಿಗೆ ಪ್ರತಿಕ್ರಿಯಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು

ಪಾವತಿ ಮಾಡುವ ವಿಧಾನ

  1. ಮೊದಲಿಗೆ ಬಳಕೆದಾರರು ‘ಹಲೋ ಯುಪಿಐ’ ಧ್ವನಿ ಸಂದೇಶವನ್ನು ಕಳುಹಿಸುತ್ತಾರೆ
  2. ಮುಂದಿನ ಹಂತದಲ್ಲಿ, ಸ್ವಯಂಚಾಲಿತ ಧ್ವನಿಯನ್ನು ಗುರುತಿಸುವಿಕೆಯ ಫೀಚರ್‌ ಕಾಣಿಸಿಕೊಂಡು. ಧ್ವನಿ ಆಜ್ಞೆಯನ್ನು ಪಠ್ಯವಾಗಿ ಪರಿವರ್ತಿಸಲಾಗುತ್ತದೆ.
  3. ಬಳಕೆದಾರರ ಸೇವೆಯ ಉದ್ದೇಶವನ್ನು ಪ್ರಾದೇಶಿಕ ಭಾಷೆಯ ಮೂಲಕ ಗ್ರಹಿಸಿ, ಧ್ವನಿ ಸೇವಾ ವಿಷಯವನ್ನು ಯಂತ್ರ ಅನುವಾದದ ಮೂಲಕ ಇಂಗ್ಲಿಷ್‌ಗೆ ಪರಿವರ್ತಿಸಲಾಗುತ್ತದೆ.
  4. ನಂತರದಲ್ಲಿ, ಯಂತ್ರವು ಬಳಕೆದಾರರ ಉದ್ದೇಶವನ್ನು ಪರಿಶೀಲಿಸುತ್ತದೆ.
  5. ಪರಿಶೀಲನೆ ಪೂರ್ಣಗೊಂಡ ನಂತರ, ಧ್ವನಿಯು ತಲುಪಬೇಕಾದ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಹಲೋ ಯುಪಿಐ’ ಧ್ವನಿ ಸಂದೇಶ ಸೇವೆಯು ಹೆಚ್ಚಾಗಿ ತಂತ್ರಜ್ಞಾನ ತಿಳಿಯದ, ಸ್ಮಾರ್ಟ್‌ ಫೋನ್‌ ಬಳಸದ, ಡಿಜಿಟಲ್ ಸಾಕ್ಷರತೆ ತಿಳಿಯದ ಬಳಕೆದಾರರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಎನ್‌ಸಿಪಿಐ ತಿಳಿಸಿದೆ.

ಇದರ ಜೊತೆಗೆ ಎನ್‌ಸಿಪಿಐ, ಯುಪಿಐ ಕ್ರೆಡಿಟ್ ಲೈನ್, ಲೈಟ್ ಎಕ್ಸ್, ಟ್ಯಾಪ್ ಅಂಡ್ ಪೇ, ಬಿಲ್ ಕನೆಕ್ಟ್, ವಾಯ್ಸ್ ಕಮ್ಯಾಂಡ್ ಫೀಚರ್‌ಗಳನ್ನು ಪರಿಚಯಿಸಿದೆ.

ಯುಪಿಐ ಕ್ರೆಡಿಟ್ ಲೈನ್

ಕ್ರೆಡಿಟ್ ಕಾರ್ಡ್​ಗಳಿಗೆ ನೀಡುವ ಮಿತಿ ಸಾಲ ಸೌಲಭ್ಯವನ್ನು ಯುಪಿಐ ಖಾತೆಗಳಿಗೆ ಕೊಡಲಾಗುತ್ತದೆ. ಯಾವ ಯುಪಿಐ ಖಾತೆಗೆ ಎಷ್ಟು ಕ್ರೆಡಿಟ್ ಮಿತಿ ಎಂಬುದನ್ನು ಆಯಾ ಬ್ಯಾಂಕ್​ನವರು ನಿರ್ಧರಿಸುತ್ತಾರೆ.

ಯುಪಿಐ ಲೈಟ್ ಎಕ್ಸ್

ಇದರಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದ ಅಥವಾ ಸಿಗ್ನಲ್ ದುರ್ಬಲ ಇರುವ ಸ್ಥಳಗಳಲ್ಲಿ ಆಫ್​ಲೈನ್ ಮೂಲಕ ಹಣವನ್ನು ಕಳುಹಿಸಲು ಇಂಟರ್ನೆಟ್ ಲೈಟ್ ಎಕ್ಸ್ ಫೀಚರ್ ಸಹಾಯವಾಗುತ್ತದೆ.

ಯುಪಿಐ ಟ್ಯಾಪ್ ಅಂಡ್ ಪೇ

ಕ್ಯೂಆರ್ ಕೋಡ್ ಅನ್ನು ಯುಪಿಐ ಆ್ಯಪ್​ನಿಂದ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸಾಮಾನ್ಯ ವಿಧಾನ. ಈಗ ಹೊಸ ಫೀಚರ್ ತರಲಾಗಿದ್ದು, ವರ್ತಕರ ಬಳಿ ಇರುವ ಎನ್​ಎಫ್​ಸಿ ಚಾಲಿತ ಕ್ಯುಅರ್ ಕೋಡ್​ಗಳನ್ನು ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲದೇ ಕೇವಲ ಒತ್ತಿದರೂ ಸಾಕು ಹಣ ಪಾವತಿಯಾಗುತ್ತದೆ. ನಿಯರ್ ಫೀಲ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿಯನ್ನು ಇಲ್ಲಿ ಬಳಸಲಾಗಿದೆ.

ಬಿಲ್​ಪೇ ಕನೆಕ್ಟ್

ಭಾರತದಾದ್ಯಂತ ಬಿಲ್ ಪಾವತಿಗಳಿಗಾಗಿ ರಾಷ್ಟ್ರೀಕೃತ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಸಂಖ್ಯೆಗೆ ಗ್ರಾಹಕರು ‘Hi’ ಎಂದು ಮೆಸೇಜ್ ಕಳುಹಿಸಿದರೆ ಬಿಲ್ ಪಾವತಿ ವ್ಯವಸ್ಥೆ ಪಡೆಯಬಹುದು. ಫೀಚರ್ ಫೋನ್ ಹೊಂದಿರುವವರು ಆ ನಂಬರ್​ಗೆ ಮಿಸ್ಡ್ ಕಾಲ್ ಕೊಟ್ಟರೂ ಕೂಡ ಬಿಲ್ ಪೇಮೆಂಟ್ ಮಾಡುವ ಅವಕಾಶ ಸಿಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50...

ವಾಟ್ಸಾಪ್‌ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌’ ಸುರಕ್ಷತೆ ಕೇವಲ ನಾಟಕವೇ? ಮೆಟಾ ವಿರುದ್ಧ ಗಂಭೀರ ಆರೋಪ

ವಿಶ್ವದಾದ್ಯಂತ ಕೋಟ್ಯಂತರ ಜನರು ನಂಬಿ ಬಳಸುತ್ತಿರುವ ವಾಟ್ಸಾಪ್‌ನ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್’ ಸುರಕ್ಷತಾ...

ಆಂಧ್ರಪ್ರದೇಶ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಕ್ಕೆ ಸರ್ಕಾರ ಚಿಂತನೆ​

ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ...

ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮಹಾ ಆಘಾತ: ಡಾರ್ಕ್ ವೆಬ್‌ನಲ್ಲಿ 1.75 ಕೋಟಿ ಜನರ ಖಾಸಗಿ ಮಾಹಿತಿ ಬಹಿರಂಗ?

ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ, ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣ...