ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಪ್ರಕಟ: ಏಕ ಕಾಲದಲ್ಲಿ ಎರಡು ಮೊಬೈಲ್ ನಂಬರ್ ಅಕೌಂಟ್ ಬಳಸುವ ಆಯ್ಕೆ

Date:

ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ಹೊಸ ಫೀಚರ್‌ ಪ್ರಕಟಿಸಲು ಮುಂದಾಗುತ್ತಿದೆ. ಇನ್ನು ಮುಂದೆ ವಾಟ್ಸಪ್‌ನಲ್ಲಿ ಏಕಕಾಲದಲ್ಲಿ ಎರಡು ಮೊಬೈಲ್ ನಂಬರ್‌ಗಳ ಅಕೌಂಟ್ ಬಳಸಿ ಸಂಹವನ ನಡೆಸಬಹುದು.

ಈ ಮೊದಲು ಎರಡು ನಂಬರ್‌ ಅಕೌಂಟ್ ಬಳಸಬೇಕಾದರೆ ಎರಡು ಮೊಬೈಲ್‌ಗಳನ್ನು ಇಟ್ಟುಕೊಳ್ಳಬೇಕಿತ್ತು ಅಥವಾ ಇನ್ನೊಂದು ನಂಬರ್‌ಗೆ ಲಾಗೌಟ್ ಮಾಡಿ ಬದಲಿಸಿಕೊಳ್ಳಬೇಕಿತ್ತು. ಈ ರೀತಿ ಮಾಡಿದರೆ ಮೊದಲು ಬಳಸುವ ಹಾಲಿ ನಂಬರ್‌ನ ಅಕೌಂಟ್ ಸಂಪರ್ಕ ಕೈತಪ್ಪುತ್ತಿತ್ತು. ಇನ್ನು ಮುಂದೆ ಒಂದೇ ಮೊಬೈಲ್‌ನಲ್ಲಿ ಎರಡು ವಾಟ್ಸಾಪ್ ನಂಬರ್‌ ಇಟ್ಟುಕೊಂಡು ಏಕಕಾಲದಲ್ಲಿ ಬಳಸಲು ಸಾಧ್ಯವಾಗುತ್ತದೆ.

ಈ ಹೊಸ ವೈಶಿಷ್ಟ್ಯವುಳ್ಳ ಫೀಚರ್‌ ಪರಿಚಯಿಸುವುದಾಗಿ ಸ್ವತಃ ಮೆಟಾ ಸಿಇಓ ಮಾರ್ಕ್‌ ಜುಕರ್‌ಬರ್ಗ್ ತಿಳಿಸಿದ್ದಾರೆ. ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಾಟ್ಸಾಪ್‌ನಲ್ಲಿ ಎರಡು ಅಕೌಂಟ್‌ಗಳ ನಡುವೆ ಬದಲಾಯಿಸಿಕೊಳ್ಳಿ. ಶೀಘ್ರದಲ್ಲೇ ನೀವು ಅಪ್ಲಿಕೇಶನ್‌ನಲ್ಲಿ ಒಂದು ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಹೊಂದಲು ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.

ಈ ವಿನೂತನ ಆಯ್ಕೆಯಿಂದ ಒಂದು ಮೊಬೈಲ್‌ನಲ್ಲಿ ಎರಡು ಸಿಮ್‌ ಹೊಂದಿರುವ ಸ್ಮಾರ್ಟ್ ಫೋನ್‌ ಬಳಕೆದಾರರು ಇನ್ನೊಂದು ವಾಟ್ಸಾಪ್‌ ಅಕೌಂಟ್‌ ಬಳಕೆಗೆ ಬೇರೆ ಪೋನ್‌ ಬಳಸುವ ಅಗತ್ಯವಿರುವುದಿಲ್ಲ.

https://www.facebook.com/zuck/posts/10115317875092321?ref=embed_post

ಎರಡು ಅಕೌಂಟ್‌ ಬಳಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಏಕಕಾಲದಲ್ಲಿ ಎರಡು ಅಕೌಂಟ್‌ಗಳ ನಂಬರ್‌ಗಳನ್ನು ಹೊಂದುವುದು ಸರಳ ಪ್ರಕ್ರಿಯೆಯಾಗಿದೆ.

ಮೊದಲಿಗೆ, ‘ಸೆಟ್ಟಿಂಗ್ಸ್’ಗೆ ಹೋಗಬೇಕು. ‘ಸೆಟ್ಟಿಂಗ್‌ಗಳು’ ಅಡಿಯಲ್ಲಿ, ನಿಮ್ಮ ಹೆಸರಿನ ಮುಂದೆ ಸಣ್ಣ ಬಾಣದ ಗುರುತಿರುತ್ತದೆ. ಅದನ್ನು ಸ್ಪರ್ಶಿಸಿದರೆ ‘Add Account’ ಆಯ್ಕೆ ಬರುತ್ತದೆ. ನಂತರ, ‘Add Account’ ನಲ್ಲಿ ನಿಮ್ಮ ಫೋನ್‌ ನಂಬರ್‌ ನಮೂದಿಸಿದರೆ ವೆರಿಫೈ ಕೋಡ್‌ ನಿಮ್ಮ ಸಂಖ್ಯೆಗೆ ಬರುತ್ತದೆ. ಅದನ್ನು ನಮೂದಿಸಿದ ನಂತರ ಎರಡೂ ನಂಬರ್‌ ಚಾಲ್ತಿಗೊಳ್ಳುತ್ತದೆ.

ಈ ಸುದ್ದಿ ಓದಿದ್ದೀರಾ? ಅನ್‌ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಪೋಸ್ಟ್, ಲೈಕ್, ರೀಟ್ವಿಟ್ಗೂ ಇನ್ಮುಂದೆ ಹಣ ಪಾವತಿಸಬೇಕು !

ಎರಡೂ ನಂಬರ್‌ಗಳಲ್ಲಿ ನಿಮಗೆ ಬೇಕಾದ ನಂಬರ್‌ ಅಕೌಂಟ್‌ ಆಯ್ಕೆ ಮಾಡಿಕೊಳ್ಳಲು ಕೆಳಗೆ ಎರಡು ನಂಬರ್‌ಗಳ ಆಯ್ಕೆಯಿರುತ್ತದೆ. ನಿಮಗೆ ಬೇಕಾದಾಗ ಯಾವುದು ಬೇಕೋ ಅದನ್ನು ಬಳಸಬಹುದು. ಈ ರೀತಿಯ ಸೌಲಭ್ಯ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಲಭ್ಯವಿದೆ.

ಮತ್ತೊಂದು ಸೂಚನೆಯಂದರೆ ಈ ನೂತನ ಸೌಲಭ್ಯವು ಕೆಲವು ದಿನಗಳಲ್ಲಿ ಸೇರ್ಪಡೆಯಾಗಲಿದೆ. ಅಪ್‌ಡೇಟ್‌ ಮೂಲಕ ಹೊಸ ಸೌಲಭ್ಯ ಪಡೆದುಕೊಳ್ಳಬಹುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50...

ವಾಟ್ಸಾಪ್‌ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌’ ಸುರಕ್ಷತೆ ಕೇವಲ ನಾಟಕವೇ? ಮೆಟಾ ವಿರುದ್ಧ ಗಂಭೀರ ಆರೋಪ

ವಿಶ್ವದಾದ್ಯಂತ ಕೋಟ್ಯಂತರ ಜನರು ನಂಬಿ ಬಳಸುತ್ತಿರುವ ವಾಟ್ಸಾಪ್‌ನ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್’ ಸುರಕ್ಷತಾ...

ಆಂಧ್ರಪ್ರದೇಶ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಕ್ಕೆ ಸರ್ಕಾರ ಚಿಂತನೆ​

ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ...

ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮಹಾ ಆಘಾತ: ಡಾರ್ಕ್ ವೆಬ್‌ನಲ್ಲಿ 1.75 ಕೋಟಿ ಜನರ ಖಾಸಗಿ ಮಾಹಿತಿ ಬಹಿರಂಗ?

ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ, ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣ...