ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು

Date:

ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆ ಇನ್ನು ಮುಂದೆ ಎಟಿಎಂನಲ್ಲಿ ನಗದು ವಿತ್‌ ಡ್ರಾ ಮಾಡುವ ಭಾರತದ ಪ್ರಥಮ ‘ಯುಪಿಐ ಎಟಿಎಂ’ ಈಗ ಚಾಲ್ತಿಗೆ ಬಂದಿದೆ. ಈ ವಿಧಾನವನ್ನು ಬಳಸಿಕೊಂಡು ಸಾರ್ವಜನಿಕರು ಸುರಕ್ಷಿತವಾಗಿ ನಗದನ್ನು ಪಡೆಯಬಹುದು.

ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದಲ್ಲಿ ಹಿಟಾಚಿ ಪೇಮೆಂಟ್ ಸರ್ವಿಸಸ್ ಭಾರತದಲ್ಲಿ ಮೊದಲ ಯುಪಿಐ ಎಟಿಎಂ ಅನ್ನು ಸ್ಥಾಪಿಸಿದೆ. ಎಟಿಎಂ ಕಾರ್ಡ್ ಬಳಸದೆಯೇ, ಯಾವುದೇ ಯುಪಿಐನ ಆ್ಯಪ್ ಮೂಲಕ ಎಟಿಎಂ ಸೆಂಟರ್‌ನಲ್ಲಿ ನಗದು ಹಣವನ್ನು ವಿತ್‌ ಡ್ರಾ ಮಾಡಬಹುದಾಗಿದೆ.

ಈಗಾಗಲೇ ಎಸ್‌ಬಿಐ ಒಳಗೊಂಡು ಮೊದಲಾದ ಬ್ಯಾಂಕುಗಳ ಕೆಲ ಎಟಿಎಂಗಳಲ್ಲಿ ಯುಪಿಐ ಫೆಸಿಲಿಟಿ ಇದೆಯಾದರೂ ಅದಕ್ಕೆ ಆ ಬ್ಯಾಂಕ್‌ನ ಬಾಹ್ಯ ಆ್ಯಪ್ ಬೇಕಾಗುತ್ತದೆ. ಆದರೆ, ಹಿಟಾಚಿಯ ಯುಪಿಐನ ಎಟಿಎಂನಲ್ಲಿ ಯಾವುದೇ ಆ್ಯಪ್ ಬಳಸಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಅಂಗಿ ಕಳಚಿ ಎಂದರು, ನಾನು ದೇಗುಲದ ಒಳಗೆ ಕಾಲಿಡಲಿಲ್ಲ: ಕೇರಳ ಘಟನೆ ಮೆಲುಕು ಹಾಕಿದ ಸಿದ್ದರಾಮಯ್ಯ

ಎಟಿಎಂ ಸೆಂಟರ್‌ಗಳಲ್ಲಿ ಕಾರ್ಡ್ ಸ್ಕಿಮ್ಮಿಂಗ್(ಎಟಿಎಂ ಕಾರ್ಡ್‌ ದಾಖಲೆ ಕದಿಯುವುದು) ಇತ್ಯಾದಿ ಅಪರಾಧಗಳಾಗುವ ಅಪಾಯ ಇರುತ್ತದೆ. ಯುಪಿಐನ ಎಟಿಎಂನಿಂದ ಇದು ತಪ್ಪುತ್ತದೆ. ಎಟಿಎಂನ ಪರದೆಯಲ್ಲಿ ಕಾಣುವ ಕ್ಯುಆರ್ ಕೋಡ್ ಅನ್ನು ಯುಪಿಐನ ಆ್ಯಪ್‌ನಿಂದ ಸ್ಕ್ಯಾನ್ ಮಾಡಿ ಹಣವನ್ನು ಸುಲಭವಾಗಿ ವಿತ್‌ಡ್ರಾ ಮಾಡಬಹುದು.

ಇಂಡಿಯಾ 1 ಪೇಮೆಂಟ್ಸ್ ಲಿ. ಬಳಿಕ ಭಾರತದ ಅತಿದೊಡ್ಡ ವೈಟ್ ಲೇಬಲ್ ಎಟಿಎಂ ಆಪರೇಟರ್ ಎನಿಸಿದ ಹಿಟಾಚಿ ಪೇಮೆಂಟ್ ಸರ್ವಿಸಸ್ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಎಟಿಎಂ ಸೆಂಟರ್‌ಗಳನ್ನು ನಿರ್ವಹಿಸುತ್ತದೆ.

ಯುಪಿಐನ ಎಟಿಎಂ ಮೂಲಕ ಹಣ ಪಡೆಯುವ ವಿಧಾನ

1) ಎಟಿಎಂನಿಂದ ಹಿಂಪಡೆಯಲು ಬಯಸುವ ಮೊತ್ತವನ್ನು ಆಯ್ಕೆ ಮಾಡಬೇಕಾಗುತ್ತದೆ.

2) ಆಯ್ದ ಮೊತ್ತಕ್ಕೆ ಕ್ಯೂಆರ್‌ ಕೋಡ್ ಪರದೆಯ ಮೇಲೆ ಮೂಡುತ್ತದೆ.

3) ನಂತರ ನಿಮ್ಮ ಮೊಬೈಲ್ ಫೋನ್‌ನಲ್ಲಿ ಲಭ್ಯವಿರುವ ಯಾವುದೇ ಯುಪಿಐ ಅಪ್ಲಿಕೇಶನ್ ಮೂಲಕ ನೀವು ಈ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್ ಮಾಡಬೇಕು.

4) ಅನಂತರ ವಹಿವಾಟನ್ನು ದೃಢೀಕರಿಸಲು ನಿಮ್ಮ ಮೊಬೈಲ್‌ನಲ್ಲಿ ನೀವು ಯುಪಿಐ ಪಿನ್ ಅನ್ನು ನಮೂದಿಸಬೇಕು.

5) ಪಿನ್‌ ಹಾಕಿ ಅಧಿಕೃತಗೊಳಿಸಿದ ನಂತರ ಎಟಿಎಂ ಹಣವನ್ನು ವಿತರಿಸುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50...

ವಾಟ್ಸಾಪ್‌ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌’ ಸುರಕ್ಷತೆ ಕೇವಲ ನಾಟಕವೇ? ಮೆಟಾ ವಿರುದ್ಧ ಗಂಭೀರ ಆರೋಪ

ವಿಶ್ವದಾದ್ಯಂತ ಕೋಟ್ಯಂತರ ಜನರು ನಂಬಿ ಬಳಸುತ್ತಿರುವ ವಾಟ್ಸಾಪ್‌ನ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್’ ಸುರಕ್ಷತಾ...

ಆಂಧ್ರಪ್ರದೇಶ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಕ್ಕೆ ಸರ್ಕಾರ ಚಿಂತನೆ​

ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ...

ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮಹಾ ಆಘಾತ: ಡಾರ್ಕ್ ವೆಬ್‌ನಲ್ಲಿ 1.75 ಕೋಟಿ ಜನರ ಖಾಸಗಿ ಮಾಹಿತಿ ಬಹಿರಂಗ?

ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ, ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣ...