ಸಂಚಾರ್ ಸಾಥಿ | ‘ಡಿಜಿಟಲ್ ಗೂಢಾಚಾರಿಕೆ’ಗೆ ಹೊರಟಿತ್ತೇ ಮೋದಿ ಸರ್ಕಾರ?

Date:

ಡಿಜಿಟಲ್ ಇಂಡಿಯಾದ ಕನಸು ಬಿತ್ತಿದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ವಿಪಕ್ಷಗಳ ಭಾರೀ ವಿರೋಧ ಮತ್ತು ಸ್ಮಾರ್ಟ್‌ಫೋನ್‌ ಕಂಪನಿಗಳ ಅಸಹಕಾರದಿಂದಾಗಿ ʼಸಂಚಾರ್‌ ಸಾಥಿ ಆ್ಯಪ್ ಕಡ್ಡಾಯʼ ಆದೇಶವನ್ನು ಇಂದು ವಾಪಸ್‌ ಪಡೆಯುವ ನಿರ್ಧಾರಕ್ಕೆ ಬಂದಿದೆ.

ನಾವು ಬಳಸುವ ಫೋನ್ ನಮ್ಮದು, ಅದರಲ್ಲಿರುವ ಡೇಟಾ ನಮ್ಮದು. ಆದರೆ, ಅದರಲ್ಲಿ ಯಾವ ಆ್ಯಪ್ ಇರಬೇಕು, ಯಾವುದು ಇರಬಾರದು ಎಂದು ನಿರ್ಧರಿಸುವುದು ಮಾತ್ರ ಕೇಂದ್ರ ಸರ್ಕಾರ!

“ಡಿಜಿಟಲ್ ಇಂಡಿಯಾ”ದ ಕನಸು ಬಿತ್ತಿದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ʼಸಂಚಾರ್‌ ಸಾಥಿ ಆ್ಯಪ್ ಕಡ್ಡಾಯʼವನ್ನು ವಿಪಕ್ಷಗಳ ಭಾರೀ ವಿರೋಧ ಮತ್ತು ಸ್ಮಾರ್ಟ್‌ಫೋನ್‌ ಕಂಪನಿಗಳ ಅಸಹಕಾರದಿಂದಾಗಿ ಇಂದು ಆದೇಶ ವಾಪಸ್‌ ಪಡೆಯುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುರಕ್ಷತೆಯ ಹೆಸರಿನಲ್ಲಿ ‘ಸಂಚಾರ್ ಸಾಥಿ’ (Sanchaar Saathi) ಎಂಬ ಸರ್ಕಾರಿ ಆ್ಯಪ್ ಅನ್ನು ದೇಶದ ಪ್ರತಿಯೊಂದು ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಕಡ್ಡಾಯವಾಗಿ, ಡಿಲೀಟ್ ಮಾಡಲು ಸಾಧ್ಯವಾಗದಂತೆ (Undeletable) ಅಳವಡಿಸಬೇಕು ಎಂದು ಫೋನ್ ತಯಾರಕರಿಗೆ ತಾಕೀತು ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ದೂರಸಂಪರ್ಕ ಇಲಾಖೆ (DoT) ಹೊರಡಿಸಿದ ಒಂದು ಗುಪ್ತ ಆದೇಶ ಈ ಪ್ರಶ್ನೆಯನ್ನು ಹುಟ್ಟುಹಾಕಿತ್ತು.

ಮೇಲ್ನೋಟಕ್ಕೆ ಇದು ಮೊಬೈಲ್ ಕಳ್ಳತನ ಮತ್ತು ಆನ್‌ಲೈನ್ ವಂಚನೆ ತಡೆಯುವ ಕ್ರಮದಂತೆ ಕಂಡರೂ, ಇದರ ಆಳಕ್ಕೆ ಇಳಿದಾಗ ಕಾಣಸಿಗುವುದು ನಾಗರಿಕರ ಖಾಸಗಿತನದ ಮೇಲಿನ ಗಂಭೀರ ದಾಳಿ ಮತ್ತು ಸರ್ಕಾರದ ‘ಸರ್ವಾಧಿಕಾರಿ’ ಮನಸ್ಥಿತಿ. ಪೆಗಾಸಸ್ ಸ್ಪೈವೇರ್ ವಿವಾದದ ಕಹಿ ನೆನಪುಗಳು ಮಾಸುವ ಮುನ್ನವೇ, ಸರ್ಕಾರವೇ ಅಧಿಕೃತವಾಗಿ ಪ್ರತಿಯೊಬ್ಬರ ಜೇಬಿನಲ್ಲಿ ಗೂಢಾಚಾರರನ್ನು ನೇಮಿಸಲು ಹೊರಟಿದೆಯೇ ಎಂಬ ಆತಂಕ ಈಗ ಪ್ರಜ್ಞಾವಂತ ನಾಗರಿಕರಲ್ಲಿ ಮೂಡಿಸಿತ್ತು.

ಏನಿದು ಕೇಂದ್ರ ಸರ್ಕಾರದ ಗುಪ್ತ ಆದೇಶ?

ದೂರಸಂಪರ್ಕ ಇಲಾಖೆಯು ಆಪಲ್, ಸ್ಯಾಮ್‌ಸಂಗ್, ಶಿಯೋಮಿ, ವಿವೋ, ಒಪ್ಪೋ ಸೇರಿದಂತೆ ಎಲ್ಲ ಸ್ಮಾರ್ಟ್‌ಫೋನ್ ತಯಾರಕರಿಗೆ ಒಂದು ಮಹತ್ವದ ಮತ್ತು ವಿವಾದಾತ್ಮಕ ಸೂಚನೆಯನ್ನು ನೀಡಿತ್ತು. ಅದರ ಪ್ರಕಾರ:  ಭಾರತದಲ್ಲಿ ಮಾರಾಟವಾಗುವ ಎಲ್ಲ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಪ್ರಿ-ಇನ್‌ಸ್ಟಾಲ್ (Pre-install) ಆಗಿರಬೇಕು. ಇನ್ನೂ ಹೆಚ್ಚಿನ ಆತಂಕಕಾರಿ ವಿಷಯವೆಂದರೆ, ಈ ಆ್ಯಪ್ ಅನ್ನು ಬಳಕೆದಾರರು ತಮ್ಮ ಇಚ್ಛೆಯಂತೆ ‘ಅನ್-ಇನ್‌ಸ್ಟಾಲ್’ (Delete) ಮಾಡುವಂತಿಲ್ಲ.  ಹಳೆಯ ಫೋನ್‌ಗಳಿಗೂ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಇದನ್ನು ತೂರಿಸಬೇಕು.  ಹಾಗೆಯೇ ತಯಾರಕರು ಇದನ್ನು ಜಾರಿಗೊಳಿಸಲು 90 ದಿನಗಳ ಗಡುವು ನೀಡಲಾಗಿತ್ತು. ಯಾವುದೇ ಸಾರ್ವಜನಿಕ ಚರ್ಚೆಯಿಲ್ಲದೆ, ಸಂಸತ್ತಿನಲ್ಲಿ ಮಂಡಿಸದೆ, ನೇರವಾಗಿ ಕಂಪನಿಗಳಿಗೆ ಈ ಆದೇಶ ನೀಡಿರುವುದು ಬಿಜೆಪಿಯ ಆಡಳಿತ ಶೈಲಿಯ ‘ಏಕಪಕ್ಷೀಯ’ ನಿರ್ಧಾರಗಳಿಗೆ ಮತ್ತೊಂದು ಸಾಕ್ಷಿಯಾಗಿದೆ.

ಇದನ್ನು ಓದಿದ್ದೀರಾ? ಬೆಂಗಳೂರು ಕೌಶಲ್ಯ ಶೃಂಗಸಭೆ 2025: ಜಾಗತಿಕ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕರ್ನಾಟಕದ ಮಹತ್ವಾಕಾಂಕ್ಷಿ ವೇದಿಕೆ

ಆಪಲ್ ಮತ್ತು ಸ್ಯಾಮ್‌ಸಂಗ್ ಸೆಡ್ಡು: ಮೋದಿ ಸರ್ಕಾರಕ್ಕೆ ಮುಜುಗರ

ಸರ್ಕಾರದ ಈ ಆದೇಶಕ್ಕೆ ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳಾದ ಆಪಲ್ (Apple) ಮತ್ತು ಸ್ಯಾಮ್‌ಸಂಗ್ (Samsung) ತೀವ್ರ ಪ್ರತಿರೋಧ ಒಡ್ಡಿವೆ. ಇದು ಕೇಂದ್ರ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಂದೊಡ್ಡುವ ಸಂಗತಿಯಾಗಿದೆ.

sanchaari saathi 1

ಆಪಲ್ ತನ್ನ ಐಫೋನ್‌ಗಳಲ್ಲಿ ಬಳಕೆದಾರರ ಗೌಪ್ಯತೆಗೆ (Privacy) ಅತ್ಯುನ್ನತ ಸ್ಥಾನ ನೀಡುತ್ತದೆ. ಜಗತ್ತಿನ ಯಾವುದೇ ಸರ್ಕಾರ ಹೇಳಿದ ತಕ್ಷಣ, ತನ್ನ ಆಪರೇಟಿಂಗ್ ಸಿಸ್ಟಮ್‌ (iOS) ಒಳಗೆ ಮೂರನೇ ವ್ಯಕ್ತಿಯ ಅಥವಾ ಸರ್ಕಾರದ ಆ್ಯಪ್‌ಗಳನ್ನು ಕಡ್ಡಾಯವಾಗಿ ತುರುಕಲು ಆಪಲ್ ಒಪ್ಪುವುದಿಲ್ಲ. ಅದರಲ್ಲೂ ‘ಡಿಲೀಟ್ ಮಾಡಲಾಗದ ಆ್ಯಪ್’ ಎಂಬ ಪರಿಕಲ್ಪನೆಯೇ ಆಪಲ್‌ನ ನೀತಿಗೆ ವಿರುದ್ಧವಾಗಿದೆ. “ನಮ್ಮ ಗ್ರಾಹಕರ ಫೋನ್‌ನಲ್ಲಿ ಏನಿರಬೇಕು ಎಂಬುದು ಗ್ರಾಹಕರ ಆಯ್ಕೆಯೇ ಹೊರತು ಸರ್ಕಾರದ ಒತ್ತಾಯವಲ್ಲ” ಎಂಬ ಸಂದೇಶವನ್ನು ಆಪಲ್ ಪರೋಕ್ಷವಾಗಿ ರವಾನಿಸಿದೆ.

ಸ್ಯಾಮ್‌ಸಂಗ್ ಸೇರಿದಂತೆ ಆಂಡ್ರಾಯ್ಡ್ ಫೋನ್ ತಯಾರಕರಿಗೆ ಇದು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ದೊಡ್ಡ ಹೊರೆ. ಈಗಾಗಲೇ ಲಕ್ಷಾಂತರ ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಅವುಗಳಿಗೆಲ್ಲ ಕಡ್ಡಾಯವಾಗಿ ಈ ಆ್ಯಪ್ ಅಳವಡಿಸುವುದು, ಅದಕ್ಕಾಗಿ ಆಪರೇಟಿಂಗ್ ಸಿಸ್ಟಮ್ ಬದಲಾಯಿಸುವುದು ಅಷ್ಟು ಸುಲಭವಲ್ಲ. ಅಲ್ಲದೆ, ಫೋನ್ ಬೂಟ್ ಆಗುವಾಗಲೇ (Setup Screen) ಈ ಆ್ಯಪ್ ಕಾಣಿಸಿಕೊಳ್ಳಬೇಕು ಎಂಬ ಸರ್ಕಾರದ ಹಟ, ಫೋನ್ ತಯಾರಕರ ಸ್ವಾತಂತ್ರ್ಯವನ್ನೇ ಹತ್ತಿಕ್ಕುವಂತಿದೆ.

ವಿಪಕ್ಷಗಳ ಆಕ್ರೋಶ: “ಇದು ಪೆಗಾಸಸ್ 2.0”

ಇದು ಕೇವಲ ತಾಂತ್ರಿಕ ವಿಷಯವಲ್ಲ, ಇದೊಂದು ರಾಜಕೀಯ ಅಸ್ತ್ರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದವು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದನ್ನು “ಗೂಢಾಚಾರಿಕೆ ಆ್ಯಪ್” (Snooping App) ಎಂದು ನೇರವಾಗಿ ಕರೆದಿದ್ದಾರೆ. “ಸರ್ಕಾರಕ್ಕೆ ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ, ಜನರ ಮಲಗುವ ಕೋಣೆಯಲ್ಲಿ ಏನಾಗುತ್ತಿದೆ ಎಂದು ಇಣುಕಿ ನೋಡುವುದರಲ್ಲೇ ಹೆಚ್ಚು ಆಸಕ್ತಿ ಇದ್ದಂತಿದೆ” ಎಂಬರ್ಥದಲ್ಲಿ ವಿಪಕ್ಷಗಳು ಟೀಕಿಸಿವೆ.

Jyotiraditya Scindia 1

ಸಚಿವ ಸಿಂಧಿಯಾ ಅವರ “ಸ್ಪಷ್ಟನೆ” ಅಥವಾ “ತೇಪೆ ಹಚ್ಚುವ ಕೆಲಸ”?

ತೀವ್ರ ವಿರೋಧ ಮತ್ತು ಟೆಕ್ ಕಂಪನಿಗಳ ನಿರಾಕರಣೆಯ ನಂತರ, ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. “ಸಂಚಾರ್ ಸಾಥಿ ಆ್ಯಪ್ ಅನ್ನು ಸಕ್ರಿಯಗೊಳಿಸುವುದು (Activate) ಬಳಕೆದಾರರಿಗೆ ಬಿಟ್ಟದ್ದು, ಮತ್ತು ಅದರಿಂದ ಯಾವುದೇ ಕಣ್ಗಾವಲು ನಡೆಯುವುದಿಲ್ಲ” ಎಂದು ಅವರು ಹೇಳಿದ್ದಾದ್ದರು. ಇದು ಸರ್ಕಾರ ಸಿಕ್ಕಿಬಿದ್ದಾಗ ನೀಡುವ ಹಾರಿಕೆ ಉತ್ತರದಂತೆ ಕಾಣುತ್ತಿದೆಯೇ ಹೊರತು, ಪ್ರಾಮಾಣಿಕ ಕಾಳಜಿಯಂತೆ ಕಾಣುತ್ತಿಲ್ಲ. ಆದೇಶವನ್ನು ಇನ್ನೂ ಅಧಿಕೃತವಾಗಿ ಹಿಂಪಡೆದಿಲ್ಲ ಎಂಬುದು ಗಮನಾರ್ಹ.

ಸಂಚಾರ್ ಸಾಥಿ : ಹೇಳುವುದು ಒಂದು, ಮಾಡುವುದು ಇನ್ನೊಂದು

ಸಂಚಾರ ಸಾಥಿ ಆ್ಯಪ್ ಅನ್ನು ಮೇ 2023ರಲ್ಲಿ ದೂರಸಂಪರ್ಕ ಇಲಾಖೆಯು ಮೊಬೈಲ್ ಬಳಕೆದಾರರ ಭದ್ರತೆ ಮತ್ತು ಜಾಗೃತಿ ಎಂಬ ಕಾರಣ ಹೇಳಿ ಜಾರಿಗೊಳಿಸಿತು. ಇದು ಮೊಬೈಲ್ ಆ್ಯಪ್, ವೆಬ್‌ಪೋರ್ಟಲ್ ಮತ್ತು iOS/ಆಂಡ್ರಾಯ್ಡ್ ಆವೃತ್ತಿಗಳಲ್ಲಿ ಲಭ್ಯವಿದೆ.

ಸರ್ಕಾರದ ಪ್ರಕಾರ, ಈ ಆ್ಯಪ್‌ನ ಉದ್ದೇಶಗಳು, ಕಳೆದುಹೋದ ಫೋನ್ ಬ್ಲಾಕ್ ಮಾಡುವುದು, ಫ್ರಾಡ್ ಕರೆಗಳು ಮತ್ತು ವಾಟ್ಸಾಪ್ ವಂಚನೆ ತಡೆಯುವುದು, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಇದೆ ಎಂದು ತಿಳಿಯುವುದು.

ಇವೆಲ್ಲವೂ ಒಳ್ಳೆಯ ಉದ್ದೇಶಗಳೇ. ಆದರೆ, ಇದಕ್ಕಾಗಿ ಪ್ರತ್ಯೇಕವಾಗಿ, ಅಳಿಸಲಾಗದ ಆ್ಯಪ್ ಅನ್ನೇ ಫೋನ್‌ನಲ್ಲಿ ಕೂರಿಸುವ ಅವಶ್ಯಕತೆ ಏನಿದೆ? ಈಗಾಗಲೇ ಈ ಸೇವೆಗಳು ವೆಬ್ ಪೋರ್ಟಲ್ ಮೂಲಕ ಲಭ್ಯವಿವೆ. ಜನರಿಗೆ ಅಗತ್ಯವಿದ್ದರೆ ಅವರೇ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಅದನ್ನು ಬಲವಂತವಾಗಿ ಹೇರುವುದು ಏಕೆ?

“ಒಳ್ಳೆಯ ಕೆಲಸವನ್ನು ಬಲವಂತವಾಗಿ ಮಾಡಿಸುವುದು ಸರ್ವಾಧಿಕಾರದ ಲಕ್ಷಣ. ಜನರಿಗೆ ಆಯ್ಕೆ ನೀಡುವುದು ಪ್ರಜಾಪ್ರಭುತ್ವದ ಲಕ್ಷಣ” ಮೋದಿ ಸರ್ಕಾರ ಇಲ್ಲಿ ಮೊದಲನೇ ದಾರಿಯನ್ನು ಆರಿಸಿಕೊಂಡಿದೆ.

ಡೇಟಾ ಸುರಕ್ಷತೆಯ ಅಣಕ

ಭಾರತದಲ್ಲಿ ಇನ್ನೂ ಬಲಿಷ್ಠವಾದ ಡೇಟಾ ಪ್ರೊಟೆಕ್ಷನ್ ಕಾಯ್ದೆ ಜಾರಿಗೆ ಬಂದಿಲ್ಲ. ಸರ್ಕಾರದ ಕೋವಿನ್ (CoWIN) ಪೋರ್ಟಲ್‌ನಿಂದಲೇ ಕೋಟ್ಯಂತರ ಜನರ ಆಧಾರ್, ಪಾಸ್‌ಪೋರ್ಟ್ ವಿವರಗಳು ಸೋರಿಕೆಯಾದ ವರದಿಗಳು ಬಂದಿವೆ. ಹೀಗಿರುವಾಗ, ಈಗ ‘ಸಂಚಾರ್ ಸಾಥಿ’ ಸಂಗ್ರಹಿಸುವ ಮಾಹಿತಿಗಳು ಸುರಕ್ಷಿತವಾಗಿರುತ್ತವೆ ಎಂದು ನಂಬುವುದು ಹೇಗೆ?

ನಾಳೆ ಸರ್ಕಾರ ಬದಲಾದರೆ, ಅಥವಾ ಹ್ಯಾಕರ್‌ಗಳು ಈ ಆ್ಯಪ್‌ನ ಕಂಟ್ರೋಲ್ ತೆಗೆದುಕೊಂಡರೆ, ದೇಶದ ಕೋಟ್ಯಂತರ ಜನರ ಲೈವ್ ಲೊಕೇಶನ್ ಮತ್ತು ಖಾಸಗಿ ಮಾಹಿತಿ ದುರುಳರ ಪಾಲಾಗಬಹುದು. ಇಂತಹ ದೂರದೃಷ್ಟಿಯ ಕೊರತೆ ಸರ್ಕಾರದ ನಡೆಗಳಲ್ಲಿ ಎದ್ದು ಕಾಣುತ್ತಿದೆ.

ಕೇಂದ್ರ ಸರ್ಕಾರದ ಈ ನಡೆ ಕೇವಲ ಒಂದು ಆ್ಯಪ್‌ಗೆ ಸೀಮಿತವಾದ ವಿಚಾರವಲ್ಲ. ಇದು ಪ್ರಜೆಗಳ ಸ್ವಾತಂತ್ರ್ಯ ಮತ್ತು ಸರ್ಕಾರದ ನಿಯಂತ್ರಣದ ನಡುವಿನ ಸಂಘರ್ಷ. ಸೈಬರ್ ಕ್ರೈಮ್ ತಡೆಯುವ ನೆಪದಲ್ಲಿ, ಇಡೀ ದೇಶವನ್ನೇ ಒಂದು “ಡಿಜಿಟಲ್ ಜೈಲು” ಆಗಿ ಪರಿವರ್ತಿಸುವ ಹುನ್ನಾರ ಇದರ ಹಿಂದೆ ಅಡಗಿದೆಯೇ ಎಂಬ ಸಂಶಯ ಬಲವಾಗುತ್ತಿದೆ.

ಆಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳು ತಮ್ಮ ಗ್ರಾಹಕರ ಗೌಪ್ಯತೆಗಾಗಿ ಸರ್ಕಾರದ ವಿರುದ್ಧ ನಿಂತಿರುವುದು ಸ್ವಾಗತಾರ್ಹ. ಆದರೆ, ನಮ್ಮದೇ ಸರ್ಕಾರ ನಮ್ಮ ಗೌಪ್ಯತೆಯನ್ನು ರಕ್ಷಿಸುವ ಬದಲು, ಅದನ್ನು ಭೇದಿಸಲು ಯತ್ನಿಸುತ್ತಿರುವುದು ದುರಂತ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...