ಟ್ವಿಟರ್‌ ಹಕ್ಕಿಗೆ ಶೀಘ್ರ ಗುಡ್‌ಬೈ; ಚೀನಾ ಆ್ಯಪ್‌ ಸ್ವರೂಪ ನೀಡಲು ಮುಂದಾದ ಮಸ್ಕ್

Date:

ಟ್ವಿಟರ್‌ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ಆ್ಯಪ್‌ ಲೋಗೋ ಹಾಗೂ ಬ್ರಾಂಡ್‌ ಸ್ವರೂಪವನ್ನು ಬದಲಾಯಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಇಂದು (ಜುಲೈ 23) ಟ್ವೀಟ್‌ ಮಾಡಿರುವ ಅವರು, “ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ಮತ್ತು ಕ್ರಮೇಣ ಎಲ್ಲ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ” ಎಂದಿದ್ದಾರೆ.   

ಎಲ್ಲವೂ ಯೋಜನೆಯ ಪ್ರಕಾರ ನಡೆದರೆ ಮುಂಬರುವ ಲೋಗೋವನ್ನು ಇಂದು ರಾತ್ರಿ ಬಹಿರಂಗ ಪಡಿಸಲಾಗುವುದು ಮತ್ತು ನಾಳೆಯಿಂದ ಇದು ಲೈವ್ ಆಗಲಿದೆ. ಪ್ಲಾಟ್ ಫಾರ್ಮ್ ಅನ್ನು ‘ಎಕ್ಸ್’ ಹೆಸರಿನ ಎವೆರಿಥಿಂಗ್ ಆ್ಯಪ್‌ ಆಗಿ ಪರಿವರ್ತಿಸಲಾಗುವುದು ಎಂದು ಮಸ್ಕ್‌ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ವರ್ಷ ಟ್ವಿಟರ್‌ನ ಸ್ವಾಧೀನದ ನಂತರ ಮಸ್ಕ್ ನೂತನ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದರು. ಸಂಸ್ಥೆಗೆ ನೂತನ ಸಿಇಒ ಆಯ್ಕೆಯಾದ ಬಳಿಕ ಮಹತ್ವದ ಬದಲಾವಣೆಗಳಾಗುತ್ತಿದೆ. ನೂತನ ಟ್ವಿಟರ್‌ ಕಾರ್ಯಗಳು ಇನ್ನು ಮುಂದೆ ಚೀನಾದ ಮನರಂಜನಾ ಮಾಧ್ಯಮ ವಿ ಚಾಟ್‌ ರೀತಿ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ.

ಮಸ್ಕ್ ಕಳೆದ ವರ್ಷ ಟ್ವಿಟರ್ ಅನ್ನು 44 ಬಿಲಿಯನ್‌ ಡಾಲರ್‌ಗೆ ಖರೀದಿಸಿ, ಕಂಪನಿಯನ್ನು ಎಕ್ಸ್ ಕಾರ್ಪ್ ಎಂಬ ತಮ್ಮದೇ ಸಂಸ್ಥೆಯೊಂದಿಗೆ ವಿಲೀನಗೊಳಿಸಿದ್ದರು.

ಈ ಸುದ್ದಿ ಓದಿದ್ದೀರಾ? ಥ್ರೆಡ್ಸ್: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೋಟಿ ಮಂದಿ ಇನ್‌ಸ್ಟಾಲ್‌; ಆ್ಯಪ್‌ನಲ್ಲಿರುವ ವಿಶೇಷತೆಗಳೇನು?

ಟೆಸ್ಲಾ ಉದ್ಯಮಿ ಮಸ್ಕ್ ಕಳೆದ ವರ್ಷ ಟ್ವಿಟರ್‌ ಖರೀದಿಸಿದ ನಂತರ ಸಂಸ್ಥೆಯ ಶೇ.50ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿ ಹಲವು ಮಾರ್ಪಾಡುಗಳನ್ನು ಮಾಡಿದ ನಂತರವೂ ಸಂಸ್ಥೆ ವೈಫಲ್ಯಗಳನ್ನು ಅನುಭವಿಸಿದೆ. ಜಾಹೀರಾತು ಆದಾಯವು ನಿರಂತರವಾಗಿ ಕುಸಿತಗೊಂಡಿದೆ. ಆದಾಯವನ್ನು ಹೆಚ್ಚಿಸಲು ನೀಲಿ ಲೋಗೊಗಳಿಗೆ ಮಾಸಿಕ 8 ಡಾಲರ್‌ಗಳ ಚಂದಾದಾರಿಕೆಯನ್ನು ಆರಂಭಿಸಿದ ನಂತರ ಸ್ವಲ್ಪಮಟ್ಟಿಗೆ ಆದಾಯ ಏರಿಕೆ ಕಂಡಿದೆ.

ಮಸ್ಕ್‌ ಇತ್ತೀಚಿಗಷ್ಟೆ ಹೊಸ ಕೃತಕ ಬುದ್ಧಿಮತ್ತೆ ಕಂಪನಿ xAI ಅನ್ನು ಸ್ಥಾಪಿಸುವುದಾಗಿ ತಿಳಿಸಿದ್ದರು. ಈ ಸಂಸ್ಥೆಯು ಇತರ ಕೃತಕ ಬುದ್ಧಿಮತ್ತೆಗಳಾದ OpenAI ಮತ್ತು ಗೂಗಲ್‌ನ ‘ಬಾರ್ಡ್’ ಕಂಪನಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಅಲ್ಲದೆ ಪೇಸ್‌ಬುಕ್‌ ಮಾಲೀಕ ಮಾರ್ಕ್‌ ಜುಕರ್‌ಬರ್ಗ್‌ ಟ್ವಿಟರ್‌ ರೀತಿಯಲ್ಲಿಯೇ ಹಲವು ಫೀಚರ್‌ಗಳಿರುವ ಥ್ರೆಡ್ಸ್’ ಆ್ಯಪ್ ಅನ್ನು ಇತ್ತೀಚಿಗಷ್ಟೆ ಬಿಡುಗಡೆಗೊಳಿಸಿದ್ದರು. ಥ್ರೆಡ್ಸ್ ಆ್ಯಪ್ ಆರಂಭವಾದ ಕೆಲವೇ ದಿನಗಳಲ್ಲಿ ಕೊಟ್ಯಂತರ ಮಂದಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ಇದು ಶುರುವಾದ ನಂತರ ಮಸ್ಕ್‌ ಅವರು ಮಾರ್ಕ್‌ ಜುಕರ್‌ಬರ್ಗ್‌ ಅವರೊಂದಿಗೆ ಪೈಪೋಟಿಗೆ ಇಳಿದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50...

ವಾಟ್ಸಾಪ್‌ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌’ ಸುರಕ್ಷತೆ ಕೇವಲ ನಾಟಕವೇ? ಮೆಟಾ ವಿರುದ್ಧ ಗಂಭೀರ ಆರೋಪ

ವಿಶ್ವದಾದ್ಯಂತ ಕೋಟ್ಯಂತರ ಜನರು ನಂಬಿ ಬಳಸುತ್ತಿರುವ ವಾಟ್ಸಾಪ್‌ನ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್’ ಸುರಕ್ಷತಾ...

ಆಂಧ್ರಪ್ರದೇಶ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಕ್ಕೆ ಸರ್ಕಾರ ಚಿಂತನೆ​

ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ...

ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮಹಾ ಆಘಾತ: ಡಾರ್ಕ್ ವೆಬ್‌ನಲ್ಲಿ 1.75 ಕೋಟಿ ಜನರ ಖಾಸಗಿ ಮಾಹಿತಿ ಬಹಿರಂಗ?

ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ, ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣ...