ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

Date:

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ. ವಾಟ್ಸ್ಯಾಪ್ ತನ್ನ ಬಳಕೆದಾರರಿಂದ ನೇರವಾಗಿ ಹಣ ಪಡೆಯುವುದಿಲ್ಲ. ಹಾಗಾದರೆ ಆದಾಯ ಎಲ್ಲಿಂದ ಬರುತ್ತದೆ? ಉತ್ತರವೇ ‘ಜಾಹೀರಾತು ಮತ್ತು ಡೇಟಾ ಮೈನಿಂಗ್’. ವಾಟ್ಸ್ಯಾಪ್ ನಲ್ಲಿ ಸಂಗ್ರಹವಾದ ನಿಮ್ಮ ವರ್ತನೆಯ ಡೇಟಾವನ್ನು ಕೃತಕ ಬುದ್ಧಿಮತ್ತೆ ಮೂಲಕ ವಿಶ್ಲೇಷಿಸಿ, ನಿಮ್ಮ ವ್ಯಕ್ತಿತ್ವದ ಒಂದು ‘ಡಿಜಿಟಲ್ ಜಾತಕ’ವನ್ನೇ ತಯಾರಿಸಲಾಗುತ್ತದೆ

ನಿಮ್ಮ ಸಂದೇಶಗಳು ಸುರಕ್ಷಿತ, ಇದನ್ನು ಯಾರೂ ಓದಲಾರರು” ಎಂದು ಬೆಳಗಿನಿಂದ ಸಂಜೆಯವರೆಗೆ ನಾವು ನೋಡುವ ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ಕಂಪನಿ ಸಾರುತ್ತಲೇ ಇರುತ್ತದೆ. ಆದರೆ, ಮೊನ್ನೆ (ಫೆಬ್ರವರಿ 3, 2026) ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಾಟ್ಸ್ಯಾಪ್ ಹೇಳುತ್ತಿರುವ ‘ಸುರಕ್ಷತೆ’ಗೂ, ವಾಸ್ತವದಲ್ಲಿ ನಡೆಯುತ್ತಿರುವ ಬೃಹತ್ ‘ದತ್ತಾಂಶ ಸಂಗ್ರಹಣೆ’ಗೂ ಅಜಗಜಾಂತರ ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ, ವಾಟ್ಸ್ಯಾಪ್ ಪಾಲಿಗೆ ಕೇವಲ ಒಂದು ಮಾರುಕಟ್ಟೆಯಾಗಿದೆಯೇ ಹೊರತು, ಗೌಪ್ಯತೆಯನ್ನು ಗೌರವಿಸಬೇಕಾದ ಸಮುದಾಯವಲ್ಲವೇ ಎಂಬ ಪ್ರಶ್ನೆ ಈಗ ಎದ್ದಿದೆ. ಫೆಬ್ರವರಿ 3ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ವಾಟ್ಸ್ಯಾಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ವಿರುದ್ಧ ಹರಿಹಾಯ್ದಿದ್ದು, ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳುವ ವಾಟ್ಸ್ಯಾಪ್ ನ ನೀತಿಯನ್ನು “ಮಾಹಿತಿ ಕಳ್ಳತನದ ಸಭ್ಯ ವಿಧಾನ” ಎಂದು ಕಟುವಾಗಿ ಜರೆದಿದೆ.

​ಈ ಇಡೀ ವಿವಾದದ ಮೂಲ ಬೇರು ಇರುವುದು 2021ರಲ್ಲಿ ವಾಟ್ಸ್ಯಾಪ್ ಏಕಾಏಕಿ ಜಾರಿಗೆ ತಂದ ‘ಪ್ರೈವೆಸಿ ಪಾಲಿಸಿ’ ಅಥವಾ ಗೌಪ್ಯತಾ ನೀತಿಯಲ್ಲಿ. ಅಂದು ವಾಟ್ಸ್ಯಾಪ್ತನ್ನ ಕೋಟ್ಯಂತರ ಬಳಕೆದಾರರಿಗೆ ಒಂದು ಅನಿವಾರ್ಯವಾದ ಮತ್ತು ವಿಚಿತ್ರವಾದ ಷರತ್ತನ್ನು ಹಾಕಿತ್ತು: “ನೀವು ವಾಟ್ಸ್ಯಾಪ್ ಬಳಸುವುದನ್ನು ಮುಂದುವರಿಸಬೇಕೆಂದರೆ, ನಿಮ್ಮ ಡೇಟಾವನ್ನು (ಮಾಹಿತಿ) ನಮ್ಮ ಮಾತೃಸಂಸ್ಥೆಯಾದ ಫೇಸ್‌ಬುಕ್ (ಈಗಿನ ಮೆಟಾ) ಜೊತೆ ಹಂಚಿಕೊಳ್ಳಲು ಒಪ್ಪಿಗೆ ನೀಡಲೇಬೇಕು. ಇಲ್ಲದಿದ್ದರೆ, ಆ್ಯಪ್ ಬಳಸುವುದನ್ನು ನಿಲ್ಲಿಸಿ ಹೊರನಡೆಯಿರಿ”. ಭಾರತದಲ್ಲಿ ವಾಟ್ಸ್ಯಾಪ್ ಗೆ ಪರ್ಯಾಯವಿಲ್ಲದಷ್ಟು ಏಕಸ್ವಾಮ್ಯ ಬೆಳೆದಿರುವುದರಿಂದ, ಜನರಿಗೆ ಅನಿವಾರ್ಯವಾಗಿ ಒಪ್ಪಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಬಳಕೆದಾರರ ಒಪ್ಪಿಗೆಯನ್ನು ಸರಳವಾಗಿ ಕಸಿಯುವ ತಂತ್ರವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

​ವಾಟ್ಸ್ಯಾಪ್ ನ ಈ ಏಕಪಕ್ಷೀಯ ನಡೆಯನ್ನು ಪ್ರಶ್ನಿಸಿ ಮತ್ತು ಸ್ಪರ್ಧಾತ್ಮಕ ನಿಯಮಗಳ ಉಲ್ಲಂಘನೆಯ ಆರೋಪದಡಿ ಭಾರತೀಯ ಸ್ಪರ್ಧಾ ಆಯೋಗ ಮೆಟಾ ಕಂಪನಿಗೆ ಬರೋಬ್ಬರಿ 213 ಕೋಟಿ ರೂ. ದಂಡ ವಿಧಿಸಿತ್ತಲ್ಲದೆ, ಮುಂದಿನ ಐದು ವರ್ಷಗಳ ಕಾಲ ಜಾಹೀರಾತು ಉದ್ದೇಶಕ್ಕಾಗಿ ವಾಟ್ಸ್ಯಾಪ್ ಡೇಟಾವನ್ನು ಫೇಸ್‌ಬುಕ್ ಜೊತೆ ಹಂಚಿಕೊಳ್ಳದಂತೆ ಕಠಿಣ ನಿರ್ಬಂಧ ಹೇರಿತ್ತು. ಸಿಸಿಐನ ಈ ಆದೇಶವು ತಮ್ಮ ವ್ಯಾಪಾರಕ್ಕೆ ಪೆಟ್ಟು ನೀಡುತ್ತದೆ ಎಂದು ವಾದಿಸಿ ಮೆಟಾ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಅಲ್ಲಿಯೂ ಕಂಪನಿಗೆ ತೀವ್ರ ಮುಖಭಂಗವಾಗಿತ್ತು. ವಿಚಾರಣೆ ವೇಳೆ ನ್ಯಾಯಾಲಯವು ಕಂಪನಿಯ ಮಾರುಕಟ್ಟೆ ಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

​ಇತ್ತೀಚಿಗಿನ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಮೆಟಾ ಪರ ವಕೀಲರನ್ನು ಉದ್ದೇಶಿಸಿ ಮಾತನಾಡುತ್ತಾ, “ನೀವು ವಿಶ್ವದ ಅತಿದೊಡ್ಡ, ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿ ಇರಬಹುದು. ಆದರೆ, ಜನರ ಗೌಪ್ಯತೆ ಮತ್ತು ಹಕ್ಕುಗಳಿಗಿಂತ ನೀವೇನೂ ದೊಡ್ಡವರಲ್ಲ. ಭಾರತದಲ್ಲಿ ನೀವು ಏಕಸ್ವಾಮ್ಯ ಸಾಧಿಸಿರುವುದನ್ನೇ ಬಂಡವಾಳ ಮಾಡಿಕೊಂಡು, ಬಳಕೆದಾರರ ಹಕ್ಕುಗಳನ್ನು ದಮನ ಮಾಡುತ್ತಿದ್ದೀರಿ,” ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಜನರು ನಿಮ್ಮ ಆ್ಯಪ್‌ಗೆ ಒಗ್ಗಿಕೊಂಡಿದ್ದಾರೆ, ಈಗ ಅವರಿಗೆ ಬೇರೆ ದಾರಿಯಿಲ್ಲದಂತೆ ಮಾಡಿ, ಅವರ ಖಾಸಗಿ ದತ್ತಾಂಶವನ್ನು ಬಲವಂತವಾಗಿ ಪಡೆಯುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂಬುದು ನ್ಯಾಯಾಲಯದ ಅಭಿಮತವಾಗಿದೆ.

ಇದನ್ನು ಓದಿದ್ದೀರಾ? ಅಡಗಿದ ‘ಸಿಂಗಂ’ ಸದ್ದು; ಬಿಜೆಪಿಯ ಜವಾಬ್ದಾರಿ ತೊರೆದರೇಕೆ ಐಪಿಎಸ್‌ ಅಣ್ಣಾಮಲೈ!

​ನ್ಯಾಯಾಲಯದಲ್ಲಿ ಮತ್ತು ಸಾರ್ವಜನಿಕವಾಗಿ ವಾಟ್ಸಾಪ್ ನೀಡುವ ಏಕೈಕ ಮತ್ತು ಪ್ರಬಲ ಸಮಜಾಯಿಷಿ ಎಂದರೆ- “ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್” (End-to-End Encryption). ಇದರ ತಾಂತ್ರಿಕ ಅರ್ಥವೇನೆಂದರೆ, ನೀವು ನಿಮ್ಮ ಸ್ನೇಹಿತರಿಗೆ ಕಳುಹಿಸುವ ಸಂದೇಶವು ಡಿಜಿಟಲ್ ಆಗಿ ಲಾಕ್ ಆಗಿರುತ್ತದೆ. ಅದನ್ನು ಕಳುಹಿಸಿದವರು ಮತ್ತು ಸ್ವೀಕರಿಸುವವರು ಮಾತ್ರ ಓದಲು ಸಾಧ್ಯ. ಸ್ವತಃ ವಾಟ್ಸ್ಯಾಪ್ ಆಗಲಿ, ಫೇಸ್‌ಬುಕ್ ಆಗಲಿ ಅಥವಾ ಸರ್ಕಾರವಾಗಲಿ ಆ ಸಂದೇಶದ ಒಳಹೂರಣವನ್ನು (Content) ಓದಲು ಸಾಧ್ಯವಿಲ್ಲ. ಇದನ್ನೇ ಮುಂದಿಟ್ಟುಕೊಂಡು, “ನಾವು ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುತ್ತಿದ್ದೇವೆ” ಎಂದು ವಾಟ್ಸ್ಯಾಪ್ ವಾದಿಸುತ್ತಲೇ ಬಂದಿದೆ.

​ಆದರೆ, ವಾಟ್ಸ್ಯಾಪ್ ಹೇಳುವುದು ಅರ್ಧ ಸತ್ಯ ಮಾತ್ರ ಮತ್ತು ಇಲ್ಲೊಂದು ದೊಡ್ಡ ತಾಂತ್ರಿಕ ಕಂದಕವಿದೆ. ಹೌದು, ನಿಮ್ಮ ಸಂದೇಶಗಳನ್ನು ವಾಟ್ಸ್ಯಾಪ್ ಓದಲಾರದು. ಆದರೆ, ಅದು ಅತ್ಯಂತ ನಿರ್ಣಾಯಕವಾದ ‘ಮೆಟಾಡೇಟಾ’ (Metadata) ವನ್ನು ಸಂಗ್ರಹಿಸುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಅಂಚೆ ಇಲಾಖೆಗೆ ನೀವು ಬರೆದ ಪತ್ರದ ಒಳಗೇನಿದೆ ಎಂದು ಓದಲು ಸಾಧ್ಯವಿಲ್ಲದಿದ್ದರೂ, ಪತ್ರ ಲಕೋಟೆಯ ಮೇಲಿರುವ ‘ಯಾರಿಗೆ’, ‘ಎಲ್ಲಿಂದ’, ‘ಯಾವಾಗ’ ಎಂಬ ವಿಳಾಸದ ಮಾಹಿತಿ ಸಿಗುತ್ತದೆಯಲ್ಲವೇ? ಅದೇ ರೀತಿ, ಡಿಜಿಟಲ್ ಜಗತ್ತಿನಲ್ಲಿ ಸಂದೇಶದ ವಿಷಯಕ್ಕಿಂತ, ಸಂದೇಶದ ಸಂದರ್ಭವೇ ಹೆಚ್ಚು ಮೌಲ್ಯಯುತವಾಗಿರುತ್ತದೆ.

ವಾಟ್ಸ್ಯಾಪ್ ಸಂಗ್ರಹಿಸುವ ಈ ‘ಮೆಟಾಡೇಟಾ’ ಪಟ್ಟಿಯು ತೀರಾ ಆಳವಾಗಿದೆ ಮತ್ತು ಆತಂಕಕಾರಿಯಾಗಿದೆ. ನೀವು ಯಾರೊಂದಿಗೆ ಹೆಚ್ಚು ಮಾತನಾಡುತ್ತೀರಿ, ನೀವು ದಿನದ ಯಾವ ಸಮಯದಲ್ಲಿ ಆನ್‌ಲೈನ್ ಇರುತ್ತೀರಿ, ನೀವು ರಾತ್ರಿ ಎಷ್ಟು ಹೊತ್ತು ಎಚ್ಚರವಿರುತ್ತೀರಿ, ನಿಮ್ಮ ಲೊಕೇಶನ್ ಎಲ್ಲಿದೆ, ನೀವು ಬಳಸುವ ಮೊಬೈಲ್ ಯಾವುದು, ಬ್ಯಾಟರಿ ಮಟ್ಟ ಎಷ್ಟಿದೆ, ಸಿಗ್ನಲ್ ಸಾಮರ್ಥ್ಯ ಮತ್ತು ಐಪಿ ಅಡ್ರೆಸ್ ಯಾವುದು ಎಂಬುದನ್ನೆಲ್ಲಾ ಅದು ದಾಖಲಿಸುತ್ತದೆ. ಅಷ್ಟೇ ಅಲ್ಲ, ನೀವು ವಾಟ್ಸ್ಯಾಪ್ ಪೇಮೆಂಟ್ ಬಳಸುತ್ತಿದ್ದರೆ ನಿಮ್ಮ ಆರ್ಥಿಕ ವ್ಯವಹಾರಗಳ ವಿವರ, ಮತ್ತು ನೀವು ಯಾವ ಬ್ಯುಸಿನೆಸ್ ಖಾತೆಗಳೊಂದಿಗೆ (ಉದಾ: ಬ್ಯಾಂಕ್, ಇ-ಕಾಮರ್ಸ್) ಚಾಟ್ ಮಾಡುತ್ತೀರಿ ಎಂಬ ಮಾಹಿತಿಯೂ ಮೆಟಾ ಪಾಲಾಗುತ್ತದೆ.

​ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ. ವಾಟ್ಸ್ಯಾಪ್ ತನ್ನ ಬಳಕೆದಾರರಿಂದ ನೇರವಾಗಿ ಹಣ ಪಡೆಯುವುದಿಲ್ಲ. ಹಾಗಾದರೆ ಆದಾಯ ಎಲ್ಲಿಂದ ಬರುತ್ತದೆ? ಉತ್ತರವೇ ‘ಜಾಹೀರಾತು ಮತ್ತು ಡೇಟಾ ಮೈನಿಂಗ್’. ವಾಟ್ಸ್ಯಾಪ್ ನಲ್ಲಿ ಸಂಗ್ರಹವಾದ ನಿಮ್ಮ ವರ್ತನೆಯ ಡೇಟಾವನ್ನು ಕೃತಕ ಬುದ್ಧಿಮತ್ತೆ ಮೂಲಕ ವಿಶ್ಲೇಷಿಸಿ, ನಿಮ್ಮ ವ್ಯಕ್ತಿತ್ವದ ಒಂದು ‘ಡಿಜಿಟಲ್ ಜಾತಕ’ವನ್ನೇ ತಯಾರಿಸಲಾಗುತ್ತದೆ. ಈ ಮಾಹಿತಿಯನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಿಗೆ ವರ್ಗಾಯಿಸಿ, ಅಲ್ಲಿ ನಿಮಗೆ ಬೇಕಾದ ಜಾಹೀರಾತುಗಳನ್ನು ತೋರಿಸಲಾಗುತ್ತದೆ. ಉದಾಹರಣೆಗೆ, ನೀವು ವಾಟ್ಸಾಪ್‌ನಲ್ಲಿ ಕಾರು ಶೋರೂಂ ನಂಬರ್‌ಗೆ ಲೊಕೇಶನ್ ಕಳುಹಿಸಿದರೆ, ಕೆಲವೇ ನಿಮಿಷಗಳಲ್ಲಿ ನಿಮ್ಮ ಫೇಸ್‌ಬುಕ್ ಫೀಡ್‌ನಲ್ಲಿ ಕಾರಿನ ಸಾಲದ ಜಾಹೀರಾತು ಪ್ರತ್ಯಕ್ಷವಾಗುವುದು ಇದೇ ಕಾರಣಕ್ಕೆ!

​ಸುಪ್ರೀಂ ಕೋರ್ಟ್ ಎತ್ತಿದ ಮತ್ತೊಂದು ಗಂಭೀರ ಪ್ರಶ್ನೆ ಅಂತಾರಾಷ್ಟ್ರೀಯ ತಾರತಮ್ಯದ್ದು. ಮೆಟಾ ಕಂಪನಿಯು ಯುರೋಪ್ ಒಕ್ಕೂಟದಲ್ಲಿ ‘ಜಿಡಿಪಿಆರ್’ (GDPR) ಎಂಬ ಕಠಿಣ ಗೌಪ್ಯತಾ ಕಾನೂನಿಗೆ ತಲೆಬಾಗಿ ನಡೆಯುತ್ತದೆ. ಅಲ್ಲಿನ ಬಳಕೆದಾರರ ಡೇಟಾವನ್ನು ಫೇಸ್‌ಬುಕ್ ಜೊತೆ ಹಂಚಿಕೊಳ್ಳಲು ವಾಟ್ಸ್ಯಾಪ್ ಗೆ ಅನುಮತಿಯಿಲ್ಲ ಮತ್ತು ಜನರಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ಆದರೆ, ಭಾರತದಲ್ಲಿ ಅಂತಹ ಕಠಿಣ ಕಾನೂನು ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದ ಕಾರಣ, “ಇಲ್ಲಿನವರ ಮಾಹಿತಿ ನಮ್ಮ ಆಸ್ತಿ” ಎಂಬ ಧೋರಣೆಯನ್ನು ಕಂಪನಿ ತಳೆದಿದೆ. ಭಾರತೀಯರ ಡೇಟಾವನ್ನು ಅಗ್ಗದ ಸರಕಿನಂತೆ ಪರಿಗಣಿಸುತ್ತಿರುವ ಈ ದ್ವಂದ್ವ ನೀತಿಯನ್ನು ನ್ಯಾಯಾಲಯ ಪ್ರಶ್ನಿಸಿದೆ.

​ಅಂತಿಮವಾಗಿ, “ಸೇವೆಯು ಉಚಿತವಾಗಿದ್ದರೆ, ಅಲ್ಲಿ ನೀವೇ ಉತ್ಪನ್ನ” ಎಂಬ ಹಳೆಯ ಮಾತು ವಾಟ್ಸ್ಯಾಪ್ ವಿಷಯದಲ್ಲಿ ಅಕ್ಷರಶಃ ಸತ್ಯವಾಗುತ್ತಿರುವಂತೆ ಕಾಣುತ್ತಿದೆ. ನಾವು ಕಳುಹಿಸುವ ಸಂದೇಶಗಳು ಎನ್‌ಕ್ರಿಪ್ಟ್ ಆಗಿರಬಹುದು, ಆದರೆ ನಮ್ಮ ಜೀವನಶೈಲಿ, ಆಯ್ಕೆಗಳು ಮತ್ತು ಬಲಹೀನತೆಗಳು ಮೆಟಾ ಕಂಪನಿಯ ಸರ್ವರ್‌ಗಳಲ್ಲಿ ತೆರೆದ ಪುಸ್ತಕದಂತೆ ದಾಖಲಾಗುತ್ತಿವೆ. ಸುಪ್ರೀಂ ಕೋರ್ಟ್‌ನ ಈ ಕಟು ಎಚ್ಚರಿಕೆಯು, ಮುಂಬರುವ ದಿನಗಳಲ್ಲಿ ಭಾರತ ಸರ್ಕಾರ ಜಾರಿಗೆ ತರಲಿರುವ ‘ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆ’ (DPDP Act) ಅಡಿಯಲ್ಲಿ ನಮ್ಮ ಖಾಸಗಿತನಕ್ಕೆ ಭದ್ರ ಬುನಾದಿ ಹಾಕಬಲ್ಲದೇ ಎಂದು ಕಾದು ನೋಡಬೇಕಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...