ಟ್ವಿಟ್ಟರ್‍‌ಗೆ ಪರ್ಯಾಯ: ‘ಮೆಟಾ’ದಿಂದ ಶೀಘ್ರದಲ್ಲೇ ಹೊಸ ಆ್ಯಪ್

Date:

ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್‍‌ನ ಒಡೆತನವನ್ನು ಪಡೆದುಕೊಂಡ ಬಳಿಕ ಸದಾ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಲೇ ಇದೆ. ಈ ಎಲ್ಲ ಬೆಳವಣಿಗೆಯ ನಡುವೆಯೇ ಟ್ವಿಟ್ಟರ್‍‌ಗೆ ಪರ್ಯಾಯವಾಗಿ, ಅದೇ ರೀತಿಯಲ್ಲಿರುವ ಹೊಸ ಆ್ಯಪ್ ಅನ್ನು ಬಿಡುಗಡೆಗೊಳಿಸಲು ಫೇಸ್‌ಬುಕ್ ಮಾತೃಸಂಸ್ಥೆ ‘ಮೆಟಾ’ ಮುಂದಾಗಿದೆ.

‘ಥ್ರೆಡ್’ ಎಂಬ ಹೆಸರಿನ ಈ ಹೊಸ ಆ್ಯಪ್, ಜುಲೈ 6ರಂದು ಬಿಡುಗಡೆಯಾಗುವ ಸುದ್ದಿ ಹರಿದಾಡಿದೆ. ಈ ಸುದ್ದಿ ಟ್ವಿಟರ್‍‌ಗೆ ಹೊಸ ತಲೆನೋವಾಗುವ ಸಾಧ್ಯತೆ ಇದೆ.

ಈ ಹೊಸ ಆ್ಯಪ್ ಅನ್ನು ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಲಿಂಕ್ ಮಾಡುವ ಮೂಲಕ ಉಪಯೋಗಿಸಬಹುದು ಮತ್ತು ಇನ್‌ಸ್ಟಾದ ಯೂಸರ್ ನೇಮ್ ಅನ್ನೇ ‘ಥ್ರೆಡ್’ನಲ್ಲೂ ಮುಂದುವರೆಸಬಹುದು. ಆದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ. ಬದಲಾಗಿ ಆ್ಯಪಲ್‌ನ ಆ್ಯಪ್ ಸ್ಟೋರ್‌ನ ಪಟ್ಟಿಯಲ್ಲಿ ಇದು ಕಾಣಿಸಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಟೆಸ್ಲಾ ಸಿಇಒ ಕೂಡ ಆಗಿರುವ ಎಲಾನ್ ಮಸ್ಕ್ ಅವರು ಟ್ವಿಟರ್‍ ಅನ್ನು ತೆಕ್ಕೆಗೆ ತೆಗೆದುಕೊಂಡ ಬಳಿಕ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಇದರ ನುಡವೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ದಿನೇ ದಿನೇ ಹೊಸ ಹೊಸ ನಿಯಮ ತಂದು ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿ ಖಾತೆದಾರರನ್ನು ಕಳೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಟ್ವಿಟ್ಟರ್ ಪ್ರತಿ ನಿತ್ಯ ನಿಗದಿತ ಪೋಸ್ಟ್‌ಗಳ ವೀಕ್ಷಣೆ ಮಾಡುವ ಮಿತಿಯನ್ನು ಕೂಡ ಹೇರಿತ್ತು. ಈ ಎಲ್ಲ ಬೆಳವಣಿಗೆಗಳ ಲಾಭವನ್ನು ಪಡೆಯಲು ಮಾರ್ಕ್ ಝುಕರ್‍‌ಬರ್ಗ್ ಮಾಲೀಕತ್ವದ ಮೆಟಾ ಸಂಸ್ಥೆ ಹೊಸ ಆ್ಯಪ್ ಬಿಡುಗಡೆ ಮಾಡಲು ಸಜ್ಜಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50...

ವಾಟ್ಸಾಪ್‌ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌’ ಸುರಕ್ಷತೆ ಕೇವಲ ನಾಟಕವೇ? ಮೆಟಾ ವಿರುದ್ಧ ಗಂಭೀರ ಆರೋಪ

ವಿಶ್ವದಾದ್ಯಂತ ಕೋಟ್ಯಂತರ ಜನರು ನಂಬಿ ಬಳಸುತ್ತಿರುವ ವಾಟ್ಸಾಪ್‌ನ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್’ ಸುರಕ್ಷತಾ...

ಆಂಧ್ರಪ್ರದೇಶ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಕ್ಕೆ ಸರ್ಕಾರ ಚಿಂತನೆ​

ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ...

ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮಹಾ ಆಘಾತ: ಡಾರ್ಕ್ ವೆಬ್‌ನಲ್ಲಿ 1.75 ಕೋಟಿ ಜನರ ಖಾಸಗಿ ಮಾಹಿತಿ ಬಹಿರಂಗ?

ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ, ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣ...