ಟ್ವಿಟರ್ | ಪೋಸ್ಟ್ ಓದುವಿಕೆ ಮೇಲೆ ಮಿತಿ; ಟ್ವೀಟ್‌ಗಳ ನೋಡಲು ಸೈನ್‌ ಇನ್‌ ಕಡ್ಡಾಯ

Date:

ಸಾಮಾಜಿಕ ಮಾಧ್ಯಮ ಟ್ವಿಟರ್, ಟ್ವೀಟ್‌ಗಳ ಓದುವಿಕೆ ಮೇಲೆ ಹೇರಿದ್ದ ಮಿತಿಯನ್ನು ಬದಲಿಸಿದೆ. ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ ಓದುವಿಕೆಯ ಬಗ್ಗೆ ಜಾರಿಗೊಳಿಸಿದ ನಿಯಮವನ್ನು ಮೂರು ಬಾರಿ ಬದಲಿಸಿ ಟ್ವೀಟ್‌ ಮಾಡಿದ್ದಾರೆ.

ಮೊದಲು ಒಂದು ದಿನದ ಹಿಂದಷ್ಟೆ ಟ್ವಿಟರ್‌ನಲ್ಲಿ ದಿನವೊಂದಕ್ಕೆ ವೆರಿಫೈಡ್‌ ಖಾತೆಗಳಿಗೆ 6000, ಅನ್‌ವೆರಿಫೈಡ್‌ ಖಾತೆಗಳಿಗೆ 600 ಹಾಗೂ ನೂತನ ಅನ್‌ವೆರಿಫೈಡ್‌ ಖಾತೆಗಳಿಗೆ 300 ಟ್ವೀಟ್‌ಗಳ ಓದುವಿಕೆಯ ಮಿತಿ ಹೇರಲಾಗಿದೆ ಎಂದು ಟ್ವೀಟ್‌ ಮಾಡಿದ್ದರು.

ಇಂದು (ಜುಲೈ 2) ಮತ್ತೆ ಟ್ವೀಟ್‌ ಮಾಡಿರುವ ಎಲಾನ್‌ ಮಸ್ಕ್‌, ಟ್ವೀಟ್‌ಗಳ ಓದುವಿಕೆಯ ಮಿತಿಯನ್ನು ಬದಲಾಯಿಸಿರುವುದಾಗಿ ತಿಳಿಸಿದ್ದರು. ಹೊಸ ನಿಯಮದ ಪ್ರಕಾರ ವೆರಿಫೈಡ್ ಖಾತೆಯ ಬಳಕೆದಾರರು 8000, ಅನ್‌ವೆರಿಫೈಡ್‌ ಬಳಕೆದಾರರು 800 ಹಾಗೂ ನೂತನ ಅನ್‌ವೆರಿಫೈಡ್‌ ಬಳಕೆದಾರರು 400 ಟ್ವೀಟ್‌ಗಳನ್ನು ಓದಬಹುದು ಎಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ನವದೆಹಲಿ: ಮೇಲ್ಸೇತುವೆ ನಿರ್ಮಾಣಕ್ಕಾಗಿ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಕಟ್ಟಡಗಳ ತೆರವು

ಇದಾದ ಕೆಲವು ಕೆಲವು ಗಂಟೆಗಳ ನಂತರ ಓದುವ ಮಿತಿಯು ವೆರಿಫೈಡ್ 10000, ಅನ್‌ವೆರಿಫೈಡ್ 1000 ಹಾಗೂ ಹೊಸ ಅನ್‌ ವೆರಿಫೈಡ್‌ ಮಿತಿ 500ಕ್ಕೆ ಹೆಚ್ಚಿಸಿರುವುದಾಗಿ ಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ಗಳ ನೋಡಲು ಸೈನ್‌ಇನ್‌ ಕಡ್ಡಾಯ

ಟ್ವಿಟರ್‌ನಲ್ಲಿ ಈ ಮೊದಲು, ಬಳಕೆದಾರರು ಖಾತೆಗೆ ಲಾಗ್ ಇನ್ ಆಗದಿದ್ದರೂ ಟ್ವೀಟ್‌ಗಳನ್ನು ನೋಡುವ, ಓದುವ ಅವಕಾಶವನ್ನು ನೀಡಲಾಗಿತ್ತು. ಇನ್ನು ಮುಂದೆ ಯಾವುದೇ ಟ್ವೀಟ್‌ಗಳನ್ನು ಓದುವುದಿದ್ದರೂ ಅಥವಾ ನೋಡುವುದಕ್ಕೆ ಸೈನ್‌ ಇನ್‌ ಮಾಡುವುದು ಕಡ್ಡಾಯವಾಗುತ್ತದೆ. ಈ ನಿಯವನ್ನು ಎಲಾನ್‌ ಮಸ್ಕ್‌ ತಾತ್ಕಾಲಿಕ ತುರ್ತು ಕ್ರಮ ಎಂದು ತಿಳಿಸಿದ್ದಾರೆ.

25 ಸಾವಿರ ಅಕ್ಷರಗಳ ಬರೆಯಬಹುದು

ಮತ್ತೊಂದು ಹೊಸ ನಿಯಮವನ್ನು ಜಾರಿಗೊಳಿಸಿರುವ ಎಲಾನ್‌ ಮಸ್ಕ್‌, ಟ್ವಿಟರ್ ಖಾತೆ ಹೊಂದಿರುವವರು 25 ಸಾವಿರ ಅಕ್ಷರಗಳನ್ನು ತಮ್ಮ ಖಾತೆಯಲ್ಲಿ ಪೋಸ್ಟ್‌ ಮಾಡಬಹುದು. ಜೊತೆಗೆ 4 ಭಾವಚಿತ್ರಗಳನ್ನು ಅಟ್ಯಾಚ್‌ ಮಾಡದೆಯೆ ಕಾಪಿ ಮಾಡುವ ಮೂಲಕ ಪೋಸ್ಟ್ ಮಾಡಬಹುದು. ಆದರೆ ಈ ಆಯ್ಕೆಗಳನ್ನು ಹೊಂದಲು ನಿಮ್ಮ ಟ್ವಿಟರ್ ಖಾತೆಗೆ ಹಣ ಪಾವತಿಸಿ ಚಂದಾದಾರರಾಗಬೇಕು ಎಂದಿದ್ದಾರೆ.

ಟ್ವಿಟರ್‌ ಸರ್ವರ್‌ ಡೌನ್

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಶನಿವಾರ (ಜುಲೈ 1) ಸಂಜೆ ವಿಶ್ವದಾದ್ಯಂತ ಸ್ಥಗಿತಗೊಂಡಿದೆ. ಹೆಚ್ಚಿನ ಸಂಖ್ಯೆಯ ಬಳಕೆದಾರರು ಈ ಬಗ್ಗೆ ದೂರು ನೀಡಿದ್ದಾರೆ. ತಮಗೆ ಟ್ವೀಟ್ ಬ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, 4,000 ಕ್ಕೂ ಹೆಚ್ಚು ಟ್ವಿಟರ್ ಬಳಕೆದಾರರು ಡೌನ್ ಡಿಟೆಕ್ಟರ್ ಸೈಟ್‌ನಲ್ಲಿ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ.

ಭಾರತದ ಬಹಳಷ್ಟು ಗ್ರಾಹಕರಿಗೆ ಟ್ವಿಟರ್ ಬಳಕೆಯಲ್ಲಿ ಸಮಸ್ಯೆ ಎದುರಾಗಿತ್ತು. ಟ್ವಿಟರ್​ನಲ್ಲೇ ಟ್ವಿಟರ್​ಡೌನ್ ಎಂಬುದು ಟಾಪ್ ಟ್ರೆಂಡಿಂಗ್ ಆಗಿತ್ತು. #TwitterDown ಹ್ಯಾಷ್​ಟಾಗ್ ಜತೆ 25 ಸಾವಿರಕ್ಕೂ ಅಧಿಕ ಮಂದಿ ಈ ಕುರಿತು ಟ್ವೀಟ್ ಮಾಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50...

ವಾಟ್ಸಾಪ್‌ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌’ ಸುರಕ್ಷತೆ ಕೇವಲ ನಾಟಕವೇ? ಮೆಟಾ ವಿರುದ್ಧ ಗಂಭೀರ ಆರೋಪ

ವಿಶ್ವದಾದ್ಯಂತ ಕೋಟ್ಯಂತರ ಜನರು ನಂಬಿ ಬಳಸುತ್ತಿರುವ ವಾಟ್ಸಾಪ್‌ನ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್’ ಸುರಕ್ಷತಾ...

ಆಂಧ್ರಪ್ರದೇಶ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಕ್ಕೆ ಸರ್ಕಾರ ಚಿಂತನೆ​

ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ...

ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮಹಾ ಆಘಾತ: ಡಾರ್ಕ್ ವೆಬ್‌ನಲ್ಲಿ 1.75 ಕೋಟಿ ಜನರ ಖಾಸಗಿ ಮಾಹಿತಿ ಬಹಿರಂಗ?

ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ, ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣ...