ಬಾಗೇಪಲ್ಲಿ:-ಗ್ರಹಣ ಕಾಲದಲ್ಲಿ ಊಟ ಮಾಡಬಾರದು ಅನಿಷ್ಟ ಅನ್ನೋದು ಕೆಲವರ ನಂಬಿಕೆ. ಆದ್ರೆ, ಇದು ಮೂಢನಂಬಿಕೆ ಅನ್ನೋದು ಕೆಲವರ ವಾದ. ಹೀಗಾಗಿ ಬಾಗೇಪಲ್ಲಿ ಪಟ್ಟಣದಲ್ಲಿ ಚಂದ್ರ ಗ್ರಹಣ ವೇಳೆ ಚಿಕನ್ ಕಬಾಬ್ ತಿಂದು ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.
ಖಗ್ರಾಸ ಚಂದ್ರಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಕೆಲವರ ನಂಬಿಕೆ. ಆದ್ರೆ, ಇದು ಮೌಢ್ಯ ಆಚರಣೆ ಅನ್ನೋದು ಕೆಲವು ಪ್ರಗತಿಪರರ ವಾದ. ಹೀಗಾಗಿ ಗೂಳೂರು ವೃತ್ತದಲ್ಲಿ ಬಳಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 100ಕ್ಕೂ ಹೆಚ್ಚು ಮಂದಿ ಪ್ರಗತಿಪರರು ಬಗೆ ಬಗೆಯ ಆಹಾರವನ್ನ ಸೇವಿಸಿ ಜಾಗೃತಿಯನ್ನ ಮೂಡಿಸಿದರು. ಚಂದ್ರ ಗ್ರಹಣ ವೇಳೆಯಲ್ಲಿಊಟ ತಿನ್ನಿಸುತ್ತಾ ಮೌಢ್ಯಗಳ ವಿರುದ್ಧ ಸೆಡ್ಡು ಹೊಡೆದರು.
ಈ ಸಂದರ್ಭದಲ್ಲಿ ಎ.ಜಿ.ಸುಧಾಕರ್ ಮಾತನಾಡಿ ತಡರಾತ್ರಿ ವಿಶ್ವಾದ್ಯಂತ ಖಗ್ರಾಸ ಚಂದ್ರಗ್ರಹಣ ಸಂಭವಿಸಿದೆ. ದೇಶದಲ್ಲಿ ಪೂರ್ಣ ಚಂದ್ರ ರಕ್ತವರ್ಣಕ್ಕೆ ತಿರುಗಿ ಗೋಚರಿಸಿದ್ದಾನೆ. ಇದ್ರ ಮಧ್ಯೆ ಗ್ರಹಣ ಕಾಲದಲ್ಲಿ ಊಟ ಮಾಡಬಾರದು ಅನ್ನೋದು ಕೆಲವರ ನಂಬಿಕೆ. ಆದ್ರೆ, ಇದು ಮೂಢನಂಬಿಕೆ ಅನ್ನೋದು ಕೆಲವರ ವಾದ. ಹೀಗಾಗಿ ಊಟ ಸೇವಿಸುವ ಮೂಲಕ ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸಿದ್ದೆವೆ ಎಂದು ಹೇಳಿದರು.
ಸಿಪಿಐಎಂ ಪಕ್ಷದ ಮುಖಂಡ ಚನ್ನರಾಯಪ್ಪ ಗ್ರಹಣ ಅನ್ನೋದು ಖಗೋಳದಲ್ಲಿ ನಡೆಯುವ ಅಪರೂಪದ ವಿಸ್ಮಯ. ನಭೋ ಮಂಡಲದಲ್ಲಿ ನಡೆಯುವ ನೆರಳಿನಾಟ. ಆದ್ರೆ, ವೈಜ್ಞಾನಿಕತೆಯ ಕಾಲದಲ್ಲೂ ಅವೈಜ್ಞಾನಿಕ ಆಚರಣೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಖಗ್ರಾಸ ಚಂದ್ರಗ್ರಹಣದ ವೇಳೆ ಕೆಲವು ಮೌಢ್ಯ ಆಚರಿಸೋದು ಸರ್ವೇಸಾಮಾನ್ಯ. ಇಂಥಹ ಮೌಢ್ಯತೆಯ ವಿರುದ್ಧ ಪ್ರಗತಿಪರರು ಕಬಾಬ್ ತಿನ್ನುವ ಮೂಲಕ ಸೆಡ್ಡು ಹೊಡೆದಿದೇವೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಬಾಗೇಪಲ್ಲಿ | ಕ್ರೀಡೆಗಳಲ್ಲಿ ಭಾಗವಹಿಸುವವರ ಜೀವನ ಹೆಚ್ಚು ಕ್ರಿಯಾಶೀಲವಾಗಿರುತ್ತದೆ: ಬಿಇಒ ವೆಂಕಟೇಶಪ್ಪ
ಕಬಾಬ್ ನೋಡಿದರೆ ನಾಲಿಗೆ ನೀರೂರಿಸುವಂತ ರುಚಿಕರ ಆಹಾರಗಳು. ಇದು ಗ್ರಹಣ ಕಾಲದಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಮುಂಭಾಗ ಕಂಡುಬಂದ ದೃಶ್ಯ.
ಈ ಸಂದರ್ಭದಲ್ಲಿ ವಾಲ್ಮೀಕಿ ಅಶ್ವತ್ಥಪ್ಪ,ನರಸಿಂಹ ಮೂರ್ತಿ,ಕೃಷ್ಣಪ್ಪ, ಮುಸ್ತಫಾ,ಮುನಿಸ್ವಾಮಿ ಡಿ.ಟಿ.ಮುನಿಸ್ವಾಮಿ,ಚಿನ್ನ ಕೈವಾರಮಯ್ಯ ಹಾಗೂ ದಲಿತ ಮುಖಂಡರು ಹಾಜರಿದ್ದರು.





