ಬಾಗಲಕೋಟೆ ಉಪಚುನಾವಣೆ | ಬದಲಾವಣೆ ಬಯಸುವುದಾದರೆ ನನಗೆ ಅವಕಾಶ ನೀಡಲಿ: ಕೆಪಿಸಿಸಿ ಸದಸ್ಯೆ ರಕ್ಷಿತಾ

Date:

ಹಿರಿಯ ನಾಯಕ ಶಾಸಕ ಎಚ್ ವೈ ಮೇಟಿ ಅಗಲಿಕೆ ಬಹಳಷ್ಟು ನೋವು ತಂದಿದೆ. ಈ ಸ್ಥಾನಕ್ಕೆ ನಡೆಯುತ್ತಿರುವ ಬಾಗಲಕೋಟೆ ಉಪ ಚುನಾವಣೆಗೆ ಅವರ ಕುಟುಂಬದಲ್ಲಿ ಯಾರಿಗೇ ಟಿಕೆಟ್ ನೀಡಿದರೂ ನನ್ನ ಸಂಪೂರ್ಣ ಬೆಂಬಲವಿದೆ. ಪಕ್ಷವು ಬದಲಾವಣೆ ಬಯಸಿ ಬೇರೆಯವರಿಗೆ ಅವಕಾಶ ನೀಡುವುದಾದರೆ ನನ್ನನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಕೆಪಿಸಿಸಿ ಸದಸ್ಯೆ ರಕ್ಷಿತಾ ಭರತ್ ಕುಮಾರ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಟಿ ಅವರ ಕುಟುಂಬದಲ್ಲಿ ನಾನು ಜನಿಸಿಲ್ಲ. ಆದರೆ ತಮ್ಮ ಕುಟುಂಬದ ಸದಸ್ಯರಂತೆಯೇ ಕಂಡಿದ್ದಾರೆ. ರಾಜಕೀಯ ಹಾಗೂ ಪಕ್ಷದಲ್ಲಿ ಈ ಮಟ್ಟಿಗೆ ಬೆಳೆಯುವಲ್ಲಿ ಮೇಟಿ ಅವರು ಬೆನ್ನೆಲುಬಾಗಿ ನಿಂತಿದ್ದರು. ಕಳೆದ 17 ವರ್ಷಗಳಿಂದ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ, ಏಳು ವರ್ಷ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ.

ಈ ಹಿಂದೆ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದೆ. ವರಿಷ್ಠರು ಮುಂದೆ ಅವಕಾಶ ಸಿಗಲಿದೆ ಅಂತ ಭರವಸೆ ‌ನೀಡಿದ್ದರು. ಈಗ ಅಕಾಲಿಕವಾಗಿ ಉಪ ಚುನಾವಣೆಯಲ್ಲಿ ಮೇಟಿ ಅವರ ಕುಟುಂಬಕ್ಕೆ ಟಿಕೆಟ್ ನೀಡಲು ಪಕ್ಷ ನಿರ್ಧಾರ ಮಾಡಿದರೆ ನನ್ನ ಬೆಂಬಲ ಇದೆ. ಬೇರೆಯವರಿಗೆ ಅವಕಾಶ ನೀಡುವ ಹಾಗೆ ಪಕ್ಷದ ವರಿಷ್ಠರು ಮುಂದುವರೆದಲ್ಲಿ ನನಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...

ಜಿ ರಾಮ್‌ ಜಿ ಅಲ್ಲಿ ʼರಾಮʼನ ಹೆಸರಿದ್ದರೆ ಆರ್‌ಎಸ್‌ಎಸ್‌ ಕಚೇರಿ ಕಸ ಗುಡಿಸುತ್ತೇನೆ: ವಿ.ಎಸ್‌ ಉಗ್ರಪ್ಪ

“ಗಾಂಧಿ ಮತ್ತು ನೆಹರೂ ವಿಚಾರಗಳ ಮೇಲೆ ನೇರವಾಗಿ ದಾಳಿ ನಡೆಯುತ್ತಿದೆ. ಮನರೇಗಾದಲ್ಲಿದ್ದ...