ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುತ್ತೇವೆ ಎಂಬ ನೆಪದಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸಾವಿರಾರು ಮಹಿಳೆಯರನ್ನು ಮೋಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಆರೋಪಿಯು “ಆನ್‌ಲೈನ್‌ನಲ್ಲಿ ಕೆಲಸ ಮಾಡಿ ಸುಲಭವಾಗಿ ಹಣ ಗಳಿಸಬಹುದು” ಎಂದು ಹೇಳಿ ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 8000 ಮಹಿಳೆಯರಿಂದ 12 ಕೋಟಿ ರೂಪಾಯಿ ಸಂಗ್ರಹಿಸಿದ್ದಾನೆ. ಬಳಿಕ ಸದ್ದಿಲ್ಲದೆ ಪರಾರಿಯಾಗಿದ್ದಾನೆ.
ವಂಚಿತ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ.
ಆಘಾತಕಾರಿ ಸಂಗತಿಯೆಂದರೆ, ಕೆಲವು ಪ್ರಭಾವಿ ಮಹಿಳೆಯರೂ ಸಹ ಈ ಯೋಜನೆಯಲ್ಲಿ ಲಕ್ಷಗಟ್ಟಲೆ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.
ಆರೋಪಿಯು ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡಿದ್ದರೂ, ತನಿಖೆಯಿಂದ ಅವನ ನಿಜವಾದ ಹೆಸರು ಸೋಲಾಪುರದ ಬಾಬಾಸಾಹೇಬ್ ಕೋಲೇಕರ್ ಎಂದು ಪತ್ತೆಯಾಗಿದೆ.
ಆತ ಮಹಿಳೆಯರಿಂದ ಒಬ್ಬರ ಗುರುತಿನ ಚೀಟಿ ರಚನೆಗಾಗಿ ₹2,500 ರಿಂದ ₹5,000 ವರೆಗೆ ಹಣ ಸಂಗ್ರಹಿಸುತ್ತಿದ್ದ.
ಚೈನ್ ಮಾರ್ಕೆಟಿಂಗ್ ಮಾದರಿಯಲ್ಲಿ ಪ್ರತಿ ಸದಸ್ಯರು ಇನ್ನಿಬ್ಬರನ್ನು ಸೇರಿಸಬೇಕು ಎಂಬ ಷರತ್ತು ಇದ್ದುದರಿಂದ ಸಾವಿರಾರು ಮಂದಿ ಈ ಬಲೆಗೆ ಸಿಕ್ಕಿದ್ದಾರೆ.
ಗೂಗಲ್‌ನಲ್ಲಿ ನಕಲಿ ವಿಳಾಸ ಮತ್ತು ಕೃತಕ ಕಂಪನಿ ಹೆಸರುಗಳನ್ನು ಬಳಸಿ ನಂಬಿಕೆ ಗಳಿಸಿದ್ದಾನೆ .





