ಭಟ್ಕಳ | ಮುರುಡೇಶ್ವರದಲ್ಲಿ ಯುವಕನ ಪ್ರಾಮಾಣಿಕತೆ; ಕಳೆದುಹೋದ ಬ್ಯಾಗ್‌ ಹಸ್ತಾಂತರ

Date:

ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿದ್ದ ಹೈದರಾಬಾದ್ ಪ್ರವಾಸಿಗರಿಗೆ ಸ್ಥಳೀಯ ಯುವಕ ವಿಷ್ಣು ನಾಯ್ಕ ಅವರು ಪ್ರವಾಸಿಗರ ಕಳೆದುಹೋಗಿದ್ದ ಬ್ಯಾಗನ್ನು ಹಿಂದುರಿಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ದೇಗುಲದ ಬಳಿ ಸಿಕ್ಕಿದ್ದ ₹48,190 ನಗದು ಮತ್ತು ಇತರೆ ದಾಖಲೆಗಳಿರುವ ಬ್ಯಾಗ್‌ ಅನ್ನು ಯುವಕ ಯಾವುದೇ ಆಸೆಪಡೆದೆ ಪೊಲೀಸರಿಗೆ ಒಪ್ಪಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನಿದು ಘಟನೆ?

ದೇವಸ್ಥಾನಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಪ್ರವಾಸಿಗರು ಆಕಸ್ಮಿಕವಾಗಿ ತಮ್ಮ ಬ್ಯಾಗ್‌ ಅನ್ನು ದೇವಸ್ಥಾನದ ಆವರಣದಲ್ಲಿ ಕಳೆದುಕೊಂಡಿದ್ದರು. ಇದೇ ವೇಳೆ, ಗರಡಿಗಡ್ಡೆಯ ವಿಷ್ಣು ನಾಗಪ್ಪ ನಾಯ್ಕ ಅವರಿಗೆ ಈ ಬ್ಯಾಗ್‌ ಸಿಕ್ಕಿತು. ಯಾವುದೇ ವಿಳಂಬ ಮಾಡದೆ ಅವರು ತಕ್ಷಣವೇ ಬ್ಯಾಗ್‌ ಅನ್ನು ಮುರುಡೇಶ್ವರ ಪೊಲೀಸ್‌ ಠಾಣೆಗೆ ತಲುಪಿಸಿ, ತಮ್ಮ ಪ್ರಾಮಾಣಿಕತೆ ಮೆರೆದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಶಿರಸಿ | ಅರಣ್ಯ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶ – ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ.

ಪೊಲೀಸರ ಮೂಲಕ ಹಸ್ತಾಂತರ ನಂತರ, ಪಿಎಸ್‌ಐ ಹನುಮಂತ ಬಿರಾದರ್ ಅವರ ಸಮ್ಮುಖದಲ್ಲಿ ಕಳೆದುಹೋದ ಬ್ಯಾಗ್‌ ಅನ್ನು ಅದರ ವಾರಸುದಾರರಾದ ಪ್ರವಾಸಿಗರಿಗೆ ಹಸ್ತಾಂತರಿಸಲಾಯಿತು. ಅಷ್ಟೊಂದು ದೊಡ್ಡ ಮೊತ್ತದ ನಗದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ವಿಷ್ಣು ನಾಯ್ಕ ಅವರ ಕಾರ್ಯಕ್ಕೆ ಪ್ರವಾಸಿಗರು ಧನ್ಯವಾದ ಸಲ್ಲಿಸಿದರು. ಅಲ್ಲದೆ, ಪೊಲೀಸರು ಹಾಗೂ ಸಾರ್ವಜನಿಕರಿಂದಲೂ ವಿಷ್ಣು ನಾಯ್ಕ ಅವರ ಸಮಯಪ್ರಜ್ಞೆ ಮತ್ತು ಪ್ರಾಮಾಣಿಕ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದಾಪುರ | ಇತಿಹಾಸದ ಹಾದಿಯಲ್ಲಿ ಹುಲ್ಕುತ್ರಿ ಶಾಲಾ ಮಕ್ಕಳು; ಜೈನ ನೆಲೆಗಳ ಅಧ್ಯಯನ

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ...

ಉತ್ತರ ಕನ್ನಡ | ‘ಸ್ವಯಂಚಾಲಿತ ಮ್ಯುಟೇಶನ್’ ಕ್ರಾಂತಿ: 900ಕ್ಕೂ ಅಧಿಕ ಪ್ರಕರಣಗಳು ಹಸ್ತಕ್ಷೇಪವಿಲ್ಲದೆ ವಿಲೇವಾರಿ

ಭೂದಾಖಲೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಾರ್ವಜನಿಕರ ಅಲೆದಾಟ ತಪ್ಪಿಸಲು ಸರ್ಕಾರ...

ಕಾರವಾರ | ‘ಆಪರೇಷನ್ ಕ್ಲೀನ್’ ದಾಳಿ: ಫುಟ್‌ಪಾತ್ ಅತಿಕ್ರಮಣಕಾರರಿಗೆ ಮಂಜಾನೆ ಶಾಕ್

ಕಾರವಾರ: ನಗರದ ಸೌಂದರ್ಯಕ್ಕೆ ಮುಳುವಾಗಿದ್ದ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆ...