ಎಲ್ಲಾ ಧರ್ಮದವರು ಸೌಹಾರ್ದವಾಗಿ ಆಚರಿಸುವ ಆಚರಣೆ ಉರುಸ್, ಈ ಉರುಸ್ ಆಚರಣೆ ಸಂಬಂಧ ಪಟ್ಟಂತೆ 1989ರ ಆದೇಶ, 2002ರ ಆದೇಶ, 1947ರ ಮುಂಚಿನ ದಾಖಲೆಗಳು ಹಾಗೂ 1991ರ ಮುಂಚಿನ ನಿಯಮಗಳಂತೆ ಉರುಸ್ ಆಚರಣೆ ಮಾಡಬೇಕೆ ಎಂದು ದಾಖಲೆಗಳಲ್ಲಿ ಉಲ್ಲೇಖ ಕೂಡ ಆಗಿದೆ. ಆದರೇ, ಉರುಸ್ ಆಚರಣೆಗೆ ಬಂದಂತಹ ಜನರಿಗೂ ಕೂಡ ಈ ಸಲ ಅಸಮಾಧಾನವಿದೆ.

ಸರ್ಕಾರ ಆದೇಶಗಳಿಗೆ ವಿರುದ್ದವಾಗಿರುವುದಲ್ಲದೇ ಧಾರ್ಮಿಕ ಭಾವನೆಗೆ ಹಾನಿಕರವಾಗಿದೆ. ಉರುಸ್ ಮೇಲ್ಕಂಡ ಅಧಿಕೃತ ಆದೇಶಗಳಂತೆ ಮಾತ್ರ ನಡೆಯಬೇಕು, ಹಿಂದಿನ ವರ್ಷದ ಪ್ರಕ್ರಿಯೆಯಂತೆ ನಡೆಸಲು ಯಾವುದೇ ಅಧಿಕೃತ ಆದೇಶ ಇದ್ದರೆ, ಜಿಲ್ಲಾಡಳಿತ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪವಿತ್ರ ರಂಜಾನ್ ಮಾಸಕ್ಕೆ ಹೊಂದಿರುವುದರಿಂದ, ರಂಜಾನ್ ಹಬ್ಬದ ನಿಯಮಗಳನ್ನು ಉರುಸ್ ವೇಳೆ ಪಾಲಿಸಬೇಕು. ಆದರೇ, ಅದನ್ನು ಬಿಟ್ಟು ಆಚರಣೆಗೆ ಜಿಲ್ಲಾಡಳಿತ ಅಡಚಣೆ ಮಾಡುತ್ತಿದೆ ಎಂದು ಬಾಬಾ ಬುಡನ್ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಈದಿನ.ಕಾಂ ಜೊತೆ ಮಾತಾಡಿದ್ದಾರೆ.

ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದು ಎರಡು ಸಮುದಾಯದ ಸಮಾನವಾಗಿ ಆಚರಣೆ ಮಾಡಲು ಅವಕಾಶ ಕಲ್ಪಿಸಬೇಕು. ಆದರೇ, ಮೊದಲ ದಿನ ಊರೂಸ್ ಆಚರಣೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯ ಕಂಡು ಬಂದಿದೆ. ಸೌಹಾರ್ದವಾಗಿ ಆಚರಿಸುವ ಹಬ್ಬ ಊರುಸ್, ಇಲ್ಲಿ ಬರುವ ಜನರಿಗೆ ಅನೇಕ ರೀತಿಯ ಅಡೆತಡೆಗಳು. ಮುಸ್ಲಿಂ ಸಮುದಾಯದವರಿಗೆ ಹಬ್ಬವನ್ನು ಆಚರಿಸುವಾಗ ಸಂಪ್ರದಾಯಕ್ಕೆ ಕಡಿವಾಣ ಹಾಕಿದೆ.ಇಲ್ಲಿನ ಶಾಕ್ ಆದ್ರಿ ಕುಟುಂಬಸ್ಥರು ಹಾಗೂ ಬಾಬಾ ಬುಡನ್ ಗಿರಿಗೆ ಬರುವಂತ ಭಕ್ತಾದಿಗಳಿಗೆ ರೂಢಿಯಲ್ಲಿರುವ ಆಚರಣೆಗಳನ್ನು ಮಾಡಲು ಬಿಡುತ್ತಿಲ್ಲ. ಈ ನಡೆ ಖಂಡನೀಯ ಈ ಕುರಿತು ಮಾ. 5ರಂದು ಜಿಲ್ಲಾಡಳಿತ ಕಛೇರಿ ಎದುರು ಪ್ರತಿಭಟನೆ ನಡೆಯುತ್ತದೆ ಎಂದು ಸಾಮಾಜಿಕ ಹೋರಾಟಗಾರ ಕೆ. ಎಲ್ ಅಶೋಕ್ ಈದಿನ.ಕಾಂ ಗೆ ತಿಳಿಸಿದರು.

ಮಸೀದಿಯಲ್ಲಿ ನಮಾಜ್ ವ್ಯವಸ್ಥೆ, ಸಹೆರಿ ಹಾಗೂ ಇಫ್ತಿಯಾರ್ ವ್ಯವಸ್ಥೆ ಇರಬೇಕು, ಚಿಕ್ಕಮಗಳೂರು ನಗರದಿಂದ ಇನಾಮ್ ದತ್ತ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾಕ್ಕೆ ಬಸ್ ವ್ಯವಸ್ಥೆ ರೂಪಿಸಬೇಕು, ಪ್ರವಾಸಿಗರಿಗೆ ಚೆಕ್ ಪೋಸ್ಟ್ ತೆರೆಯವಿರಬೇಕು. ಉರುಸ್ ಕಾರ್ಯಕ್ರಮ ಐತಿಹಾಸಿಕ ಮತ್ತು ಕಾನೂನು ದಾಖಲೆಗಳಂತೆ ಮಾತ್ರ ನಡೆಯಬೇಕೆಂದು ನಾಗಮೋಹನ್ ದಾಸ್ ವರದಿ ಹೇಳಿದೆ ಅದನ್ನು ಬಿಟ್ಟು ಎಲ್ಲಾ ಆಚರಣೆಗೆ ಅಡ್ಡಿ ಪಡಿಸುತ್ತಿರುವ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನೀತಿ ಖಂಡನೀಯ ನಾಗಮೋಹನ್ ದಾಸ್ ಆಯೋಗವನ್ನು ರಚಿಸಿದ್ದೇ ಕಾಂಗ್ರೆಸ್ ಸರ್ಕಾರ ಆಯೋಗದ ವರದಿಯಂತೆಯೇ ಅವಕಾಶವನ್ನು ಕೂಡ ಕೊಡುತ್ತಿಲ್ಲ. ನ್ಯಾಯಾಲಯ 1989 ರ ಆದೇಶದಂತೆ ಯಾವ ಆಚರಣೆಗಳು ರೂಢಿಯಲ್ಲಿದ್ದವು ಅದೇ ರೀತಿಯಲ್ಲಿ ಇರಬೇಕೆಂದು ಆದೇಶಿಸಿದ್ದರು ಅದಕ್ಕೆ ಅವಕಾಶ ಕಲ್ಪಿಸಿಕೊಡುತ್ತಿಲ್ಲ.

ಆದರೆ ಸಂಘ ಪರಿವಾರಗಳಿಗೆ ಮಾತ್ರ ಆಚರಣೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಪ್ರತಿ ತಿಂಗಳು ಹುಣ್ಣಿಮೆ ಪೂಜೆಗೆಂದು ಹೋಗುತ್ತಾರೆ, ಮೊದಲು ದತ್ತ ಜಯಂತಿ ಒಂದೇ ಇದ್ದಿದ್ದು ಕೆಲವೇ ಜನ ಬಂದು ಭಾಗವಹಿಸುತ್ತಿದ್ದರು. ಈಗ ಶೋಭ ಯಾತ್ರೆ, ದತ್ತ ಜಯಂತಿ, ಅನುಸೂಯ ಜಾತ್ರೆ, ಅನುಸೂಯ ಜಯಂತಿ ಎಂದು ಆಚರಣೆಗೆ ಅವಕಾಶ ನೀಡುತ್ತಾರೆ. ಆದರೇ, ಮುಸ್ಲಿಂ ಭಾಂದವರಿಗೆ ಮಾತ್ರ ಉರುಸ್ ಆಚರಣೆಯನ್ನು ಆಚರಿಸಲು ಸರಿಯಾದ ಅವಕಾಶ ನೀಡದೆ ಗಂಧ ಹಾಗೂ ಹಸಿರು ಹೊದಿಕೆಯನ್ನು ಹಾಕಲು ಅವಕಾಶ ನೀಡುವುದಿಲ್ಲವೆಂದರೆ ಅದೇಷ್ಟು ಸರಿ?ದತ್ತಾಪೀಠ ದೇವಸ್ಥಾನ ಸಂರಕ್ಷಣ ಸಮಿತಿಯ ಸದಸ್ಯ ಎಂದು ಯೋಗೇಶ್ ರಾಜ ಅರಸ್ ಎಂಬಾತ ಕೋರ್ಟ್ ಅಲ್ಲಿ ಸ್ಟೈ ತೆಗೆದುಕೊಂಡು ಬರುತ್ತಾರೆ. ಅವನಿಗೆ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲ, ಮಧುರಾವ್ ಎಂಬುವರು ಎರಡು ಸಮಿತಿಯ ಆಚರಣೆ ಮಾಡಬೇಕು ಎಂದು ಸಮಿತಿಗೆ ಎಂಟು ಜನರನ್ನು ಒಳಗೊಳ್ಳುವಂತೆ ರಚಿಸಲಾಯಿತು. ಆದರೇ, ಜಿಲ್ಲಾಡಳಿತ ಏಳು ಜನ ಹಿಂದೂ ಸಮುದಾಯದವರನ್ನು, ಕಾಲಪಾಷ ಎಂಬ ಒಬ್ಬರು ಮುಸ್ಲಿಂ ಸಮುದಾಯದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಬೇಕಾದಂತಹ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಅವಕಾಶ ಕೊಟ್ಟು ಮಲ ತಾಯಿ ಧೋರಣೆ ತೋರುತ್ತಿದ್ದಾರೆ.ಈ ಸರ್ಕಾರವೇ ಬಂದ ಮೇಲೆ ಆಯೋಗ ರಚಿಸಿದ್ದು, ಭರವಸೆಯನ್ನು ಕೂಡ ಕೊಟ್ಟಿದ್ದರು. ಈಗ ನಮಗೆ ಸಂಬಂಧವಿಲ್ಲ ಹಾಗೆ ಇದ್ದಾರೆಂದು ಎದ್ದೇಳು ಕರ್ನಾಟಕ ಗೌಸ್ ಮೋಹಿದ್ದಿನ್ ಈದಿನ.ಕಾಂ ಜೊತೆ ಮಾತಾಡಿದ್ದಾರೆ.

ಎರಡು ಸಮುದಾಯದವರಿಗೆ ಸಮಾನವಾಗಿ ಆಚರಣೆಗಳನ್ನು ಆಚರಿಸಬೇಕು ಎಂದು ನಾಗಮೋಹನ್ ದಾಸ್ ವರದಿ ಹೇಳಿದೆ. ಈ ಕುರಿತು ನ್ಯಾಯಾಲಯದಲ್ಲಿ ಕೂಡ ತಿಳಿಸಿದೆ. ಆದರೇ, ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕುದೆ. ಸಂಘ ಪರಿವಾರದವರಿಗೆ ಎಲ್ಲಾ ಆಚರಣೆಗೆ ಅವಕಾಶ ಕೂಡುತ್ತಾರೆ, ಆದರೇ ಉರುಸ್ ಆಚರಣೆಗೆ ಅಡ್ಡಿ ಪಡಿಸಿದ್ದಾರೆ. ಜನರಿಗೆ ಸರಿಯಾದ ಸೌಲಭ್ಯವಿಲ್ಲ, ಹಾಗೆಯೇ, ಹಸಿರು ಬಟ್ಟೆ, ಗಂಧ ಲೇಪನಕ್ಕೂ ಅವಕಾಶ ಮಾಡಿ ಕೊಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಇದ್ದು ಈ ನಡೆ ತೂರುವುದು ಸರಿಯಲ್ಲ. ಈ ಪಕ್ಷ ಕೂಡ ಸಂಘ ಪರಿವಾರಗಳ ಜೊತೆ ಸೇರಿದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಸಾಮಾಜಿಕ ಹೋರಾಟಗಾರ ಡಾ. ಕಲ್ಕುಳಿ ವಿಠಲ್ ಹೆಗ್ಡೆ ಈದಿನ.ಕಾಂ ಗೆ ತಿಳಿಸಿದ್ದಾರೆ.
ಈ ಸಲ ಬೆಳಗಾಂನಿಂದ ಊರು ಆಚರಣೆಗೆ ಆಚರಿಸಲು ನಾವು ಮತ್ತು ನಮ್ಮ ಸ್ನೇಹಿತರು ಬಂದಿದ್ದೆವು. ಎಲ್ಲೆ ನೋಡಿದರೂ ಪೊಲೀಸರು ಮತ್ತು ಪೊಲೀಸ್ ವಾಹನಗಳು ನಿಂತಿದ್ದವು ಬಿಟ್ಟರೆ ಹೆಚ್ಚಿನದಾಗಿ ಜನ ಕೂಡ ಭಾಗವಹಿಸಲು ಅವಕಾಶ ಕೂಡ ಇಲ್ಲ ಎಂದು ನಮಗೆ ಸುತ್ತಮುತ್ತ ನೋಡಿದಾಗ ತಿಳಿಯಿತು ಎಂದು ಬೆಳಗಾಂ ಮೂಲದ ಉರುಸ್ ಗೆ ಬಂದಿದ್ದ ವ್ಯಕ್ತಿ ಈ ದಿನ. ಕಾಂ ಜೊತೆ ನೇರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾನೂನು ದಾಖಲೆಗಳಂತೆಯೇ ಉರುಸು ಆಚರಣೆ ನಡೆಯಬೇಕು; ಸೈಯದ್ ಫಕ್ರುದ್ದೀನ್ ಶಾ ಖಾದ್ರಿ
ಏನೇ ಆದರೂ ಎರಡು ಸಮುದಾಯಕ್ಕೆ ಸೇರಿರುವ ಗುರು ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ಯಾವುದೇ ಆಚರಣೆಗಳನ್ನು ಆಚರಿಸಲು ಸರಿಯಾದಂತಹ ಸಮಾನತೆಯವಾಗಿ ಆಚರಣೆ ಮಾಡಲು ಜಿಲ್ಲಾಡಳಿತ ಹಾಗೂ ಸರ್ಕಾರ ಅವಕಾಶ ಮಾಡಿಕೊಡಬೇಕಾಗಿತ್ತು . ಆದರೆ, ನೆರೆದಿರುವ ಜನರಿಗೂ ಕೂಡ ಈ ಕುರಿತು ಅಸಮಾಧಾನ ಮೂಡಿದೆ. ಇನ್ನ ಮುಂದಾದರೂ ಇಂತಹ ಘಟನೆಗಳಿಗೆ ಕಡಿವಾಣ ಹಾಕಿ ಮುಂದೆ ಎಲ್ಲರಿಗೂ ಸರಿಯಾದಂತಹ ಸೌಹಾರ್ದವಾಗಿ ಯಾವುದೇ ಹಬ್ಬವನ್ನು ಆಚರಣೆಯನ್ನು ಆಚರಿಸಲು ಅವಕಾಶ ಮಾಡಿಕೊಡುವುದರಿಂದ ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಬರುವಂತಹ ಭಕ್ತಾದಿಗಳಿಗೂ ಕೂಡ ಸಮಾಧಾನಕರವಾಗಿ ಸಂತೋಷದಿಂದ ಭಾಗವಹಿಸುತ್ತಾರೆ.





