ಗೆಂಡೆಹಳ್ಳಿ ರಸ್ತೆ ಮತ್ತು ಹೊಯ್ಸಳ ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಹೈಮಾಸ್ಟ್ ಬೀದಿ ದೀಪ ಕಳವು ಮಾಡಿದವರನ್ನು ಪತ್ತೆಹಚ್ಚಿ ಬೀದಿ ದೀಪ ಅಳವಡಿಸಬೇಕು ಎಂದು ಜಿಲ್ಲಾ ವುಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ಪ.ಪಂ. ಮುಖ್ಯಾಧಿಕಾರಿ ಕಾಂತರಾಜ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಸಾದವರಿಗೆ ಮನವಿ ಸಲ್ಲಿಸಲಾಗಿದೆ.

ಪೊಲೀಸ್ ಠಾಣೆ ಮುಂಭಾಗದಲ್ಲಿದ್ದ ಹೈಮಾಸ್ಟ್ ದೀಪವನ್ನು ಎರಡು ವರ್ಷದ ಹಿಂದೆ, ಹೊಯ್ಸಳ ಕ್ರೀಡಾಂಗಣದಲ್ಲಿದ್ದ ಹೈಮಾಸ್ಟ್ ಬೀದಿದೀಪವನ್ನು ಒಂದು ವರ್ಷದ ಹಿಂದೆ ಕಳವು ಮಾಡಲಾಗಿದೆ. ಎರಡೂ ಕಡೆ ಹೈಮಾಸ್ಟ್ ದೀಪದ ಕಂಬ ಮಾತ್ರವಿದೆ. ಕಂಬದ ತುದಿಯಲ್ಲಿದ್ದ ಎಲ್ಲ ಎಲ್‌ಇಡಿ ದೀಪವನ್ನು ಕಳವು ಮಾಡಲಾಗಿದೆ. ಇದರಿಂದ ಎರಡೂ ಕಡೆ ಕತ್ತಲೆ ಆವರಿಸಿದೆ. ನಿರ್ಜನ ಪ್ರದೇಶವಾದ ಹೊಯ್ಸಳ ಕ್ರೀಡಾಂಗಣದಲ್ಲಿ ಬೆಳಕಿಲ್ಲದೆ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಸಂಜೆ ಮತ್ತು ಬೆಳಗ್ಗೆ ಕ್ರೀಡಾಂಗಣದಲ್ಲಿ ವಾಯುವಿಹಾರಕ್ಕೆ ತೆರಳುವವರು ಕತ್ತಲೆಯಲ್ಲಿ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಜಿಲ್ಲಾ ವುಮೆನ್ ಇಂಡಿಯಾ ಮೂವ್‌ಮೆಂಟ್ ಸದಸ್ಯರು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಚಾರ್ಮಾಡಿ ಘಾಟ್: ಲಾರಿ, ಮೆಕ್ಕೆಜೋಳ ಬೆಂಕಿಗಾಹುತಿ
ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಗಮನವಹಿಸಿ ಸಮಸ್ಯೆ ಬಗೆ ಅರಿಸಬೇಕೆಂದು ವುಮೆನ್ ಇಂಡಿಯಾ ಮೂವ್‌ಮೆಂಟ್ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ವೀಣಾ, ನಜರತ್ ಬಾನು, ತಸ್ಲಿಮಾ, ನೌಶಿಮಾ ಹಾಗೂ ಇನ್ನಿತರರಿದ್ದರು.





