ಕಾಡಿನಲ್ಲಿ ಕಳೆದುಹೋಗಿದ್ದ ವೈದ್ಯರನ್ನು ಪೊಲೀಸ್ ಶ್ವಾನ ಸಹಾಯದಿಂದ ಪತ್ತೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗುಣವಂತೆ ಕಾಡಿನಲ್ಲಿ ನಡೆದಿದೆ.
ಇದೇ ತಿಂಗಳು ನವೆಂಬರ್ 2ರಂದು ವಿಹಾರಕ್ಕೆಂದು ಬಂದಿದ್ದ ವೈದ್ಯ ವೆಂಕಟೇಗೌಡ, ಮರೆವಿನ ಖಾಯಿಲೆ ಇದ್ದರಿಂದ ದಾರಿ ತಪ್ಪಿ ಕಾಡಿನ ದಾರಿ ಮಾರ್ಗ ಪ್ರಯಾಣ ಬೆಳಸಿದ್ದಾರೆ. ಕಾಡಂಚಿನ ಮನೆಯೊಂದರಲ್ಲಿ ನೀರು ಕುಡಿದ್ದಿದ್ದಾರೆ. ವೈದ್ಯರಿಗೆ ಮರೆವಿನ ಖಾಯಿಲೆ ಇರುವುದರಿಂದ ವಾಪಸ್ ಬರಲು ಗೊತ್ತಾಗಾದೆ. ನಾಲ್ಕು ದಿನಗಳ ಕಾಲ ಕಾಡಿನಲ್ಲೇ ಸಮಯ ಕಳೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ನ.10ರಂದು ಸೂಫಿ ಪರಂಪರೆಯ ಧಾರ್ಮಿಕ ಆಚರಣೆ; ಸೈಯದ್ ಫಕ್ರುದ್ದೀನ್ ಶಾ ಖಾದ್ರಿ
ವೈದ್ಯರ ಮನೆಯವರು ಪೊಲೀಸರಿಗೆ ದೂರು ನೀಡಿದಾಗ ಎಲ್ಲಾ ಕಡೆ ಹುಡುಕಿದ್ದರರೂ ಸಿಕ್ಕಿರಲಿಲ್ಲ. ಈ ವೇಳೆ ನಾಪತ್ತೆಯಾಗಿದ್ದ ವೆಂಕಟೇಗೌಡರ ಪಂಚೆ ಸಿಕ್ಕಿತ್ತು. ಅದರ ಜಾಡು ಹಿಡಿದು ಹೊರಟಿದ್ದ ಪೊಲೀಸ್ ಶ್ವಾನ 5 ಕಿ.ಮೀ. ದೂರದ ಕಾಡಿನಲ್ಲಿದ್ದ ವೈದ್ಯರನ್ನು ಪತ್ತೆ ಮಾಡಿದೆ. ಗುಣವಂತೆ ಕಾಡಿನ ಆಳದ ಪ್ರದೇಶದಲ್ಲಿದ್ದ ವೈದ್ಯರನ್ನು ರಕ್ಷಣೆ ಮಾಡಲಾಗಿದೆ. ಕಳೆದು ಹೋಗಿದ್ದ ವೈದ್ಯರನ್ನು ಪತ್ತೆ ಹಚ್ಚಿದ ಪೊಲೀಸ್ ಶ್ವಾನಕ್ಕೆ ಸ್ಥಳೀಯರು ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.





