ಸರ್ಕಾರದ ಜಾತಿ ಗಣತಿ ಕಾರ್ಯಕ್ಕೆ ಶಿಕ್ಷಕರಿಂದಲೇ ವಿರೋಧ ವ್ಯಕ್ತ ಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನಗರ ವ್ಯಾಪ್ತಿಯ ಡಿಸಿ ಕಚೇರಿ ಎದುರು ನಡೆದಿದೆ.
ಜಾತಿ ಗಣತಿ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ತೆರಳಿದಾಗ ಸರ್ವರ್ ಸಮಸ್ಯೆ, ಗೂಗಲ್ ಮ್ಯಾಪ್ ಗೊಂದಲ, ಮನೆ ಸಂಖ್ಯೆಗಳ ಅಭಾವ, ಹಾಗೂ ಜಾತಿ ಕೇಳಲು ಹೋದರೆ ಸಾರ್ವಜನಿಕರಿಂದ ಬೈಸಿಕೊಳ್ಳುವುದು, ಬೀದಿ ನಾಯಿಗಳ ಕಾಟದಂತಹ ತೊಂದರೆಗಳನ್ನು ಎದುರಿಸುತ್ತಿದ್ದೇವೆಂದು ಸಮೀಕ್ಷೆ ನಡೆಸುತ್ತಿರುವಂತಹ ಶಿಕ್ಷಕರು ಎಸಿ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ಚಾಲಕನ ಬೇಜವಾಬ್ದಾರಿ ವ್ಯಕ್ತಿ ಸಾವು
ಈ ಸಮಸ್ಯೆಗಳಿಂದ ಸಮೀಕ್ಷಾ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ, ಇಂತಹ ಸಮಸ್ಯೆಗೆ ಪರಿಹಾರ ಬೇಕಾಗಿದೆ ಎಂದು ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.





