ಚಿಕ್ಕಮಗಳೂರು | ಫಲ-ಪುಷ್ಪ ಪ್ರದರ್ಶನ ಕಣ್ಮನತುಂಬುವಂತಿದ್ದ ಕಲಾಕೃತಿ; ಚೈತ್ರೋತ್ಸವ ತೆರೆ

Date:

ಮಲೆನಾಡು ಹಚ್ಚ ಹಸಿರಿನಿಂದ ಕೂಡಿದ ಸೌಂದರ್ಯದ ಪ್ರಕೃತಿ ವಾತಾವರಣ ಹಾಗೆಯೇ, ಪ್ರವಾಸಿಗರ ತಾಣ. ಇದೇ ಜನವರಿ ತಿಂಗಳು 26ರಂದು ಭಾರತದಲ್ಲಿ ಸಂವಿಧಾನ ನಮಗೆ ದೊರೆತ ದಿನ, ಅದ್ರಲ್ಲೂ ಗಣರಾಜ್ಯವಾದದ್ದು ಎಂಬ ಇತಿಹಾಸವೇ ಇದೆ. ಆ ದಿನದಂದು ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆಯ ಸಹಯೋಗದಿಂದ ಆಯೋಜಿಸಿದ್ದ, ಫಲ ಪುಷ್ಪ ಪ್ರದರ್ಶನ, ಚೈತ್ರೋತ್ಸವವನ್ನು 28ರವರೆಗೆ ಮೂರು ದಿನಗಳ ಕಾಲ ಏರ್ಪಡಿಸಲಾಗಿತ್ತು.

ಫಲ ಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಅಲಂಕರಿಸಲಾದ ಗ್ರಾಮೀಣ ಭಾಗದ ಚಕ್ಕಡಿ, ಕೃಷಿ ಸಾಮಗ್ರಿ, ತರಕಾರಿಗಳ ರಂಗೋಲಿಗಳು ಗಮನಸೆಳೆಯುತ್ತಿದ್ದವು. ವಿವಿಧ ಹೂ-ಹಣ್ಣು ಹಾಗೂ ತರಕಾರಿಗಳಿಂದ ನಿರ್ಮಿಸಿದ ಅಪರೂಪದ ಕಲಾಕೃತಿಗಳು ಆಕರ್ಷಣೆಯಾಗಿದ್ದವು, ವಿಭಿನ್ನ ಆಲೋಚನೆ, ಸೃಜನಶೀಲತೆ ಹಾಗೂ ನೈಸರ್ಗಿಕ ಸೌಂದರ್ಯವನ್ನು ಸೃಷ್ಟಿಸುವ ಸನ್ನಿವೇಶವನ್ನು ಈ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿತ್ತು. ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ಪಡೆಯುತ್ತಿದೆ.

ಮೊದಲ ದಿನ ಉದ್ಘಾಟನಾ ಕಾರ್ಯಕ್ರಮ ನಡೆದರೆ, ಎರಡನೇ ದಿನ ಜಾನುವಾರು ಪ್ರದರ್ಶನ, ಮೂರನೇ ದಿನ ಫಲಪಾಕ ಸ್ಪರ್ಧೆ ಹೀಗೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಲಾಕೃತಿಗಳು ಕಲಾವಿದರ ವೈವಿಧ್ಯಮಯ ಕಲ್ಪನೆಗೆ ಸಾಕ್ಷೀಯಾಗಿತ್ತು. ಸಿರಿಧಾನ್ಯ, ನೋವಿನ ಎಣ್ಣೆ, ಕೃಷಿಗೆ ಸಂಬಂಧಿಸಿದ ಉಪಕರಣಗಳು, ಕೈ ಮಗ್ಗದಲ್ಲಿ ತಯಾರಿಸಿದ ಸಾಮಗ್ರಿಗಳು, ನೇಕಾರರ ವಸ್ತ್ರಗಳು, ದಿನ ಬಳಕೆ ಮುಖ್ಯವಾದ ವಸ್ತುಗಳು, ಸಣ್ಣಪುಟ್ಟದಾಗಿ ಮನೆಯಲ್ಲಿಯೇ ತಯಾರಿಸಿದ ಖಾದ್ಯ ಹಾಗೂ ಸಿಹಿ ತಿಂಡಿಗಳು, ಹಾಗೆಯೇ, ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಜ್ಞಾನ, ಗ್ರಹಿಸುವಿಕೆಗೆ ಉಪಯೋಗವಾಗುವ ಪುಸ್ತಕ ಮಳಿಗೆ ಹಾಗೆ ಇನ್ನೂ ಹಲವಾರು ವಿಚಾರಗಳ ಕುರಿತು ಪ್ರದರ್ಶನವಿತ್ತು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೋಡುಗರ ಗಮನ ಸೆಳೆದ ಹೂವಿನಲ್ಲಿ ಅಲಂಕರಿಸಿದ  ಸರ್ಕಾರಿ ಶಾಲೆ, ಕ್ರೀಡಾಕೂಟ, ನಲಿಕಲಿ, ಬುದ್ಧ, ಶಾಂತಿಯ ತೋಟ, ಆನೆಯ ಚಿತ್ರಣ, ಧಾನ್ಯಗಳಲ್ಲಿ ಮೂಡಿಸಿದ ಸಾಲು ಮರದ ತಿಮ್ಮಕ್ಕನ ಪ್ರತಿಮೆ, ಅದ್ರಲಂತೂ ನಮ್ಮ ಕರ್ನಾಟಕದ ಚಿತ್ರಣ, ಜೊತೆ ಕನ್ನಡಾಂಬೆಯ ಪ್ರತಿಮೆ ಮತ್ತು ಬಣ್ಣಗಳು, ವಿವಿಧ ಬಣ್ಣಗಳ ಸುಮಾರು 8 ಸಾವಿರ ಹೂಕುಂಡಗಳ ಜೋಡಣೆ, ಇಕೇಬಾನ ಮಾದರಿಯ ಹೂವಿನ ಜೋಡಣೆ, ಪ್ರಸಿದ್ಧ ಕಲಾವಿದರಿಂದ ತರಕಾರಿಗಳಲ್ಲಿ ಪ್ರಾಣಿ-ಪಕ್ಷಿಗಳ ಕೆತ್ತನೆಯ ಕಲಾಕೃತಿಗಳು, ತೆಂಗಿನ ಗರಿಗಳನ್ನು ಬಳಕೆ, ಕಾಫಿ ಗಿಡಗಳನ್ನು ಬಳಕೆ ಮಾಡಿಕೊಂಡು ಅಲಂಕೃತ ದ್ವಾರ ನಿರ್ಮಾಣ ಮಾಡಿದ್ದು ಎಲ್ಲರ ಆಕರ್ಷಣೆ ಹೆಚ್ಚಿಸಿತ್ತು.

ಚಿಕ್ಕಮಗಳೂರು ಎಂಬ ಹೆಸರಿನ ಹೂವಿನ ಅಲಂಕಾರ ಹೀಗೆ ಮತ್ತಷ್ಟು ಮೊಗದಷ್ಟು ಎನ್ನುವಾಗೆ ವಿಶೇಷ ವೈವಿದ್ಯಮಯವಾಗಿತ್ತು. ಕಿಕ್ಕಿರುದು ಚಿಕ್ಕಮಗಳೂರು ನಗರಕ್ಕೆ ಬಂದ ಜನ ಸಾಗರ, ಮೊದಲ ದಿನ ಅಂದಾಜು 1.50 ಲಕ್ಷ ಜನ, ಎರಡನೇ ದಿನವೂ 1.50 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಕೊನೆಯ ದಿನವಾದ ಬುಧವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆನ್ನಲಾಗಿದೆ.

‘ಪಾಶ್ಚಾತ್ಯ ಆಹಾರಗಳತ್ತ ಮುಖಮಾಡುತ್ತಿರುವ ಸಂದರ್ಭದಲ್ಲಿ ದೇಶೀಯ ಆರೋಗ್ಯ ಪೂರ್ಣ ಆಹಾರ ಪದ್ಧತಿಯ ಬಗ್ಗೆ ಜನರ ಆಸಕ್ತಿ ಹೆಚ್ಚಿಸಬೇಕಿದೆ. ಪೈನಾಪಲ್ ಪಲಾವ್, ಬಾಳೇಹಣ್ಣು ರಸಾಯನ, ಕಿವಿಹಣ್ಣಿನ ಕೇಕ್, ಎಳ್ಳು ಹೋಳಿಗೆ, ಕಡುಬು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು’ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುವ ಮೂಲಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳ ವಿತರಣೆ. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ’19 ಮಹಿಳೆಯರು ಹಾಗೂ ಪುರುಷರು ಫಲಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುವ ಮೂಲಕ ಇನ್ನೂ ಮೆರಗನ್ನು ತಂದಿದ್ದಾರೆಂದರು.

ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ(ಅಭಿವೃದ್ಧಿ) ಗೌರವಕುಮಾರ ಶೆಟ್ಟಿ, ಯೋಜನಾ ನಿರ್ದೇಶಕಿ ಸುಜಾತಾ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಮಂಗಳಾ, ಯೋಜನಾಧಿಕಾರಿ ಮಂಜುನಾಥ್, ಆಯುಷ್ ಇಲಾಖೆಯ ಡಾ. ಗೀತಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ಉಪಸ್ಥಿತರಿದ್ದು. ಫಲಪಾಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಫಲಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿಕ್ಕಮಗಳೂರಿನ ಸುಹಾನಾ ಪ್ರಥಮ ರೋಹಿತ್ ದ್ವಿತೀಯ ಹಾಗೂ ನೇರಲಕರೆ ಅನುಪಮ ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕುಡಿಯಲು ನೀರು, ಡಾಂಬರ್ ರಸ್ತೆಯಿಲ್ಲದೆ ಗ್ರಾಮಸ್ಥರ ಪರದಾಟ

ಬೇರೆ ಬೇರೆ ಜಿಲ್ಲೆಗಳಿಂದ ಮಳಿಗೆ ಹಾಗೂ ವೀಕ್ಷಿಸಲು ಜನರು ಬಂದಿದ್ದರು. ಹಾಗೆಯೇ, ಸುಮಾರು ಜನ ಕುಟುಂಬ ಸಮೇತರಾಗಿ ಪ್ರದರ್ಶನ ವೀಕ್ಷಣೆಗೆ ಭಾಗವಹಿಸಿ  ಸೆಲ್ಪಿ ತೆಗೆದುಕೊಂಡು ಆನಂದಿಸಿದರು. ಪ್ರಕೃತಿ, ಕಲೆ, ಆರೋಗ್ಯ, ಸಾಮಾಜಿಕ ಸಂದೇಶ ಸೇರಿದಂತೆ ಎಲ್ಲಾ ರೀತಿಯ ಮಾಹಿತಿಯನ್ನು ಸಾರುವಂತಿತ್ತು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...