ದಾವಣಗೆರೆ | ದುಬೈ ಪ್ರವಾಸಕ್ಕೆ ತೆರಳಿ ಇರಾನ್ ಯುದ್ಧದಲ್ಲಿ ಸಿಲುಕಿದ ಜಗಳೂರು ಪ್ರವಾಸಿಗರು ಬೆಂಗಳೂರಿಗೆ

Date:

ದುಬೈ ಪ್ರವಾಸಕ್ಕೆಂದು ತೆರಳಿ, ಇರಾನ್ ಮತ್ತು ಅಮೆರಿಕ, ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ಸ್ವದೇಶಕ್ಕೆ ಹಿಂದಿರುಗದೇ ಸಿಲುಕಿ ಅತಂತ್ರರಾಗಿದ್ದ, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಲವು ಗ್ರಾಮ ಮತ್ತು ನಗರಗಳ ನಾಗರಿಕರು ಸ್ಥಳೀಯ ಶಾಸಕರು ಮತ್ತು ಸರ್ಕಾರದ ನೆರವಿನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಕಳೆದ ತಿಂಗಳು ದುಬೈ ಪ್ರವಾಸಕ್ಕೆಂದು ಜಗಳೂರಿನ ರುದ್ರಮುನಿ, ಚಂದ್ರಶೇಖರ್, ಲೋಕೇಶ್ ಮತ್ತು ಕುಟುಂಬದವರು ಸೇರಿದಂತೆ ಸುಮಾರು 15 ಜನ ತೆರಳಿದ್ದರು. ಏಕಾಏಕಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಹಾಗೂ ಯುದ್ಧದ ವಾತಾವರಣ ಮತ್ತು ದಾಳಿಗಳು ದುಬೈ, ಸೌದಿ ಸೇರಿದಂತೆ ಮಧ್ಯಪ್ರಾಚ್ಯಕ್ಕೆ ಹರಡಿದ್ದರಿಂದ ವಿಮಾನ ಸೇವೆ ಸ್ಥಗಿತಗೊಂಡಿತ್ತು. ವಾಪಸ್ ಭಾರತಕ್ಕೆ ಹಿಂದಿರುಗಲಾರದೆ ಸಿಲುಕಿಕೊಂಡಿದ್ದರು.

1003820724

ತಾಲೂಕಿನ ತೋರಣಗಟ್ಟೆ ಮೂಲದ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಮತ್ತು ಪತ್ನಿ, ಜಗಳೂರು ಪಟ್ಟಣದ ಜಿ.ಬಿ ಶಿವಕುಮಾರ್ ಮತ್ತು ಪತ್ನಿ, ಪಟ್ಟಣ ಪಂಚಾಯತಿಯ ನಾಮನಿರ್ದೇಶಿತ ಮಾಜಿ ಸದಸ್ಯರಾದ ರುದ್ರಮನಿ ಮತ್ತು ಪತ್ನಿ, ವಾಚ್ ಅಂಗಡಿ ಮಾಲೀಕರಾದ ಲೋಕೇಶ್ ಮತ್ತು ಪತ್ನಿ ಮತ್ತು ಇವರ ಸ್ನೇಹಿತರು ಸೇರಿದಂತೆ ಸೇರಿದಂತೆ ಒಟ್ಟು 15 ಜನ ಫೆಬ್ರವರಿ 23ರಂದು ದುಬೈಗೆ ಪ್ರವಾಸ ತೆರಳಿದ್ದರು. ಶಾರ್ಜಾ ವಿಮಾನ ನಿಲ್ದಾಣದಿಂದ ಫೆಬ್ರವರಿ 28ಕ್ಕೆ ವಾಪಾಸಾಗಬೇಕಿತ್ತು. ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದುಗೊಂಡಿದ್ದರಿಂದ ಇವರೆಲ್ಲರೂ ದುಬೈನಲ್ಲಿಯೇ ಉಳಿದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1003820723

ಇವರಂತೆ ಪ್ರವಾಸಕ್ಕೆಂದು ಹಾಗೂ ಕೆಲಸ, ಕಾರ್ಯಗಳಿಗೆ ತೆರಳಿ ಸಿಲುಕಿಕೊಂಡಿದ್ದ ಅನೇಕರ ಸುರಕ್ಷಿತ ವಾಪಸಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸಿದ್ದವು. ಎರಡು ಮೂರು ದಿನದಿಂದಲೂ ಹಂತಹಂತವಾಗಿ ಕರೆಸಿಕೊಳ್ಳುವ ಕಾರ್ಯ ನಡೆಯುತ್ತಿತ್ತು. ಸ್ಥಳೀಯ ಶಾಸಕ ದೇವೇಂದ್ರಪ್ಪ, ಗೃಹ ಸಚಿವ ಪರಮೇಶ್ವರ್ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ನೆರವಿನಿಂದ ಇಂದು ಅಂತಿಮವಾಗಿ ಜಗಳೂರಿನ ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

1003820726

ಕೆಲವು ದಿನಗಳ ಹಿಂದೆ ಜಗಳೂರು ಕ್ಷೇತ್ರದ ಶಾಸಕ ದೇವೇಂದ್ರಪ್ಪ, ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಜಗಳೂರಿನ 15 ಪ್ರವಾಸಿಗರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅಂದು ಪ್ರತಿಕ್ರಿಯಿಸಿದ್ದ ಸಚಿವರು ರಾಜ್ಯ ಸರ್ಕಾರ ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ. ಎಲ್ಲರೂ ಸುರಕ್ಷಿತವಾಗಿ ಮರಳಲಿದ್ದಾರೆ ಎಂದು ತಿಳಿಸಿದ್ದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗ್ಯಾರಂಟಿಗಳು ಮಹಿಳೆಯರ ಆರ್ಥಿಕ ಶಕ್ತಿ ಹಾಗೂ ಬಸವಣ್ಣನ ದಾಸೋಹ ತತ್ವ: ಮುಖಂಡರ ಅಭಿಮತ

ಈ ವೇಳೆ ಬಂದಿಳಿದ ಜಗಳೂರಿನ ನಾಗರಿಕರನ್ನು ಸ್ವತಃ ಶಾಸಕ ದೇವೇಂದ್ರಪ್ಪ ಹಾಜರಿದ್ದು, ಆತ್ಮೀಯವಾಗಿ ಸ್ವಾಗತಿಸಿ, ಆರೋಗ್ಯ ವಿಚಾರಿಸಿದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...

ಜಿ ರಾಮ್‌ ಜಿ ಅಲ್ಲಿ ʼರಾಮʼನ ಹೆಸರಿದ್ದರೆ ಆರ್‌ಎಸ್‌ಎಸ್‌ ಕಚೇರಿ ಕಸ ಗುಡಿಸುತ್ತೇನೆ: ವಿ.ಎಸ್‌ ಉಗ್ರಪ್ಪ

“ಗಾಂಧಿ ಮತ್ತು ನೆಹರೂ ವಿಚಾರಗಳ ಮೇಲೆ ನೇರವಾಗಿ ದಾಳಿ ನಡೆಯುತ್ತಿದೆ. ಮನರೇಗಾದಲ್ಲಿದ್ದ...