ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮೂರು ದಿನನೇ ದಿನದ ಉತ್ಖನನ ಕಾರ್ಯದಲ್ಲಿ ನಾಗಶಿಲ್ಪ ಶಿಲೆ ಅವಶೇಷ ಪತ್ತೆಯಾಗಿದ್ದು, ಕುತೂಹಲ ಮೂಡಿಸಿದೆ.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಇಂದಿಗೆ ಮೂರನೇ ದಿನ ಉತ್ಖನನ ಕಾರ್ಯ ಮುಂದುವರೆದಿದೆ. ಎರಡನೇ ದಿನದ ಉತ್ಖನನ ಕಾರ್ಯದಲ್ಲಿ ಶಿವಲಿಂಗ ಪಾಣಿಪೀಠ ಮಾದರಿಯ ಶಿಲೆ ಪಟ್ಟೆಯಾಗಿತ್ತು. ಮೂರನೇ ದಿನದ ಉತ್ಖನನದಲ್ಲಿ ಹೆಡೆ ಎತ್ತಿರುವ ನಾಗಶಿಲ್ಪ ಅವಶೇಷ ಪತ್ತೆಯಾಗಿದೆ.

ಉತ್ಖನನದಲ್ಲಿ ಸಿಕ್ಕಿರುವ ಅವಶೇಷಗಳು ಇನ್ನಷ್ಟು ಕುರುಹುಗಳು ಪಟ್ಟೆಯಾಗುವ ಸಾಧ್ಯತೆ ಮೂಡಿಸಿದ್ದು, ಗ್ರಾಮಸ್ಥರು, ಜನರಲ್ಲಿ ಕುತೂಹಲ ಮೂಡಿಸಿದೆ, ಇನ್ನಷ್ಟು ಆಳವಾಗಿ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಉತ್ಖನನ ಮುಂದುವರಿಸಲಾಗಿದೆ.





