“ಬಂಡಾಯದ ನಾಡು ನರಗುಂದ ಪಟ್ಟಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಮೂರ್ತಿ ಸ್ಥಾಪನೆ ಇಂದಿಗೂ ಆಗದೇ ಇರುವುದು ದುರಂತದ ಸಂಗತಿ. ನಮ್ಮ ಹೋರಾಟಕ್ಕೆ ಸ್ಪಂದಿಸಿ ಮೂರ್ತಿ ಸ್ಥಾಪನೆಗೆ ಮುಂದಾಗಬೇಕು. ಉಗ್ರ ಸ್ವರೂಪ ಹೋರಾಟ ಮಾಡುತ್ತೇವೆ” ಎಂದು ದಲಿತ ಮುಖಂಡರು ಆಗ್ರಹಿಸಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದ ಪುರಸಭೆ ಎದುರು ಸರ್ವ ಜನಾಂಗದ ಸಂಘ ಸಂಸ್ಥೆಗಳ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಮೂರ್ತಿ ಸ್ಥಾಪನೆಗಾಗಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ.
“ಮೇಲ್ವರ್ಗದ ಜನರ ಮೂರ್ತಿ ಸಮುದಾಯ ಭವನಗಳನ್ನು ನಿರ್ಮಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗುತ್ತಾರೆ. ಆದರೆ ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಮೂರ್ತಿ ಸಮುದಾಯ ಭವನಗಳನ್ನು ನಿರ್ಮಿಸಲು ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ” ಎಂದರು.
ಜನಪ್ರತಿನಿಧಿಗಳಂತೆ ಅಧಿಕಾರಿಗಳು ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ನಾವು ಶಾಂತಿ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಗೆ ಈಡೇರುವವರೆಗೂ ಹೋರಾಟ ಮುಂದುವರೆಯುತ್ತದೆ. ಹೆದ್ದಾರಿಯನ್ನು ಬಂದ್ ಮಾಡಲು ಮುಂದಾಗುತ್ತೇವೆ. ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಕಾರಣರಾಗುವರು” ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದತ್ತು ಜೋಗಣ್ಣವರ, ಮುತ್ತು ಸುರುಕೋಡ, ರವಿ ಚಿಂತಲ್, ಗುರುನಾಥ ಕೆಂಗಾರಕರ, ರತ್ನಪ್ಪ ಜವಳಿ, ಕಿರಣ್ ಜೋಗಣ್ಣವರ, ನವಿಸಾಬ್ ಕಿಲ್ಲೆದಾರ, ಶಿವಾನಂದ ಹರಿಜನ, ಮಾಂತೇಶ್ ಪೂಜಾರ, ವಿಜಯ್ ಚಲವಾದಿ, ಮೈಲಾರಪ್ಪ ಹಿರೇಮನಿ, ಯಶ್ವಂತ್ ಚಲವಾದಿ, ವೆಂಕಟೇಶ್ ಕಾನಪೇಟೆ, ಚೆನ್ನು ನಂದಿ, ಬಸು ಜೋಗನ್ನವರ, ವಿಕ್ರಮ ಹೊನಕೇರಿ,ಖಾಜಿಸಾಬ್ ಕಿಲ್ಲೆದಾರ, ಮುತ್ತು ಪೂಜಾರ್, ನಿಂಗಪ್ಪ ಕೆಳಗೇರಿ, ಇನೂ ಮುಂತಾದವರು ಉಪಸ್ಥಿತರಿದ್ದರು





