ಯುವಕನೂರ್ವನಿಗೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದಿರುವ ಘಟನೆ, ಹಾಸನ ಜಿಲ್ಲೆ ಆಲೂರು ತಾಲೂಕು ಪಾಳ್ಯ ಹೋಬಳಿ ವ್ಯಾಪ್ತಿಯ ಕೋಳಿ ಫಾರಂ ಬಳಿ ಭಾನುವಾರ ನಡೆದಿದೆ.

ಹಲ್ಲೆಗೆ ಒಳಗಾದ ಯುವಕ ಸಂಪತ್ (24),ಎಂಬಾತ ಮೂಲತಃ ಹರಳಕೊಪ್ಪಲು ಗ್ರಾಮದ ನಿವಾಸಿ. ಮಧು ( 28 ), ಪಕ್ಕದ ಗ್ರಾಮದವನು, ಚಾಕುವಿನಿಂದ ಹಲ್ಲೆ ಮಾಡಿದ ವ್ಯಕ್ತಿ ಎನ್ನಲಾಗಿದೆ. ಯುವಕರಿಬ್ಬರ ನಡುವೆ ಫೋನ್ ನಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಧು ಎಂಬಾತ ಸಂಪತ್ ಎಂಬ ಯುವಕನನ್ನು ಹಿಂಬಾಲಿಸಿ ಹೊಟ್ಟೆ ಭಾಗಕ್ಕೆ ಚಾಕು ಹಾಕಲಾಗಿದೆ. ಈ ಘಟನೆ ಸಂಜೆ ವೇಳೆ ಸುಮಾರು 4 ಗಂಟೆಯ ಸಮಯದಲ್ಲಿ ನಡೆದಿದೆ. ಹಲ್ಲೆ ಮಾಡುವ ಸಂದರ್ಭದಲ್ಲಿ ಸಂಪತ್ ಜೊತೆ ತನ್ನ ಸ್ನೇಹಿತರಿಬ್ಬರು ಕೂಡಿ ಮಡಬಲು ವ್ಯಾಪ್ತಿಯಿಂದ ಪಾಳ್ಯಕ್ಕೆ ಬರುವ ವೇಳೆ ಈ ಘಟನೆ ಸಂಭವಿಸಿದೆ. ಹಲ್ಲೆ ಮಾಡಿದ ಮಧು ಎಂಬಾತ ಇದು ಮೊದಲೆನಲ್ಲ 4-5 ಜನರಿಗೆ ಚಾಕು ಹಾಕಿದ್ದಾನೆಂದು ಆರೋಪಿಸಿದ್ದಾರೆ. ಹಲ್ಲೆಗೈದ ವ್ಯಕ್ತಿಯ ಜೊತೆ 3 ಜನ ಇದ್ದರು, ಜೊತೆಗೆ ಗನ್, ಲಾಂಗ್, ನಾಯಿಗಳು ಇದ್ದವು ಎಂದು ಹಲ್ಲೆಗೊಳಗಾದ ಸಂಪತ್ ಸ್ನೇಹಿತರು ಮತ್ತು ಗ್ರಾಮಸ್ಥರು ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.
ಇದನ್ನು ಓದಿದ್ದೀರಾ?ಬಾಂಗ್ಲಾದೇಶದವರೆಂದು ಶಂಕಿಸಿ ಅಸ್ಸಾಂ ಕಾರ್ಮಿಕರ ಮೇಲೆ ದೌರ್ಜನ್ಯ; ಹಿಂದೂ ಕಾರ್ಯಕರ್ತರ ವಿರುದ್ಧ FIR
ಸಂಪತ್ ಎಂಬ ಯುವಕನನ್ನು ತಕ್ಷಣ ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದೋಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವನಿಸಲಾಗಿದೆ. ಈ ಘಟನೆ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆಗೊಳಗಾದ ಯುವಕ ಹೇಳಿಕೆ ಪಡೆದಿಲ್ಲ ಇನ್ನು ಯಾವ ಅಧಿಕಾರಿಯು ಸ್ಥಳಕ್ಕೆ ಬಂದಿಲ್ಲವೆಂದು ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ.





