ಗೋಮಾಂಸ ರುಚಿಯಾಗಿರಲು ಹಸುಗಳಿಗೆ ಡ್ರೈ ಫ್ರೂಟ್ಸ್‌ ತಿನ್ನಿಸಿ, ಬಿಯರ್‌ ಕುಡಿಸಿ: ಮಾರ್ಕ್‌ ಜುಕರ್‌ಬರ್ಗ್‌

Date:

  • ‘ವಿಶ್ವದ ಅತ್ಯುತ್ತಮ ಬೀಫ್ ಉತ್ಪಾದನೆ ನನ್ನ ಗುರಿ’ ಎಂದ ಫೇಸ್‌ಬುಕ್‌ನ ಒಡೆಯ
  • ಪೋಸ್ಟ್‌ಗೆ ವಿರೋಧ ವ್ಯಕ್ತಪಡಿಸಿ ಕಮೆಂಟ್ ಹಾಕುತ್ತಿರುವ ಸಂಘಪರಿವಾರದ ಬೆಂಬಲಿಗರು

ಮೆಟಾ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ, ಟೆಕ್ ಬಿಲಿಯನೇರ್ ಮಾರ್ಕ್ ಜುಕರ್‌ಬರ್ಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಾರ್ಕ್‌ ಆಗಾಗ ತಮ್ಮ ಹೊಸ ಆಲೋಚನೆಗಳನ್ನು ತಮ್ಮದೇ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಾಕುವ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದರು. ಆದರೆ ಜ.10ರಂದು ಗೋಮಾಂಸದ ಕುರಿತು ಹಾಕಿರುವ ಪೋಸ್ಟ್‌ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ.

ಹವಾಯಿಯ ಕವಾಯಿಯಲ್ಲಿರುವ ಕೂಲೌ ರಾಂಚ್ ಎಂಬ ಗೋ ಸಾಕಾಣಿಕೆ ಉದ್ಯಮವನ್ನು ಕೂಡ ಅವರು ಹೊಸದಾಗಿ ಪ್ರಾರಂಭಿಸಿದ್ದು, ಗೋಮಾಂಸದೊಂದಿಗೆ ಜುಕರ್‌ಬರ್ಗ್‌ ನೀಡಿರುವ ಸಲಹೆಯು ಸದ್ಯ ಸಂಘಪರಿವಾರದ ಬೆಂಬಲಿಗರು ಹಾಗೂ ಬಲಪಂಥೀಯರ ಕಣ್ಣು ಕೆಂಪಗಾಗಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ವಿಶ್ವದ ಅತ್ಯುತ್ತಮ ಬೀಫ್ ಉತ್ಪಾದನೆ ನನ್ನ ಗುರಿ” ಎಂದು ಪೋಸ್ಟ್ ಹಾಕಿರುವ ಜುಕರ್‌ಬರ್ಗ್, “ಕೇವಲ ಹಸುಗಳನ್ನು ಸಾಕುವುದು ಮಾತ್ರವಲ್ಲದೆ ಅವುಗಳಿಗೆ ಮಕಾಡಾಮಿಯಾ ಒಣ ಹಣ್ಣುಗಳು ಮತ್ತು ಬಿಯರ್ ಕುಡಿಸಿ ಬೆಳೆಸುವ ಮೂಲಕ ವಿಶ್ವದ ಅತ್ಯುತ್ತಮ ಗೋಮಾಂಸ ಉತ್ಪಾದಿಸಬಹುದು” ಎಂದು ಸಲಹೆ ನೀಡಿದ್ದಾರೆ.

ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಮ್ಮ ಹಸು ಸಾಕಾಣಿಕೆ ಮತ್ತು ಗೋಮಾಂಸ ಉತ್ಪಾದನೆ ವ್ಯಾಪಾರದ ಕುರಿತು ಮಾತನಾಡಿದ್ದಾರೆ.

“ಗೋವುಗಳನ್ನು ಬೆಳೆಸುವುದು ಮಾತ್ರವಲ್ಲದೆ ಅವುಗಳ ಆಹಾರ ಶೈಲಿಯಲ್ಲಿ ಬದಲಾವಣೆ ಇರಬೇಕು. ಆಗ ಮಾತ್ರ ವಿಶ್ವದ ಉತ್ತಮ ಗುಣಮಟ್ಟದ ಗೋಮಾಂಸ ಉತ್ಪಾದಿಸಬಹುದು” ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ, ಪೋಸ್ಟ್‌ನಲ್ಲಿ ಮಾರ್ಬಲ್ಡ್ ಗೋಮಾಂಸ ಊಟ ತಿನ್ನುತ್ತಿರುವುದನ್ನು ಕಾಣಬಹುದು.

ಮಾರ್ಕ್‌ ಅವರ ಪೋಸ್‌ನಲ್ಲಿ, “ಕೌವೈನಲ್ಲಿರುವ ಕೊಯೊಲೌ ರಾಂಚ್‌ನಲ್ಲಿ ವಾಗ್ಯು ಮತ್ತು ಆಂಗಸ್ ಎಂಬ ಜಾನುವಾರು ತಳಿಗಳನ್ನು ಸಾಕಲು ಪ್ರಾರಂಭಿಸಿದೆ. ನನ್ನ ಗುರಿ ಏನಂದ್ರೆ, ಪ್ರಪಂಚದಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವುದು. ಜಾನುವಾರುಗಳಿಗೆ ಮಕಾಡಾಮಿಯಾ ಡ್ರೈ ಫ್ರೂಟ್ಸ್‌ ಮತ್ತು ಬಿಯರ್ ನೀಡಲಾಗುತ್ತದೆ. ಅಲ್ಲದೆ, ಪ್ರತಿ ಹಸು ಪ್ರತಿ ವರ್ಷವೂ 5,000-10,000 ಪೌಂಡ್‌ಗಳಷ್ಟು ಆಹಾರವನ್ನು ತಿನ್ನುತ್ತದೆ. ಆದ್ದರಿಂದ ಬಹಳಷ್ಟು ಎಕರೆಗಳಷ್ಟು ಮಕಾಡಾಮಿಯಾ ಮರಗಳನ್ನು ನೆಡಲು ನನ್ನ ಹೆಣ್ಣುಮಕ್ಕಳು ಸಹಾಯ ಮಾಡುತ್ತಾರೆ. ನಾವು ನಮ್ಮ ಗುರಿಯ ಆರಂಭದಲ್ಲಿದ್ದೇವೆ. ನನ್ನ ಎಲ್ಲ ಯೋಜನೆಗಳ ಪೈಕಿ, ಇದು ಅತ್ಯಂತ ವಿಶೇಷವಾದದ್ದು” ಎಂದು ಹೇಳಿಕೊಂಡಿದ್ದಾರೆ.

ಇನ್ನು ಮಾರ್ಕ್‌ ಪೋಸ್ಟ್‌ಗೆ ವಿದೇಶಿಗರು ಮತ್ತು ಗೋಮಾಂಸ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಭಾರತದಲ್ಲಿ ಸಂಘಪರಿವಾರ ಮತ್ತದರ ಬೆಂಬಲಿಗರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಜುಕರ್‌ಬರ್ಗ್‌ ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...