ಜಿ20 | ನಮ್ಮನ್ನು ಕೀಟಗಳೆಂದು ತಿಳಿದುಕೊಂಡಿದ್ದಾರಾ: ಹಸಿರು ಪರದೆಗೆ ದೆಹಲಿಯ ಸ್ಲಂ ನಿವಾಸಿಗಳ ಆಕ್ರೋಶ

Date:

ಜಿ20 ಶೃಂಗಸಭೆಯ ಮೂಲಕ ಜಗತ್ತಿನೆದುರು ಭಾರತದ ಭವ್ಯ ಪರಂಪರೆ, ಆಹಾರ ಸಂಸ್ಕೃತಿ ಇತ್ಯಾದಿಗಳನ್ನು ಸಾರಲು ಮುಂದಾಗಿರುವ ಕೇಂದ್ರ ಸರ್ಕಾರ, ದೆಹಲಿಯ ಬಡವರನ್ನು ಮತ್ತು ಬಡವರು ವಾಸಿಸುವ ಪ್ರದೇಶಗಳನ್ನು ವಿದೇಶಿ ಗಣ್ಯರಿಂದ ಮರೆಮಾಚುತ್ತಿದೆ. ಶೃಂಗಸಭೆ ದೆಹಲಿಯ ಬಡವರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ದೆಹಲಿಯ ಸ್ಲಮ್‌ಗಳನ್ನು ವಿದೇಶಿ ಗಣ್ಯರು ನೋಡಬಾರದು ಎಂದು ರಸ್ತೆಗಳ ಪಕ್ಕದಲ್ಲಿ ದೊಡ್ಡ ಪರದೆಗಳನ್ನು, ಪ್ಲಾಸ್ಟಿಕ್ ಶೀಟ್‌ಗಳನ್ನು ಅಳವಡಿಸಿ, ಸ್ಲಮ್‌ಗಳನ್ನು ಅಕ್ಷರಶಃ ಮುಚ್ಚಲಾಗಿದೆ. ಇದರಿಂದ ಕೊಳಚೆ ಪ್ರದೇಶಗಳ ನಿವಾಸಿಗಳ ಘನತೆಗೆ ಕುಂದುಂಟಾಗಿದ್ದು, ಅಲ್ಲಿನ ಜನ ಮಾಧ್ಯಮಗಳ ಮುಂದೆ ಬೇಸರ ಹೊರಹಾಕಿದ್ದಾರೆ.

green 1

ಡಿಜಿಟಲ್ ಮಾಧ್ಯಮ Brut ಜೊತೆಗೆ ಮಾತನಾಡಿರುವ ಕೊಳೆಗೇರಿಯ ನಿವಾಸಿ ರಾಣಿ ಎಂಬುವವರು, ನಮ್ಮನ್ನು ಸರ್ಕಾರದವರು ಕೀಟಗಳೆಂದು ತಿಳಿದುಕೊಂಡಿದ್ದಾರಾ? ನಾವು ಕೂಡ ಮನುಷ್ಯರೇ ಎಂಬುದನ್ನು ಮರೆತಿದ್ದಾರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ನಾವು ವಾಸಿಸುತ್ತಿರುವ ಸ್ಥಳ ಮೊದಲೇ ಕೊಳೆಗೇರಿ. ಇಲ್ಲಿಯ ಚರಂಡಿಗಳಲ್ಲಿ ಉಂಟಾಗುತ್ತಿರುವ ಕೀಟಾಣುಗಳಿಂದ ಉಸಿರು ಬಿಡಲಾಗುತ್ತಿಲ್ಲ. ಹಸಿರು ಪರದೆ ಹಾಕಿರುವುದರಿಂದ ಗಾಳಿ ಕೂಡ ಬರುತ್ತಿಲ್ಲ. ಉಸಿರುಗಟ್ಟುವ ವಾತಾವರಣವನ್ನು ನಿರ್ಮಿಸಲಾಗಿದೆ. ನಾವು ಮುಂಚೆಯೇ ಬಡವರು, ನೀವು ಏನೂ ಸೌಕರ್ಯ ನಮಗೆ ನೀಡದೇ ಇದ್ದರೂ ಉಸಿರಾಡುವ ಸ್ವಾತಂತ್ರ್ಯವಾದರೂ ನೀಡಿ’ ಎಂದು ಸೋನಿಯಾ ಎನ್ನುವವರು ಕೇಂದ್ರ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ವಿಶ್ವದ ನಾಯಕರು ನಮ್ಮನ್ನು ನೋಡಬಾರದೆಂದು ಸರ್ಕಾರದವರು ಹಸಿರು ಹೊದಿಕೆ ಹಾಕಿದ್ದಾರೆ. ನಿಮಗೆ ಅಷ್ಟೊಂದು ಭಯವಿದ್ದರೆ ನಮಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿದರೆ ಇದರ ಭಯವೇನಿತ್ತು” ಎಂದು ಕೊಳೆಗೇರಿಯ ವ್ಯಕ್ತಿಯೋರ್ವ ಪ್ರಶ್ನಿಸಿದ್ದಾನೆ.

ಕಾಂತಿ ಎಂಬಾಕೆ ಹಸಿರು ಪರದೆಯ ಬಗ್ಗೆ ಮಾತನಾಡಿದ್ದು, “ತಮ್ಮ ವೈಫಲ್ಯಗಳನ್ನು ಜಗತ್ತಿನ ನಾಯಕರು ನೋಡದಿರಲಿ ಎಂದು ಜನಪ್ರತಿನಿಧಿಗಳು ಹಸಿರು ಪರದೆ ಹಾಕಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಜಿ-20 ಶೃಂಗಸಭೆ ಅವರ ಘನತೆಯ ಮೇಲಷ್ಟೇ ಅಲ್ಲ, ಅವರ ದಿನದ ದುಡಿಮೆ, ಬದುಕುಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ದಕ್ಷಿಣ ದೆಹಲಿಯ ಕೂಲಿ ಕ್ಯಾಂಪ್, ಜನತಾ ಕ್ಯಾಂಪ್, ಹಾಫಿಜ್ ನಗರ ಮುಂತಾದೆಡೆ ಬಡವರು ಜಿ-20 ಶೃಂಗಸಭೆಯ ಅಡ್ಡಪರಿಣಾಮಗಳನ್ನು ತೀವ್ರವಾಗಿ ಎದುರಿಸುತ್ತಿದ್ದಾರೆ. ಪೊಲೀಸರು ತಮ್ಮನ್ನು ನಾಗರಿಕರಂತೆ ನೋಡದೇ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

green 2

ರಾಷ್ಟ್ರದ ರಾಜಧಾನಿಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದ್ದು, ಕಚೇರಿ, ಶಾಲಾ ಕಾಲೇಜು, ಹೋಟೆಲ್ ಮತ್ತಿತರ ಉದ್ಯಮಗಳನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ. ರಕ್ಷಣೆಯ ಕಾರಣಕ್ಕಾಗಿ ವಿಪರೀತ ಬಂದೋಬಸ್ತ್ ಮಾಡಲಾಗಿದ್ದು, ರಸ್ತೆಗಳಲ್ಲಿ ಜನ ಸಂಚಾರವೇ ಕಷ್ಟವಾಗಿದೆ. ಇದರಿಂದ ದೆಹಲಿಯ ಜನಜೀವನ ತತ್ತರಿಸಿದೆ. ಸರ್ಕಾರವು ಇದು ಲಾಕ್‌ಡೌನ್ ಅಲ್ಲ ಎಂದು ಹೇಳಿದ್ದರೂ, ಅದಕ್ಕಿಂತ ದುರ್ಭರವಾದ ವಾತಾವರಣ ಸೃಷ್ಟಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...