ಅಪಘಾತಕ್ಕೀಡಾದ ಕೋಳಿ ಸಾಗಾಟದ ವಾಹನ: ಚಾಲಕನ ರಕ್ಷಣೆ ಮಾಡುವ ಬದಲು ಕೋಳಿ ಕದ್ದೊಯ್ದ ಗ್ರಾಮಸ್ಥರು!

Date:

ಅತಿಯಾಗಿ ಮಂಜು ಕವಿದಿದ್ದ ಕಾರಣ ಬೆಳ್ಳಂಬೆಳಗ್ಗೆ ಅಪಘಾತಕ್ಕೀಡಾಗಿದ್ದ ಕೋಳಿ ಸಾಗಾಟದ ವಾಹನದಲ್ಲಿ ಪಿಕಪ್ ಚಾಲಕ ಹಾಗೂ ಕ್ಲೀನರ್‌ ತೀವ್ರವಾಗಿ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಕೂಡ ಅವರನ್ನು ರಕ್ಷಣೆ ಮಾಡುವ ಬದಲು ಗ್ರಾಮಸ್ಥರು, ಕೋಳಿ ಕದ್ದೊಯ್ದು ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ದಿಲ್ಲಿ- ಆಗ್ರಾ ಹೆದ್ದಾರಿಯ ಜೇವರ್ ಪೊಲೀಸ್ ಠಾಣಾ ವ್ಯಾಪ್ತಿಯ ದಯನಾಥಪುರ ಪ್ರದೇಶದ ಎಕ್ಸ್‌ಪ್ರೆಸ್‌ವೇಯ ಆಗ್ರಾದಿಂದ ನೋಯ್ಡಾ ಲೇನ್‌ನಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೋಳಿ ತುಂಬಿದ್ದ ಪಿಕಪ್ ವಾಹನವು ಆಗ್ರಾದಿಂದ ಕಸಾಗಂಜ್‌ಗೆ ತೆರಳುತ್ತಿತ್ತು. ಈ ವೇಳೆ ಮಂಜಿನ ಕಾರಣದಿಂದಾಗಿ ಟ್ರಕ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವೇಳೆ ಗಾಯಾಳು ಆಗಿದ್ದ ವಾಹನ ಚಾಲಕ ಸುನಿಲ್ ಕುಮಾರ್ ಅವರನ್ನು ಆರೈಕೆ ಮಾಡುವ ಬದಲು ಜನ ಪಿಕಪ್‌ನಲ್ಲಿದ್ದ ಕೋಳಿ ಕದಿಯುವುದಲ್ಲೇ ವ್ಯಸ್ತರಾಗಿದ್ದರು. ಆರಂಭದಲ್ಲಿ ಜನರನ್ನು ತಡೆಯಲು ಚಾಲಕ ಯತ್ನಿಸಿದರಾದರೂ, ಜನರು ಗುಂಪು ಗುಂಪಾಗಿ ಬಂದು ಚೀಲದಲ್ಲಿ ತುಂಬಿಸಲು ಯತ್ನಿಸಿದ್ದರಿಂದ ನನಗೆ ತಡೆಯಲು ಸಾಧ್ಯವಾಗಿಲ್ಲ ಎಂದು ಚಾಲಕ ತಿಳಿಸಿದ್ದಾನೆ.

ಸುಮಾರು ಎರಡೂವರೆ ಲಕ್ಷ ರೂ. ಮೌಲ್ಯದ ಕೋಳಿಗಳು ಕಳ್ಳತನ ಆಗಿವೆ ಎಂದು ತಿಳಿದು ಬಂದಿದೆ. ಇದರಿಂದ ಕೋಳಿ ಪೌಲ್ಟ್ರಿ ಮಾಲೀಕರಿಗೆ ಅಪಾರ ನಷ್ಟ ಸಂಭವಿಸಿದೆ. ಜನರು ಕೋಳಿಗಳನ್ನು ಕದಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಗ್ರಾಮಸ್ಥರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪೊಲೀಸ್, ಆಂಬ್ಯುಲೆನ್ಸ್ ಸೇರಿದಂತೆ ರಕ್ಷಣಾ ಸಿಬ್ಬಂದಿಗೆ ತುರ್ತು ಕರೆಯಾದರೂ ಮಾಡಬಹುದಿತ್ತು. ಅದನ್ನು ಬಿಟ್ಟು ಕೋಳಿಗಳ ಕಳ್ಳತನದಲ್ಲೇ ಜನರು ಬ್ಯುಝಿಯಾಗಿರುವುದನ್ನು ನೋಡಿದರೆ ಕನಿಷ್ಠ ಮಾನವೀಯತೆ ಕೂಡ ಸತ್ತು ಹೋಗಿದೆ ಎಂದೇ ಭಾಸವಾಗಿತ್ತಿದೆ. ಯೋಗಿ ಆಡಳಿತವಿರುವ ರಾಜ್ಯದಲ್ಲಿ ಇಂಥದ್ದೆಲ್ಲ ಸಾಮಾನ್ಯವೇ?” ಎಂದು ಪ್ರಶ್ನಿಸಿದ್ದಾರೆ.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಸಮೀಪದ ಗ್ರಾಮಗಳ ಜನರು ಮಾತ್ರ ಕೋಳಿ ಕದಿಯುವುದರಲ್ಲೇ ಬ್ಯುಸಿಯಾಗಿದ್ದರು. ಲಾರಿಯ ಚಾಲಕ ತೀವ್ರವಾಗಿ ಗಾಯಗೊಂಡು ಕೂಗುತ್ತಿದ್ದರೂ ಕೂಡಾ ಗ್ರಾಮಸ್ಥರು ಅ ಕಡೆ ಗಮನ ಹರಿಸಲಿಲ್ಲ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮದ್ಯ, ದಿನಸಿ ಸೇರಿದಂತೆ ಯಾವುದೇ ವಸ್ತು ತುಂಬಿದ್ದ ಲಾರಿಗಳು ಉರುಳಿ ಬಿದ್ದಾಗಲೂ ಹೆದ್ದಾರಿ ಪಕ್ಕದ ಜನತೆ ಇದೇ ರೀತಿ ವರ್ತಿಸಿದ್ದು ಈ ಹಿಂದೆ ವರದಿಯಾಗಿದ್ದವು.

ಉತ್ತರ ಪ್ರದೇಶ ಮತ್ತು ದೆಹಲಿ ಸೇರಿದಂತೆ ದೇಶದ ಉತ್ತರ ಭಾರತದ ಭಾಗದಲ್ಲಿ ತಾಪಮಾನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಜಿನಿಂದಾಗಿ ರಸ್ತೆ ಕಾಣುವುದು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವಿಮಾನ ಮತ್ತು ರೈಲು ವೇಳಾಪಟ್ಟಿಗಳ ವಿಳಂಬಕ್ಕೂ ಇದು ಕಾರಣವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...