ಯಾದಗಿರಿ | ಪಡಿತರ ತಿದ್ದುಪಡಿಗೆ ಜನರ ಪರದಾಟ; ಕಡೆ ದಿನಾಂಕ ಮುಂದೂಡಲು ಕರವೇ ಒತ್ತಾಯ

Date:

ಹುಣಸಗಿ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಪಡಿತರ ಚೀಟಿ ತಿದ್ದುಪಡಿಗಾಗಿ ಹಳ್ಳಿಗಳಿಂದ ಬಂದ ಸಾರ್ವಜನಿಕರು ಕಾದು ಕುಳಿತಿದ್ದಾರೆ. ಆದರೆ, ನಾಗರಿಕ ಸೇವಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಕೆಲಸಗಳು ಆಗದೇ ಹರಸಾಹಸಪಡುತ್ತಿದ್ದಾರೆ. ಹೀಗಾಗಿ, ಸರ್ವರ್ ಸಮಸ್ಯಯನ್ನು ಬಗೆಹರಿಸಬೇಕು. ತಿದ್ದುಪಡಿಗೆ ನಿಗದಿಯಾಗಿರುವ ಕಡೆಯ ದಿನಾಂಕವನ್ನು ಮುಂದೂಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಯುವ ಘಟಕದ ಅಧ್ಯಕ್ಷ ಗೋಪಾಲಸಿಂಗ್ ಹಜೇರಿ ಒತ್ತಾಯಿಸಿದ್ದಾರೆ.

ಹುಣಸಗಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ಆಹಾರ ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪಡಿತರ ಚೀಟಿಯಲ್ಲಿ ಸಾರ್ವಜನಿಕರು ಹೆಸರು ತಿದ್ದುಪಡಿ ಹಾಗೂ ಹೆಸರು ಡಿಲಿಟ್ ಮಾಡಲು ಅವಕಾಶ ನೀಡಿದ್ದು, ಕಡೆಯ ದಿನಾಂಕವನ್ನು ಮುಂದೂಡಬೇಕು” ಎಂದರು.

ಸಂಘಟನೆಯ ತಾಲೂಕು ಅಧ್ಯಕ್ಷ ನಂದಣ್ಣ ದೊರೆ ಮಾತನಾಡಿ, “ಇದಲ್ಲದೇ ಪ್ರತಿ ದಿನಾಲು ಹೊಲ ಗದ್ದೆಗಳಿಗೆ ಹೋಗಿ ದಿನನಿತ್ಯ 200/300 ರೂ. ದುಡಿಯವ ರೈತಾಪಿ ವರ್ಗವು ದುಡಿಯುವುದನ್ನು ಬಿಟ್ಟು ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸಗಳಾಗದೆ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಹಾಗಾಗಿ, ಪಡಿತರ ಚೀಟಿಯ ತಿದ್ದಪಡಿ ಅವಧಿಯನ್ನು ನಿರಂತವಾಗಿ ಮುಂದುವರೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷರು ಅಯ್ಯಣ್ಣ ಎಮ್ ಹೂಗಾರ ಯಾದಗಿರಿ ಗೌಡಪ್ಪ ಬಿರಾದಾರ, ಹಣಮಂತ್ರಾಯಗೌಡ ಪಾಟೀಲ್ ಹಳ್ಳಿ ಪರಶುರಾಮ ತಮಶೆಟ್ಟಿ, ಮೌನೇಶ ಬಳೂರಗಿ, ವಿ.ಸಿ. ಹಿರೇಮಠ, ಹುಲಗಪ್ಪ ದೇಸಾಯಿ, ದೇವರಾಜ ಗೌಡಗೇರಿ, ವಿರೇಶ ಬಳೂರಗಿ, ಮುತ್ತು ಬೊಮ್ಮಹಳ್ಳಿ, ಬಿ. ನಾಗಯ್ಯ, ಗುರುಪುತ್ರ, ತಾಯಪ್ಪ ಕಟ್ಟಿಮನಿ, ಅಯ್ಯೂಬ್ ಮಕಾನಂದಾರ, ಸಾಬಣ್ಣ ಬನಹಟ್ಟಿ, ಮರೆಣ್ಣಗೌಡ ಬನಹಟ್ಟಿ ಸೇರಿದಂತೆ ಇತರರು ಇದ್ದರು.

ವರದಿ: ಬಾಪುಗೌಡ ಮೇಟಿ, ಸಿಟಿಜನ್ ಜರ್ನಲಿಸ್ಟ್, ಹುಣಸಗಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...