ಜಮ್ಮು ಕಾಶ್ಮೀರದಲ್ಲಿ ಡಿಸೆಂಬರ್ 2014ರಲ್ಲಿ ಕೊನೆ ವಿಧಾನಸಭಾ ಎಲೆಕ್ಷನ್ ಆಗಿತ್ತು. ಆ ರಿಸಲ್ಟ್ ನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಬಿಜೆಪಿ ಹಾಗೂ ಮೆಹಬೂಬಾ ಮುಫ್ತಿ ಅವರ ಪಿಡಿಪಿ, ಅಲೈಯನ್ಸ್ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ರು. 2018ರಲ್ಲಿ ಬಿಜೆಪಿ ತನ್ನ ಬೆಂಬಲವನ್ನ ವಾಪಸ್ ಪಡೆದುಕೊಳ್ಳತ್ತೆ, ಕೊನೆಗೆ ಅಲ್ಲಿನ ಸರ್ಕಾರ ಬಿದ್ದೋಗತ್ತೆ, ಅಂದಿನಿಂದ ಕಾಶ್ಮೀರಲ್ಲಿರೋದು ರಾಷ್ಟ್ರಪತಿ ಆಳ್ವಿಕೆ. 2019ಕ್ಕೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆದಮೇಲೆ ಇದೀಗ ಮೊದಲ ವಿಧಾನಸಭಾ ಎಲೆಕ್ಷನ್ ನಡೀತಾ ಇದೆ. ಇದೀಗ ನಡಿತಾ ಎಲೆಕ್ಷನ್ ಬಗ್ಗೆ, ಜಮ್ಮು ಕಾಶ್ಮೀರಲ್ಲಿ ಏನ್ ನಡೀತಾ ಇದೆ ? ಯಾರ ಪರ ವಿರೋಧ ಜನ ಒಲವು ಇದೆ ? ಆರ್ಟಕಲ್ 370 ರದ್ದು ಮಾಡಿರೋದ್ರಿಂದ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಏನೆಲ್ಲಾ ಬದಲಾವಣೆಗಳು ಆಗ್ತಾ ಇದೆ ? ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿ ಆಗಿರೋ ದೊಡ್ಡ ಬೆಳವಣಿಗೆ ಬಗ್ಗೆ ? ಈ ವಿಡಿಯೋದಲ್ಲಿ ತಿಳಿಸಿದ್ದೇವೆ…
ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ದೊಡ್ಡ ಬೆಳವಣಿಗೆ ! | KASHMIR ELECTION
Date:



