ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ಇರುವ ಅಣ್ಣೂರು ಗ್ರಾಮದಲ್ಲಿ ಸಿಪಿಐಎಂ ಕಾರ್ಯಕರ್ತ ಹನುಮೇಶ್ ಅವರಿಗೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡದಂತೆ ಗದರಿಸಿದ್ದಲ್ಲದೆ, ಪ್ರಚಾರ ಮಾಡಿದರೆ ನಮ್ಮ ಕಾರ್ಯಕರ್ತರಿಗೆ ಹೇಳಿ ಕಂಬಕ್ಕೆ ಕಟ್ಟಿ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.ಈ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜೆಡಿಎಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದು ಬೇಡ ಎಂದಿರುವುದಲ್ಲದೆ ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ ಏನಾಗುತ್ತೆ ನೋಡು ಎಂದು ಧಮಕಿ ಹಾಕಿ ಎಚ್ಚರಿಕೆ ನೀಡಿರುವುದು ಕಂಡು ಬರುತ್ತದೆ.
ಪ್ರಚಾರ ಮಾಡಿದರೆ ಕಂಬಕ್ಕೆ ಕಟ್ಟಿ ಹಾಕಿಸ್ತಿನಿ
Date:



