ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!
ಸಾಮಾನ್ಯವಾಗಿ, ಮಹಿಳೆಯರು ಬೈಕ್‌ನಲ್ಲಿ ಓಡಾಡುವಾಗ ಅಥವಾ ಹೊರಗೆ ಹೋಗುವಾಗ ಬಿಸಿಲು, ಧೂಳು, ಮಾಲಿನ್ಯದಿಂದ ತಮ್ಮ ಮುಖವನ್ನು ರಕ್ಷಿಸಿಕೊಳ್ಳಲು ಒಂದು ಮೀಟರ್ ಬಟ್ಟೆಯ ತುಂಡನ್ನು ತಲೆಗೆ ಕಟ್ಟಿಕೊಳ್ಳುವುದು ಸರ್ವೇಸಾಮಾನ್ಯ. ಇದು ಯಾವುದೇ ಧಾರ್ಮಿಕ ಆಚರಣೆಯೋ, ಸಾಂಸ್ಕೃತಿಕ ನಿಯಮವೋ ಅಲ್ಲ. ಕೇವಲ ವೈಯಕ್ತಿಕ ಆಯ್ಕೆ ಮತ್ತು ಆರಾಮದ ವಿಷಯ. ಆದರೆ, ಇದೀಗ ಈ ಇಂತಹ ಸಣ್ಣ ವಿಚಾರದ ಮೇಲೂ ಕೋಮುವಾದಿಗಳ ಕಣ್ಣು ಬಿದ್ದಿದೆ. ಸಂಸ್ಕೃತಿ ಹೆಸರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೀತಾ ಇದೆ.



