ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡುವುದು, ಹಡಗು ಮಾರ್ಗಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಭಾರತದ ಹೈ ಕಮಿಷನರ್ ವಿಕ್ರಂನ ದೊರೆಸ್ವಾಮಿ ವಿರೋಧಿಸಿದ್ದಾರೆ.
ಅಂತರಾಷ್ಟ್ರೀಯ ನೌಕಾಯಾನ ಸಂಸ್ಥೆ ಯುನಿಟೆಡ್ ಕಿಂಗ್‌ಡಮ್‌ನಲ್ಲಿ ನಡೆಸಿದ ಸಭೆಯಲ್ಲಿ ಹಾರ್ಮುಜ್ ಜಲಮಾರ್ಗದ ಸಧ್ಯದ ಪರಿಸ್ಥಿತಿಯ ಕುರಿತು ಮಾತನಾಡಿದರು. ಭಾರತೀಯ ನಾಗರಿಕರ ಮೇಲಿನ ದಾಳಿಯ ಕುರಿತು ಅಸಹನೆ ವ್ಯಕ್ತಪಡಿಸಿದ ದೊರೆಸ್ವಾಮಿ ಜೀವ ಕಳೆದುಕೊಂಡ ಭಾರತೀಯರಿಗೆ ಸಾಂತ್ವನ ನುಡಿದರು.
ವಾಣಿಜ್ಯ ಹಡಗುಗಳ ಗುರಿಯಾಗಿಸಿ ದಾಳಿ ನಡೆಸುವುದು ಹಾಗೂ ನೌಕಾ ಸಿಬ್ಬಂದಿಗಳ ಮೇಲೆ ದಾಳಿ ಮಾಡುವುದು ಆಕ್ಷೇಪಣಾರ್ಹ , ನಿಯಮದ ಪ್ರಕಾರ ಹಾರ್ಮುಜ್ ಸೇರಿದಂತೆ ಯಾವುದೇ ಮುಕ್ತ ಅಂತರಾಷ್ಟ್ರೀಯ ಜಲಮಾರ್ಗದ ಮೇಲೆ ನಿರ್ಬಂಧ ವಿಧಿಸುವುದು ನ್ಯಾಯ ಸಮ್ಮತವಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದರು.
ಜಾಗತೀಕ ಸಂಘರ್ಷ ತಾರಕಕ್ಕೇರಿದ ಈ ಸಂದರ್ಭದಲಿ ಸಮುದ್ರಯಾನಿಗಳ ಸುರಕ್ಷತೆ ಹಾಗೂ ಭೌಗೋಳಿಕ ನೌಕಾಯಾನದ ಶಿಸ್ತಿನ ಕುರಿತು ವಿಶೇಷ ಗಮನ ವಹಿಸಬೇಕು ಎಂದಿದ್ದಾರೆ.
ಜಾಗತೀಕ ಕಡಲ ಸಾರಿಗೆಯಲ್ಲಿ ಭಾರತದ ಪಾತ್ರದ ಕುರಿತು ಮಾತನಾಡುವಾಗ ಭಾರತವು ಅಂತರಾಷ್ಟ್ರೀಯ ಸಮುದ್ರ ವ್ಯಾಪಾರದಲ್ಲಿ ನಹುಮುಖ್ಯ ಪಾತ್ರ ವಹಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಸಮುದ್ರ ಯಾನದಲ್ಲಿ ಕಾರ್ಯ ನಿರ್ವಹಿಸುವರಲ್ಲಿ ಭಾರತೀಯರು 13% ಇದ್ದಾರೆ. ಈಗ ಚಾಲ್ತಿಯಿರುವ ಜಾಗತಿಕ ಬಿಕ್ಕಟ್ಟು ಸುಮಾರು 23,000 ಭಾರತೀಯ ಸಮುದ್ರ ಯಾನಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾರ್ಮುಜ್ ಜಲಮಾರ್ಗದ ಮೂಲಕ ನಡೆಯುವ ಅನಿಲ ಹಾಗೂ ತೈಲ ಸಾಗಾಣೆಗೆ ಅಡ್ಡಿಪಡಿಸುವುದು ಭಾರತದ ಆರ್ಥಿಕ, ಭೌಗೋಳಿಕ ಮಾನವೀಯ ಮತ್ತು ಇಂಧನ ಸರಪಣಿಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಭಾರತ ಮೊದಲಿನಿಂದಲೂ ನಾಗರಿಕ ಹಾಗೂ ಇಂಧನ ಸೌಕರ್ಯಗಳ ಮೇಲಿನ ದಾಳಿಗಳನ್ನು ವಿರೋಧಿಸುತ್ತಲೇ ಬಂದಿದೆ. ಇಂತಹ ಕೃತ್ಯಗಳು ಈಗಾಗಲೇ ಉಲ್ಬಣಗೊಂಡಿರುವ ಜಾಗತಿಕ ಬಿಕ್ಕಟ್ಟುಗಳನ್ನು ಇಂಧನ ಪೂರೈಕೆ ಸರಪಳಿಯನ್ನು ಇನ್ನಷ್ಟು ಹದಗೆಡಿಸುವ ಎಚ್ಚರಿಕೆ ನೀಡಿದರು.





