ಮಕ್ಕಳ ಹಂತಕ ನೆತನ್ಯಾಹು ಬದುಕಿದ್ದರೆ, ಬೆನ್ನಟ್ಟಿ ಕೊಲ್ಲುತ್ತೇವೆ: ಇರಾನ್

Date:

ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ 16ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರವೂ ಯುದ್ಧ ಮುಂದುವರೆದಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ‘ಬೆನ್ನಟ್ಟಿ ಕೊಲ್ಲುವುದಾಗಿ’ ಇರಾನ್‌ ಶಪಥ ಮಾಡಿದೆ. ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ಮುಂದುವರಿಸಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಹೇಳಿಕೆ ಬಿಡುಗಡೆ ಮಾಡಿದ್ದು, “ಮಕ್ಕಳನ್ನು ಕೊಲ್ಲುವ ಈ ಅಪರಾಧಿ ಬದುಕಿದ್ದರೆ, ನಾವು ಪೂರ್ಣ ಶಕ್ತಿಯೊಂದಿಗೆ ಆತನನ್ನು ಬೆನ್ನಟ್ಟಿ ಕೊಲ್ಲುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದೆ.

ಕಳೆದ ಕೆಲವು ದಿನಗಳಿಂದ ನೆತನ್ಯಾಹು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ, ಅವರ ಇರುವಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಹೆಚ್ಚುತ್ತಿವೆ. ಮಾರ್ಚ್ 12ರಂದು ಬಿಡುಗಡೆಯಾದ ನೆತನ್ಯಾಹು ಅವರ ವೀಡಿಯೊ ಬಗ್ಗೆಯೂ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ವೀಡಿಯೊದಲ್ಲಿ ಅವರ ಒಂದು ಕೈಯಲ್ಲಿ ಆರು ಬೆರಳುಗಳಿರುವಂತೆ ತೋರುತ್ತಿದ್ದು, ಇದನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಎಡಿಟ್ ಮಾಡಲಾಗಿದೆ ಎಂಬ ಸಂಶಯಗಳು ಮುನ್ನೆಲೆಯಲ್ಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆ ವೀಡಿಯೊದಲ್ಲಿ, ನೆತನ್ಯಾಹು ಅವರು ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ಆರಂಭಿಸಿದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಲ್ಲಿ ಅವರು ಇರಾನ್‌ನ ಹೊಸ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರನ್ನು ಕೊಲ್ಲುವುದಾಗಿ ಪರೋಕ್ಷ ಬೆದರಿಕೆ ಹಾಕಿದ್ದರು ಮತ್ತು ಇಸ್ರೇಲಿ ಸೇನೆಯ ಕಾರ್ಯಾಚರಣೆಗಳನ್ನು ಸಮರ್ಥಿಸಿಕೊಂಡಿದ್ದರು.

“ನಾವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ನಾನು ವಿವರ ನೀಡುವುದಿಲ್ಲ. ಇರಾನ್‌ ಆಡಳಿತವನ್ನು ಉರುಳಿಸಲು ನಾವು ಪೂರಕ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ, ಇರಾನ್‌ನ ಜನರೇ ಆಡಳಿತವನ್ನು ಉರುಳಿಸುತ್ತಾರೆ ಎಂಬುದನ್ನು ನಾನು ಖಚಿತವಾಗಿ ಹೇಳಲಾರೆ. ಯಾವುದೇ ಆಡಳಿತವು ಒಳಗಿನಿಂದಲೇ ಪತನಗೊಳ್ಳಬೇಕು” ಎಂದು ನೆತನ್ಯಾಹು ಹೀಬ್ರೂ ಭಾಷೆಯಲ್ಲಿ ಹೇಳಿದ್ದರು. ಆದರೆ, ಆ ವಿಡಿಯೋ ಎಐ ಸೃಷ್ಟಿತವೆಂಬ ವಾದವಿದೆ.

ಆದಾಗ್ಯೂ, ನೆತನ್ಯಾಹು ಸಾವಿನ ಕುರಿತಾದ ವರದಿಗಳನ್ನು ಇಸ್ರೇಲ್‌ ಪ್ರಧಾನಿಯ ಕಚೇರಿ ತಳ್ಳಿಹಾಕಿದೆ. “ಇವು ಸುಳ್ಳು ಸುದ್ದಿಗಳು; ಪ್ರಧಾನ ಮಂತ್ರಿಗಳು ಕ್ಷೇಮವಾಗಿದ್ದಾರೆ” ಎಂದು ಹೇಳಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ನೆತನ್ಯಾಹು ಕಚೇರಿಯಾಗಲಿ ಅಥವಾ ಅವರ ಆಪ್ತರಾಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಕೆಲವು ಬಳಕೆದಾರರು ಅವರ ಪುತ್ರ ಯೈರ್ ನೆತನ್ಯಾಹು ಕೂಡ ಸಾಮಾಜಿಕ ಜಾಲತಾಣಗಳಿಂದ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ, ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದ ನಂತರ ಮಧ್ಯಪ್ರಾಚ್ಯದಲ್ಲಿ ಅಶಾಂತಿ ತಲೆದೋರಿದೆ. ಯುದ್ಧ ಆರಂಭವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ವರದಿಗಳ ಪ್ರಕಾರ, ಈ ಯುದ್ಧದಲ್ಲಿ ಇದುವರೆಗೆ 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಇರಾನ್‌ನವರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮೋರ್ಬಿಗೆ ಯುದ್ಧದ ಬಿಸಿ: ಸೆರಾಮಿಕ್ ಟೈಲ್ಸ್ ಉದ್ಯಮ ಸ್ಥಗಿತ, 4 ಲಕ್ಷ ಕಾರ್ಮಿಕರ ಬದುಕಿಗೆ ಭಾರೀ ಹೊಡೆತ

ಯುದ್ಧ ಮುಂದುವ‌ರೆದರೆ ಮತ್ತು ಅನಿಲ ಹರಿವು ನಿರ್ಬಂಧಿತವಾದರೆ ಗುಜರಾತ್‌ನ ಅತ್ಯಂತ ಪ್ರಮುಖ...